Just In
- 5 hrs ago
ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್ಗಳನ್ನು ಬಳಕೆ ಮಾಡಿ!
- 6 hrs ago
ನಿಮ್ಮ ಉಂಗುರದ ಗಾತ್ರವನ್ನು ಫೋನ್ ಮೂಲಕವೇ ಅಳತೆ ಮಾಡಿ: ಹೇಗೆ ಗೊತ್ತಾ?
- 7 hrs ago
ಫೈರ್-ಬೋಲ್ಟ್ನ ಈ ಸ್ಮಾರ್ಟ್ವಾಚ್ ಖರೀದಿಗೆ ಲಭ್ಯ!..ಇದರ ಲುಕ್ಗೆ ನೀವು ಕ್ಲೀನ್ ಬೋಲ್ಡ್!
- 8 hrs ago
ಸೋನಿ ಸಂಸ್ಥೆಯಿಂದ ಹೊಸ ಮಾದರಿಯ ವಾಕ್ಮ್ಯಾನ್ ಲಾಂಚ್!..ಜಬರ್ದಸ್ತ್ ಫೀಚರ್ಸ್!
Don't Miss
- Sports
ಕಿರಿಯ ಮಹಿಳಾ ತಂಡದ ಟಿ20 ವಿಶ್ವಕಪ್ ಗೆಲುವು ನಮಗೆ ದೊಡ್ಡ ಸ್ಫೂರ್ತಿ ನೀಡಿದೆ; ಹರ್ಮನ್ಪ್ರೀತ್ ಕೌರ್
- Movies
Bettada Hoo: 'ಬೆಟ್ಟದ ಹೂ' ಮಾಲಿನಿ ಅಮ್ಮ ಮಂದ್ರಾ ಮದುವೆ ಆದ್ಮೇಲೆ ಫುಲ್ ಮಿಂಚಿಂಗ್..!
- News
ಆರ್ಥಿಕ ಸಂಕಷ್ಟದ ನಡುವೆಯೇ ಪಾಕಿಸ್ತಾನದಲ್ಲಿ ಮತ್ತೊಂದು ದುರಂತ: ಮಸೀದಿಯಲ್ಲಿ ಆತ್ಮಹುತಿ ದಾಳಿ- 46 ಸಾವು, 150 ಮಂದಿಗೆ ಗಾಯ
- Lifestyle
ಜನವರಿ 30ಕ್ಕೆ ಶನಿ ಅಸ್ತ: 35 ದಿನದವರೆಗೆ ಈ 6 ರಾಶಿಯವರು ಹೆಚ್ಚು ಜಾಗ್ರತೆವಹಿಸಬೇಕು
- Finance
ಫೆಬ್ರವರಿ 1ರಿಂದ ಯಾವೆಲ್ಲ ಹಣಕಾಸು ನಿಯಮ ಬದಲಾವಣೆಯಾಗಲಿದೆ?
- Automobiles
ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್: ಬೆಲೆ ರೂ.68,599...!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
25,000 ರುಪಾಯಿ ಒಳಗೆ ಈ ಸ್ಮಾರ್ಟ್ ಫೋನ್ ದಿ ಬೆಸ್ಟ್
25,000 ರುಪಾಯಿ ಒಳಗಿನ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲ್ಲಿ ಬಿಸಿಬಿಸಿ ಸಮೋಸದಂತೆ ಮಾರಾಟವಾಗುವ ಡಿವೈಸ್ ಗಳು.ಹೌದು ಈ ಬೆಲೆಯಲ್ಲಿ ಗ್ರಾಹಕರಿಗೆ ಅತೀ ಹೆಚ್ಚು ಆಯ್ಕೆಗಳು ಕೂಡ ಇರುತ್ತದೆ.ಸ್ಪರ್ಧೆಯೂ ಕೂಡ ಹೆಚ್ಚಾಗುತ್ತಿರುವುದರಿಂದಾಗಿ ಸ್ಮಾರ್ಟ್ ಫೋನ್ ತಯಾರಕರಾಗಿರುವ ರಿಯಲ್ ಮಿ, ಶಿಯೋಮಿ, ಒಪ್ಪೋ, ವಿವೋ ಗಳು ಟಾಪ್ ಎಂಡ್ ಫೀಚರ್ ಗಳನ್ನು ಈ ಬೆಲೆಯಲ್ಲಿ ನೀಡುವುದಕ್ಕೆ ಪ್ರಾರಂಭಿಸಿದೆ.