16,901 ರೂ.ವರೆಗೆ ಸ್ಯಾಮ್ ಸಂಗ್ ,ಶಿಯೋಮಿ, ಆಪಲ್, ಫೋನ್ ಗಳಿಗೆ ರಿಯಾಯಿತಿ

By Gizbot Bureau
|

ಯುಸ್ ಮೂಲದ ಇ-ಕಾಮರ್ಸ್ ವೆಬ್ ಸೈಟ್ ಅಮೇಜಾನ್ ಸಂಸ್ಥೆ ಫ್ಯಾಬ್ ಫೋನ್ ಫೆಸ್ಟ್ ನ್ನು ಮಾರ್ಚ್ 5 ರಿಂದ 7 ನೇ ತಾರೀಖಿನವರೆಗೆ ನಡೆಸುತ್ತಿದೆ. ಮೂರು ದಿನದ ಈ ಸೇಲ್ ನಲ್ಲಿ ಮೊಬೈಲ್ಸ್ ಮತ್ತು ಆಕ್ಸಸರೀಸ್ ಗಳಿಗೆ 40% ದ ವರೆಗೆ ರಿಯಾಯಿತಿಯನ್ನು ನೀಡಲಾಗುತ್ತಿದೆ. ಹೆಚ್ ಡಿಎಫ್ ಸಿ ಬ್ಯಾಂಕಿನ ಗ್ರಾಹಕರಿಗೆ 5% ಇನ್ಸೆಂಟ್ ರಿಯಾಯಿತಿಯನ್ನು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಇಎಂಐ ಟ್ರಾನ್ಸ್ಯಾಕ್ಷನ್ ಗೆ ನೀಡಲಾಗುತ್ತಿದೆ. ಹಾಗಾದ್ರೆ ಈ ಸೇಲ್ ನಲ್ಲಿ ರಿಯಾಯಿತಿಯಲ್ಲಿ ಲಭ್ಯವಾಗುವ ಹ್ಯಾಂಡ್ ಸೆಟ್ ಗಳು ಯಾವುವು ಎಂಬ ಬಗ್ಗೆ ಒಂದು ಚಿಕ್ಕ ವರದಿ ಇಲ್ಲಿದೆ, ಮುಂದೆ ಓದಿ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9:

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9:

13,600 ರುಪಾಯಿ ರಿಯಾಯಿತಿ ಇದ್ದು ಕೇವಲ 48,900 ರುಪಾಯಿಗೆ ಖರೀದಿಸಬಹುದು

2018 ರ ಸ್ಯಾಮ್ ಸಂಗ್ ನ ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9 ಫೋನ್ ನ್ನು ಈ ಸೇಲ್ ನಲ್ಲಿ 48,900 ರುಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಮೂರು ಬಣ್ಣಗಳ ಆಯ್ಕೆಯಲ್ಲಿ ಈ ಫೋನ್ ಲಭ್ಯವಿದೆ-ಕೋರಲ್ ಬ್ಲೂ, ಲಿಲಾಕ್ ಪರ್ಪಲ್ ಮತ್ತು ಮಿಡ್ ನೈಟ್ ಬ್ಲಾಕ್.

ಆಪಲ್ ಐಫೋನ್ ಎಕ್ಸ್(64ಜಿಬಿ):

ಆಪಲ್ ಐಫೋನ್ ಎಕ್ಸ್(64ಜಿಬಿ):

74,999 ರುಪಾಯಿಗೆ ಲಭ್ಯಸ 16,901ರುಪಾಯಿ ರಿಯಾಯಿತಿ ಇದೆ.

10 ನೇ ವಾರ್ಷಿಕೋತ್ಸವದ ಎಡಿಷನ್ ಐಫೋನ್ ಎಕ್ಸ್ ಗೆ 16,901 ರುಪಾಯಿ ರಿಯಾಯಿತಿ ಇದೆ. ಅಂದರೆ ಇದೀಗ ಈ ಸೇಲ್ ನಲ್ಲಿ 91,900ರುಪಾಯಿಯ ಫೋನ್ ಕೇವಲ 74,999 ರುಪಾಯಿ ಬೆಲೆಗೆ ಸಿಗುತ್ತಿದೆ. ಎರಡು ಬಣ್ಣಗಳ ಆಯ್ಕೆಯಲ್ಲಿ ನೀವಿದನ್ನು ಖರೀದಿಸಬಹುದು- ಸಿಲ್ವರ್ ಮತ್ತು ಸ್ಪೇಸ್ ಗ್ರೇ.

ಶಿಯೋಮಿ ಎಂಐ ಎ2:

ಶಿಯೋಮಿ ಎಂಐ ಎ2:

11,999 ರುಪಾಯಿಗೆ ಲಭ್ಯ,5,500 ರುಪಾಯಿಗೆ ಸಿಗುತ್ತದೆ.

ಎರಡನೇ ಜನರೇಷನ್ನಿನ ಆಂಡ್ರಾಯ್ಡ್ ಒನ್ ಸ್ಮಾರ್ಟ್ ಫೋನ್ ಶಿಯೋಮಿಗೆ ಈ ಸೇಲ್ ನಲ್ಲಿ 5,500 ರುಪಾಯಿ ರಿಯಾಯಿತಿ ಇದೆ. ಅಂದರೆ 11,999 ರುಪಾಯಿಗೆ ನೀವು ಈ ಫೋನ್ ನ್ನು ಖರೀದಿಸಬಹುದು.ಐದು ಬಣ್ಣಗಳ ಆಯ್ಕೆಯಲ್ಲಿ ಈ ಫೋನ್ ಲಭ್ಯವಿದೆ -ಕಪ್ಪು, ನೀಲಿ, ಕೆಂಪು, ಚಿನ್ನದ ವರ್ಣ ಮತ್ತು ರೋಸ್ ಗೋಲ್ಡ್.

ಹಾನರ್ 8ಎಕ್ಸ್: 14,499 ರುಪಾಯಿಗೆ ಲಭ್ಯ,3500 ರುಪಾಯಿ ರಿಯಾಯಿತಿ ಇದೆ.

ಹಾನರ್ 8ಎಕ್ಸ್: 14,499 ರುಪಾಯಿಗೆ ಲಭ್ಯ,3500 ರುಪಾಯಿ ರಿಯಾಯಿತಿ ಇದೆ.

ಕೆಂಪು, ನೀಲಿ, ಮಿಡ್ ನೈಟ್ ಬ್ಲಾಕ್ ಮತ್ತು ನೇವಿ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಹಾನರ್ 8ಎಕ್ಸ್ ಫೋನ್ ಲಭ್ಯವಿದ್ದು 3500 ರುಪಾಯಿ ರಿಯಾಯತಿ ಸಿಗುತ್ತದೆ. 4GB+64GB ಸ್ಟೋರೇಜ್ ಆಯ್ಕೆಯ ಫೋನ್ ಗಳ ನೈಜ ಬೆಲೆ 17,999 ರುಪಾಯಿಗಳು.

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 8 : 39,990 ರುಪಾಯಿಗೆ ಲಭ್ಯ, 4,000 ರುಪಾಯಿ ರಿಯಾಯಿತಿ ಇದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 8 : 39,990 ರುಪಾಯಿಗೆ ಲಭ್ಯ, 4,000 ರುಪಾಯಿ ರಿಯಾಯಿತಿ ಇದೆ.

ಸೌತ್ ಕೊರಿಯನ್ ಟೆಕ್ ಸಂಸ್ಥೆ ಸ್ಯಾಮ್ ಸಂಗ್ ನ ಫ್ಲಾಗ್ ಶಿಪ್ ಫ್ಯಾಬ್ಲೆಟ್ ನ್ನು 34.700ರಿಯಾಯಿತಿ ಬೆಲೆಯಲ್ಲಿ ಖರೀದಿಸಬಹುದು.ಇದರ ನೈಜ ಬೆಲೆ 39,999 ರುಪಾಯಿಗಳು.ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 8 ಮೂರು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗುತ್ತದೆ.-ಗೋಲ್ಡ್, ಮಿಡ್ ನೈಟ್ ಬ್ಲಾಕ್ ಮತ್ತು ಆರ್ಕಿಡ್ ಗ್ರೇ.

Best Mobiles in India

English summary
Amazon Fab Phones Fest: Get discounts of up to Rs 16,901 on smartphones from Samsung, Xiaomi, Apple and Honor

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X