2018 ನೇ MWC ಟೆಕ್ ಶೋ: ಆಲ್ಕಾಟೆಲ್ 5, 3 ಶ್ರೇಣಿಯ ಸ್ಮಾರ್ಟ್‌ಪೋನ್‌ಗಳ ಅನಾವರಣ!!

MWC 2018 ಟೆಕ್ ಶೋ ನ ಸಂದರ್ಭದಲ್ಲಿ TCL ಸಂಸ್ಥೆಯು ಆಲ್ಕಾಟೆಲ್ 5,3 ಶ್ರೇಣಿಯ ಫೋನ್ಗಳು, ಆಂಡ್ರಾಯ್ಡ್ ಗೋ ಫೋನ್, 1T 7 ಮತ್ತು 1T 10 ಟ್ಯಾಬ್ಲೆಟ್ಗಳನ್ನು ಅನಾವರಣೊಳಿಸಿದೆ.!!

By Tejaswini P G
|

ಬಾರ್ಸಿಲೋನಾದಲ್ಲಿ ನಡೆದ MWC 2018 ಟೆಕ್ ಶೋ ನ ಸಂದರ್ಭದಲ್ಲಿ TCL ಸಂಸ್ಥೆಯು ಆಲ್ಕಾಟೆಲ್ ಶ್ರೇಣಿಯ ಆಲ್ಕಾಟೆಲ್ 5, ಆಲ್ಕಾಟೆಲ್ 3 ಸರಣಿ, ಆಲ್ಕಾಟೆಲ್ 1X ಆಂಡ್ರಾಯ್ಡ್ ಗೋ ಸ್ಮಾರಟ್ಫೋನ್ಗಳು ಮತ್ತು 1T 7 ಮತ್ತು 1T 10 ಎಂಬ ಟ್ಯಾಬ್ಲೆಟ್ಗಳನ್ನು ಅನಾವರಣಗೊಳಿಸಿದೆ. ಇತ್ತೀಚೆಗೆ ಆಲ್ಕಾಟೆಲ್ 3, 1X ಮತ್ತು 3X ಗಳ ಅಧಿಕೃತ ಚಿತ್ರಗಳು ಆನ್ಲೈನ್ ನಲ್ಲಿ ಸೋರಿಕೆಯಾಗಿದ್ದವು. ಈಗ ಈ ಟೆಕ್ ಶೋ ಪ್ರಾರಂಭವಾಗುವ ಕೆಲ ಘಂಟೆಗಳ ಮುನ್ನ ಈ ಸಾಧನಗಳನ್ನು TCL ಸಂಸ್ಥೆ ಆಧಿಕೃತವಾಗಿ ಅನಾವರಣಗೊಳಿಸಿದೆ.

ಈ ಆಲ್ಕಾಟೆಲ್ ಸ್ಮಾರ್ಟ್ಫೋನ್ಗಳು ವಿಭಿನ್ನ ಶ್ರೇಣಿಯ ಬೆಲೆಯನ್ನು ಹೊಂದಿವೆ. ಈ ಎಲ್ಲಾ ಸ್ಮಾರ್ಟ್ಫೋನ್ಗಳ ಒಂದು ಸಮಾನ ಅಂಶವೆಂದರೆ ಅದರ ಫುಲ್ವ್ಯೂ 18:9 ಡಿಸ್ಪ್ಲೇ. ಈ ಮೂಲಕ ಈ ಸಾಧನಗಳು ಹೆಚ್ಚು ಕಾಂಪ್ಯಾಕ್ಟ್ ಆಗಿವೆ ಮತ್ತು ಹಿಡಿದುಕೊಳ್ಳಲು ಹೆಚ್ಚು ಅನುಕೂಲಕರವಾಗಿದೆ. ಅಲ್ಲದೆ ಇದರಲ್ಲಿರುವ 'ಫೇಸ್ ಕೀ' ಫೀಚರ್ ಫೇಶಿಯಲ್ ರೆಕಗ್ನಿಶನ್ ಫೀಚರ್ ಆಗಿದ್ದು 30 ಸೆಕೆಂಡ್ಗಳಿಗಿಂತಲೂ ಕಡಿಮೆ ಸಮಯದಲ್ಲಿ ನೂರಾರು ಬಯೋಮೆಟ್ರಿಕ್ ಡೇಟಾ ಪಾಯಿಂಟ್ಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿದೆ. ಈ ಫೀಚರ್ ಆಲ್ಕಾಟೆಲ್ 5 ಮತ್ತು 3 ಶ್ರೇಣಿಯ ಮೊಬೈಲ್ಗಳಲ್ಲಿ ಲಭ್ಯವಿದೆ. ಅಲ್ಲದೆ ಈ ಫೋನ್ಗಳು ಹಿಂಬದಿಯಲ್ಲಿ ಫಿಂಗರ್ಪ್ರಿಂಟ್ ಸೆನ್ಸರ್ಗಳನ್ನೂ ಹೊಂದಿದೆ.

