ಈ ಸಮಯದಲ್ಲಿ ನಿಮ್ಮ ಸ್ಮಾರ್ಟ್ ಫೋನ್ ಬಳಸಲೇಬಾರದು

By Gizbot Bureau
|

ಯಾವುದೇ ಹ್ಯಾಂಡ್ ಸೆಟ್ ನ್ನು ಬಳಕೆ ಮಾಡುವ ಮುನ್ನ ಕೆಲವು ಪ್ರಮುಖ ಅಂಶಗಳ ಬಗ್ಗೆ ತಿಳಿದುಕೊಂಡಿರಬೇಕು ಮತ್ತು ಆ ರೀತಿಯಲ್ಲಿ ನಡೆದುಕೊಳ್ಳಬೇಕಾಗುತ್ತದೆ. ಈ ನಡವಳಿಕೆಯು ಬಳಕೆದಾರರ ಹಿತದೃಷ್ಟಿಯಿಂದ ಅನುಸರಿಸಬೇಕಾಗಿರುವ ಅಂಶಗಳಾಗಿರುತ್ತದೆ.

ಈ ಸಮಯದಲ್ಲಿ ನಿಮ್ಮ ಸ್ಮಾರ್ಟ್ ಫೋನ್ ಬಳಸಲೇಬಾರದು

ನೀವು ಡ್ರೈವಿಂಗ್ ಮಾಡುವಾಗ ನಿಮ್ಮ ಫೋನ್ ನ್ನು ಬಳಸಬಾರದು. ಇದು ಬಹಳ ಮುಖ್ಯವಾಗಿರುವ ಅಂಶವಾಗಿದ್ದು ಪ್ರತಿಯೊಬ್ಬ ಫೋನ್ ಬಳಕೆದಾರರೂ ಕೂಡ ಈ ನಿಯಮವನ್ನು ಅನುಸರಿಸಲೇಬೇಕು. ನಿಮ್ಮ ಓದುವಿಕೆಯ ಮಧ್ಯದಲ್ಲಿ ಫೋನ್ ಬಳಕೆ ಮಾಡುವುದು ಖಂಡಿತ ನಿಮ್ಮ ಓದಿಗೆ ತೊಂದರೆಯುಂಟು ಮಾಡುತ್ತದೆ. ನಿಮ್ಮ ಗಮನವನ್ನು ಇತರೆಡೆಗೆ ಹೋಗುವಂತೆ ಮಾಡುತ್ತದೆ ಹಾಗಾಗಿ ಓದಬೇಕಾದ ವಿಷಯ ನಿಮ್ಮ ತಲೆಯಲ್ಲಿ ಹೋಗುವುದೇ ಇಲ್ಲ ಅಥವಾ ಹೋದರೂ ಅದು ಉಳಿಯದೇ ಇರುವ ಸಾಧ್ಯತೆ ಹೆಚ್ಚಿರುತ್ತದೆ.

ಹೀಗೆ ಯಾವೆಲ್ಲ ಸಂದರ್ಬದಲ್ಲಿ ನೀವು ಫೋನ್ ಬಳಕೆ ಮಾಡದೇ ಇರುವುದು ಒಳ್ಳೆಯದು ಎಂಬ ಬಗ್ಗೆ ಕೆಲವು ಎಚ್ಚರಿಕೆಯನ್ನು ನಾವಿಲ್ಲಿ ನೀಡುತ್ತಿದ್ದೇವೆ. ಈಗಿನ ಜಮಾನದಲ್ಲಿ ಪ್ರತಿಯೊಬ್ಬರು 24 ತಾಸು ತಮ್ಮ ಬಳಿ ಫೋನ್ ಇಟ್ಟುಕೊಂಡಿರುತ್ತಾರೆ. ಅದು ದೇಹದ ಅವಿಭಾಜ್ಯ ಅಂಗ ಎಂಬಂತೆ ವರ್ತಿಸುವವರೂ ಇದ್ದಾರೆ. ಆದರೆ ಕೆಲವು ಸಂದರ್ಬದಲ್ಲಿ ಫೋನ್ ಬಳಕೆ ಮಾಡದೇ ಇರುವುದು ಬಹಳ ಒಳ್ಳೆಯದು. ನಾವು ಈ ಕೆಳಗೆ ತಿಳಿಸಿರುವ ಸಂದರ್ಬದಲ್ಲಿ ಫೋನ್ ನಿಮ್ಮಿಂದ ದೂರ ಇರುವುದು ಬಹಳ ಒಳ್ಳೆಯದು.

