ವಯರ್ ಲೆಸ್ ಸ್ಮಾರ್ಟ್ ಫೋನ್ ಖರೀದಿಸುವುದಾದರೆ ಇವುಗಳನ್ನೇ ಕೊಂಡುಕೊಳ್ಳಿ

By Gizbot Bureau
|

ನಾವು ಬದುಕುತ್ತಿರುವ ಜೀವನ ಶೈಲಿಗೆ ಹೊಂದಿಕೆಯಾಗುವಂತೆ ತಂತ್ರಜ್ಞಾನವೂ ಕೂಡ ಆಧುನಿಕವಾಗುತ್ತಿದೆ. ವಸ್ತುಗಳ ತಯಾರಿಕಾ ಸಂಸ್ಥೆಗಳು ಕೂಡ ಇದಕ್ಕೆ ಹೊಂದಿಕೆಯಾಗುವಂತಹ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ಅದಕ್ಕೆ ಸ್ಮಾರ್ಟ್ ಫೋನ್ ಗಳ ದುನಿಯಾ ಕೂಡ ಹೊರತಾಗಿಲ್ಲ. ಡಿಸ್ಪ್ಲೇ, ಕ್ಯಾಮರಾ ಅಥವಾ ಪ್ರೊಸೆಸರ್ ಸೇರಿದಂತೆ ಎಲ್ಲವೂ ಕೂಡ ಆಧುನಿಕವಾಗುತ್ತಿದೆ.ಫೋನಿನಲ್ಲಿರುವ ಪ್ರತಿಯೊಂದು ಹಾರ್ಡ್ ವೇರ್ ಗೂ ಕೂಡ ತನ್ನದೇ ಆದ ವಿಶೇಷ ಗುಣಗಳಿದ್ದು ಅವುಗಳು ತಮ್ಮದೇ ರೀತಿಯ ವಿಭಿನ್ನ ಕೆಲಸಗಳಿಗೆ ಅನುಕೂಲ ಮಾಡಿಕೊಡುತ್ತದೆ. ಅದರಲ್ಲಿ ಬ್ಯಾಟರಿಗಳು ಕೂಡ ಸೇರಿವೆ.

ವಯರ್ ಲೆಸ್ ಚಾರ್ಜಿಂಗ್

ಸದ್ಯ ಪ್ರತಿಯೊಬ್ಬರೂ ಕೂಡ ಹೆಚ್ಚು ಅವಧಿಗೆ ಚಾರ್ಚ್ ಉಳಿಯುವ ಬ್ಯಾಟರಿ ವ್ಯವಸ್ಥೆಯನ್ನು ಬಯಸುತ್ತಾರೆ. ತಮ್ಮ ಸ್ಮಾರ್ಟ್ ಫೋನ್ ಹೆಚ್ಚು ಕಾಲ ಕಾರ್ಯ ನಿರ್ವಹಿಸಬೇಕು ಎಂದು ಇಚ್ಛಿಸುತ್ತಾರೆ. ಹಾಗಾಗಿ ಸ್ಮಾರ್ಟ್ ಫೋನ್ ತಯಾರಕರು ಕೂಡ ದೊಡ್ಡ ದೊಡ್ಡ ಬ್ಯಾಟರಿ ವ್ಯವಸ್ಥೆಯನ್ನು ಸ್ಮಾರ್ಟ್ ಫೋನ್ ಗಳಲ್ಲಿ ಅಳವಡಿಸುತ್ತಿದ್ದಾರೆ.

ಫಾಸ್ಟ್ ಚಾರ್ಜಿಂಗ್, ವಯರ್ ಲೆಸ್ ಚಾರ್ಜಿಂಗ್ ತಂತ್ರಗಾರಿಕೆಯನ್ನು ಜನರು ಬಯಸುತ್ತಿದ್ದಾರೆ. ಯಾವುದೇ ಚಾರ್ಜರ್ ಗೆ ಪ್ಲಗ್ ಇನ್ ಮಾಡದೆಯೂ ಕೂಡ ಬ್ಯಾಟರಿ ಚಾರ್ಜ್ ಮಾಡಿಕೊಳ್ಳುವುದಕ್ಕೆ ಈ ವಯರ್ ಲೆಸ್ ಚಾರ್ಜಿಂಗ್ ನಿಮಗೆ ಅನುಕೂಲ ಮಾಡಿಕೊಡುತ್ತದೆ. ಈ ರೀತಿಯ ವಯರ್ ಲೆಸ್ ಚಾರ್ಜಿಂಗ್ ವ್ಯವಸ್ಥೆ ಹೊಂದಿರುವ ಅನೇಕ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ.

ಆದರೆ ಭಾರತದಲ್ಲಿ 30,000 ರುಪಾಯಿ ಒಳಗೆ ವಯರ್ ಲೆಸ್ ಚಾರ್ಜಿಂಗ್ ಗೆ ಬೆಂಬಲ ನೀಡುವ ಕೆಲವೇ ಕೆಲವು ಸ್ಮಾರ್ಟ್ ಫೋನ್ ಗಳನ್ನು ಖರೀದಿಸುವುದಕ್ಕೆ ಅವಕಾಶವಿರುತ್ತದೆ. ಒಂದು ವೇಳೆ ನೀವೂ ಕೂಡ ಅಂತಹ ಡಿವೈಸ್ ಗಳನ್ನು ಬಯಸುತ್ತಿದ್ದಲ್ಲಿ ಈ ಕೆಳಗಿನವುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.

ಎಲ್ ಜಿ ವಿ40 ThinQ

ಎಲ್ ಜಿ ವಿ40 ThinQ

MRP: Rs. 28,990

ಪ್ರಮುಖ ವೈಶಿಷ್ಟ್ಯತೆಗಳು

• 6.4-ಇಂಚಿನ (3120 x 1440 ಪಿಕ್ಸಲ್ಸ್) 19.5:9 ಫುಲ್ ವಿಷನ್ OLED ಡಿಸ್ಪ್ಲೇ

• ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 630 GPU

• 6GB LPDDR4x RAM, 128GB (UFS 2.1) ಸ್ಟೋರೇಜ್, 2ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ LG UX, ಆಂಡ್ರಾಯ್ಡ್ 9.0(ಪೈ) ಗೆ ಅಪ್ ಗ್ರೇಡ್ ಆಗಲಿದೆ

• 12MP ಹಿಂಭಾಗದ ಕ್ಯಾಮರಾ + 16MP ಸೂಪರ್ ವೈಡ್ ಕ್ಯಾಮರಾ + 12MP ಹಿಂಭಾಗದ ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ + ಸೆಕೆಂಡರಿ 5MP ಕ್ಯಾಮರಾ

• ಫಿಂಗರ್ ಪ್ರಿಂಟ್ ಸೆನ್ಸರ್

• 4ಜಿ ವೋಲ್ಟ್

• 3,300mAh ಬ್ಯಾಟರಿ ಜೊತೆಗೆ ಕ್ವಾಲ್ಕಂ ಕ್ವಿಕ್ ಚಾರ್ಜ್ 3.0

ಎಲ್ ಜಿ ಜಿ7 ಪ್ಲಸ್ ThinQ

ಎಲ್ ಜಿ ಜಿ7 ಪ್ಲಸ್ ThinQ

MRP: Rs. 27,990

ಪ್ರಮುಖ ವೈಶಿಷ್ಟ್ಯತೆಗಳು

• 6.1-ಇಂಚಿನ (3120 x 1440 ಪಿಕ್ಸಲ್ಸ್) 19.5:9 ಫುಲ್ ವಿಷನ್ ಸೂಪರ್ ಬ್ರೈಟ್ IPS ಡಿಸ್ಪ್ಲೇ

• ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 630 GPU

• 6GB LPDDR4x RAM, 128GB ಸ್ಟೋರೇಜ್ (UFS 2.1)

• 2ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 8.0 (ಓರಿಯೋ) ಜೊತೆಗೆ LG UX

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 16MP ಹಿಂಭಾಗದ ಕ್ಯಾಮರಾ + ಸೆಕೆಂಡರಿ 16MP ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ

• 4ಜಿ ವೋಲ್ಟ್

• 3000mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9 ಪ್ಲಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9 ಪ್ಲಸ್

MRP: Rs. 29,999

ಪ್ರಮುಖ ವೈಶಿಷ್ಟ್ಯತೆಗಳು

• 6.2 ಇಂಚಿನ QHD+ ಸೂಪರ್ AMOLED ಡಿಸ್ಪ್ಲೇ

• ಆಕ್ಟಾ ಕೋರ್ Exynos 9810/ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್

• 6GB RAM ಜೊತೆಗೆ 64/128/256GB ROM

• ವೈಫೈ

• NFC

• ಬ್ಲೂಟೂತ್

• ಡುಯಲ್ ಸಿಮ್

• ಡುಯಲ್ ಪಿಕ್ಸಲ್ 12MP ಹಿಂಭಾಗದ ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ

• ಐರಿಸ್ ಸೆನ್ಸರ್

• 3500 MAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9

MRP: Rs. 26,999

ಪ್ರಮುಖ ವೈಶಿಷ್ಟ್ಯತೆಗಳು

• 5.8 ಇಂಚಿನ QHD+ ಸೂಪರ್ AMOLED ಡಿಸ್ಪ್ಲೇ

• ಆಕ್ಟಾ ಕೋರ್ Exynos 9810/ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್

• 4GB RAM ಜೊತೆಗೆ 64/128/256GB ROM

• ವೈಫೈ

• NFC

• ಬ್ಲೂಟೂತ್

• ಡುಯಲ್ ಸಿಮ್

• ಡುಯಲ್ ಪಿಕ್ಸಲ್ 12MP ಹಿಂಭಾಗದ ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ

• ಐರಿಸ್ ಸ್ಕ್ಯಾನರ್

• ಫಿಂಗರ್ ಪ್ರಿಂಟ್

• IP68

• 3000 MAh ಬ್ಯಾಟರಿ

ಎಲ್ ಜಿ ವಿ30 ಫ್ಲಸ್

ಎಲ್ ಜಿ ವಿ30 ಫ್ಲಸ್

MRP: Rs. 24,999

ಪ್ರಮುಖ ವೈಶಿಷ್ಟ್ಯತೆಗಳು

• 6-ಇಂಚಿನ (2880 x 1440 ಪಿಕ್ಸಲ್ಸ್) QHD+ OLED ಡಿಸ್ಪ್ಲೇ ಜೊತೆಗೆ 18:9 ಆಸ್ಪೆಕ್ಟ್ ಅನುಪಾತ, 538 PPI, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್

• ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 835 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 540 GPU

• 4GB LPDDR4x RAM, 128GB (UFS 2.0) ಇಂಟರ್ನಲ್ ಮೆಮೊರಿ

• 2ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 7.1.2 (ನಾಗಟ್) ಜೊತೆಗೆ LG UX 6.0+, ಆಂಡ್ರಾಯ್ಡ್ 8.0 (ಓರಿಯೋ)ಗೆ ಅಪ್ ಗ್ರೇಡ್ ಆಗಲಿದೆ

• ಹೈಬ್ರಿಡ್ ಡುಯಲ್ ಸಿಮ್

• 16MP ಹಿಂಭಾಗದ ಕ್ಯಾಮರಾ + 13MP ಸೆಕೆಂಡರಿ ಕ್ಯಾಮರಾ

• 5MP ಮುಂಭಾಗದ ಕ್ಯಾಮರಾ

• 4ಜಿ ವೋಲ್ಟ್

• 3,300mAh ಬ್ಯಾಟರಿ

Best Mobiles in India

English summary
There a number of smartphones those have been launched with support for wireless charging. But, only a handful of them can be purchased in India under Rs. 30,000 price tag. If you have been looking for one such device, then this article will help you select one; let's take a look.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X