ಆಂಡ್ರಾಯ್ಡ್ ಬಳಕೆದಾರರ ಮುಂದಿವೆ 20 ಸಮಸ್ಯೆಗಳ ಸರಮಾಲೆ

ದುಬಾರಿ ಹಣ ತೆತ್ತು ಆಂಡ್ರಾಯ್ಡ್ ಮೊಬೈಲ್ ಖರೀದಿಸುವ ಗ್ರಾಹಕರು ಎಲ್ಲವೂ ಸರಿಯಿದೆ ಎಂದು ಬ್ರೌಸಿಂಗ್ ನಲ್ಲಿ ಮಗ್ನರಾಗುತ್ತಾರೆ.

By Prathap T
|

ದುಬಾರಿ ಹಣ ತೆತ್ತು ಆಂಡ್ರಾಯ್ಡ್ ಮೊಬೈಲ್ ಖರೀದಿಸುವ ಗ್ರಾಹಕರು ಎಲ್ಲವೂ ಸರಿಯಿದೆ ಎಂದು ಬ್ರೌಸಿಂಗ್ ನಲ್ಲಿ ಮಗ್ನರಾಗುತ್ತಾರೆ. ಆದರೆ, ಹಾರ್ಡ್ ವೇರ್ ಹಾಗೂ ಸಾಫ್ಟ್ ವೇರ್ ನಲ್ಲಿ ಯಾವುದಾದರೂ ಸಮಸ್ಯೆ ಉಂಟಾಗಿ ಕೆಲವೊಮ್ಮೆ ಕಿರಿಕಿರಿ ಅನುಭವಿಸುವುದು ಸಾಮಾನ್ಯವಾಗಿ ಬಿಟ್ಟಿದೆ.

ಆಂಡ್ರಾಯ್ಡ್ ಬಳಕೆದಾರರ ಮುಂದಿವೆ 20 ಸಮಸ್ಯೆಗಳ ಸರಮಾಲೆ

ಕೆಲವರು ಮೊಬೈಲ್ ಕಂಪನಿ ದೂರಿದರೆ, ಮತ್ತೆ ಹಲವರು ಸಿಮ್ ಕಾರ್ಡ್ ಕಂಪನಿಯತ್ತಾ ಬೆರಳು ಮಾಡುವುದು ಸಾಮಾನ್ಯವಾಗಿ ಬಿಟ್ಟಿದೆ. ಒಟ್ಟಾರೆ ಯಾವುದೇ ಆಂಡ್ರಾಯ್ಡ್ ಮೊಬೈಲ್ ಆದರೂ ಸಾಮಾನ್ಯವಾಗಿ ಕೆಲ ಸಮಸ್ಯೆಗಳು ಉಂಟಾಗುವುದು ಮಾಮೂಲಿ ಎಂಬ ಮಾತು ಇದೀಗ ಜನಜನಿತವಾಗಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಆಂಡ್ರಾಯ್ಡ್ ನಲ್ಲಿ ಎದುರಾಗುವ ಸಮಸ್ಯೆ ಕುರಿತು ಒಟ್ಟು 20 ಅಂಶಗಳ ಪಟ್ಟಿಯನ್ನು ನಾವು ತಮ್ಮ ಮುಂದಿಡುತ್ತಿದ್ದೇವೆ.

ಸ್ಥಳಾವಕಾಶ ಸಮಸ್ಯೆ

ಸ್ಥಳಾವಕಾಶ ಸಮಸ್ಯೆ

ಯಾವುದೇ ಆಪ್ ಅಥವಾ ಇನ್ನಿತರ ಸಿನಿಮಾ, ಹಾಡುಗಳನ್ನು ಡೌನ್ ಲೋಡ್ ಮಾಡಲು ಮುಂದಾದರೆ ಸ್ಥಳಾವಕಾಶ ವಿಲ್ಲದೇ ಡೌನ್ ಲೋಡ್ ಆಗುವುದಿಲ್ಲ ಎಂದು ನೋಟಿಫಿಕೇಶನ್ ಬಂದರೆ ತುಂಬಾರೆ ಬೇಜಾರಾಗುತ್ತಿದೆ.

ಈಹಿಂದೆ ಇನ್ ಬಿಲ್ಟ್ 16GB ಸಾಮರ್ಥ್ಯಯುಳ್ಳ ಆಂಡ್ರಾಯ್ಡ್ ಮಾರುಕಟ್ಟೆಗೆ ಬಂದಿದ್ದರೂ ಸಾಮಾನ್ಯವಾಗಿ ಇಂಟರ್ ನೆಟ್ ಬಳಕೆಯುಳ್ಳ ಫೋನ್ ಗಳು ಕನಿಷ್ಠ 5GB ಸಾಮರ್ಥ್ಯ ಹೊಂದಿದ್ದರೂ ಸ್ಥಳಾವಕಾಶ ಕೊರತೆ ಕಾಡುವುದು ಬಿಟ್ಟಿಲ್ಲ. ಆದಾಗ್ಯೂ, SD ಕಾರ್ಡ್ ಗಳು ನಮಗೆ ರಕ್ಷಕವಾಗಿ ನೆರವಿಗೆ ಬರುತ್ತದೆ.

ಗೂಗಲ್ ಪ್ಲೇಸ್ಟೋರ್ ಕ್ರ್ಯಾಶಿಂಗ್

ಗೂಗಲ್ ಪ್ಲೇಸ್ಟೋರ್ ಕ್ರ್ಯಾಶಿಂಗ್

ಸಾಮಾನ್ಯವಾಗಿ ದೇಶಿ ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ಗೂಗಲ್ ಪ್ಲೇ ಸ್ಟೋರ್ ತೆರೆಯಲು ಮುಂದಾದರೆ ಕೆಲವೊಮ್ಮೆ ವಿಚಿತ್ರ ಸನ್ನಿವೇಶಗಳು ಎದುರಾಗುತ್ತದೆ. "Google Play Store isn't responding" ಎಂಬ ಸಂದೇಶ ಬರುತ್ತದೆ. ದೋಷಪೂರಿತ ಬೇಡವಾದ ಸಂಗ್ರಹಗಳು ಮೊಬೈಲ್ ನಲ್ಲಿ ತುಂಬಿ ಕೊಂಡಾಗ ಇಂತಹ ಸಮಸ್ಯೆ ಎದುರಾಗಲ ಕಾರಣ ಎನ್ನಲಾಗಿದೆ.

ಆಪ್ install ಆಗಲ್ಲ

ಆಪ್ install ಆಗಲ್ಲ

ಕೆಲವೊಮ್ಮೆ ನಮಗೆ ಇಷ್ಟವಾದ ಆಪ್ ಡೌನ್ ಲೋಡ್ ಮಾಡಲು install ಬಟನ್ ಒತ್ತಿದರೆ ಆಗುವುದೇ ಇಲ್ಲ. ಕಡಿಮೆ ಸಂಗ್ರಹ ಸಾಮರ್ಥ್ಯ, ದೋಷಪೂರಿತ ಸಂಗ್ರಹ ಹಾಗೂ ಇನ್ನಿತರ ಬೇರೆ ಕಾರಣಗಳಿಂದಲೂ ಹೀಗೇ ಆಗುವ ಸಾಧ್ಯತೆಯಿದೆ.

ಆಂಡ್ರಾಯ್ಡ್ ಮೆಮೋರಿ ಕಾಯ್ದಿರಿಸಿಕೊಳ್ಳಿ

ಆಂಡ್ರಾಯ್ಡ್ ಮೆಮೋರಿ ಕಾಯ್ದಿರಿಸಿಕೊಳ್ಳಿ

ಅಧಿಕ ಆಪ್ ಗಳ ಬಳಕೆ ಹಾಗೂ ಅನಗತ್ಯ ಸಂಗ್ರಹಗಳನ್ನು ಇಟ್ಟುಕೊಳ್ಳುವುದರಿಂದ ಮೊಬೈಲ್ ಸ್ಪೀಡ್ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ನೀವು ಬೇಡವಾದ ಸಂಗ್ರಹಗಳು ಹಾಗೂ ಆಪ್ ಗಳನ್ನು ಡಿಲೇಟ್ ಮಾಡುವುದು ಒಳ್ಳೆಯದು. ಇದರಿಂದ ಬಳಕೆಯಲ್ಲಿ ವೇಗ ಪಡೆದುಕೊಳ್ಳಲು ನೆರವಾಗುತ್ತದೆ.

ಸಿಸ್ಟಮ್ ಯುಐ ಕಾರ್ಯನಿರ್ವಹಿಸುವುದಿಲ್ಲ

ಸಿಸ್ಟಮ್ ಯುಐ ಕಾರ್ಯನಿರ್ವಹಿಸುವುದಿಲ್ಲ

ಯಾವುದಾದರೂ ಆಪ್ ಓಪನ್ ಮಾಡುವಾಗ ಕೆಲವೊಮ್ಮೆ ಸಿಸ್ಟಮ್ ಯುಐ ಸ್ಥಗಿತಗೊಂಡು ಹ್ಯಾಂಗ್ ಆಗುವ ಸಾಧ್ಯತೆ ಇರುತ್ತದೆ. ಆ ವೇಳೆಯಲ್ಲಿ ನಿಮ್ಮ ಫೋನ್ restart ಮಾಡಿ ಬೇಡವಾದ ಸಂಗ್ರಹಗಳನ್ನು ಡಿಲೀಟ್ ಮಾಡಿದರೆ ಸರಿದೂಗಿಸಬಹುದು.

 ಡೌನ್ ಲೋಡ್ಸ್

ಡೌನ್ ಲೋಡ್ಸ್

ಕೆಲವೊಮ್ಮೆ, ನೀವು ಡೌನ್ ಲೋಡ್ ಮಾಡಿದ ಫೈಲ್ ಗಳು ಕಾರ್ಯನಿರ್ವಹಿಸುವುದಿಲ್ಲ. ಫೈಲ್ ಅನ್ನು ಪ್ರಕ್ರಿಯೆಗೊಳಿಸಲು ಸಹಾಯ ಮಾಡುವ ಸಾಫ್ಟ್ ವೇರ್ ಅಥವಾ ಆಪ್ ಇಲ್ಲದಿರುವಾಗ ಇದು ಹೆಚ್ಚಾಗಿ ಸಂಭವಿಸುತ್ತದೆ. ಉದಾಹರಣೆಗೆ, ಹೆಚ್ಚಿನ PDF ಫೈಲ್ ಪಿಡಿಎಫ್ ಅಪ್ಲಿಕೇಶನ್ ಅಥವಾ ಸಾಫ್ಟ್ ವೇರ್ ಇಲ್ಲದೆ ರನ್ ಆಗುವುದಿಲ್ಲ.

ಡೌನ್ ಲೋಡ್ ಫೈಲ್ಸ್ ಕೆಲವೊಮ್ಮೆ ಸಿಗುವುದಿಲ್ಲ

ಡೌನ್ ಲೋಡ್ ಫೈಲ್ಸ್ ಕೆಲವೊಮ್ಮೆ ಸಿಗುವುದಿಲ್ಲ

ಸಾಮಾನ್ಯವಾಗಿ ಡೌನ್ ಲೋಡ್ ಫೋಲ್ಡರ್ ನಲ್ಲಿ ಡೌನ್ಲೋಡ್ ಮಾಡಲಾದ ಎಲ್ಲ ಫೈಲ್ ಗಳ ಸಂಗ್ರಹವಾಗಿರುತ್ತವೆ, ಡೌನ್ ಲೋಡ್ ಫೋಲ್ಡರ್ ಪತ್ತೆಹಚ್ಚಲು, ಮೊದಲ ಫೈಲ್ ಮ್ಯಾನೇಜರ್ ಅನ್ನು ES ಫೈಲ್ ಎಕ್ಸ್ ಫ್ಲೋರರ್ ಸ್ಥಾಪಿಸಿ ಮತ್ತು ಡೈರೆಕ್ಟರಿಯಲ್ಲಿ ಡೌನ್ ಲೋಡ್ ಪಡೆಯಬಹುದು.

ಡೌನ್ ಲೋಡ್ ಮಾಡಿದ ವೀಡಿಯೊ ಪ್ಲೇ ಆಗುವುದಿಲ್ಲ

ಡೌನ್ ಲೋಡ್ ಮಾಡಿದ ವೀಡಿಯೊ ಪ್ಲೇ ಆಗುವುದಿಲ್ಲ

ಕೆಲವೊಮ್ಮೆ, ನಿರ್ದಿಷ್ಟ video player ಅಪ್ಲಿಕೇಶನ್ ಅನ್ನು install ಮಾಡದೇ ವಿಡಿಯೋ ಪ್ಲೇ ಮಾಡಲು ಮುಂದಾದರೆ ಆಗುವುದಿಲ್ಲ. ಆ ಸಂದರ್ಭದಲ್ಲಿ VLC ಅಥವಾ ಇನ್ನಿತರ ವಿಡಿಯೋ ಪ್ಲೇ ಮಾಡುವ ಆಪ್ ಡೌನ್ ಲೋಡ್ ಮಾಡಿಕೊಳ್ಳುವುದು ಒಳಿತು.

ದೋಷಪೂರಿತ ಆಪ್ ಬಳಕೆ ಸಲ್ಲ

ದೋಷಪೂರಿತ ಆಪ್ ಬಳಕೆ ಸಲ್ಲ

ಕೆಲವೊಮ್ಮೆ ನಮಗೆ ಅರಿವಿಗೆ ಬಾರದೇ ದೋಷಪೂರಿತ ಆಪ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುವುದರಿಂದ ವೈರಸ್ ತಗುಲುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಅಂತಹ ಾಪ್ ಗಳಿಂದ ದೂರವಿದ್ದು, ವೈರಸ್ ಸ್ಕ್ಯಾನಿಂಗ್ ಆಪ್ ಅಳವಡಿಸಿಕೊಳ್ಳುವುದು ಉತ್ತಮ.

ಇಂಟರ್ನೆಟ್ ಕಾರ್ಯನಿರ್ವಹಿಸುವುದಿಲ್ಲ

ಇಂಟರ್ನೆಟ್ ಕಾರ್ಯನಿರ್ವಹಿಸುವುದಿಲ್ಲ

ನೀವು ಹೊಸ ಮೊಬೈಲ್ ಅನ್ನು ಖರೀದಿಸಿದರೆ, ನೀವು ಈ ಸಮಸ್ಯೆಯನ್ನು ಎದುರಿಸಬಹುದು. ನೀವು ಮೊಬೈಲ್ ಡೇಟಾವನ್ನು ಬದಲಾಯಿಸಿದರೂ, ನೀವು ಇಂಟರ್ನೆಟ್ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ತಪ್ಪಾಗಿ configure ಮಾಡಲಾದ APN ಸೆಟ್ಟಿಂಗ್ ಕಾರಣವಾಗಿರುತ್ತದೆ. ಮೊಬೈಲ್ ಇಂಟರ್ನೆಟ್ ಕಾರ್ಯನಿರ್ವಹಿಸದೇ ಇರುವುದಕ್ಕೆ ಇದೇ ಮುಖ್ಯ ಕಾರಣ ಹೊರತು ಬೇರೆನೂ ಇಲ್ಲ.

ವೈಫೈಗೆ ಸಂಪರ್ಕಿಸಲು ಸಾಧ್ಯವಿಲ್ಲ

ವೈಫೈಗೆ ಸಂಪರ್ಕಿಸಲು ಸಾಧ್ಯವಿಲ್ಲ

ಸ್ನೇಹಿತರೊಟ್ಟಿಗೆ ಇದ್ದಾಗ ವೈಫೈ ಬಳಕೆಗೆ ಮುಂದಾಗದರೆ ಕೆಲವೊಮ್ಮೆ ಸಂಪರ್ಕ ಸಿಗುವುದಿಲ್ಲ. ಪಾಸ್ ವರ್ಡ್ ತಪ್ಪಾಗಿ ಒತ್ತಿದರೆ ಹೀಗೆ ಆಗುವ ಸಾಧ್ಯತೆ ಇರುತ್ತದೆ. ಆಗ ಎರಡು ಫೋನ್ ಗಳನ್ನು ರಿ ಸ್ಟಾರ್ಟ್ ಮಾಡಿ ಎಚ್ಚರಿಕೆಯಿಂದ ಪಾಸ್ ವರ್ಡ್ ಒತ್ತಬೇಕು.

ಬೂಟ್ ಕ್ರಾಶಸ್

ಬೂಟ್ ಕ್ರಾಶಸ್

ಕೆಲವೊಮ್ಮೆ ಆಪ್ install ಮಾಡುವಾಗ ಕ್ರಾಶಸ್ ಆಗುವ ಸಾಧ್ಯತೆ ಇರುತ್ತದೆ. ಆಗ ಮೊಬೈಲ್ ನಲ್ಲೊಇ safe mode ಆನ್ ಆಗಿ ರಕ್ಷಣೆ ಮಾಡುತ್ತದೆ.