ಕಾರ್ ಅಥವಾ ಬೈಕ್ ಡ್ರೈವಿಂಗ್ ಮಾಡುವಾಗ ಬಳಸಬೇಡಿ

ಕಾರ್ ಅಥವಾ ಬೈಕ್ ಡ್ರೈವಿಂಗ್ ಮಾಡುವಾಗ ಬಳಸಬೇಡಿ

ಇದೊಂದು ಬಹಳ ಮುಖ್ಯವಾಗಿರುವ ಮತ್ತು ತಪ್ಪಿದರೆ ಜೀವಕ್ಕೆ ಸಂಚಕಾರ ತಂದೊಡ್ಡುವ ಸಾಧ್ಯತೆ ಇರುತ್ತದೆ. ಹೌದು ಡ್ರೈವಿಂಗ್ ಮಾಡುವಾಗ ಫೋನ್ ಬಳಕೆ ಮಾಡುವುದು ನಿಷೇಧ. ಹಾಗಾಗಿ ಡ್ರೈವಿಂಗ್ ನ ಸಂದರ್ಬದಲ್ಲಿ ನಿಮ್ಮ ಫೋನ್ ನಿಮಗೆ ತೊಂದರೆ ನೀಡದಂತೆ ದೂರವಿಟ್ಟುಕೊಳ್ಳಿ. ಡ್ರೈವಿಂಗ್ ನ ಸಂದರ್ಬದಲ್ಲಿ ಕರೆಗಳು ಬಂದರೆ ಗಾಡಿ ನಿಲ್ಲಿಸಿ ರಿಸೀವ್ ಮಾಡಿ. ನಿಮ್ಮ ಕುಟುಂಬದವರ ಸಂತೋಷಕ್ಕಾಗಿ ನೀವಿದನ್ನು ಪಾಲಿಸಲೇಬೇಕು ಎಂಬ ಸತ್ಯ ನಿಮಗೆ ತಿಳಿದಿರಲಿ.

ಓದುವ ವೇಳೆ ಬಳಸಬೇಡಿ

ಓದುವ ವೇಳೆ ಬಳಸಬೇಡಿ

ಉತ್ತಮ ಕರಿಯರ್ ಇರಬೇಕು ಎಂದರೆ ವಿದ್ಯಾಭ್ಯಾಸ ಬಹಳ ಮುಖ್ಯ ಅಂಶವಾಗಿರುತ್ತದೆ. ಯಾರು ಮೊಬೈಲ್ ದೂರವಿಟ್ಟು ಓದುತ್ತಾರೋ ಅವರು ಮಾತ್ರ ಉತ್ತಮ ಅಂಕ ಗಳಿಸುವುದಕ್ಕೆ ಸಾಧ್ಯವಾಗುತ್ತದೆ ಅಥವಾ ಓದಿದನ್ನು ತಲೆಯಲ್ಲಿಟ್ಟುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಮೊಬೈಲ್ ನಿಮ್ಮ ಗಮನವನ್ನು ಹಾಳು ಮಾಡುತ್ತದೆ ಮತ್ತು ಓದಿದ್ದು ತಲೆಯಲ್ಲಿ ಉಳಿಯದಂತೆ ಮಾಡಿ ಬಿಡುತ್ತದೆ. ಹಾಗಾಗಿ ಆದಷ್ಟು ಓದುವ ಸಂದರ್ಬದಲ್ಲಿ ಮೊಬೈಲ್ ನ್ನು ದೂರವಿಟ್ಟು ಬಿಡಿ.

ಅಡುಗೆ ಮಾಡುವಾಗ ಫೋನ್ ಬಳಸದಿರಿ

ಅಡುಗೆ ಮಾಡುವಾಗ ಫೋನ್ ಬಳಸದಿರಿ

ಫೋನಿನಲ್ಲಿ ಹಲವು ಅಡುಗೆ ಮಾಹಿತಿಗಳು ಲಭ್ಯವಾಗುತ್ತದೆ ಎಂಬುದು ನಿಜ ವಿಚಾರವೇ. ಆದರೆ ಫೋನ್ ಹಿಡಿದು ಯಾರ ಬಳಿಯೋ ಮಾತನಾಡುತ್ತಾ ಅಡುಗೆ ಮಾಡಿದರೆ ಅಡುಗೆಯ ರುಚಿ ಹಾಳಾಗುವ ಸಾಧ್ಯತೆ ಇರುತ್ತದೆ. ಅದರಲ್ಲೂ ಅತಿಥಿಗಳು ಆಗಮಿಸುತ್ತಿರುತ್ತಾರೆ ಎಂದಾಗ ಇಂತಹ ಸಾಹಸಕ್ಕೆ ಕೈ ಹಾಕಬೇಡಿ. ಮೊಬೈಲ್ ನೋಡುವ ಭರದಲ್ಲಿ ಉಪ್ಪು, ಹುಳಿ, ಖಾರ ಹೆಚ್ಚು ಕಡಿಮೆ ಆಗಿ ಅಡುಗೆ ರುಚಿ ಹಾಳಾಗಿ ಬಂದ ಅತಿಥಿಗಳ ಮುಂದೆ ಅವಮಾನ ಮಾಡಿಕೊಳ್ಳಬೇಡಿ.

ಕೆಲಸ ಮಾಡುತ್ತಿರುವಾಗ ಬಳಸಬೇಡಿ

ಕೆಲಸ ಮಾಡುತ್ತಿರುವಾಗ ಬಳಸಬೇಡಿ

ನೀವು ಕೆಲಸ ಕಳೆದುಕೊಳ್ಳಲು ಇಚ್ಛೆ ಪಡದೇ ಇದ್ದಲ್ಲಿ ಮೊಬೈಲ್ ನ್ನು ಆಫೀಸಿನ ಕೆಲಸದ ವೇಳೆಯಲ್ಲಿ ದೂರವೇ ಇಟ್ಟುಬಿಡಿ. ಯಾವುದೇ ಅಧಿಕಾರಿಯೂ ಕೂಡ ನೀವು ಮೊಬೈಲ್ ನೋಡುತ್ತಲೇ ಇರುವುದನ್ನು ಸಹಿಸಲಾರ. ಅದರಲ್ಲೂ ಮಹತ್ವದ ಕೆಲಸವನ್ನು ನಿರ್ವಹಿಸುವಾಗ, ಮೀಟಿಂಗ್ ನಲ್ಲಿರುವಾಗ ಮೊಬೈಲ್ ನೋಡುವ ಅಭ್ಯಾಸ ಬಿಟ್ಟು ಬಿಡಿ.

ಸ್ನಾನ ಮಾಡುವಾಗ ಫೋನ್ ಬೇಡ

ಸ್ನಾನ ಮಾಡುವಾಗ ಫೋನ್ ಬೇಡ

ಸ್ನಾನ ಮಾಡುವ ವೇಳೆಯಲ್ಲೂ ಕೂಡ ಮೊಬೈಲ್ ಹಿಡಿದು ಬಚ್ಚಲಿಗೆ ತೆರಳುವ ಅಭ್ಯಾಸ ಒಳ್ಳೆಯದಲ್ಲ. ಸ್ವಲ್ಪ ನೀರು ಮೊಬೈಲ್ ಗೆ ಬಿದ್ದರೂ ಕೂಡ ಫೋನಿನ ಆಯಸ್ಸು ಕಡಿಮೆಯಾಗುತ್ತದೆ. ಅದರಲ್ಲೂ ಶವರ್ ಸ್ನಾನ ಮಾಡುವ ವೇಳೆಯಲ್ಲಿ ಮೊಬೈಲ್ ಹಿಡಿದು ಬಾತ್ ರೂಮ್ ಗೆ ತೆರಳುವುದು ಒಳ್ಳೆಯದಲ್ಲ.

ಸಿನಿಮಾ ಥಿಯೇಟರ್ ನಲ್ಲಿ ಫೋನ್ ಯಾಕೆ ಬೇಕು

ಸಿನಿಮಾ ಥಿಯೇಟರ್ ನಲ್ಲಿ ಫೋನ್ ಯಾಕೆ ಬೇಕು

ಸಿನಿಮಾ ಹಾಲ್ ನಲ್ಲಿ ಯಾವುದೋ ಮಹತ್ವದ ದೃಶ್ಯ ಬರುತ್ತಿರುವಾಗ ನೀವು ಮೊಬೈಲ್ ಹಿಡಿದುಕೊಂಡರೆ ಖಂಡಿತ ಅದು ನಿಮ್ಮ ಮನರಂಜನೆಯನ್ನು ಹಾಳು ಮಾಡಿ ಬಿಡುತ್ತದೆ. ಸಿನಿಮಾ ಥಿಯೇಟರ್ ನಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡುವುದು ಅಥವಾ ಸೈಲೆಂಟ್ ಮೋಡ್ ನಲ್ಲಿ ಇಡುವುದು ಒಳ್ಳೆಯದು. ಥಿಯೇಟರ್ ನಲ್ಲಿ ಫೋನಿನಲ್ಲಿ ಮಾತನಾಡುವುದರಿಂದ ಇತರೆ ವೀಕ್ಷಕರಿಗೂ ಕೂಡ ತೊಂದರೆಯಾಗುವುದು ತಪ್ಪುತ್ತದೆ.

ಬಸ್ಸಿಗೆ ಕಾಯುತ್ತಿರುವ ಸಂದರ್ಬದಲ್ಲಿ ಫೋನ್ ಬಳಸಬೇಡಿ

ಬಸ್ಸಿಗೆ ಕಾಯುತ್ತಿರುವ ಸಂದರ್ಬದಲ್ಲಿ ಫೋನ್ ಬಳಸಬೇಡಿ

ಇನ್ನೇನು ಕೆಲವೇ ಕ್ಷಣಗಳಲ್ಲಿ ಬಸ್ಸು ಬರುವ ಸಮಯವಾಗಿದೆ. ಆದರೆ ನಿಮಗೊಂದು ಕರೆ ಬರುತ್ತದೆ ಮತ್ತು ನೀವದನ್ನು ರಿಸೀವ್ ಮಾಡಿ ಮಾತನಾಡಲು ಆರಂಭಿಸಿ ಬಿಡುತ್ತೀರಿ. ಆ ಗಡಿಬಿಡಿಯಲ್ಲಿ ಬಸ್ಸಿ ನಿಲ್ದಾಣದಲ್ಲಿ ನಿಂತಿದ್ದೇ ಗೊತ್ತಾಗುವುದಿಲ್ಲ ಮತ್ತು ನೀವು ಬಸ್ ಹತ್ತುವುದನ್ನು ಮರೆತುಬಿಡುತ್ತೀರಿ. ಮುಂದೇನಾಗುತ್ತದೆ ಎಂಬುದನ್ನು ವಿವರಿಸಬೇಕಾಗಿಲ್ಲವಲ್ಲವೇ? ಹಾಗಾಗಿ ಬಸ್ ನಿಲ್ದಾಣದಲ್ಲಿ ದಯವಿಟ್ಟು ಫೋನ್ ಬಳಸದೇ ಇರುವುದೇ ಸೂಕ್ತವಾದದ್ದಾಗಿದೆ.

