ಸ್ಪೈಸ್ ಹೊಸ ಮೊಬೈಲ್ ಬೇಡವೆನ್ನಲು ಕಾರಣವಿಲ್ಲ!

Posted By: Staff

ಸ್ಪೈಸ್ ಹೊಸ ಮೊಬೈಲ್ ಬೇಡವೆನ್ನಲು ಕಾರಣವಿಲ್ಲ!
ಸ್ಪೈಸ್ ಮೊಬೈಲ್ ಕಂಪೆನಿ ಈಗಾಗಲೇ ಸಾಕಷ್ಟು ಪ್ರಸಿದ್ಧವಾಗಿದೆ. ಸ್ವದೇಶಿ ಕಂಪೆನಿಯಾಗಿರುವ ಇದು ಜಗತ್ತಿನ ಬಹುಭಾಗಗಳಲ್ಲಿ ತನ್ನ ಮಾರಾಟ ಜಾಲ ಹೊಂದಿದೆ. ಈಗಾಗಲೇ ಸಾಕಷ್ಟು ಮೊಬೈಲುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಇದು ಇದೀಗ ಹೊಸ ಡ್ಯುಯಲ್ ಸಿಮ್ ಮೊಬೈಲ್ ಸ್ಪೈಸ್ M-4262 ಬಿಡುಗಡೆಗೆ ಮುಂದಾಗಿದೆ.

ಇದು 44.7 ಗ್ರಾಮ್ ತೂಕ ಹೊಂದಿದ್ದು TFT LCD ಕಲರ್ ಸ್ಕ್ರೀನ್ ಹೊಂದಿದೆ. ಇದರಲ್ಲಿ 128X160 ಪಿಕ್ಸೆಲ್ ರೆಸೊಲ್ಯೂಷನ್, 144x 45mm ಡೈಮೆನ್ಷನ್, 900/1800 MHZ ಫ್ರೀಕ್ವೆನ್ಸೀಸ್ ಇದೆ. 500 ಕಾಂಟಾಕ್ಟ್ ಸಾಮರ್ಥ್ಯ ಇದೆ.

ಇದರಲ್ಲಿ MP4 ಪ್ಲೇಯರ್, MIDI, MP3, FM ರೇಡಿಯೋ, ಅಲಾರ್ಮ್, PIFA, WAP ಬ್ರೌಸರ್, GPRS ಕನೆಕ್ಟಿವಿಟಿ, EDGE, WiFi ಕನೆಕ್ಟಿವಿಟಿ, ಮೈಕ್ರೋ SD/T ಫ್ಲಾಶ್, ವಿಸ್ತರಿಸಬಲ್ಲ 8 GB ಮೆಮೊರಿ, USB ಪೋರ್ಟ್, v2.0 ಬ್ಲೂಟೂಥ್, A 1000 mAh Li ion ಬ್ಯಾಟರಿ, 4 ತಾಸುಗಳ ಟಾಕ್ ಟೈಮ್ ಮತ್ತು 400 ತಾಸುಗಳ ಸ್ಟ್ಯಾಂಡ್ ಬೈ ಈ ಎಲ್ಲಾ ಸೌಲಭ್ಯಗಳು ಇದರಲ್ಲಿವೆ.

ಇಷ್ಟೆಲ್ಲಾ ವಿಶೇಷತೆಗಳು ಹಾಗೂ ಆಧುನಿಕವಾಗಿರುವ ಈ ಫೋನಿನ ಬೆಲೆ ನಂಬಲಸಾಧ್ಯವಾದ ರು. 1,300. ಇದು ನಿಜವಾಗಿಯೂ ಲೋ ಬಜೆಟ್ ಫೊನ್ ಎಂದೇ ಹೇಳಬಹುದು. ಬೆಲೆಗೆ ಹೋಲಿಸಿದರೆ ಇದನ್ನು ಕೊಳ್ಳುವುದ ನಿಜವಾಗಿಯೂ ಉತ್ತಮ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot