ಮಕರ ಸಂಕ್ರಾಂತಿಗೆ ಪ್ರೀಮಿಯಂ ಫೋನ್ ಗಳಿಗೆ ವಿಶೇಷ ರಿಯಾಯಿತಿ ನೀಡುತ್ತಿರುವ ಅಮೇಜಾನ್

By Gizbot Bureau
|

ವರ್ಷದ ಮೊದಲ ಹಬ್ಬ ಪೊಂಗಲ್ ಮತ್ತು ಮಕರ ಸಂಕ್ರಾಂತಿ ಹತ್ತಿರ ಬರುತ್ತಿದೆ. ಮನೆಯಲ್ಲಿ ಸಂಭ್ರಮಿಸುವುದಕ್ಕಾಗಿ ತಯಾರಿ ಈಗಾಗಲೇ ಪ್ರಾರಂಭವಾಗಿದೆ. ಈ ಹಬ್ಬಕ್ಕಾಗಿ ಆನ್ ಲೈನ್ ಪೋರ್ಟಲ್ ಗಳಲ್ಲಿ ವಿಶೇಷ ಮಾರಾಟ ಪ್ರಕ್ರಿಯೆಗಳು ಆರಂಭವಾಗಿದೆ. ಅಮೇಜಾನ್ ನಲ್ಲಿ ಕೂಡ ದೊಡ್ಡ ಮಾರಾಟ ನಡೆಯುತ್ತಿದ್ದು ಇಎಂಐ ಆಯ್ಕೆಯಲ್ಲಿ ಪ್ರೀಮಿಯಂ ಸ್ಮಾರ್ಟ್ ಫೋನ್ ಗಳನ್ನು ಖರೀದಿಸುವುದಕ್ಕೆ ಅವಕಾಶ ಲಭ್ಯವಾಗುತ್ತಿದೆ.

ಅಮೇಜಾನ್

ಅಮೇಜಾನ್ ನಲ್ಲಿ ದೊಡ್ಡ ಎಕ್ಸ್ ಚೇಂಜ್ ಆಫರ್ ಗಳು ಲಭ್ಯವಿದೆ. ದೊಡ್ಡ ಕ್ಯಾಷ್ ಬ್ಯಾಕ್ ಆಫರ್ ಗಳು, ಎಸ್ ಬ್ಯಾಂಕ್ ಕ್ರೆಡಿಟ್ ಇಎಂಐ ವ್ಯವಹಾರದಲ್ಲಿ 10% ಇನ್ಸೆಂಟ್ ರಿಯಾಯಿತಿ, ಇಂಡೂಸ್ ಲ್ಯಾಂಡ್ ಬ್ಯಾಂಕ್ ಕ್ರೆಡಿಟ್ ಇಎಂಐ ವ್ಯವಹಾರಕ್ಕೆ 10% ಇನ್ಸೆಂಟ್ ರಿಯಾಯಿತಿ, ಜಿಎಸ್ಟಿ ಇನ್ ವಾಯ್ಸ್ ಮತ್ತು ಬ್ಯುಸಿನೆಸ್ ಖರೀದಿಯಲ್ಲಿ 28% ರಿಯಾಯಿತಿ ಸೇರಿದಂತೆ ಹಲವು ಆಫರ್ ಗಳು ಲಭ್ಯವಿದೆ.

ಆಪಲ್ ಐಫೋನ್ 11 ಪ್ರೋ ಮ್ಯಾಕ್ಸ್

ಆಪಲ್ ಐಫೋನ್ 11 ಪ್ರೋ ಮ್ಯಾಕ್ಸ್

256GB ROM ವೇರಿಯಂಟ್ ನ ಈ ಡಿವೈಸ್ 1,23,900 ರುಪಾಯಿ ಬೆಲೆಗೆ ಸಿಗುತ್ತದೆ. 6.5- ಇಂಚಿನ ಸೂಪರ್ ರೆಟಿನಾ XDR OLED ಡಿಸ್ಪ್ಲೇ, ಎ13 ಬಯೋನಿಕ್ ಚಿಪ್ ಸೆಟ್, 12MP ಟ್ರೂಡೆಪ್ತ್ ಮುಂಭಾಗದ ಕ್ಯಾಮರಾ, ಫೇಸ್ ಐಡಿ ಮತ್ತು ಆಪಲ್ ಪೇ ಫೀಚರ್ ಗಳಿದೆ.

ಆಪಲ್ ಐಫೋನ್ 11 ಪ್ರೋ

ಆಪಲ್ ಐಫೋನ್ 11 ಪ್ರೋ

ಈ ಹ್ಯಾಂಡ್ ಸೆಟ್ ನ 64GB ROM ವೇರಿಯಂಟ್ ನ ಬೆಲೆ 99,900 ರುಪಾಯಿಗಳು. ಈ ಫೋನಿನಲ್ಲಿ 5.8-ಇಂಚಿನ ಸೂಪರ್ ರೆಟಿನಾ XDR OLED ಡಿಸ್ಪ್ಲೇ, ಎ13 ಬಯೋನಿಕ್ ಚಿಪ್ ಸೆಟ್, 12MP ಟ್ರೂ ಡೆಪ್ತ್ ಮುಂಭಾಗದ ಕ್ಯಾಮರಾ, ಫೇಸ್ ಐಡಿ ಮತ್ತು ಆಪಲ್ ಪೇ ಫೀಚರ್ ಗಳಿದೆ. ಆರಂಭಿಕ ಇಎಂಐ 4,703 ರುಪಾಯಿ ಬೆಲೆಗೆ ಲಭ್ಯವಿದೆ.

ಆಪಲ್ ಐಫೋನ್ 11

ಆಪಲ್ ಐಫೋನ್ 11

ಈ ಸ್ಮಾರ್ಟ್ ಫೋನ್ 64,900 ರುಪಾಯಿ ಬೆಲೆಗೆ ಲಭ್ಯವಿದೆ. 8,500 ರುಪಾಯಿ ವರೆಗೆ ಎಕ್ಸ್ ಚೇಂಜ್ ಆಫರ್ ಈ ಡಿವೈಸ್ ಗೆ ಲಭ್ಯವಿದೆ. ಈ ಫೋನಿನ ಪ್ರಮುಖ ಹೈಲೆಟ್ ಏನೆಂದರೆ ಇದರಲ್ಲಿ 6.1-ಇಂಚಿನ ಲಿಕ್ವಿಡ್ ರೆಟಿನಾ HD LCD, 12MP ಟ್ರೂಡೆಪ್ತ್ ಮುಂಭಾಗದ ಕ್ಯಾಮರಾ, ಫೇಸ್ ಐಡಿ ಮತ್ತು ಎ13 ಬಯೋನಿಕ್ ಚಿಪ್ ಸೆಟ್ ಇದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10 ಪ್ಲಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10 ಪ್ಲಸ್

ಈ ಸ್ಮಾರ್ಟ್ ಫೋನ್ 79,999 ರುಪಾಯಿ ಬೆಲೆಗೆ ಲಭ್ಯವಿದೆ. ಹೆಚ್ಚುವರಿಯಾಗಿ ನಿಮಗೆ 5,001 ರಿಯಾಯಿತಿ ಲಭ್ಯವಾಗುತ್ತದೆ.ಈ ಡಿವೈಸಿನ ಪ್ರಮುಖ ಹೈಲೆಟ್ ಏನೆಂದರೆ 12MP (ಡುಯಲ್ ಅಪರ್ಚರ್) + 12MP + 16MP + TOF ಹಿಂಭಾಗದ ಕ್ಯಾಮರಾ ವ್ಯವಸ್ಥೆ ಇದೆ.

ಹುವಾಯಿ ಪಿ30 ಪ್ರೋ

ಹುವಾಯಿ ಪಿ30 ಪ್ರೋ

ಈ ಹ್ಯಾಂಡ್ ಸೆಟ್ 70,999 ಜೊತೆಗೆ 11% ರಿಯಾಯಿತಿ ಬೆಲೆಗೆ ಸಿಗುತ್ತದೆ. ಇಎಂಐ ಆಯ್ಕೆಯಲ್ಲಿಯೂ ಕೂಡ ನೀವು ಇದನ್ನು ಖರೀದಿಸಬಹುದಾಗಿದ್ದು 3,342 ರುಪಾಯಿಯನ್ನು ಪ್ರತಿ ತಿಂಗಳು ಪಾವತಿ ಮಾಡಿ ಖರೀದಿಸಬಹುದು. ಹೆಚ್ಚುವರಿಯಾಗಿ 5% ಇನ್ಸೆಂಟ್ ರಿಯಾಯಿತಿಯನ್ನು ಹೆಚ್ಎಸ್ ಬಿಸಿ ಕ್ಯಾಷ್ ಬ್ಯಾಕ್ ಕಾರ್ಡ್ ನಲ್ಲಿ ಪಡೆದುಕೊಳ್ಳುವ ಅವಕಾಶವಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10

ಈ ಹ್ಯಾಂಡ್ ಸೆಟ್ಟಿನ 8GB RAM/256GB ROM ಆಯ್ಕೆಯ ಫೋನ್ 69,999 ರುಪಾಯಿ ಬೆಲೆಗೆ ಸಿಗುತ್ತದೆ.ಇಎಂಐ ಆಯ್ಕೆಯಲ್ಲಿಯೂ ಕೂಡ ಫೋನ್ ಖರೀದಿಸಬಹುದಾಗಿದ್ದು 3,295 ಪ್ರತಿ ತಿಂಗಳು ಪಾವತಿ ಮಾಡಿ ಖರೀದಿಸಬಹುದು. ಆಲ್ಟ್ರಾಸಾನಿಕ್ ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಮತ್ತು ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಇದು ಹೊಂದಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9

ಈ ಹ್ಯಾಂಡ್ ಸೆಟ್ ನಲ್ಲಿ Exynos ಆಕ್ಟಾ ಕೋರ್ ಪ್ರೊಸೆಸರ್ ಇದೆ ಮತ್ತು ಇದು 67,900 ರುಪಾಯಿ ಬೆಲೆಗೆ 6GB RAM ಮತ್ತು 128GB ROM ಆಯ್ಕೆಯ ಫೋನ್ ನಿಮಗೆ ಲಭ್ಯವಾಗುತ್ತದೆ. 8,500 ರುಪಾಯಿ ಎಕ್ಸ್ ಚೇಂಜ್ ಆಫರ್ ಮತ್ತು 5,700 ರಿಯಾಯಿತಿಯು ಅಮೇಜಾನಿನಲ್ಲಿ ಲಭ್ಯವಾಗುತ್ತದೆ.

ಆಪಲ್ ಐಫೋನ್ ಎಕ್ಸ್ಆರ್

ಆಪಲ್ ಐಫೋನ್ ಎಕ್ಸ್ಆರ್

47,900 ರುಪಾಯಿ ಬೆಲೆಗೆ 64GB ROM ಸ್ಟೋರೇಜ್ ಆಯ್ಕೆಯ ಫೋನ್ ಲಭ್ಯವಾಗುತ್ತದೆ. 2,255 ರುಪಾಯಿಯನ್ನು ಪ್ರತಿ ತಿಂಗಳು ಪಾವತಿ ಮಾಡುವ ಮೂಲಕ ಇಎಂಐ ಆಯ್ಕೆಯಲ್ಲಿಯೂ ಖರೀದಿಸಬಹುದು. 6.1- ಇಂಚಿನ ಲಿಕ್ವಿಡ್ ರೆಟಿನಾ ಡಿಸ್ಪ್ಲೇ,12MP ಪ್ರೈಮರಿ ಕ್ಯಾಮರಾ ಜೊತೆಗೆ OIS, ಮತ್ತು 7MP ಟ್ರೂ ಡೆಪ್ತ್ ಮುಂಭಾಗದ ಕ್ಯಾಮರಾ ವ್ಯವಸ್ಥೆ ಇದರಲ್ಲಿದೆ.

ಒನ್ ಪ್ಲಸ್ 7 ಪ್ರೋ

ಒನ್ ಪ್ಲಸ್ 7 ಪ್ರೋ

ಈ ಹ್ಯಾಂಡ್ ಸೆಟ್ 42,999 ರುಪಾಯಿ ಬೆಲೆಗೆ 8GB RAM ಮತ್ತು 256GB ROM ಮೆಮೊರಿ ಆಯ್ಕೆಯ ಫೋನ್ ಲಭ್ಯವಾಗುತ್ತದೆ. ಈ ಹ್ಯಾಂಡ್ ಸೆಟ್ ಮಿರರ್ ಗ್ರೇ, ಅಲ್ಮಂಡ್ ಮತ್ತು ನೆಬುಲಾ ಬ್ಲೂ ಬಣ್ಣದ ಆಯ್ಕೆಯಲ್ಲಿ ಸಿಗುತ್ತದೆ. ಇದರಲ್ಲಿ 48MP ಟ್ರಿಪಲ್ ಹಿಂಭಾಗದ ಕ್ಯಾಮರಾ ಮತ್ತು 16MP ಪಾಪ್ ಅಪ್ ಮುಂಭಾಗದ ಕ್ಯಾಮರಾ ವ್ಯವಸ್ಥೆ ಇರುತ್ತದೆ.

ಒಪ್ಪೋ ರೆನೋ 10ಎಕ್ಸ್ ಝೂಮ್

ಒಪ್ಪೋ ರೆನೋ 10ಎಕ್ಸ್ ಝೂಮ್

ಈ ಫೋನಿನಲ್ಲಿ ಸ್ನ್ಯಾಪ್ ಡ್ರ್ಯಾಗನ್ 855 SoC ಇದ್ದು 8GB RAM ಮತ್ತು 256GB HDD ಮೆಮೊರಿ ಆಯ್ಕೆಯೊಂದಿಗೆ ಪೇರ್ ಆಗಿರುತ್ತದೆ. ಮೇಲಿನ ಸ್ಟೋರೇಜ್ ಆಯ್ಕೆಯ ಫೋನ್ 39,990 ರುಪಾಯಿ ಬೆಲೆಗೆ ಲಭ್ಯವಾಗುತ್ತದೆ.

Most Read Articles
Best Mobiles in India

English summary
Amazon offers great discounts and other offers on some premium phones during Makar Sankranti and Pongal festivals. Find some of the best devices on our mentioned list.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more