ಮೊಬೈಲ್ ಆನ್ ಆಗುತ್ತಿಲ್ಲ

ಮೊಬೈಲ್ ಆನ್ ಆಗುತ್ತಿಲ್ಲ

ಆಂಡ್ರಾಯ್ಡ್ ಮೊಬೈಲ್ ನಲ್ಲಿ ಸಾಮಾನ್ಯವಾಗಿ ಶೆಲ್ವ್ ಬಾಳಿಕೆ 2 ವರ್ಷ ಮಾತ್ರ. ಅವಧೀ ಮುಗಿದರೆ ಬಹುಶಃ ಮೊಬೈಲ್ ಆಗಾಗ್ಗೆ ಆಫ್ ಆಗುತ್ತಿರುತ್ತದೆ. ಈ ಸಂದರ್ಭದಲ್ಲಿ ಬ್ಯಾಟರಿ ಹೊರತೆಗೆದು ಮತ್ತೆ ಹಾಕಿ ಪರೀಕ್ಷಿಸಬೇಕು. 15 ಸೆಕೆಂಟ್ ವರೆಗೆ ಆನ್ ಮಾಡುವ ಗುಂಡಿ ಒತ್ತಿದರೂ ಆನ್ ಆಗದಿದ್ದಲ್ಲಿ ಮೊಬೈಲ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ತೋರಿಸುವುದು ಒಳಿತು.

ಮೈಕ್ರೊ SD ಕಾರ್ಡ್ ಬಳಕೆಯಾಗುತ್ತಿಲ್ಲ.

ಮೈಕ್ರೊ SD ಕಾರ್ಡ್ ಬಳಕೆಯಾಗುತ್ತಿಲ್ಲ.

ಕೆಲವೊಮ್ಮೆ SD ಕಾರ್ಡ್ ಹಾಕಿದರೂ ಕಾರ್ಯನಿರ್ವಹಿಸುವುದಿಲ್ಲ. ದೋಷಪೂರಿತ ಸಂಗ್ರಹಗಳನ್ನು ಇಟ್ಟುಕೊಳ್ಳುವುದರಿಂದ ಹೀಗೆ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಮೊಬೈಲ್ ನಲ್ಲೇ format ಮಾಡುವುದು ಒಳಿತು. ಇಲ್ಲವಾದಲ್ಲಿ ಕಾರ್ಡ್ ರೀಡರ್ ಗೆ ಹಾಕಿ ಕಂಪ್ಯೂಟರ್ ನಲ್ಲಿಯೂ ಕೂಡ format ಮಾಡಬಹುದು.

ಕಂಪ್ಯೂಟರ್ ಗೆ ಆಂಡ್ರಾಯ್ಡ್ ಸಂಪರ್ಕ ಆಗುತ್ತಿಲ್ಲ

ಕಂಪ್ಯೂಟರ್ ಗೆ ಆಂಡ್ರಾಯ್ಡ್ ಸಂಪರ್ಕ ಆಗುತ್ತಿಲ್ಲ

ಕಳಪೆ ಗುಣಮಟ್ಟದ USB ಕೇಬಲ್ ಗಳ ಬಳಕೆಯಿಂದ ಕಂಪ್ಯೂಟರ್ ಗಳಿಗೆ ಆಂಡ್ರಾಯ್ಡ್ ಗಳು ಸಂಪರ್ಕಗೊಳ್ಳುವುದರಿಲ್ಲ. ಗುಣಮಟ್ಟದ ಕೇಬಲ್ ಬಳಸಿ ಸಂಪರ್ಕ ಆಗುತ್ತದೆ. ಮೊಬೈಲ್ ಶಾಪ್ ಗಳಲ್ಲಿ ಖರೀದಿಸುವ ಮುನ್ನ ಗುಣಮಟ್ಟ ಪರೀಕ್ಷಿಸಿಕೊಳ್ಳಿ.