ವಿಮಾನ ಪ್ರಯಾಣದ ಸಂದರ್ಬದಲ್ಲಿ ಫೋನ್ ಬಳಸಬೇಡಿ

ವಿಮಾನ ಪ್ರಯಾಣದ ಸಂದರ್ಬದಲ್ಲಿ ಫೋನ್ ಬಳಸಬೇಡಿ

ವಿಮಾನದಲ್ಲಿ ಸಂಚರಿಸುವಾಗ, ಕೆಲವು ನೀತಿನಿಯಮಗಳನ್ನು ಅನುಸರಿಸಲೇಬೇಕಾಗುತ್ತದೆ. ಅದರಲ್ಲಿ ಪ್ರಮುಖವಾಗಿರುವ ನಿಯಮವೆಂದರೆ ಮೊಬೈಲ್ ಫೋನ್ ಗಳನ್ನು ಬಳಸುವಂತಿಲ್ಲ ಎನ್ನುವುದೇ ಆಗಿದೆ. ಹಾಗಾಗಿ ವಿಮಾನದಲ್ಲಿ ಸಂಚರಿಸುವಾಗ ದಯವಿಟ್ಟು ಫೋನ್ ನ್ನು ಫ್ಲೈಟ್ ಮೋಡ್ ಗೆ ಹಾಕಿ ಇಡಿ. ಒಂದು ವೇಳೆ ನೀವು ಫೋನ್ ಬಳಸಿದ್ದೇ ಆದಲ್ಲಿ ರೇಡಿಯೇಷನ್ ಅಥವಾ ಫ್ರೀಕ್ವೆನ್ಸಿಯು ವಿಮಾನದ ಎಲೆಕ್ಟ್ರಾನಿಕ್ ಕಂಪೋನೆಂಟ್ ಗೆ ತೊಂದರೆ ಉಂಟು ಮಾಡುವ ಸಾಧ್ಯತೆ ಇದೆ. ಅಷ್ಟೇ ಅಲ್ಲ ಇದೇ ಕಾರಣಕ್ಕೆ ನೀವು ನಿಮ್ಮ ವರ್ತನೆಗೆ ಶಿಕ್ಷೆ ಎದುರಿಸಬೇಕಾಗಬಹುದು ಎಚ್ಚರಿಕೆ.

ರೋಡ್ ಕ್ರಾಸ್ ಮಾಡುತ್ತಿರುವಾಗ ಫೋನ್ ಬೇಡ

ರೋಡ್ ಕ್ರಾಸ್ ಮಾಡುತ್ತಿರುವಾಗ ಫೋನ್ ಬೇಡ

ರಸ್ತೆಯಲ್ಲಿ ನಡೆದು ಸಾಗುತ್ತಿರುವ, ರೋಡ್ ಕ್ರಾಸ್ ಮಾಡುತ್ತಿರುವಾಗ ದಯವಿಟ್ಟು ನಿಮ್ಮ ಮೊಬೈಲ್ ಫೋನ್ ನ್ನು ನಿಮ್ಮ ಪಾಕೆಟ್ ನಲ್ಲಿ ಇಟ್ಟುಕೊಳ್ಳುವುದನ್ನು ಮರೆಯಬೇಡಿ. ಮ್ಯೂಸಿಕ್ ಆಲಿಸುತ್ತಾ ಸಾಗುವುದು ಕೂಡ ಒಳ್ಳೆಯದಲ್ಲ. ನಿಮ್ಮ ನಡಿಗೆಯ ಮೇಲಿನ ಗಮನವನ್ನು ಇದು ಹಾಳು ಮಾಡುವ ಸಾಧ್ಯತೆ ಇದೆ. ರಸ್ತೆ ದಾಟುವಾಗ ದಯವಿಟ್ಟು ಗಮನಿವಿಟ್ಟು ದಾಟಿ. ನಿಮ್ಮ ಗಮನ ಫೋನಿನಲ್ಲಿದ್ದಾಗ ಯಾವ ಕಾರಣಕ್ಕೂ ರಸ್ತೆ ದಾಟುವ ಸಾಹಸಕ್ಕೆ ಮುಂದಾಗಬೇಡಿ.

Most Read Articles
Best Mobiles in India

Read more about:
English summary
Smartphones become too risky and even threat to lives if we use them at inappropriate places like- road, flight etc. As a human we must not let devices to control our lives, rather we must set certain guidelines of when to operate them.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more