2018 ನೇ MWC ಟೆಕ್ ಶೋ: ಆಲ್ಕಾಟೆಲ್ 5, 3 ಶ್ರೇಣಿಯ ಸ್ಮಾರ್ಟ್‌ಪೋನ್‌ಗಳ ಅನಾವರಣ!!
ಅಲ್ಲದೆ 2018ರಲ್ಲಿ ಬರುವ ಎಲ್ಲಾ ಸ್ಮಾರ್ಟ್ಫೋನ್ಗಳು ಪ್ರತೀ ಕ್ವಾರ್ಟರ್ ನಲ್ಲೂ ಸಕಾಲದಲ್ಲಿ ಆಂಡ್ರಾಯ್ಡ್ ಸೆಕ್ಯೂರಿಟಿ ಅಪ್ಡೇಟ್ಗಳನ್ನು ಪಡೆಯಲಿದೆ ಎಂದು TCL ಆಶ್ವಾಸನೆ ನೀಡಿದೆ. ಈ ಲೇಖನದಲ್ಲಿ ನಾವು ಆಲ್ಕಾಟೆಲ್ ಸ್ಮಾರ್ಫೋನ್ಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯೋಣ.

ಆಲ್ಕಾಟೆಲ್ 5 ಶ್ರೇಣಿ

ಆಲ್ಕಾಟೆಲ್ 5 ಒಂದು ಫ್ಲ್ಯಾಗ್ಶಿಪ್ ಮೊಬೈಲ್ ಆಗಿದ್ದು ಉತ್ತಮ ಗುಣಮಟ್ಟದ ಮೆಟಾಲಿಕ್ ಯುನಿಬಾಡಿ ಹೊಂದಿದೆ. 5.7 ಇಂಚ್ HD+ IPS ಡಿಸ್ಪ್ಲೇ ಹೊಂದಿರುವ ಈ ಸ್ಮಾರ್ಟ್ಫೋನ್ ಒಕ್ಟಾಕೋರ್ ಮೀಡಿಯಾಟೆಕ್ MT6750 ಚಿಪ್ಸೆಟ್ ಜೊತೆಗೆ 2GB/3GB RAM ಮತ್ತು 16GB/32GB ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. ಮೈಕ್ರೋSD ಕಾರ್ಡ್ ಬಳಸಿ ಸ್ಟೋರೇಜ್ ಸಾಮರ್ಥ್ಯವನ್ನು 128GB ವರೆಗೆ ವಿಸ್ತರಿಸಬಹುದಾಗಿದೆ. ಈ ಸ್ಮಾರ್ಟ್ಫೋನ್ 12MP ರೇರ್ ಕ್ಯಾಮೆರಾ ಹೊಂದಿದ್ದು ಡ್ಯುಯಲ್ ಟೋನ್ ಫ್ಲ್ಯಾಶ್ , EIS, HDR, ಸ್ಲೋ ಮೋಶನ್ ಟಾಗಲ್, f/2.2 ಅಪರ್ಚರ್ ಮೊದಲಾದ ಫೀಚರ್ಗಳನ್ನು ಹೊಂದಿದೆ. ಫೋನಿನ ಮುಂಭಾಗದಲ್ಲಿ 13MP ಮತ್ತು 5MP ಸೆನ್ಸರ್ಗಳನ್ನು ಹೊಂದಿರುವ ಡ್ಯುಯಲ್ ಕ್ಯಾಮೆರಾ ಸೆಟಪ್ ಇದ್ದು LED ಫ್ಲ್ಯಾಶ್ ಮತ್ತು 120-ಡಿಗ್ರೀ ವೈಡ್ ಆಂಗಲ್ ಲೆನ್ಸ್ ಹೊಂದಿದೆ.

ಅಷ್ಟೇ ಅಲ್ಲದೆ ಸೆಲ್ಫೀ-ಸೆನ್ಟ್ರಿಕ್ ಫೋನ್ ಆದ ಆಲ್ಕಾಟೆಲ್ ಸ್ಮಾರ್ಟ್ಫೋನ್ ಸೋಶಿಯಲ್ ಮೋಡ್, ಸೋಶಿಯಲ್ ಸ್ಕ್ವೇರ್, ಇನ್ಸ್ಟೆಂಟ್ ಕೊಲ್ಯಾಜ್, ಫೋಟೋ ಬೂತ್ ಮೊದಲಾದ ಫೀಚರ್ಗಳನ್ನು ಹೊಂದಿದೆ. ಬ್ಲೂಟೂತ್ 4.2, FM ರೇಡಿಯೋ, USB ಟೈಪ್ C, LTE ಕ್ಯಾಟ್ 4 ಮೊದಲಾದ ಕನೆಕ್ಟಿವಿಟ ಆಯ್ಕೆಗಳು ಮತ್ತು 3000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಆಂಡ್ರಾಯ್ಡ್ ನುಗಾಟ್ ಹೊಂದಿರುವ ಈ ಸ್ಮಾರ್ಟ್ಫೋನ್ ನ ಬೆಲೆ 299.99 ಯುರೋ(ಅಂದಾಜು ರೂ 18,300).

2018 ನೇ MWC ಟೆಕ್ ಶೋ: ಆಲ್ಕಾಟೆಲ್ 5, 3 ಶ್ರೇಣಿಯ ಸ್ಮಾರ್ಟ್‌ಪೋನ್‌ಗಳ ಅನಾವರಣ!!

ಆಲ್ಕಾಟೆಲ್ 3,3X ಮತ್ತು 3V

ಆಲ್ಕಾಟೆಲ್ 3 ಸರಣಿಯಲ್ಲಿ ಮೂರು ಮಧ್ಯಮ-ಶ್ರೇಣಿ ಯ ಮೊಬೈಲ್ಗಳಿವೆ- 3,3X,3V. ಈ ಸಾಧನಗಳು ಮೆಟ್ಯಾಲಿಕ್ ಬಾಡಿಯ ಬದಲು 2.5D ಕರ್ವ್ಡ್ ಕಾನ್ಟ್ಯೂರ್ಡ್ ಗ್ಲಾಸ್ ನ ವಿನ್ಯಾಸ ಹೊಂದಿದೆ. ಈ ಮೂರು ಮೊಬೈಲ್ಗಳ ಪೈಕಿ ಆಲ್ಕಾಟೆಲ್ 3V ಅತ್ಯಂತ ದೊಡ್ಡದಾದ ಮೊಬೈಲ್ ಆಗಿದ್ದು 6-ಇಂಚ್ 2K ಡಿಸ್ಪ್ಲೇ ಹೊಂದಿದೆ. ಕ್ವಾಡ್-ಕೋರ್ ಮೀಡಿಯಾಟೆಕ್ MT8735A ಪ್ರಾಸೆಸರ್ ನೊಂದಿಗೆ 2GB RAM ಮತ್ತು 16GB/32GB ಸ್ಟೋರೇಜ್ ಸಾಮರ್ಥ್ಯ ಹೊಂದಿರುವ ಇದರ ಸ್ಟೋರೇಜ್ ಅನ್ನು 128GB ವರೆಗೆ ವಿಸ್ತರಿಸಬಹುದಾಗಿದೆ. ಈ ಸ್ಮಾರ್ಟ್ಫೋನ್ 3000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಸ್ಮಾರ್ಟ್ಫೋನಿನ ಸೆಲ್ಫೀ-ಕ್ಯಾಮೆರಾ 5MP ಸೆನ್ಸರ್ ನ ಜೊತೆಗೆ HDR,EIS ಮತ್ತು LED ಫ್ಲ್ಯಾಶ್ ಹೊಂದಿದೆ. 12MP ಮತ್ತು 2MP ಸೆನ್ಸರ್ಗಳ ಡ್ಯುಯಲ್ ರೇರ್ ಕ್ಯಾಮೆರಾ PDAF ಮತ್ತು LED ಫ್ಲ್ಯಾಶ್ ಹೊಂದಿದೆ. ಅಲ್ಲದೆ USB ಟೈಪ್-C ಪೋರ್ಟ್ , NFC ಮತ್ತು ಡ್ಯುಯಲ್ ಸಿಮ್ ಕಾರ್ಡ್ ಸ್ಲಾಟ್ ಕೂಡ ಇದರಲ್ಲಿದೆ.

ಆಲ್ಕಾಟೆಲ್ 3X 3V ಗಿಂತ ಸ್ವಲ್ಪ ಕಿರಿದಾಗಿದೆ. 5.7 ಇಂಚ್ HD+ಡಿಸ್ಪ್ಲೇ ಹೊಂದಿರುವ ಈ ಮೊಬೈಲ್ ಕ್ವಾಡ್-ಕೋರ್ MT6739 SoC ಜೊತೆಗೆ 2GB/3GB RAM ಮತ್ತು 16GB/32GBಸ್ಟೋರೇಜ್ ಸಾಮರ್ಥ್ಯ ಹೊಂದಿದೆ. ಈ ಸ್ಮಾರ್ಟ್ಫೋನ್ ಹಿಂಭಾಗದಲ್ಲಿ 13MP ಸೆನ್ಸರ್ ಹೊಂದಿದ್ದು 78.4 ಡಿಗ್ರೀ ಲೆನ್ಸ್ ಮತ್ತು f/2.0 ಅಪರ್ಚರ್ ಹೊಂದಿದೆ. ಮುಂಭಾಗದಲ್ಲಿ 5MP ಸೆನ್ಸರ್ ಇದ್ದು f/2.2 ಅಪರ್ಚರ್ ಮತ್ತು 120-ಡಿಗ್ರೀ ವೈಡ್-ಆಂಗಲ್ ಲೆನ್ಸ್ ಹೊಂದಿದೆ. ಡ್ಯುಯಲ್ ಟೋನ್ ಫ್ಲ್ಯಾಶ್ , HDR ಮತ್ತು EIS ಮೊದಲಾದ ಫೀಚರ್ಗಳೂ ಇದರ ಕ್ಯಾಮೆರಾದಲ್ಲಿದೆ. ಇದರ ಕನೆಕ್ಟಿವಿಟಿ ಫೀಚರ್ಗಳು ಬಹುತೇಕ 3V ಅಂತೆಯೇ ಇದ್ದು USB ಟೈಪ್-C ಪೋರ್ಟ್ ಇದರಲ್ಲಿಲ್ಲ.

2018 ನೇ MWC ಟೆಕ್ ಶೋ: ಆಲ್ಕಾಟೆಲ್ 5, 3 ಶ್ರೇಣಿಯ ಸ್ಮಾರ್ಟ್‌ಪೋನ್‌ಗಳ ಅನಾವರಣ!!

ಆಲ್ಕಾಟೆಲ್ 3 ಈ ಸರಣಿಯಲ್ಲಿರುವ ಚಿಕ್ಕದಾದ ಮೊಬೈಲ್ ಆಗಿದ್ದು 5.5 ಇಂಚ್ HD+ ಡಿಸ್ಪ್ಲೇ ಹೊಂದಿದೆ. ಕ್ವಾಡ್-ಕೋರ್ ಮೀಡಿಯಾಟೆಕ್ MT6739 SoC ಜೊತೆಗೆ 2GB RAM ಮತ್ತು 16GB ಸ್ಟೋರೇಜ್ ಇದ್ದು ಅದನ್ನು 128GB ವರೆಗೆ ವಿಸ್ತರಿಸಬಹುದಾಗಿದೆ. ಇದರ ಕ್ಯಾಮೆರಾ ಕುರಿತು ಹೇಳುವುದಾದರೆ ಇದರಲ್ಲಿದೆ PDAF, LED ಫ್ಲ್ಯಾಶ್ ಮತ್ತು f/2.0 ಅಪರ್ಚರ್ ಹೊಂದಿರುವ 13MP ರೇರ್ ಕ್ಯಾಮೆರಾ ಮತ್ತು LED ಫ್ಲ್ಯಾಶ್ ಹೊಂದಿರುವ 5MP ಸೆಲ್ಫೀ-ಕ್ಯಾಮೆರಾ. ಅಲ್ಲದೆ NFC, ಬ್ಲೂಟೂತ್ 4.2, ಡ್ಯುಯಲ್ ಸಿಮ್-ಕಾರ್ಡ್ ಸ್ಲಾಟ್, ಮೈಕ್ರೋ USB ಪೋರ್ಟ್, 3000mAh ಬ್ಯಾಟರಿ ಮೊದಲಾದ ಫೀಚರ್ಗಳು ಇದರಲ್ಲಿವೆ.ಆಲ್ಕಾಟೆಲ್ 3X ಆಂಡ್ರಾಯ್ಡ್ ನುಗಾಟ್ ಓಎಸ್ ಹೊಂದಿದ್ದು ಮಿಕ್ಕ ಎರಡು ಮೊಬೈಲ್ಗಳು ಆಂಡ್ರಾಯ್ಡ್ ಓರಿಯೋ ಓಎಸ್ ಹೊಂದಿದೆ.

ಆಲ್ಕಾಟೆಲ್ 3X ನ ಬೆಲೆ 179.99 ಯೂರೋ(ಅಂದಾಜು ರೂ 14,300), ಆಲ್ಕಾಟೆಲ್ 3 ಯ ಬೆಲೆ 149.99 ಯೂರೋ(ಅಂದಾಜು ರೂ 11,900 ) ಮತ್ತು ಆಲ್ಕಾಟೆಲ್ 3V ಯ ಬೆಲೆ 189.99 ಯೂರೋ(ಅಂದಾಜು ರೂ 15,200) ಆಗಿದೆ.

ಆಲ್ಕಾಟೆಲ್ 1X

ಆಲ್ಕಾಟೆಲ್ 1X ಈ ಸಂಸ್ಥೆಯ ಮೊದಲ ಆಂಡ್ರಾಯ್ಡ್ ಓರಿಯೋ (ಗೋ ಆವೃತ್ತಿ) ಸ್ಮಾರ್ಟ್ಫೋನ್ ಆಗಿದೆ. ಇದರ ಬೆಲೆ 99.99 ಯೂರೋ(ಅಂದಾಜು ರೂ 7900) ಆಗಿದ್ದು ಸುಲಭವಾಗಿ ಕೈಗೆಟಕುವ ಬೆಲೆಯ ಮೊಬೈಲ್ ಆಗಿದೆ. ಇದರ 3G ಆವೃತ್ತಿಯನ್ನು ಆಲ್ಕಾಟೆಲ್ 3C ಎಂದು ಕರೆಯಲಾಗಿದ್ದು ಇದರ ಬೆಲೆ 89.99 ಯೂರೋ(ಅಂದಾಜು ರೂ 7200) ಆಗಿದೆ. ಆಂಡ್ರಾಯ್ಡ್ ಗೋ ಸ್ಮಾರ್ಟ್ಫೋನ್ 5.3 ಇಂಚ್ ಡಿಸ್ಪ್ಲೇ ಹೊಂದಿದ್ದು 18:9 ಆಸ್ಪೆಕ್ಟ್ ಅನುಪಾತ ಹೊಂದಿದೆ.ಕ್ವಾಡ್-ಕೋರ್ ಮೀಡಿಯಾಟೆಕ್ MT6739 ಪ್ರಾಸೆಸರ್ ಹೊಂದಿರುವ ಈ ಸ್ಮಾರ್ಟ್ಫೋನ್ ಜೊತೆಗೆ 1GB/2GB RAM ಮತ್ತು 16GB ಸ್ಟೋರೇಜ್ ಹೊಂದಿದೆ. ಇದರ ಸ್ಟೋರೇಜ್ ಅನ್ನು ಮೈಕ್ರೋSD ಕಾರ್ಡ್ ಬಳಸಿ ಮತ್ತಷ್ಟು ವಿಸ್ತರಿಸಬಹುದಾಗಿದೆ.

ಇನ್ನು ಇದರ ಕ್ಯಾಮೆರಾ ಕುರಿತು ಹೇಳುವುದಾದರೆ ಆಲ್ಕಾಟೆಲ್ 1X ನಲ್ಲಿದೆ 8MP ಅಥವಾ 13MP ರೇರ್ ಕ್ಯಾಮೆರಾ EIS ಮತ್ತು FHD 1080p ವೀಡಿಯೋ ರೆಕಾರ್ಡಿಂಗ್ ಸಾಮರ್ಥ್ಯದೊಂದಿಗೆ. ಫ್ಲ್ಯಾಶ್ ಸಹಿತ 5MP ಸೆಲ್ಫೀ-ಕ್ಯಾಮೆರಾ ಕೂಡ ಇದರಲ್ಲಿದೆ. ಕ್ಯಾಟ್ 4 LTE, FM ರೇಡಿಯೋ, ಫಿಂಗರ್ಪ್ರಿಂಟ್ ಸೆನ್ಸರ್, NFC ಮತ್ತು ಡ್ಯುಯಲ್ ಸಿಮ್ ಸಪೋರ್ಟ್ ಮೊದಲಾದ ಫೀಚರ್ಗಳೂ ಇದರಲ್ಲಿದೆ.