ಬ್ಯಾಟರಿ ಡ್ರೈನ್ಸ್

ಬ್ಯಾಟರಿ ಡ್ರೈನ್ಸ್

ಅಧಿಕ ಪ್ರಮಾಣದ ಬಳಕೆಯಿಂದ ಆಂಡ್ರಾಯ್ಡ್ ಫೋನ್ ಗಳಲ್ಲಿ ಹೆಚ್ಚಿನ ಬ್ಯಾಟರಿ ಬ್ಯಾಕಪ್ ಇದೆ. ಉತ್ತಮವಾದ ಬ್ಯಾಟರಿಯನ್ನು ಹೊಂದಿದ್ದಲ್ಲದಿದ್ದರೆ ಬ್ಯಾಟರಿ ಪವರ್ ಸೇವರ್ ಆಯ್ಕೆಯನ್ನು ಬಳಸಲು ಮುಂದಾಗಿ.

ಬಿಸಿಯಾಗುವುದು

ಬಿಸಿಯಾಗುವುದು

ಕೆಲವು ಆಂಡ್ರಾಯ್ಡ್ ಫೋನ್ ಗಳನ್ನು ಅತೀ ಹೆಚ್ಚಿನ ಸಮಯ ಬಳಕೆ ಮಾಡಿದರೆ ಬಿಸಿಯಾಗುವ ಸಾಧ್ಯತೆ ಇರುತ್ತದೆ. ಆ ಸಂದರ್ಭದಲ್ಲಿ ಬಳಸದೇ ಆರಿಸಿ ಇಡುವುದು ಒಳ್ಳೆಯದು.

 ಸಿಂಕ್ ಮಾಡುವ ದೋಷ

ಸಿಂಕ್ ಮಾಡುವ ದೋಷ

ನೀವು ಇಂಟರ್ ನೆಟ್ ಸಂಪರ್ಕ ಹೊಂದಿದ್ದಾಗ ಸಿಂಕ್ ಮಾಡಲು ಪ್ರಯತ್ನಿಸುತ್ತಿರುವ ಸೇವೆಯು ಕೆಳಗಿಳಿಯುವುದಿಲ್ಲ ಎಂದು ಪರಿಶೀಲಿಸಿ. ಅಲ್ಲದೆ, ನಿಮ್ಮ ಪಾಸ್ವರ್ಡ್ ಸರಿಯಾಗಿದೆ ಎಂದು ಪರಿಶೀಲಿಸಿ ಮತ್ತು ಮತ್ತೆ ಸಿಂಕ್ ಮಾಡಲು ಪ್ರಯತ್ನಿಸಿ.

ತಪ್ಪಾದ ಸ್ವಯಂ ತಪ್ಪು ಸೂಚನೆಗಳು

ತಪ್ಪಾದ ಸ್ವಯಂ ತಪ್ಪು ಸೂಚನೆಗಳು

ಆಂಡ್ರಾಯ್ಡ್ ಬಳಕೆದಾರರಿಂದ ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆ ಇದಾಗಿದೆ. ಆಳವಾಗಿ ಚಾಟ್ ಮಾಡುವಾಗ ಸಾಮಾನ್ಯವಾಗಿ ಉಂಟಾಗುತ್ತದೆ. ನೀವು ಮಾಡಬೇಕಾದುದೆಂದರೆ ಸಲಹೆಯನ್ನು ದೀರ್ಘವಾಗಿ ಒತ್ತಿ ಮತ್ತು ಪದವನ್ನು ಅನುಪಯುಕ್ತಗೊಳಿಸಿ.

ಮುಖಪುಟ ಸ್ಕ್ರೀನ್ ಅಸ್ತವ್ಯಸ್ತತೆ

ಮುಖಪುಟ ಸ್ಕ್ರೀನ್ ಅಸ್ತವ್ಯಸ್ತತೆ

ಕೆಲವರು homescreen ನಲ್ಲಿ application ಮತ್ತು widget ಗೊಂದಲಕ್ಕೀಡು ಮಾಡುವುದು ಸಾಮಾನ್ಯವಾಗಿದೆ. ಇದರಿಂದ ಮೊಬೈಲ್ ಕಾರ್ಯಕ್ಷಮತೆಗಳನ್ನು ನಿಧಾನಗೊಳಿಸುತ್ತದೆ.

ಅಪ್ಲಿಕೇಶನ್ ಅನ್ನು ಡ್ರ್ಯಾಗ್ ಮಾಡಿ ಡಿಲಿಟ್ ಮಾಡುವುದು ಸೂಕ್ತ.

Best Mobiles in India

Read more about:
English summary
We have to come face to face with our reality and agree that no phone is perfect. Everything has a fault in one or another way be it hardware or software.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X