ಪಾಪ್ ಅಪ್ ಸೆಲ್ಫೀ ಕ್ಯಾಮರಾ, ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ಮತ್ತು ಇತ್ಯಾದಿ ಫೀಚರ್ ಗಳಿಗಾಗಿ ಅತೀ ಹೆಚ್ಚು ಮೊತ್ತ ಪಾವತಿಸಬೇಕಾದ ಕಾಲ ಇದೀಗ ಇಲ್ಲ.ಇವೆಲ್ಲವೂ ಜೊತೆಗೆ ಇನ್ನಷ್ಟು ಫೀಚರ್ ಗಳು ಇದೀಗ 25,000 ರುಪಾಯಿ ಒಳಗಿನ ಫೋನ್ ಗಳಲ್ಲೇ ಲಭ್ಯವಾಗಿ ಬಿಡುತ್ತದೆ.ಅಂತಹ ಕೆಲವು ಟಾಪ್ ಡಿವೈಸ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ರಿಯಲ್ ಮಿ 5 ಪ್ರೋ (ರುಪಾಯಿ 13,999 ರ ನಂತರ):
48 ಮೆಗಾಪಿಕ್ಸಲ್ ನ ಕ್ವಾಡ್ ಕ್ಯಾಮರಾ ಸೆಟ್ ಅಪ್ ನ್ನು 15,000 ರುಪಾಯಿ ಒಳಗೆ ಆಫರ್ ಮಾಡುವ ಏಕೈಕ ಮೊಬೈಲ್. 48ಎಂಪಿ ಕ್ವಾಡ್ ಕ್ಯಾಮರಾ ಸೆಟ್ ಅಪ್ ನಲ್ಲಿ ಲಭ್ಯವಿರುವ ಕೈಗೆಟುಕುವ ಬೆಲೆಯ ಸ್ಮಾರ್ಟ್ ಫೋನ್ ಇದು. ಇತ್ತೀಚೆಗೆ ಬಿಡುಗಡೆಗೊಂಡಿರುವ ರಿಯಲ್ ಮಿ 5 ಪ್ರೋ 4GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯದ್ದು ರುಪಾಯಿ 13,999 ಕ್ಕೆ ಲಭ್ಯವಾಗುತ್ತದೆ. ಇನ್ನು 6GB RAM/64GB ಸ್ಟೋರೇಜ್ ಮತ್ತು 8GB RAM/128GB ಸ್ಟೋರೇಜ್ ಆಯ್ಕೆಯ ಫೋನ್ ಗಳು ಕ್ರಮವಾಗಿ ರುಪಾಯಿ 14,999 ಮತ್ತು ರುಪಾಯಿ 16,999 ಗೆ ಸಿಗುತ್ತದೆ. ವೈಶಿಷ್ಟ್ಯತೆಗಳ ವಿಚಾರಕ್ಕೆ ಬಂದರೆ ಇದು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 712 ಪ್ರೊಸೆಸರ್ ನ್ನು ಹೊಂದಿದೆ ಮತ್ತು 6.3-ಇಂಚಿನ ಫುಲ್ HD+ಡಿಸ್ಪ್ಲೇಯನ್ನು ಒಳಗೊಂಡಿದೆ.

ರಿಯಲ್ ಮಿ ಎಕ್ಸ್ (ರುಪಾಯಿ 16,999 ರ ನಂತರ):
ಈ ಬೆಲೆಯಲ್ಲಿ ಲಭ್ಯವಾಗುವ ಅತ್ಯಂತ ಅಧ್ಬುತ ಕ್ಯಾಮರಾ ಹೊಂದಿರುವ ಫೋನ್. ಎರಡು ವೇರಿಯಂಟ್ ನಲ್ಲಿ ಇದು ಲಭ್ಯವಾಗುತ್ತದೆ. 4GB RAM/128GB ಸ್ಟೋರೇಜ್ ಮತ್ತು 8GB RAM/128GB ಸ್ಟೋರೇಜ್ (19,999). ರಿಯಲ್ ಮಿ ಎಕ್ಸ್ 6.5-ಇಂಚಿನ ಫುಲ್ HD+ ಡಿಸ್ಪ್ಲೇ ಹೊಂದಿದೆ ಮತ್ತು ಡುಯಲ್ ಹಿಂಭಾಗದ ಕ್ಯಾಮರಾ ಸೆಟ್ ಅಪ್ ನ್ನು ಒಳಗೊಂಡಿದ್ದು 48MP + 5MP ಮತ್ತು 16MP ಪಾಪ್ ಅಪ್ ಮುಂಭಾಗದ ಕ್ಯಾಮರಾವನ್ನು ಒಳಗೊಂಡಿದೆ.

ಒಪ್ಪೋ ಕೆ3 (ರುಪಾಯಿ 16,990 ರ ನಂತರ):
ಉತ್ತಮ ಕ್ಯಾಮರಾದ ಜೊತೆಗೆ VOOC ಫಾಸ್ಟ್ ಚಾರ್ಜಿಂಗ್ ನ್ನು ಈ ಫೋನ್ ಆಫರ್ ಮಾಡುತ್ತದೆ.ಇತ್ತೀಚೆಗೆ ಬಿಡುಗಡೆಗೊಂಡಿರುವ ಒಪ್ಪೋ ಕೆ3 ಹೆಚ್ಚು ಕಡಿಮೆ ರಿಯಲ್ ಮಿ ಎಕ್ಸ್ ನಂತೆಯೇ ಇದ್ದು ಇದರ ಬೆಲೆ 16,990 ರುಪಾಯಿಗಳು. ಒಪ್ಪೋ ಕೆ3ಯಲ್ಲಿ ಪಾಪ್ ಅಪ್ ಸೆಲ್ಫೀ ಕ್ಯಾಮರಾ (16ಎಂಪಿ) ಮತ್ತು ಆಕರ್ಷಕ ಹಿಂಭಾಗದ ಕ್ಯಾಮರಾ (16MP + 2MP ಡುಯಲ್ ಸೆಟ್ ಅಪ್) ನ್ನು ಹೊಂದಿದೆ. ಉತ್ತಮ ಬ್ಯಾಟರಿ ಲೈಫ್ ನೀಡುವ ಈ ಫೋನ್ VOOC ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ. 6.5-ಇಂಚಿನ AMOLED ಫುಲ್ HD+ ಡಿಸ್ಪ್ಲೇ ಮತ್ತು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 710 ಪ್ರೊಸೆಸರ್ ನ್ನು ಒಳಗೊಂಡಿದೆ.

ವಿವೋ Z1 ಪ್ರೋ (ರುಪಾಯಿ 14,990 ರ ನಂತರ):
ಕೈಗೆಟುಕುವ ಬೆಲೆಯಲ್ಲಿ ಪ್ರೀಮಿಯಂ ಟಚ್ ನ್ನು ಆಫರ್ ಮಾಡುತ್ತದೆ.ಇದರ ಆರಂಭಿಕ ಬೆಲೆ ರುಪಾಯಿ 14,990. ಇದು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 712 ಚಿಪ್ ಸೆಟ್ ನ್ನು ಹೊಂದಿದೆ. 6.5-ಇಂಚಿನ ಫುಲ್ HD+ಡಿಸ್ಪ್ಲೇ ಮತ್ತು 5000mAh ನ ಬ್ಯಾಟರಿಯನ್ನು ಒಳಗೊಂಡಿದೆ. Z1 ಪ್ರೋ 6GB RAM ವೇರಿಯಂಟ್ ಗೆ 17,990 ರುಪಾಯಿಗಳು.

ಶಿಯೋಮಿ ಪೋಕೋ ಎಫ್1 (ರುಪಾಯಿ 17,990 ರ ನಂತರ):
ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್ ನ್ನು ನ್ನು ಹೊಂದಿರುವ ಕೈಗೆಟುಕುವ ಬೆಲೆಯ ಸ್ಮಾರ್ಟ್ ಫೋನ್ ಇದಾಗಿದೆ. ಕ್ವಾಲ್ಕಂ 2018 ಫ್ಲ್ಯಾಗ್ ಶಿಪ್ ಪ್ರೊಸೆಸರ್ ನಲ್ಲಿ ರನ್ ಆಗುವ ಅತೀ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಇದಾಗಿದೆ.ಶಿಯೋಮಿ ಪೋಕೋ ಎಫ್ 1 6.2-ಇಂಚಿನ FHD+ಡಿಸ್ಪ್ಲೇ ಹೊಂದಿದ್ದು ಹಿಂಭಾಗದಲ್ಲಿ 12MP + 5MP ಮತ್ತು 20MP ಮುಂಭಾಗದ ಕ್ಯಾಮರಾ ಹೊಂದಿದೆ.

ಮೊಟೊರೊಲಾ ಒನ್ ಆಕ್ಷನ್ (ರುಪಾಯಿ 13,999):
ಆಕ್ಷನ್ ಕ್ಯಾಮರಾ-ಲೈಕ್ ಫೀಚರ್ ನ್ನು ಆಫರ್ ಮಾಡುವ ವಿಶ್ವದ ಏಕೈಕ ಸ್ಮಾರ್ಟ್ ಫೋನ್ ಎಂದರೆ ಅದು ಮೊಟೋರೊಲಾ. ಗೂಗಲ್ ನ ಆಂಡ್ರಾಯ್ಡ್ ಒನ್ ಪ್ರೊಜೆಕ್ಟ್ ನ ಭಾಗವಾಗಿ ರುಪಾಯಿ 13,999 ಕ್ಕೆ ಇದು ಬಿಡುಗಡೆಗೊಂಡಿತ್ತು. ಕಳೆದೆರಡು ವರ್ಷಗಳಿಂದ ನಿರಂತರವಾಗಿ ಆಂಡ್ರಾಯ್ಡ್ ಅಪ್ ಡೇಟ್ ನ್ನು ಇದು ಸ್ವೀಕರಿಸುತ್ತಿದೆ. ಇದು 6.3-ಇಂಚಿನ ಫುಲ್ HD+ ಡಿಸ್ಪ್ಲೇ ಜೊತೆಗೆ 21:9 ಅನುಪಾತವನ್ನು ಹೊಂದಿದೆ ಮತ್ತು ಟ್ರಿಪಲ್ ಹಿಂಭಾಗದ ಸೆಟ್ ಅಪ್ ಹೊಂದಿದೆ ಪ್ರೈಮರಿ ಸೆನ್ಸರ್ 12MP + 16MP ಅಲ್ಟ್ರಾ ವೈಡ್ ವೀಡಿಯೋ ಕ್ಯಾಮರಾ + 5MP ಡೆಪ್ತ್ ಸೆನ್ಸರ್ ನ್ನು ಒಳಗೊಂಡಿದೆ.

ಆಪಲ್ ಐಫೋನ್ 6ಎಸ್(ರುಪಾಯಿ 28,999):
ಅತ್ಯಂತ ಕಡಿಮೆ ಬೆಲೆಯ ಐಫೋನ್ ಇದಾಗಿದೆ. ನೂತನ ಐಓಎಸ್ ವರ್ಷನ್ ನಲ್ಲಿ ರನ್ ಆಗುತ್ತದೆ ಮತ್ತು ಇನ್ನೂ ಎರಡು ಓಎಸ್ ಅಪ್ ಡೇಟ್ ಲಭ್ಯವಾಗುತ್ತದೆ. 30,000 ರುಪಾಯಿ ಒಳಗೆ ಸಿಗುವ ಆಪಲ್ ಅಭಿಮಾನಿಗಳಿಗಾಗಿ ಇರುವ ಫೋನ್ ಇದು. ಎಸ್ ಬಿಐ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿದಾರರು 7,500 ರುಪಾಯಿ ವರೆಗೆ ರಿಯಾಯಿತಿ ಪಡೆದುಕೊಳ್ಳಬಹುದು. ಇದು ಸದ್ಯದ ಜನರೇಷನ್ನಿನ ಐಫೋನ್ ಆಗಿದ್ದು ಐಫೋನ್ ಎಕ್ಸ್ಆರ್, ಐಫೋನ್ ಎಕ್ಸ್ಎಸ್ ಮತ್ತು ಐಫೋನ್ ಎಕ್ಸ್ಎಸ್ ಮ್ಯಾಕ್ಸ್ ನಲ್ಲಿರುವಂತಹ ಐಓಎಸ್ ನ್ನೇ ಇದು ಹೊಂದಿದೆ.

ಎಲ್ ಜಿ ಜಿ7 ThinQ (ರುಪಾಯಿ 24,850 ರ ನಂತರ):
ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್ ನಲ್ಲಿ ರನ್ ಆಗುತ್ತದೆ ಮತ್ತು ಯೂನಿಕ್ ಫೀಚರ್ ಆಡಿಯೋ ಫೀಚರ್ ನ್ನು ಇದು ನೀಡುತ್ತದೆ. ಕಳೆದ ವರ್ಷದ ಎಲ್ ಜಿ ಯಿಂದ ಬಿಡುಗಡೆಗೊಂಡ ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ ಇದಾಗಿದ್ದು 24,850 ರುಪಾಯಿಗೆ ಲಭ್ಯವಾಗುತ್ತದೆ. ಇದರ ನೈಜ ಬೆಲೆ ರುಪಾಯಿ 25,150. ಕೆಲವು ಯೂನಿಕ್ ಆಡಿಯೋ ಫೀಚರ್ ಗಳು ಈ ಫೋನಿಲ್ಲಿದ್ದು 6.1-ಇಂಚಿನ QHD+ ಡಿಸ್ಪ್ಲೇ ಮತ್ತು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್ ನ್ನು ಹೊಂದಿದೆ. ಡುಯಲ್ ಹಿಂಭಾಗದ ಕ್ಯಾಮರಾ ಸೆಟ್ ಅಪ್ ಇದ್ದು 16MP + 16MP ಮತ್ತು 8MP ಮುಂಭಾಗದ ಕ್ಯಾಮರಾವನ್ನು ಹೊಂದಿದೆ.

ಆಸೂಸ್ ಝೆನ್ ಫೋನ್ 5ಝಡ್ (ರುಪಾಯಿ 23,999 ರ ನಂತರ):
ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್ ನಲ್ಲಿ ರನ್ ಆಗುವ ನಿಯರ್-ಸ್ಟಾಕ್ ಆಂಡ್ರಾಯ್ಡ್ ಅನುಭವವನ್ನು ಈ ಬೆಲೆಯಲ್ಲಿ ನೀಡುವ ಏಕೈಕ ಫೋನ್ ಇದು. ಪವರ್ ಫುಲ್ ಆಗಿರುವ ಪ್ರೊಸೆಸರ್ ನ್ನು ಹೊಂದಿದ್ದು ಬಿಡುಗಡೆಗೊಂಡಾಗ ಇದರ ಬೆಲೆ 36,999. ಇದೀಗ ಆಫರ್ ಬೆಲೆಯಲ್ಲಿ ಅಂದರೆ 23,999 ಕ್ಕೆ ಖರೀದಿಸಬಹುದು.ಆದರೆ ಇದು ಸೀಮಿತ ಅವಧಿಯ ಆಫರ್ ಆಗಿರುತ್ತದೆ. ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್ ನಲ್ಲಿ ರನ್ ಆಗುತ್ತದೆ. 6.2-ಇಂಚಿನ FHD+ಡಿಸ್ಪ್ಲೇ ಮತ್ತು 3300mAh ಬ್ಯಾಟರಿಯನ್ನು ಹೊಂದಿದೆ.ಡುಯಲ್ ಹಿಂಭಾಗದ ಕ್ಯಾಮರಾ ಸೆಟ್ ಅಪ್ 12MP + 8MP ಯನ್ನು ಹೊಂದಿದೆ. ಮುಂಭಾಗದಲ್ಲಿ 8MP ಸೆನ್ಸರ್ ಇದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ50 (ರುಪಾಯಿ 18,490 ರ ನಂತರ):
20,000ದ ಒಳಗೆ ಲಭ್ಯವಾಗುವ ಬೆಸ್ಟ್ ಸ್ಯಾಮ್ ಸಂಗ್ ಡಿವೈಸ್ ಇದಾಗಿದೆ. ಯಾರು ಚೀನಾ ಫೋನ್ ಗಳನ್ನು ಖರೀದಿಸುವುದಕ್ಕೆ ಇಷ್ಟಪಡುವುದಿಲ್ಲವೋ ಅಂತವರಿಗೆ ಗ್ಯಾಲಕ್ಸಿ ಎ50 ಬೆಸ್ಟ್ ಆಯ್ಕೆ. ಇದು Exynos 9610 ಪ್ರೊಸೆಸರ್ ನ್ನು ಹೊಂದಿದೆ. 6.4-ಇಂಚಿನ FHD+ ಸ್ಕ್ರೀನ್ ಡಿಸ್ಪ್ಲೇ ಒಳಗೊಂಡಿದೆ. ಟ್ರಿಪಲ್ ಕ್ಯಾಮರಾ ಸೆಟ್ ಅಪ್ 25MP + 5MP + 8MP ಮತ್ತು 25MP ಮುಂಭಾಗದ ಕ್ಯಾಮರಾವಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ40 (ರುಪಾಯಿ 19,990):
ಪಂಚ್ ಹೋಲ್ ಕ್ಯಾಮರಾವಿರುವ ಏಕೈಕ ಫೋನ್ ಇದು. ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ40 ಪಂಚ್ ಹೋಲ್ ಡಿಸ್ಪ್ಲೇಯನ್ನು ಒಳಗೊಂಡಿದೆ. ಕಂಪನೆಯ ನೂತನ ಫ್ಲ್ಯಾಗ್ ಶಿಪ್ ಗ್ಯಾಲಕ್ಸಿ ನೋಟ್ 10 ನಂತೆಯೇ ಇದೆ. 19,990 ರುಪಾಯಿಗೆ ಲಭ್ಯವಿರುವ ಈ ಫೋನ್ 16MP ಮುಂಭಾಗದ ಕ್ಯಾಮರಾ ಜೊತೆಗೆ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮರಾ ಸೆಟ್ ಅಪ್ 32MP + 8MP + 5MPಯನ್ನು ಹೊಂದಿದೆ. ಭಾರತದಲ್ಲಿ ಲಭ್ಯವಿರುವ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ ಪ್ರೊಸೆಸರ್ ನ್ನು ಹೊಂದಿರುವ ಕೆಲವೇ ಕೆಲವು ಫೋನ್ ಗಳಲ್ಲಿ ಇದೂ ಕೂಡ ಒಂದು. ಆಂಡ್ರಾಯ್ಡ್ ಪೈ 9.0 ಆಪರೇಟಿಂಗ್ ಸಿಸ್ಟಮ್ ನಲ್ಲಿ ರನ್ ಆಗುತ್ತದೆ.

ನೋಕಿಯಾ 8.1 (ರುಪಾಯಿ 18,890ರ ನಂತರ):
ಅತ್ಯಂತ ಸುಂದರವಾಗಿರುವ ಡಿವೈಸ್ ಗಳಲ್ಲಿ ಇದೂ ಕೂಡ ಒಂದಾಗಿದ್ದು ನಿರಂತರ ಅಪ್ ಡೇಟ್ ಗಳನ್ನು ಕಳೆದೆರಡು ವರ್ಷಗಳಿಂದ ಇದು ಪಡೆಯುತ್ತಿದೆ. 28,831 ರುಪಾಯಿ ಬೆಲೆಗೆ ಬಿಡುಗಡೆಗೊಂಡಿದ್ದ ಈ ಫೋನ್ 6.2- ಇಂಚಿನ ಫುಲ್ HD+ ಡಿಸ್ಪ್ಲೇಯನ್ನು ಹೊಂದಿದೆ. ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 710 ಪ್ರೊಸೆಸರ್ ನಲ್ಲಿ ರನ್ ಆಗುತ್ತದೆ. 3500mAh ಬ್ಯಾಟರಿ ಸಾಮರ್ಥ್ಯವನ್ನು ಇದು ಹೊಂದಿದೆ.

ಹುವಾಯಿ ವೈ9 ಪ್ರೈಮ್ 2019 (ರುಪಾಯಿ 15,990 ರ ನಂತರ):
ಅತ್ಯಂತ ಕಡಿಮೆ ಬೆಲೆಯ ಪಾಪ್ ಅಪ್ ಸೆಲ್ಫೀ ಕ್ಯಾಮರಾ ಇದಾಗಿದೆ. ಸದ್ಯ 15,990 ರುಪಾಯಿಗೆ ಈ ಫೋನ್ ನ್ನು ಖರೀದಿಸಬಹುದು. ಟ್ರಿಪಲ್ ಹಿಂಭಾಗದ ಕ್ಯಾಮರಾ ವ್ಯವಸ್ಥೆಯನ್ನು 16MP+8MP+2MP ಯನ್ನು ಇದು ಹೊಂದಿದೆ. ಕಂಪೆನಿಯ ಸ್ವಂತ Kirin 710 ಪ್ರೊಸೆಸರ್ ನಲ್ಲಿ ರನ್ ಆಗುತ್ತದೆ. 4000mAh ನ ಬ್ಯಾಟರಿ ಕೆಪಾಸಿಟಿಯನ್ನು ಈ ಫೋನ್ ಹೊಂದಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470