2018 ನೇ MWC ಟೆಕ್ ಶೋ: ಆಲ್ಕಾಟೆಲ್ 5, 3 ಶ್ರೇಣಿಯ ಸ್ಮಾರ್ಟ್‌ಪೋನ್‌ಗಳ ಅನಾವರಣ!!

ಆಲ್ಕಾಟೆಲ್ 1T 7 ಮತ್ತು 1T 10

TCL ಸಂಸ್ಥೆಯು ಆಂಡ್ರಾಯ್ಡ್ 8.1 ಓರಿಯೋ ಆಧಾರಿತ ಎರಡು ಟ್ಯಾಬ್ಲೆಟ್ ಗಳನ್ನು ಬಿಡುಗಡೆಮಾಡಿದೆ. ಇದರಲ್ಲಿರುವ ಐಕೇರ್ ಮೋಡ್ ಮೂಲಕ ಬ್ಲೂ-ಲೈಟ್ ಎಕ್ಸ್ಪೋಶರ್ ಅನ್ನು ಕಡಿಮೆ ಮಾಡಬಹುದು ಮತ್ತು ಕಿಡ್ಸ್ ಮೋಡ್ ಮೂಲಕ ಕುಟುಂಬ ಸ್ನೇಹಿ ಮಕ್ಕಳ ಗೇಮ್ ಗಳನ್ನು ಆಡಬಹುದು. ಅಲ್ಲದೆ ಇದರಲ್ಲಿ ಕ್ಯಾಮೆರಾ ಆಪ್, ಡ್ರಾಯಿಂಗ್ ಆಪ್ ಗಳಿದ್ದು, ಪೇರೆಂಟಲ್ ಕಂಟ್ರೋಲ್ ಪ್ಯಾನೆಲ್ ಮೂಲಕ ಅದರ ಬಳಕೆಯನ್ನು ನಿಯಂತ್ರಿಸಬಹುದು. ಆಲ್ಕಾಟೆಲ್ 1T 10 10.1 ಇಂಚ್ 1280X800 ಪಿಕ್ಸೆಲ್ IPS ಡಿಸ್ಪ್ಲೇ ಜೊತೆಗೆ 1GB RAM ಮತ್ತು 16GB ಸ್ಟೋರೇಜ್ ಹೊಂದಿದ್ದು, ಅದರ ಸ್ಟೋರೇಜ್ ಅನ್ನು ಮತ್ತಷ್ಟು ವಿಸ್ತರಿಸಬಹುದಾಗಿದೆ. ಇದು ಕ್ವಾಡ್-ಕೋರ್ ಮೀಡಿಯಾಟೆಕ್ MT8321 ಪ್ರಾಸೆಸರ್ ಹೊಂದಿದ್ದು, 2MP ಫ್ರಂಟ್ ಮತ್ತು ರೇರ್ ಕ್ಯಾಮೆರಾ, 4000mAh ಬ್ಯಾಟರಿ ಕೂಡ ಹೊಂದಿದೆ.

ಆಲ್ಕಾಟೆಲ್ 1T 7 7 ಇಂಚ್ IPS ಡಿಸ್ಪ್ಲೇ ಹೊಂದಿದ್ದು, 1024X600 ಪಿಕ್ಸೆಲ್ ರೆಸೊಲ್ಯೂಶನ್ ಇದೆ. ಜೊತೆಗೆ ಇದರಲ್ಲಿದೆ 1GB RAM ಮತ್ತು 8GB ಸ್ಟೋರೇಜ್ ಸಾಮರ್ಥ್ಯ. ಇದರ ಕ್ಯಾಮೆರಾ ಫೀಚರ್ಗಳು 1T 10 ನಂತೆಯೇ ಇದ್ದು ಬ್ಯಾಟರಿ ಸಾಮರ್ಥ್ಯ ಅದಕ್ಕಿಂತ ಸ್ವಲ್ಪ ಕಡಿಮೆ, ಅಂದರೆ 2580mAh ಇದೆ. ಆಲ್ಕಾಟೆಲ್ 1T 7 ಮತ್ತು 1T 10 ಟ್ಯಾಬ್ಲೆಟ್ ಗಳ ಬೆಲೆ ಕ್ರಮವಾಗಿ 69.99 ಯೂರೋ(ಅಂದಾಜು ರೂ 5,500) ಮತ್ತು 99.99 ಯೂರೋ(ಅಂದಾಜು ರೂ 7,900) ಆಗಿದೆ.

Best Mobiles in India

English summary
Alcatel 5, 3 series phones, Android Go phone, 1T 7 and 1T 10 tablets announced. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X