Subscribe to Gizbot

2000ರೂ.ಗೆ 'ನೋಕಿಯಾ 1' ಆಂಡ್ರಾಯ್ಡ್ ಗೊ ಫೋನ್ ರಿಲೀಸ್ ಆಗುತ್ತಾ?..ಇಲ್ಲಿದೆ ಫುಲ್ ಡೀಟೆಲ್ಸ್!!

Written By:

ಆಂಡ್ರಾಯ್ಡ್ ಗೊ ಮಾದರಿಯ ''ನೋಕಿಯಾ 1'' ಸ್ಮಾರ್ಟ್‌ಫೋನ್ ಇದೇ 25 ನೇ ತಾರೀಖು ಮೊಬೈಲ್ ಕಾಂಗ್ರೆಸ್‌ನಲ್ಲಿ ಬಿಡುಗಡೆಯಾಗುವುದು ಈಗಾಗಲೇ ಕನ್ಫರ್ಮ್ ಆಗಿದೆ.! ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ ಎನ್ನಲಾಗಿರುವ 'ನೋಕಿಯಾ 1' ಸ್ಮಾರ್ಟ್‌ಫೋನ್ ಇದೀಗ ವಿಶ್ವದ ಮೊಬೈಲ್ ಮಾರುಕಟ್ಟೆಯ ಕುತೋಹಲ ಕೆರಳಿಸಿದೆ.!!

ಈಗಾಗಲೇ ಮಾಧ್ಯಮಗಳು ವರದಿ ಮಾಡಿರುವಂತೆ 2000 ರೂ.ಗೆ ನೋಕಿಯಾ 1 ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿದೆ ಎನ್ನುವ ಸುದ್ದಿ ವೈರೆಲ್ ಆಗಿದೆ. ಆದರೆ, ಹೆಚ್‌ಎಮ್‌ಡಿ ಗ್ಲೋಬಲ್ ಸಂಸ್ಥೆ ಈ ಬಗ್ಗೆ ಮಾತ್ರ ಯಾವುದೇ ಮಾಹಿತಿಯನ್ನು ಬಿಟ್ಟುಕೊಡದೆ ಇನ್ನೆರಡು ದಿನಗಳಲ್ಲಿ ಬಾರ್ಸಿಲೋನಾದಲ್ಲಿ ನಡೆಯಲಿರುವ ಮೊಬೈಲ್ ಕಾಂಗ್ರೆಸ್‌ನತ್ತ ಎದುರುನೋಡುವಂತೆ ಮಾಡಿದೆ.!!

2000ರೂ.ಗೆ 'ನೋಕಿಯಾ 1' ಆಂಡ್ರಾಯ್ಡ್ ಗೊ ಫೋನ್ ರಿಲೀಸ್ ಆಗುತ್ತಾ?

ಏನೇ ಆದರೂ ನೋಕಿಯಾ 1 ಸ್ಮಾರ್ಟ್‌ಫೋನ್ ಮಾತ್ರ ಅತ್ಯಂತ ಕಡಿಮೆ ಬೆಲೆಗೆ ಬಿಡುಗಡೆಯಾಗುವುದು ಪಕ್ಕಾ ಆಗಿದ್ದು, ಹಾಗಾದರೆ, ನೋಕಿಯಾ 1 ಸ್ಮಾರ್ಟ್‌ಫೋನ್ ಹೊಂದಿರಬಹುದಾದ ಫೀಚರ್ಸ್ ಯಾವುವು? ಅತ್ಯಂತ ಕಡಿಮೆ ಬೆಲೆಗೆ ಫೋನ್ ಬಿಡುಗಡೆಯಾಗಲಿದೆ ಎನ್ನಲು ಕಾರಣಗಳೇನು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ 1 ಆಂಡ್ರಾಯ್ಡ್ ಗೊ!!

ನೋಕಿಯಾ 1 ಆಂಡ್ರಾಯ್ಡ್ ಗೊ!!

ಈಗಾಗಲೇ ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಿರುವ ನೋಕಿಯಾ 1 ಸ್ಮಾರ್ಟ್‌ಫೋನ್ ಗೂಗಲ್‌ನ ಕನಸಿನ ಕೂಸು ಆಂಡ್ರಾಯ್ಡ್ ಗೋ ಆವೃತ್ತಿಯಲ್ಲಿ ಮಾರುಕಟ್ಟೆಗೆ ಕಾಲಿಡುತ್ತಿದೆ. ಗೂಗಲ್ ಆಸೆಯಂತೆಯೇ 2000 ರೂಪಾಯಿಗಳಲ್ಲಿ ಸ್ಮಾರ್ಟ್‌ಫೋನ್ ಜನಸಾಮಾನ್ಯರಿಗೂ ದೊರೆಯಲಿದೆ ಎಂಬ ವಿಶ್ವಾಸವನ್ನು ಸಹ ಈ ಸ್ಮಾರ್ಟ್‌ಫೋನ್ ನೀಡಿದೆ.!!

ಡಿಸ್‌ಪ್ಲೇ ಮತ್ತು ವಿನ್ಯಾಸ?

ಡಿಸ್‌ಪ್ಲೇ ಮತ್ತು ವಿನ್ಯಾಸ?

ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಬಿಡುಗಡೆಯಾಗಲಿರುವ ನೋಕಿಯಾ 1 ಫೋನ್ ಕೇವಲ 4.5 ಇಂಚ್ ಡಿಸ್‌ಪ್ಲೇ ಹೊಂದಿರಲಿದೆ. ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಇದಾಗಿರುವುದರಿಂದ ವಿನ್ಯಾಸದಲ್ಲಿಯೂ ಕೂಡ ಸಾಮಾನ್ಯ ಸ್ಮಾರ್ಟ್‌ಫೋನುಗಳಂತೆ ಕೂಡ ಈ ಸ್ಮಾರ್ಟ್‌ಫೋನನ್ನು ಸಹ ನಿರೀಕ್ಷಿಸಬಹುದಾಗಿದೆ.!!

 RAM ಮತ್ತು ಪ್ರೊಸೆಸರ್?

RAM ಮತ್ತು ಪ್ರೊಸೆಸರ್?

ನೋಕಿಯಾ 1 ಸ್ಮಾರ್ಟ್‌ಫೋನ್ 1GB RAM ಹಾಗೂ 16GB ಮೆಮೊರಿ ವೆರಿಯಂಟ್‌ನಲ್ಲಿ ಮಾರುಕಟ್ಟೆಗೆ ಕಾಲಿಡುತ್ತಿದೆ. ಆದರೆ, ಆಂಡ್ರಾಯ್ಡ್ ಗೊ ಆವೃತ್ತಿಯಲ್ಲಿ ಕಾರ್ಯನಿರ್ವಹಣೆ ನೀಡುವ ಈ ಸ್ಮಾರ್ಟ್‌ಫೋನ್ ಹೊಂದಿರಬಹುದಾದ ಪ್ರೊಸೆಸರ್ ಮಾಹಿತಿಯನ್ನು ಈ ವರೆಗೂ ಯಾವುದೇ ಮಾಧ್ಯಮಗಳು ಕೂಡ ಪಡೆಯಲು ಸಾಧ್ಯವಾಗಿಲ್ಲ.!!

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

ನೋಕಿಯಾ 1 ಆಂಡ್ರಾಯ್ಡ್ ಗೊ ಸ್ಮಾರ್ಟ್‌ಫೋನ್ 5 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಹಾಗೂ 2 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ ಎನ್ನಲಾಗಿದೆ. ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಇದಾಗಿರುವುದರಿಂದ ಫೋನ್ ಕ್ಯಾಮೆರಾ ಬಗ್ಗೆ ಹೆಚ್ಚು ಒತ್ತು ನೀಡಿರುವುದಿಲ್ಲ ಎಂದು ಟೆಕ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.!!

ನೋಕಿಯಾ 1 ಇತರೆ ಫೀಚರ್ಸ್?

ನೋಕಿಯಾ 1 ಇತರೆ ಫೀಚರ್ಸ್?

ನೋಕಿಯಾ 1 ಆಂಡ್ರಾಯ್ಡ್ ಗೊ ಸ್ಮಾರ್ಟ್‌ಫೋನ್ 3000mAh ಬ್ಯಾಟರಿ ಶಕ್ತಿಯನ್ನು ಹೊಂದಿರಲಿದೆ. ವೈ-ಫೈ ಹಾಗೂ ಡ್ಯುಯಲ್ ಸಿಮ್ ಆಯ್ಕೆಯನ್ನು ಸ್ಮಾರ್ಟ್‌ಫೋನಿನಲ್ಲಿ ನೀಡಲಾಗಿದೆ. ಇನ್ನು ಕೆಲವು ಮಾಧ್ಯಮಗಳ ವರದಿ ಪ್ರಕಾರ ಸ್ಮಾರ್ಟ್‌ಫೋನ್ ಬೆಲೆ ನಿಖರವಾಗಿ 50 ಡಾಲರ್ (3200 ರೂ.) ಇರುತ್ತದೆ ಎಂದು ಹೇಳಿವೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Ultra-budget Android powered smartphones have always been a two edged sword.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot