ಈ ವರ್ಷ 5G ಸ್ಮಾರ್ಟ್‌ಫೋನ್‌ ನಿಮ್ಮ ಕೈಸೇರೋದು ಪಕ್ಕಾ..!

By Gizbot Bureau
|

ಭಾರತದಲ್ಲಿ ಇನ್ನೇನು 5G ಸ್ಮಾರ್ಟ್‌ಫೋನ್‌ಗಳ ಹಾವಳಿ ಶುರುವಾಗಲಿದೆ. ಈ ವರ್ಷದ ಮೊದಲಾರ್ಧದ ಒಳಗಡೆ ಗ್ರಾಹಕರು 5G ಸ್ಮಾರ್ಟ್‌ಫೋನ್‌ಗಳನ್ನು ಕೈಯಲ್ಲಿ ಹಿಡಿಯಬಹುದಾಗಿದೆ. ಕೆಲವೊಂದು ಸಾಧನಗಳು ಮೊದಲ ತ್ರೈಮಾಸಿಕದಲ್ಲಿಯೇ ಬಳಕೆದಾರರ ಕೈಸೇರುವ ಸಾಧ್ಯತೆಯಿದೆ. ಸರ್ಕಾರವೂ ಸಹ ಈ ನಿಟ್ಟಿನಲ್ಲಿ ಸಿದ್ಧತೆ ನಡೆಸಿದ್ದು, 5G ಸ್ಪೆಕ್ಟ್ರಮ್‌ ಹರಾಜನ್ನು ದ್ವಿತೀಯ ತ್ರೈಮಾಸಿಕದಲ್ಲಿ ಕರೆಯುವುದು ನಿಚ್ಚಳವಾಗಿದೆ.

ಸಂಶೋಧನಾ

ಸಂಶೋಧನಾ

ಸಂಶೋಧನಾ ಸಂಸ್ಥೆ ಟೆಕ್‌ಆರ್ಕ್‌ ಪ್ರಕಾರ ಈ ವರ್ಷ 15 ರಿಂದ 18 ಆವೃತ್ತಿಯ ಪ್ರಿಮೀಯಂ ಅಥವಾ ಅತ್ಯಾಧುನಿಕ ಸ್ಮಾರ್ಟ್‌ಫೋನ್‌ಗಳು (30 ಸಾವಿರ ರೂ. ಮೇಲ್ಪಟ್ಟು) ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಅಂತರಾಷ್ಟ್ರೀಯ ಡೇಟಾ ಕಾರ್ಪೊರೇಷನ್‌ ಹೇಳುವಂತೆ, ಹಲವು ಕಾರಣಗಳಿಂದ 2020ರಲ್ಲಿ ಕಂಪನಿಗಳು 4G ಮತ್ತು 5G ಎರಡು ಆವೃತ್ತಿಗಳಲ್ಲಿ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತವೆ. ಸಂಪೂರ್ಣ 5G ಸ್ಮಾರ್ಟ್‌ಫೋನ್‌ಗಳನ್ನು 2021ರಲ್ಲಿ ನೋಡಲು ಸಾಧ್ಯವಾಗುತ್ತದೆ.

ಶಿಯೋಮಿ, ರಿಯಲ್‌ಮಿ ಮುಂದು

ಶಿಯೋಮಿ, ರಿಯಲ್‌ಮಿ ಮುಂದು

ಚೀನಾದ ಶಿಯೋಮಿ ಈಗಾಗಲೇ ಜಾಗತಿಕವಾಗಿ 10 5G ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ರಿಯಲ್‌ಮಿ ತನ್ನ ಮೊದಲ 5G ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ನ್ನು ಮೊದಲಾರ್ಧದಲ್ಲಿ ಬಿಡುಗಡೆ ಮಾಡುವ ಉತ್ಸಾಹದಲ್ಲಿದೆ. ಒಪ್ಪೋ, ವಿವೋ, ಒನ್‌ಪ್ಲಸ್‌ ಮತ್ತು ಸ್ಯಾಮ್‌ಸಂಗ್‌ ಕೂಡ 2020ರಲ್ಲಿ 5G ಟೈಮ್‌ಲೈನ್‌ನ್ನು ಹೊಂದಿವೆ.

ಬೆಲೆ ಹೆಚ್ಚು..!

ಬೆಲೆ ಹೆಚ್ಚು..!

ಐಡಿಸಿ ಭಾರತದ ಸಂಶೋಧನಾ ನಿರ್ದೇಶಕ ನವಕೇಂದರ್ ಸಿಂಗ್‌ ಹೇಳುವಂತೆ, 2020ರಲ್ಲಿ ಬ್ರಾಂಡ್‌ಗಳು 10 ಸಾವಿರ ರೂ. ಗಿಂತಲೂ ಕಡಿಮೆ ಬೆಲೆ ಹೊಂದಿರುವ 4G ಯೊಂದಿಗೆ 5G ಆವೃತ್ತಿಯನ್ನು 500 ಡಾಲರ್‌ಗಿಂತಲೂ (35,800 ರೂ.) ಹೆಚ್ಚಿನ ದರದಲ್ಲಿ ಮಾರುಕಟ್ಟೆಗೆ ತರುತ್ತವೆ. 2021ರ ನಂತರ ಮಾತ್ರ 5G ಸ್ಮಾರ್ಟ್‌ಫೋನ್‌ಗಳ ಬೆಲೆ 300 ಡಾಲರ್‌ಗಿಂತಲೂ ಕಡಿಮೆಯಾಗುತ್ತದೆ ಎನ್ನುತ್ತಾರೆ. ಇನ್ನು, ಟೆಕ್‌ಆರ್ಕ್‌ ಪ್ರಕಾರ 1.5 ಮಿಲಿಯನ್‌ 5G ಸ್ಮಾರ್ಟ್‌ಫೋನ್‌ಗಳು ಈ ವರ್ಷ ಭಾರತದಲ್ಲಿ ಮಾರಾಟವಾಗಲಿದ್ದು, ಒಟ್ಟು ಮಾರುಕಟ್ಟೆಯ ಶೇ.1ರಷ್ಟು ಪಾಲನ್ನು ಹೊಂದಲಿದೆ.

ಚಿಪ್‌ಸೆಟ್‌ಗಳಿಂದ ವೇಗದ ತಂತ್ರಜ್ಞಾನ

ಚಿಪ್‌ಸೆಟ್‌ಗಳಿಂದ ವೇಗದ ತಂತ್ರಜ್ಞಾನ

ಸ್ಯಾಮ್‌ಸಂಗ್‌, ಒನ್‌ಪ್ಲಸ್‌, ಹುವಾಯಿ, ವಿವೋ, ಒಪ್ಪೋ, ಶಿಯೋಮಿ ಮತ್ತು ಮೈಕ್ರೋಮ್ಯಾಕ್ಸ್‌ ಈಗಾಗಲೇ 5G ಸ್ಮಾರ್ಟ್‌ಫೋನ್‌ಗಳನ್ನು ಅಮೆರಿಕ, ಆಸ್ಟ್ರೇಲಿಯಾ ಮತ್ತಯ ಯುರೋಪ್‌ನಲ್ಲಿ ಮಾರಾಟ ಮಾಡಿವೆ. ಇನ್ನು, ಮೊಬೈಲ್‌ ಚಿಪ್‌ಸೆಟ್‌ ತಯಾರಾಕರಾದ ಕ್ವಾಲ್‌ಕಾಮ್‌ (ಸ್ನಾಪ್‌ಡ್ರಾಗನ್‌), ಮಿಡಿಯಾಟೆಕ್‌ (ಡಿಮ್ನೆಸ್ಟಿ), ಸ್ಯಾಮ್‌ಸಂಗ್‌ (ಎಕ್ಸಿನೋಸ್‌) ಮತ್ತು ಹುವಾಯಿ (ಕಿರಿನ್‌)ಗಳು 5G ತಂತ್ರಜ್ಞಾನದಲ್ಲಿ ನಿಧಾನರಹಿತ ಅನುಭವ ನೀಡಲು ವೇಗದ ಮತ್ತು ಅತ್ಯಾಧುನಿಕ ಸಾಮರ್ಥ್ಯದ ಪ್ರೊಸೆಸರ್‌ಗಳನ್ನು ವಿನ್ಯಾಸಗೊಳಿಸುತ್ತಿವೆ.

5G ಜಾರಿಗೆ ವೇಗದ ತಯಾರಿ..!

5G ಜಾರಿಗೆ ವೇಗದ ತಯಾರಿ..!

ಭಾರತದಲ್ಲಿ ಪ್ರೀಮಿಯಂ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಪ್ರಭುತ್ವ ಸಾಧಿಸಿರುವ ಒನ್‌ಪ್ಲಸ್‌, 5G ಸ್ಮಾರ್ಟ್‌ಫೋನ್‌ಗಳನ್ನು ಪ್ರಾಯೋಗಿಕವಾಗಿ ಮಾರುಕಟ್ಟೆಗೆ ತರಲು ನಿರ್ಧರಿಸಿದೆ. ಕ್ವಾಲ್‌ಕಾಮ್‌ ಕೂಡ ಭಾರತದಲ್ಲಿ 5G ಸ್ಮಾರ್ಟ್‌ಫೋನ್‌ಗಳನ್ನು ಮುಂದಿನ ಎರಡು ತ್ರೈಮಾಸಿಕದಲ್ಲಿ ನೋಡಬಹುದು ಎಂದು ಹೇಳಿದೆ. ಇನ್ನು, ಟೆಲಿಕಾಂ ಕಂಪನಿಗಳು 5G ನೆಟ್‌ವರ್ಕ್‌ನ್ನು ದೇಶದಲ್ಲಿ ಜಾರಿಗೆ ತರುವುದಕ್ಕಿಂತ ಮುಂಚೆ ಸ್ಮಾರ್ಟ್‌ಫೋನ್‌ ಕಂಪನಿಗಳು 5G ಜಾರಿಗೆ ತಯಾರಾಗಿವೆ.

