Subscribe to Gizbot

ಎಲ್‌ಜಿ G3 ಸ್ಮಾರ್ಟ್‌ಫೋನ್ ಅದ್ಭುತ ಆಕ್ಸಸಿರೀಸ್

Written By:

ಇದುವರೆಗೂ ನಿರ್ಮಾಣವಾಗಿರುವ ಆಂಡ್ರಾಯ್ಡ್ ಡಿವೈಸ್‌ಗಳಲ್ಲೇ ದಿ ಬೆಸ್ಟ್ ಎನ್ನುವ ಹೆಗ್ಗಳಿಕೆಯನ್ನು ಗಳಿಸಿಕೊಂಡಿರುವ ಎಲ್‌ಜಿ G3 ಅತ್ಯತ್ತಮ ತಂತ್ರಜ್ಞಾನವನ್ನು ಗ್ರಾಹಕರಿಗೆ ಒದಗಿಸುವ ಮೂಲಕ ಮಾರುಕಟ್ಟೆಯಲ್ಲಿ ತನ್ನ ಪರಿಣಾಮ ಬೀರಿದೆ.

5.5 ಇಂಚಿನ HD ಪರದೆಯೊಂದಿಗೆ ಬಂದಿದ್ದು, 2.4GHz ಪ್ರೊಸೆಸರ್ ಲೇಸರ್ ಗೈಡ್ ಉಳ್ಳ 13 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಒಳಗೊಂಡಿದ್ದು ಓಎಸ್, ಡ್ಯುಯೆಲ್ ಫ್ಲ್ಯಾಶ್ ಮತ್ತು ಎಲ್‌ಜಿ ಹೊಸ ತಂತ್ರಜ್ಞಾನ ಲೇಸರ್ ಆಟೋ ಫೋಕಸ್ ಅನ್ನು ಹೊಂದಿದೆ. 4K ವೀಡಿಯೋ ರೆಕಾರ್ಡಿಂಗ್ ಅನ್ನು ಕೂಡ ಈ ಡಿವೈಸ್‌ನಲ್ಲಿ ನಿಮಗೆ ಮಾಡಬಹುದಾಗಿದೆ. 2.1MP ಮುಂಭಾಗ ಶೂಟರ್ ಕೂಡ ಇದರಲ್ಲಿದೆ.

ಎಲ್‌ಜಿ 16ಜಿಬಿ / 32ಜಿಬಿ ಆಂತರಿಕ ಮೆಮೊರಿಯನ್ನು ನೀಡುತ್ತಿದ್ದು ಇದನ್ನು ನಿಮಗೆ 128 ಜಿಬಿ ಎಸ್‌ಡಿ ಕಾರ್ಡ್ ಅನ್ನು ಬಳಸಿಕೊಂಡು ವಿಸ್ತರಿಸಬಹುದಾಗಿದೆ. ಇದರಲ್ಲಿರುವ ಸಂಪರ್ಕ ವೈಶಿಷ್ಟ್ಯಗಳೆಂದರೆ 4G LTE / 3ಜಿ HSPA+, ವೈಫೈ 802.11 a/b/g/n/ac, ಬ್ಲ್ಯೂಟೂತ್ 4.0 , GPS, NFC and ಸ್ಲಿಮ್ ಪೋರ್ಟ್ ಆಗಿದೆ. ಎಲ್‌ಜಿ ಜಿ3 3000 mAh ತೆಗೆಯಬಹುದಾದ ಬ್ಯಾಟರಿಯೊಂದಿಗೆ ಬಂದಿದ್ದು Qi ವೈರ್‌ಲೆಸ್ ಚಾರ್ಜಿಂಗ್ ಅನ್ನು ಕೂಡ ಒದಗಿಸುತ್ತಿದೆ.

ಇನ್ನು ಈ ಫೋನ್‌ನ ಜತೆಗಿರುವ ಆಕ್ಸಸಿರೀಸ್‌ಗಳೂ ಕೂಡ ಆಕರ್ಷಕವಾಗಿದ್ದು ಡಿವೈಸ್‌ನೊಂದಿಗೆ ಬಂದಿರುವಾ ಅತ್ಯುತ್ತಮ ಕೊಡುಗೆಯಾಗಿದೆ. ಹಾಗಿದ್ದರೆ ಇದರತ್ತ ನೋಟ ಹರಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಲ್‌ಜಿ ಪ್ರೀಮಿಯಮ್ ಹಾರ್ಡ್ ಕೇಸ್

#1

ಈ ಫೋನ್‌ನ ಪ್ಲಾಸ್ಟಿಕ್ ಕವರ್ ಮೆಟಲ್‌ನಂತೆ ಕಂಡುಬರುತ್ತಿದ್ದು, ನಿಮ್ಮ ಬೆರಳನ್ನು ಜಾರಿಸುವುದಿಲ್ಲ. ಇದು ಎಲ್ಲಾ ಕ್ಯುಐ ವೈರ್‌ಲೆಸ್ ಚಾರ್ಜರ್‌ಗಳೊಂದಿಗೆ ಸಂಯೋಜನೆಗೊಳ್ಳುತ್ತದೆ.

ವೈರ್‌ಲೆಸ್ ಚಾರ್ಜರ್

#2

4800mAh ಬ್ಯಾಟರಿ ಚಾರ್ಜರ್ ನಿಮ್ಮ G3 ಫೋನ್‌ಗೆ ಸಾಕಷ್ಟು ಬ್ಯಾಟರಿ ಶಕ್ತಿಯನ್ನು ಒದಗಿಸುವಲ್ಲಿ ಸಮರ್ಥವಾಗಿದೆ.

ಸ್ಲಿಮ್ ಆರ್ಮರ್ ಕೇಸ್

#3

ಇತರ ಕೇಸ್‌ಗಳಿಗೆ ಹೋಲಿಸಿದಾಗ G3 ಯ ಕೇಸ್ ಫೋನ್‌ಗೆ ಅಷ್ಟೊಂದು ಭಾರೀ ಎಂದೆನಿಸುವುದಿಲ್ಲ. ಸ್ಪೈಜಿನ್‌ನ ಡಬಲ್ ಲೇಯರ್ ಹೈಬ್ರೀಡ್ ಶೆಲ್ G3 ಯನ್ನು ಟಿಪಿಯು ಮತ್ತು ಪೋಲಿಕಾರ್ಬೊನೇಟ್‌ನಲ್ಲಿ ಸುಧಾರಿಸಿದೆ.

ಇಯರ್ ಫೋನ್ಸ್

#4

ನಿಮ್ಮ ಕಿವಿಗೆ ಹಾನಿಕಾರಕವಲ್ಲದ ಇಯರ್ ಫೋನ್‌ಗಳನ್ನು ಎಲ್‌ಜಿ ತನ್ನ G3 ಯೊಂದಿಗೆ ಒದಗಿಸುತ್ತಿದ್ದು ಹೆಚ್ಚುವರಿ ಧ್ವನಿಯನ್ನು ಕಡಿಮೆ ಮಾಡುವ ವೈಶಿಷ್ಟ್ಯ ಮೊದಲಾದ ಅಂಶಗಳಿಂದ ಇದು ಹೆಚ್ಚು ಪ್ರಗತಿಪರ ಮಾದರಿಯಲ್ಲಿದೆ.

ತ್ವರಿತ ವೃತ್ತಾಕಾರ ಕೇಸ್

#5

ಎಲ್‌ಜಿಯ ತ್ವರಿತ ಸರ್ಕಲ್ ಕೇಸ್ ಹೆಚ್ಚಿನ ಸ್ಕ್ರಾಚ್ ಮತ್ತು ಕಲೆಗಳಿಂದ ನಿಮ್ಮ ಫೋನ್ ಅನ್ನು ಸಂರಕ್ಷಿಸುತ್ತದೆ. ನಿಮಗೆ ಸಂದೇಶ ಅಥವಾ ಕರೆಗಳು ಬಂದ ಸಂದರ್ಭದಲ್ಲಿ ಇದು ಬೆಳಕನ್ನು ಉತ್ಪಾದಿಸಿ ನಿಮ್ಮ ಗಮನಕ್ಕೆ ತರುತ್ತದೆ.

ಗ್ಲಾಸ್ ಸ್ಕ್ರೀನ್ ಪ್ರೊಟೆಕ್ಟರ್

#6

ಸ್ಪೈಜನ್‌ನ ಸ್ಕ್ರೀನ್ ಪ್ರೊಟೆಕ್ಟರ್ ಇದುವರೆಗೂ ನಾವು ನೋಡಿರುವುದರಲ್ಲಿ ಅತ್ಯುತ್ತಮವಾಗಿದೆ. ನಿಮ್ಮ ಫೋನ್‌ನ ಡಿಸ್‌ಪ್ಲೇಗೆ ಹಾನಿ ಮಾಡದಿರುವ ಸ್ಕ್ರೀನ್ ಪ್ರೊಟೆಕ್ಟರ್ ಅನ್ನು ಇದು ಒದಗಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

<center><iframe width="100%" height="360" src="//www.youtube.com/embed/MzRdoHptaKs" frameborder="0" allowfullscreen></iframe></center>

English summary
This article tells about best Lg G3 smartphone accessories review and specifications.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot