10000 ರುಪಾಯಿ ಒಳಗೆ 5000 mAh ನ ಬ್ಯಾಟರಿ ಬ್ಯಾಕ್ ಅಪ್ ಇರುವ ಸ್ಮಾರ್ಟ್ ಫೋನ್ ಗಳು

By Gizbot Bureau
|

ಪ್ರತಿ ವರ್ಷವೂ ಸ್ಮಾರ್ಟ್ ಫೋನ್ ಗಳು ಹೆಚ್ಚೆಚ್ಚು ಶಕ್ತಿಶಾಲಿಯಾಗುತ್ತಿದೆ. ಹೊಸದಾಗಿ ಬಿಡುಗಡೆಗೊಳ್ಳವ ಸ್ಮಾರ್ಟ್ ಫೋನ್ ಗಳಲ್ಲಿ ಪ್ರೊಸೆಸರ್ ಗಳು ಲ್ಯಾಪ್ ಟಾಪ್ ಗಳಿಗಿಂತಲೂ ಹೆಚ್ಚು ಪವರ್ ಫುಲ್ ಆಗಿರುತ್ತದೆ. ಡುಯಲ್ ಮತ್ತು ಕ್ವಾಡ್ ಕೋರ್ ಪ್ರೊಸೆಸರ್ ಗಳನ್ನು ಇವು ಒಳಗೊಂಡಿರುತ್ತದೆ. ಹೆಚ್ಚು ಶಕ್ತಿಶಾಲಿಯಾಗಿರುವ ಪ್ರೊಸೆಸರ್ ಗಳಲ್ಲಿ ಬ್ಯಾಟರಿ ಲೈಫ್ 5,000 mAh ಅಥವಾ ಅದಕ್ಕಿಂತ ದೊಡ್ಡ ಗಾತ್ರದ್ದೇ ಆಗಿರುತ್ತದೆ.

ಡಿವೈಸ್

ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ 5,000 mAh ನ ಬ್ಯಾಟರಿ ಇರುವ ಕೆಲವು ಡಿವೈಸ್ ಗಳನ್ನು ನಾವಿಲ್ಲಿ ಪಟ್ಟಿ ಮಾಡಿದ್ದು ಇವುಗಳು 10,000 ರುಪಾಯಿ ಒಳಗೆ ಲಭ್ಯವಾಗುತ್ತದೆ. ಫಾಸ್ಟ್ ಚಾರ್ಜಿಂಗ್ ಗೆ ಕೂಡ ಇವು ಬೆಂಬಲ ನೀಡುತ್ತದೆ.

ರಿಯಲ್ ಮಿ ಸಿ3

ರಿಯಲ್ ಮಿ ಸಿ3

ಕೈಗೆಟುಕುವ ಬೆಲೆಯ ಸ್ಮಾರ್ಟ್ ಫೋನ್ ನಲ್ಲಿ ಅತ್ಯುತ್ತಮ ಬ್ಯಾಟರಿ ಲೈಫ್ ಇರಬೇಕು ಎಂದು ನೀವು ಬಯಸುತ್ತಿದ್ದರೆ ನಿಮಗೆ ರಿಯಲ್ ಮಿ ಸಿ3 ಅತ್ಯುತ್ತಮ ಆಯ್ಕೆಯಾಗಿದೆ.ಈ ಸ್ಮಾರ್ಟ್ ಫೋನ್ ನಲ್ಲಿ ಮೀಡಿಯಾ ಟೆಕ್ ಹೆಲಿಯೋ ಜಿ70 ಸಾಕೆಟ್ ಜೊತೆಗೆ 5,000 mAh ನ ಬ್ಯಾಟರಿ ಇದೆ. ಇದು ಒಮ್ಮೆ ಚಾರ್ಜ್ ಮಾಡಿದರೆ ಎರಡು ದಿನಗಳ ಬ್ಯಾಟರಿ ಲೈಫ್ ನ್ನು ಒದಗಿಸುತ್ತದೆ.

ವಿವೋ ಯು10

ವಿವೋ ಯು10

ವಿವೋ ಯು10 ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 665 SoC ನ್ನು ಹೊಂದಿದೆ ಮತ್ತು ಆಕ್ಟಾ ಕೋರ್ ಚಿಪ್ ಸೆಟ್ ಇದ್ದು ಅತ್ಯುತ್ತಮ ಪ್ರದರ್ಶನವನ್ನು ಗೇಮಿಂಗ್ ನಲ್ಲಿ ಮತ್ತು ಮಲ್ಟಿಟಾಸ್ಕಿಂಗ್ ನಲ್ಲಿ ನೀಡುತ್ತದೆ. ವಿವೋ ಯು10 5,000 mAh ಬ್ಯಾಟರಿ ಇದ್ದು 18W ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲ ನೀಡುತ್ತದೆ.

ಇನ್ಫಿನಿಕ್ಸ್ ಹಾಟ್ 8

ಇನ್ಫಿನಿಕ್ಸ್ ಹಾಟ್ 8

ಇನ್ಫಿನಿಕ್ಸ್ ಹಾಟ್ 8 ಡುಯಲ್ ಕ್ಯಾಮರಾ ಸೆಟ್ ಅಪ್ ಹೊಂದಿದೆ 13MP ಪ್ರೈಮರಿ ಸೆನ್ಸರ್ ನ್ನು ಒಳಗೊಂಡಿದೆ. ಈ ಡಿವೈಸ್ ಶಕ್ತಿಶಾಲಿ ಯಾಗಿದ್ದು ಹೆಲಿಯೋ ಪಿ 22 (MTK6762) ಪ್ರೊಸೆಸರ್ ಮೊಬೈಲ್ ಫ್ಲ್ಯಾಟ್ ಫಾರ್ಮ್ ಇದ್ದು ಅತೀ ದೊಡ್ಡ ಅಂದರೆ 5,000 mAh ಬ್ಯಾಟರಿಯನ್ನು ಹೊಂದಿದೆ.

ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ1

ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ1

ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ1 18:9 ಆಸ್ಪೆಕ್ಟ್ ಅನುಪಾತದ ಡಿಸ್ಪ್ಲೇ ಜೊತೆಗೆ ಮೆಟಲ್ ಯುನಿಬಾಡಿ ಡಿಸೈನ್ ಮತ್ತು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 636 SoC ಜೊತೆಗೆ 4GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯನ್ನು ಇದು ಹೊಂದಿದೆ. ಈ ಡಿವೈಸ್ ನಲ್ಲಿ 5,000 mAh ನ ಬ್ಯಾಟರಿ ಇದ್ದು ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದರೆ ಒಂದು ದಿನ ಪೂರ್ತಿ ಮೊಬೈಲ್ ಬಳಸಬಹುದು.

ರಿಯಲ್ ಮಿ 5

ರಿಯಲ್ ಮಿ 5

ರಿಯಲ್ ಮಿ 5 6.5-ಇಂಚಿನ HD+ ರೆಸಲ್ಯೂಷನ್ ಡಿಸ್ಪ್ಲೇ ಜೊತೆಗೆ 2.5D ಕರ್ವ್ಡ್ ಟೆಂಪರ್ಡ್ ಗ್ಲಾಸ್ ಮತ್ತು ಮಾರ್ಡನ್ ಡಿಸೈನ್ ಜೊತೆಗೆ ವಾಟರ್ ಡ್ರಾಪ್ ನಾಚ್ ನ್ನು ಮೇಲ್ಬಾಗದಲ್ಲಿ ಹೊಂದಿದೆ. ಈ ಡಿವೈಸ್ 5,000 mAh ನ ಬ್ಯಾಟರಿಯನ್ನು ಹೊಂದಿದ್ದು ಒಮ್ಮೆ ಚಾರ್ಜ್ ಮಾಡಿದರೆ ಒಂದುವರೆ ದಿನ ಅಥವಾ ಎರಡು ದಿನ ಮೊಬೈಲ್ ಬಳಸುವುದಕ್ಕೆ ಯಾವುದೇ ಅಡ್ಡಿಯಿಲ್ಲ.

ಶಿಯೋಮಿ ರೆಡ್ಮಿ 8ಎ ಡುಯಲ್

ಶಿಯೋಮಿ ರೆಡ್ಮಿ 8ಎ ಡುಯಲ್

ಶಿಯೋಮಿ ರೆಡ್ಮಿ 8ಎ ಡುಯಲ್ ನಲ್ಲಿ ಡುಯಲ್ ಕ್ಯಾಮರಾ ಸೆಟ್ ಅಪ್ ಹಿಂಭಾಗದಲ್ಲಿದೆ. 13ಎಂಪಿ ಪ್ರೈಮರಿ ಕ್ಯಾಮರಾ ಸೆಟ್ ಅಪ್ ಹೊಂದಿದೆ. ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 439 SoC ಜೊತೆಗೆ 2GB RAM ಮತ್ತು 32GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದೆ. ಈ ಡಿವೈಸ್ ನಲ್ಲಿ 5,000 mAh ಬ್ಯಾಟರಿ ಜೊತೆಗೆ 18W ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲವಿದ್ದು USB ಟೈಪ್-ಸಿ ಪೋರ್ಟ್ ನ್ನು ಹೊಂದಿದೆ.

Most Read Articles
Best Mobiles in India

English summary
Here are some of the well-balanced smartphones in India with 5,000 mAh battery, which ensures that these devices can last for at least a day on a single charge and some of these phones will also support fast charging.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X