ಟೆಲಿಕಾಂ ಕಂಪನಿಗಳ ನಡೆ ಏನು..?

ಟೆಲಿಕಾಂ ಕಂಪನಿಗಳ ನಡೆ ಏನು..?

2020ರಲ್ಲಿ ಹೆಚ್ಚಿನ ವಾಣಿಜ್ಯಿಕರಣಗೊಂಡ 5G ಸ್ಮಾರ್ಟ್‌ಫೋನ್‌ಗಳನ್ನು ನಾವು ನೋಡುವುದನ್ನು ನಿರೀಕ್ಷಿಸುವುದಿಲ್ಲ. ಏಕೆಂದರೆ 5G ನೆಟ್‌ವರ್ಕ್ ಜಾರಿಯ ಬಗ್ಗೆ ಇರುವ ಅನಿಶ್ಚಿತತೆ ಇದಕ್ಕೆಲ್ಲಾ ಕಾರಣವಾಗಿದೆ. ಆದರೆ, ಸಾಲದ ಹೊರೆಯಿಂದ ತತ್ತರಿಸಿರುವ ಟೆಲಿಕಾಂ ಆಪರೇಟರ್‌ಗಳು 5G ತರಂಗಾಂತರಕ್ಕೆ ಹೆಚ್ಚಿನ ಬಿಡ್ ಸಲ್ಲಿಸುತ್ತಾವಾ ಎಂಬುದನ್ನು ನೋಡಬೇಕಿದೆ ಎಂದು ಕೌಂಟರ್‌ಪಾಯಿಂಟ್‌ ಟೆಕ್ನಾಲಜಿ ಮಾರ್ಕೆಟ್‌ ರಿಸರ್ಚ್‌ನ ಸಂಶೋಧನಾ ನಿರ್ದೇಶಕ ನೀಲ್‌ ಶಾ ಹೇಳುತ್ತಾರೆ. ಅದಲ್ಲದೇ ಒಂದು ಸಲ 5G ಮಾರುಕಟ್ಟೆಗೆ ಬಂದರೆ 4G ಮತ್ತು 3G ಸ್ಮಾರ್ಟ್‌ಫೋನ್‌ಗಳಿಗಿಂತಲೂ ವೇಗವಾಗಿ ಬೆಲೆ ಕಡಿತವಾಗಲಿದೆ.

ಭಾರತೀಯ ಬ್ರಾಂಡ್‌ಗಳ ಯುಗಾಂತ್ಯ

ಭಾರತೀಯ ಬ್ರಾಂಡ್‌ಗಳ ಯುಗಾಂತ್ಯ

ಭಾರತೀಯ ಮಾರುಕಟ್ಟೆ 5G ಕಡೆಗೆ ತೆರೆದುಕೊಂಡರೆ, ಭಾರತೀಯ ಮೊಬೈಲ್‌ ಫೋನ್‌ ತಯಾರಕರು ಹಿನ್ನೆಲೆಗೆ ಸರಿಯುತ್ತಾರೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಿದ್ದಾರೆ. 5G ಆರಂಭದೊಂದಿಗೆ ಭಾರತೀಯ ಸ್ಮಾರ್ಟ್‌ಫೋನ್‌ ಬ್ರಾಂಡ್‌ಗಳ ಯುಗ ಅಂತ್ಯವಾಗಲಿದೆ ಎಂದು ಟೆಕ್‌ ಆರ್ಕ್‌ನ ಸಂಸ್ಥಾಪಕ ಫೈಸಲ್‌ ಕವೋಸಾ ಹೇಳುತ್ತಾರೆ. ಏಕೆಂದರೆ, ಈ ಬ್ರಾಂಡ್‌ಗಳು ತಂತ್ರಜ್ಞಾನ ಮತ್ತು ಸಂಶೋಧನಾ ಮತ್ತು ವಿನ್ಯಾಸದಲ್ಲಿ ಹಿಂದಿದ್ದು, ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳನ್ನು ಒಪ್ಪುತ್ತಿಲ್ಲದದಿರುವುದು ಕೂಡ ಕಾರಣವಾಗಿದೆ.

Best Mobiles in India

Read more about:
English summary
5G Phones Might Launch Sooner That We Expect In India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X