ಆಂಡ್ರಾಯ್ಡ್ ನಲ್ಲಿ ಅಡಗಿರುವ ಆಯ್ಕೆಗಳು..!
ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳು ತಮ್ಮ ಒಡಲಾಳದಲ್ಲಿ ಸಾಕಷ್ಟು ಆಯ್ಕೆಗಳನ್ನು ಹೊಂದಿವೆ. ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಂಡರೆ ಸ್ಮಾರ್ಟ್ ಫೋನ್ ಮತ್ತಷ್ಟು ಸ್ಮಾರ್ಟ್ ಆಗಲಿದೆ. ಹಲವು ಆಯ್ಕೆಗಳು ಹೆಚ್ಚು ಬಳಕೆದಾರರಿಗೆ ಇನ್ನು ಸರಿಯಾಗಿ ತಿಳಿದಿಲ್ಲ ಎಂದರೆ ತಪ್ಪಾಗುವುದಿಲ್ಲ. ಈ ಹಿನ್ನಲೆಯಲ್ಲಿ ಆಂಡ್ರಾಯ್ಡ್ ಸ್ಮಾರ್ಟ್ ಫೋನಿನಲ್ಲಿರುವ ಸಿಕ್ರೆಟ್ ಗಳ ಬಗ್ಗೆ ಮಾಹಿತಿಯೂ ಈ ಮುಂದಿನಂತೆ ಇದೆ.

ಕೆಲವೇ ಮಂದಿ ಕರೆ ಸ್ವೀಕರಿಸಬಹುದು:
ನೀವು ಸ್ಮಾರ್ಟ್ ಫೋನಿನಲ್ಲಿ ಒಳಬರುವ ಕರೆಗಳಿಂದ ಕಿರಿಕಿರಿ ಅನುಭವಿಸುತ್ತಿದ್ದರೆ ಆಂಡ್ರಾಯ್ಡ್ ಫೋನ್ ನಿಮಗೊಂದು ಅವಕಾಶವನ್ನು ನೀಡಲಿದೆ. ಇದರಲ್ಲಿ ನೀವು ಕೆಲವೇ ಮಂದಿಯ ಕರೆಗಳನ್ನು ಸ್ವೀಕರಿಸಬಹುದಾಗಿದೆ. ಇದಕ್ಕಾಗಿ ನೀವು ಡುನಾಟ್ ಡಿಸ್ಟರ್ ಆಯ್ಕೆಯನ್ನು ಬಳಕೆ ಮಾಡಿಕೊಳ್ಳಬಹುದು. ಅಲ್ಲದೇ ಇದರಲ್ಲಿ ಪ್ರಯಾರಿಟಿ ಮೋಡ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಬಹುದು.

ಜಿಪಿಎಸ್ ಮೂಲಕ ಅನ್ ಲಾಕ್:”
ನೀವು ನಿಮ್ಮ ಮನೆಯೊಳಗೆ ಬಂದ ತಕ್ಷಣವೇ ನಿಮ್ಮ ಸ್ಮಾರ್ಟ್ ಫೋನ್ ಲಾಕ್ ಓಪನ್ ಆಗುವ ಮಾದರಿಯಲ್ಲಿ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು ಜಿಪಿಎಸ್ ಸಹಾಯವನ್ನು ಪಡೆಯಬೇಕಾಗಿದೆ. ಸ್ಮಾರ್ಟ್ ಲಾಕ್ ಈ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ.

ಆಡ್ ಗಳನ್ನು ತಡೆಯಬಹುದು:
ನಿಮ್ಮ ಸ್ಮಾರ್ಟ್ ಫೋನಿನಲ್ಲಿ ತೋರಿಸುವ ಆಡ್ ಗಳನ್ನು ರಿಮೂ ಮಾಡಬಹುದಾಗಿದೆ. ಇದಕ್ಕಾಗಿ ಸೆಟ್ಟಿಂಗ್ಸ್>ಗೂಗಲ್>ಆಡ್ಸ್> ಎನೆಬಲ್ ಆಡ್ ಪರ್ಸಲೈಜೆಷನ್ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಂಡರೆ ಸಾಕಾಗಲಿದೆ.

ನಿಮ್ ಹಾರ್ಟ್ ಬಿಟ್ ಟ್ರಾಕ್ ಮಾಡಬಹುದು:
ಇದಲ್ಲದೇ ನಿಮ್ಮ ಹಾರ್ಟ್ ಬಿಟ್ ಅನ್ನು ಟ್ರಾಕ್ ಮಾಡಬಹುದಾಗಿದೆ. ಇದಕ್ಕಾಗಿ ನೀವು ಇನ್ಸೆಂಟ್ ಹಾರ್ಟ್ ರೇಟ್ ಆಪ್ ಅನ್ನು ಇನ್ ಸ್ಟಾಲ್ ಮಾಡಿಕೊಳ್ಳಬೇಕಾಗಿದೆ. ಇದರಿಂದ ನಿಮ್ಮ ಹಾರ್ಟ್ ಬಿಟ್ ಟ್ರಾಕ್ ಮಾಡಬಹುದು.

ಸ್ಕ್ರಿನ್ ಮೆಗ್ನಿಫಿಯರ್:
ಕಣ್ಣಿದ ದೃಷ್ಟಿಯೂ ಸಹರಿಯಾಗಿ ಇಲ್ಲದವರಿಗೆ ಇದು ಸಹಾಯವಾಗಲಿದೆ. ಇದಕ್ಕಾಗಿ ಸೆಟ್ಟಿಂಗ್ಸ್ ನಲ್ಲಿ ಆಕ್ಸಿಸಬಲಿಟಿಗೆ ಹೋಗಿ ಮೇಗ್ನಿಫಿಕೇಷನ್ ಆಯನ್ನು ಮಾಡಿಕೊಂಡರೆ ನಿಮಗೆ ಉತ್ತಮವಾಗಿ ಕಾರ್ಯವನ್ನು ಮಾಡಲು ಸಹಾಯ ಮಾಡಲಿದೆ.

ಎಲ್ಲಿ ಬೇಕಾದರೂ ಕ್ರೋಮ್:
ನಿಮ್ಮ ಸ್ಮಾರ್ಟ್ಫೋನ್ ಮತ್ತು ಲ್ಯಾಟ್ ಟಾಪ್ ಎರಡರಲ್ಲೂ ಒಂದೇ ಮಾದರಿಯಲ್ಲಿ ಕ್ರೋಮ್ ಅನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಫೋನ್ ಆಯ್ಕೆಯನ್ನು ಕಂಪ್ಯೂಟರ್ ನಲ್ಲಿತಯೂ ತೆರೆಯಬಹುದಾಗಿದೆ.


ಕಲರ್ ಇನ್ಸವರ್ಸಿಂಗ್:
ಕತ್ತಲೆಯ ಸಮಯದಲ್ಲಿ ಸ್ಮಾರ್ಟ್ ಫೋನ್ ಬಳಕೆ ಮಾಡಿಕೊಳ್ಳು ಸಂದರ್ಭದಲ್ಲಿ ಸೆಟ್ಟಿಂಗ್ಸ್ ನಲ್ಲಿ ಕಲರ್ ಇನ್ವರ್ವಷನ್ ಆಯ್ಕೆಯನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಿಂದಾಗಿ ಬಳಕೆದಾರ ಕಣ್ಣಿಗೆ ಶ್ರಮವಾಗುವುದಿಲ್ಲ.


Click it and Unblock the Notifications








