Subscribe to Gizbot

ನಿಮ್ಮ ಫೋನಿನ ಪ್ಯಾಟ್ರನ್ ಲಾಕ್ ಓಪನ್ ಮಾಡುವುದು ಹೇಗೆ..?

Written By: Lekhaka

ಇಂದಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಬಳಕೆ ಹೆಚ್ಚಾಗುತ್ತಿರುವ ಅದರ ಸೇಫ್ಟಿಗಾಗಿ ಪ್ಯಾಟ್ರನ್ ಇಲ್ಲವೇ ಪಿನ್, ಪಾಸ್ ವರ್ಡ್, ಫಿಂಗರ್ ಪ್ರಿಂಟ್ ಲಾಕ್ ಗಳನ್ನು ಬಳಕೆ ಮಾಡಿಕೊಳ್ಳುತ್ತಾರೆ. ಆದರೆ ಕೆಲವು ಬಾರಿ ಈ ಪ್ಯಾಟ್ರನ್ ಗಳು ಮರೆತು ಹೋದರೆ ಸ್ಮಾರ್ಟ್ ಫೋನ್ ಅನ್ನು ಒಪನ್ ಮಾಡಲು ಸಾಧ್ಯವೇ ಆಗುವುದಿಲ್ಲ. ಆದರೆ ಈ ಪ್ಯಾಟ್ರನ್ ಅನ್ನು ಬದಲಾಯಿಸಬಹುದಾಗಿದೆ. ಅದು ಹೇಗೆ ಎಂಬುದನ್ನು ನಾವಿಲ್ಲಿ ತಿಳಿಸಿಕೊಡಲಿದ್ದೇವೆ.

ನಿಮ್ಮ ಫೋನಿನ ಪ್ಯಾಟ್ರನ್ ಲಾಕ್ ಓಪನ್ ಮಾಡುವುದು ಹೇಗೆ..?

ಈ ಹಿನ್ನಲೆಯಲ್ಲಿ ನಿಮ್ಮ ಸ್ಮಾರ್ಟ್ ಫೋನ್ ಪ್ಯಾಟ್ರನ್ ಇಲ್ಲವೇ ಪಿನ್ ಸಂಖ್ಯೆಯನ್ನು ಮರೆತರೆ ಹೇಗೆ ಮತ್ತೇ ಸ್ಮಾರ್ಟ್ ಫೋನ್ ಅನ್ನು ಒಪನ್ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡಲಿದ್ದೇವೆ. ಈ ಕೆಳಗಿನ ಹಂತಗಳ ಮೂಲಕ ಅವುಗಳನ್ನು ತಿಳಿದುಕೊಳ್ಳಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿಧಾನ 01:

ವಿಧಾನ 01:

ನಿಮ್ಮ ಲಾಕ್ ಸ್ಕ್ರಿನ್ ಅನ್ನು ಬೈ ಪಾಸ್ ಮಾಡುವ ಸಲುವಾಗಿ ನಿಮ್ಮ ಫೋನ್ ಅನ್ನು ರಿಸೆಟ್ ಮಾಡಬೇಕಾಗಿದೆ. ಅದು ಹೇಗೆ ಎಂಬುದನ್ನು ತಿಳಿಸಿಕೊಡಲಿದ್ದೇವೆ.

ಹಂತ 01: ಮೊದಲಿಗೆ ನಿಮ್ಮ ಫೋನ್ ಅನ್ನು ಸ್ವಿಚ್ ಆಫ್ ಮಾಡಿ. ನಂತರ ವ್ಯಾಲ್ಯೂಮ್ ಆಪ್, ಪವರ್ ಮತ್ತು ಹೋಮ್ ಬಟನ್ ಗಳನ್ನು ಒಟ್ಟಿಗೆ ಒತ್ತಿದರೆ ರಿಕವರಿ ಮೋಡ್ ಆನ್ ಆಗಲಿದೆ.

ಹಂತ 02: ಬೂಟ್ ಲೋಡರ್ ಒಪನ್ ಆದ ನಂತರದಲ್ಲಿ ರಿಕವರಿ ಮೋಡ್ ನಲ್ಲಿ ಹೊದ ಮೇಲೆ ಪವರ್ ಬಟನ್ ಅನ್ನು ಪ್ರೆಸ್ ಮಾಡಿದರೆ ರಿಕವರಿ ಮೋಡ್ ಕಾಣಿಸಿಕೊಳ್ಳಲಿದೆ.

ಹಂತ 03: ನಂತರ ವ್ಯಾಲ್ಯೂಮ್ ಬಟನ್ ಆಪ್ ಡೌನ್ ಮಾಡುವ ಮೂಲಕ ವೈಪ್ ಡೇಟಾ/ಫ್ಯಾಕ್ಟರಿ ರಿಸೆಸ್ಟ್ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ರಿಬೂಟ್ ಮಾಡಬಹುದಾಗಿದೆ.

ವಿಧಾನ 02:

ವಿಧಾನ 02:

ಸೇಫ್ ಮೋಡ್ ಆನ್ ಮಾಡಿಕೊಳ್ಳುವ ಮೂಲಕ ಸಹ ನೀವು ಪ್ಯಾಟ್ರನ್ ಲಾಕ್ ಅನ್ನು ಬೈ ಪಾಸ್ ಮಾಡಬಹುದಾಗಿದ್ದು, ಇದಕ್ಕಾಗಿ ಮೊದಲು ನೀವು ನಿಮ್ಮ ಫೋನ್ ಅನ್ನು ಆಫ್ ಮಾಡಿ ನಂತರ ಪವರ್ ಬಟನ್ ಅನ್ನು ಸ್ಪಲ್ಪ ಹೊತ್ತು ಒತ್ತಿ ಇಟ್ಟುಕೊಳ್ಳಿ. ಇದಾದ ನಂತರ ಸೇಫ್ ಮೋಡ್ ಓಪನ್ ಆಗಲಿದ್ದು, ನಂತರ ಅಲ್ಲಿ ನಿಮ್ಮ ಫೋನ್ ರಿಬೋಟ್ ಮಾಡಬಹುದಾಗಿದೆ.

 ವಿಧಾನ 03:

ವಿಧಾನ 03:

ಆಂಡ್ರಾಯ್ಡ್ ಡಿವೈಸ್ ಮ್ಯಾನೆಜರ್ ಮೂಲಕವು ಲಾಕ್ ಸ್ಕ್ರಿನ್ ಬೈಪಾಸ್ ಮಾಡಬಹುದಾಗಿದೆ. ಇದಕ್ಕಾಗಿ ನೀವು ಗೂಗಲ್ ಆಕೌಂಟ್ ಅನ್ನು ಪೋನ್ ನಲ್ಲಿ ಹೊಂದಿರ ಬೇಕಾಗುತ್ತದೆ.

ಹಂತ 01:ಜಿಮೇಲ್ ಐಡಿ ಮೂಲಕ ಆಂಡ್ರಾಯ್ಡ್ ಡಿವೈಸ್ ಮೂಲಕ ಲಾಗ್ ಇನ್ ಆಗಬೇಕಾಗಿದೆ.

ಹಂತ 02: ನಂತರ ಡಿವೈಸ್ ಕನೆಕ್ಟ್ ಆದ ಮೇಲೆ ಲಾಕ್ ಬಟನ್ ಮೇಲೆ ಕ್ಲಿಕ್ ಮಾಡಿ. ಇದರಲ್ಲಿ ನ್ಯೂ ವಿಂಡೊ ತೆರೆದುಕೊಳ್ಳಲಿದ್ದು, ಅಲ್ಲಿ ಹೊಸ ಪಾಸ್ ವರ್ಡ್, ಪಿನ್., ಪ್ಯಾಟ್ರನ್ ಅನ್ನು ನೀಡಲಾಗಿದೆ.

ಚೀನೀ ಮೊಬೈಲ್ ಕಂಪೆನಿಗಳಿಗೆ ಸರ್ಕಾರದಿಂದ ಬಿಗ್ ಶಾಕ್!..ಭಾರತದಲ್ಲಿ ಪಾರಮ್ಯಕ್ಕೆ ಬ್ರೇಕ್!!

ವಿಧಾನ 04:

ವಿಧಾನ 04:

ಯೂಎಸ್ ಬಿ ಕನೆಕ್ಟ್ ಮಾಡಿಕೊಳ್ಳಲುವ ಮೂಲಕ ನಿಮ್ಮ ಪ್ಯಾಟ್ರನ್ ಅನ್ನು ಬೈಪಾಸ್ ಮಾಡಬಹುದಾಗಿದೆ. ನಿಮ್ಮ ಫೋನ್ ಅನ್ನು ಕಂಪ್ಯೂಟರ್ ನೊಂದಿಗೆ ಮೊಬೈಲ್ ಅನ್ನು ಕೆನೆಕ್ಟ್ ಮಾಡಿ. ನಂತರ ADB ಮೂಲಕ ಕಮೆಂಡ್ ಪ್ರಾಮ್ಟ್ ಅನ್ನು ಓಪನ್ ಮಾಡಿ ನಿಮ್ಮ ಫೋನ್ ಅನ್ನು ರಿಬೋಟ್ ಮಾಡಬಹುದಾಗಿದೆ.

 ವಿಧಾನ 05:

ವಿಧಾನ 05:

ಸ್ಯಾಮ್ ಸಂಗ್ ಫೋನ್ ಗಳನ್ನು ಬಳಕೆ ಮಾಡಿಕೊಳ್ಳತ್ತಿರುವ ಸಂದರ್ಭದಲ್ಲಿ ಇದು ಉಪಯೋಗಕ್ಕೆ ಬರಲಿದೆ

ಹಂತ 01: ಸ್ಯಾಮ್ ಸಂಗ್ ಆಕೌಂಟ್ ನಿಂದ ಲಾಗ್ ಇನ್ ಆಗಿರಿ.

ಹಂತ 02: ಲಾಕ್ ಮೈ ಸ್ಕ್ರಿನ್ ಆಯ್ಕೆಯನ್ನು ಒಪನ್ ಮಾಡಿ.

ಹಂತ 03: ನಂತರ ಹೊಸ ಪಿನ್ ಮತ್ತು ಲಾಕ್ ಬಟನ್ ಕ್ಲಿಕ್ ಮಾಡಿ

ಹಂತ 04: ನಂತರ ನಿಮ್ಮ ಪಿನ್ ಬದಲಾವಣೆ ಮಾಡಬಹುದಾಗಿದೆ. ಹೊಸ ಪಿನ್ ಹಾಕಿದರೆ ಒಪನ್ ಆಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
One of the main reason to apply a lock on our smartphone is to keep others away from checking our personal information. In the worst case, you could change PIN or pattern lock in some urgency and later forget it. If you have been in that situation or in that situation currently, we have compiled some tested method that you can use to bypass the lock.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot