ಬ್ರ್ಯಾಂಡ್ ಮಾತ್ರ ಸಾಲದು ಫೋನಿನ ಕಲ್ಲರೂ ಮುಖ್ಯ!

|

ಯಾವುದೇ ಎಲೆಕ್ಟ್ರಾನಿಕ್ ವಸ್ತುವನ್ನು ಅದರ ವೈಶಿಷ್ಟ್ಯತೆಗಳಿಂದ ಮಾತ್ರವಲ್ಲ ಬದಲಾಗಿ ಅದರ ಡಿಸೈನ್ ಮತ್ತು ಕಲರ್ ನ್ನು ನೋಡಿ ಖರೀದಿಸುವುದಕ್ಕೆ ಒಬ್ಬ ಗ್ರಾಹಕ ಆಲೋಚಿಸುತ್ತಾನೆ. ಕೆಲವರು ಇದನ್ನು ಒಪ್ಪಿಕೊಳ್ಳದೇ ಇರಬಹುದು. ಆದರೆ ಇದು ಮಾರ್ಕೆಟಿಂಗ್ ವಿಚಾರದಲ್ಲಿ ಸತ್ಯದ ವಿಚಾರವೇ ಆಗಿದೆ. ಫೋನಿನ ವಿಚಾರಕ್ಕೆ ಬಂದರೆ ಕೂಡ ಈ ಡಿಸೈನ್ ಮತ್ತು ಕಲರ್ ಇತ್ತೀಚೆಗೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ.

ಬ್ರ್ಯಾಂಡ್ ಮಾತ್ರ ಸಾಲದು ಫೋನಿನ ಕಲ್ಲರೂ ಮುಖ್ಯ!

ಗ್ಯಾಲಕ್ಸಿ ಎಸ್10 ನ ಬಣ್ಣ ಕ್ಯಾನರಿ ಹಳದಿ ಮತ್ತು ಫ್ಲಮ್ಮಿಂಗೋ ಪಿಂಕ್. ಫೋಲ್ಡೇಬಲ್ ಆಗಿರುವ ಗ್ಯಾಲಕ್ಸಿ ಫೋಲ್ಡ್ ಮಾರ್ಟಿನ್ ಹಸಿರು ವರ್ಣದ್ದು. ಒನ್ ಪ್ಲಸ್ 6ಟಿ ಥಂಡರ್ ಪರ್ಪಲ್( ನೇರಳೆ) ಬಣ್ಣದಲ್ಲಿ ಸಿಗುತ್ತದೆ. ಹೀಗೆ ಈ ಪಟ್ಟಿ ಮುಂದುವರಿಯುತ್ತಲೇ ಸಾಗುತ್ತದೆ. ಎಲ್ಲಾ ತಜ್ಞರು ಖರೀದಿದಾರರು ಫೋನಿನ ಕ್ಯಾಮರಾ, ಬ್ಯಾಟರಿ ಮತ್ತು ಸ್ಕ್ರೀನ್ ನೋಡಿ ಖರೀದಿಸುತ್ತಾರೆ ಎಂದು ಅಭಿಪ್ರಾಯ ಪಡುತ್ತಾರೆ. ಆದರೆ ವಸ್ತುವಿನ ತಯಾರಕ ಮತ್ತು ಮಾರ್ಕೆಟ್ ಮಾಡುವ ವ್ಯಕ್ತಿ ವಸ್ತುವಿನ ಬಣ್ಣ ಮತ್ತು ಅದರ ಫಿನಿಶಿಂಗ್ ವರ್ಕ್ ಕೂಡ ಮ್ಯಾಟರ್ ಆಗುತ್ತದೆ ಎಂದು ತಿಳಿಸುತ್ತಾರೆ.

ಒಮ್ಮೆ ಯೋಚಿಸಿ ನೋಡಿ ಫೋನಿನ ಬಣ್ಣ ಒಂದು ವಿಚಾರವೇ ಆಗಿಲ್ಲದೇ ಇದ್ದಲ್ಲಿ ಯಾಕೆ ಕೇವಲ ಬಿಳಿ, ಕಪ್ಪು, ನೀಲಿಯ ಬದಲಾಗಿ ಆಕರ್ಷಕ ಹೆಸರುಗಳು ಉದಾಹರಣೆಗೆ ಜೆಟ್ ಬ್ಲಾಕ್, ಫಾಂಟಮ್ ಬ್ಲೂ ಮತ್ತು ಪ್ರಿಸ್ಮ್ ವೈಟ್ ಎಂದೆಲ್ಲಾ ಇರುತ್ತಿದ್ದವು?

ಬಣ್ಣ ಯಾವಾಗಲೂ ಕೂಡ ಒಂದು ವಿಷುವಲ್ ಎಲಿಮೆಂಟ್ ಆಗಿರುತ್ತದೆ ಎಂದು ಹೇಳುತ್ತಾರೆ ವಾರ್ಟನ್ ಸ್ಕೂಲ್ ನಲ್ಲಿ ಮಾರ್ಕೆಟಿಂಗ್ ಪ್ರೊಫೆಸರ್ ಆಗಿರುವ ಬಾರ್ಬರಾ ಖಾನ್.

ಬಣ್ಣವು ನಮ್ಮ ಜೀವನಕ್ಕೆ ಖುಷಿಯನ್ನು ನೀಡುತ್ತದೆ. ನಾಟ್-ಪಿಂಕ್ ಕಲ್ಲರಿನ ಪಿಕ್ಸಲ್ 3 ಫೋನ್ ತಯಾರಿಕೆಯಲ್ಲಿ ಸಹಾಯ ಮಾಡಿದ ತಂಡದ ಮುಖ್ಯಸ್ಥ ಹೇಳಿದ ಮಾತಿದು.

ಈ ತತ್ವಕ್ಕೆ ಆಪಲ್ ಫೋನ್ ಗಳು ಕೂಡ ಬದ್ಧವಾಗಿದೆ. ಕಳೆದ ಹಲವು ವರ್ಷಗಳಿಂದ ಪ್ರಮುಖ ಆಪಲ್ ಫೋನ್ ಗಳ ಬಣ್ಣ ಬಿಳಿ, ಚಿನ್ನದ ವರ್ಣ, ರೋಸ್ ಗೋಲ್ಡ್, ಜೆಟ್ ಬ್ಲಾಕ್ ಬಣ್ಣಗಳಲ್ಲೇ ಇವೆ. ಕಡಿಮೆ ಬೆಲೆಯ ಫೋನ್ ಗಳಾದ ಐಫೋನ್ಎಕ್ಸ್ ಆರ್ ಮತ್ತು ಐಫೋನ್ 5ಸಿ ಬೋಲ್ಡ್ ಬ್ಲೂ ಮತ್ತು ಕೋರಲ್ ವರ್ಣಗಳ ಆಯ್ಕೆ ಇದ್ದವು. ಒಂದೇ ಒಂದು ಸ್ಪೆಷಲ್ ಎಡಿಷನ್ ಫೋನ್ ರೆಡ್ ಐಫೋನ್ ಲಭ್ಯವಾಗಿತ್ತು.

ಗಾಢ ಬಣ್ಣದ ವಿಭಿನ್ನ ಬಣ್ಣದ ಆಯ್ಕೆಯ ಫೋನ್ ಖರೀದಿಯು ವ್ಯಕ್ತಿಯು ಹೊಸ ಟ್ರೆಂಡ್ ನ್ನು ಅನುಸರಿಸುತ್ತಾನೆ ಎಂಬುದನ್ನು ತೋರಿಸುತ್ತದೆ. ಹಾಗಾಗಿ ಕೆಲವು ಮಂದಿ ಇದರ ಖರೀದಿಗೆ ಮುಂದಾಗುತ್ತಾರೆ.

ವಿಭಿನ್ನ ಕಲರ್ ಗಳ ಫೋನ್ ಗಳು ಹೆಚ್ಚಾಗಿ ಮಹಿಳೆಯರನ್ನು ಮತ್ತು ಯುವಜನಾಂಗವನ್ನು ಆಕರ್ಷಿಸುತ್ತದೆಯೇ ಹೊರತು ಬೇರೆ ಲಾಭವೇನೂ ಇಲ್ಲ. ಆದರೆ ಹೆಚ್ಚಿನ ಫೋನ್ ಬ್ರ್ಯಾಂಡ್ ಗಳು ಬಣ್ಣಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿರುವುದು ನಿಜ ಸಂಗತಿಯೇ ಆಗಿದೆ. ಕಪ್ಪು ಫೋನ್ ಗಳು ಮಾಡದ ಕೆಲಸವನ್ನು ಒಮ್ಮೊಮ್ಮೆ ವಿಭಿನ್ನ ಬಣ್ಣಗಳ ಫೋನ್ ಗಳು ಸಾಧಿಸಿರುವ ಉದಾಹರಣೆ ಇದೆ ಎಂದು ಹುವಾಯಿ ಸಂಸ್ಥೆ ಹೇಳುತ್ತದೆ. ಆದರೂ ಕಪ್ಪು ಫೋನ್ ಗಳಿಗಿರುವ ಬೇಡಿಕೆ ಕಡಿಮೆಯಾಗಿಲ್ಲ.

ಆಕರ್ಷಕ ಕೇಸ್ ಮತ್ತು ಸ್ಕ್ರೀನ್ ಶೀಲ್ಡ್ ನಿಂದ ಫೋನಿನ ರಕ್ಷಣೆ

ಆಕರ್ಷಕ ಕೇಸ್ ಮತ್ತು ಸ್ಕ್ರೀನ್ ಶೀಲ್ಡ್ ನಿಂದ ಫೋನಿನ ರಕ್ಷಣೆ

ಫೋನಿನ ಕಲ್ಲರ್ ಯಾವುದೇ ಇದ್ದರೂ ಮಾರುಕಟ್ಟೆಯಲ್ಲಿ ಅದರ ಕೇಸ್ ಗಳು ಭಿನ್ನವಿಭಿನ್ನ ರೂಪದಲ್ಲಿ ಸಿಗುತ್ತದೆ. ಪ್ರತಿಯೊಂದು ಫೋನಿನ ಕೇಸ್ ಗಳೂ ಕೂಡ ಮಾರುಕಟ್ಟೆಯಲ್ಲಿ ಜನರ ಕಣ್ಣುಕುಕ್ಕುತ್ತಿರುವುದು ಸುಳ್ಳಲ್ಲ. ಯಾವುದೇ ಫೋನ್ ಖರೀದಿದಾರರು ತನ್ನ ಫೋನಿಗೆ ಹೆಚ್ಚುವರಿ ಪ್ರೊಟೆಕ್ಷನ್ ನ್ನು ಬಯಸುತ್ತಾನೆ ಹಾಗಾಗಿ ಕೇಸ್ ಗಳನ್ನು ಮತ್ತು ಸ್ಕ್ರೀನ್ ಶೀಲ್ಡ್ ನ್ನು ಹಾಕಿಸುತ್ತಾರೆ. ಶೀಲ್ಡ್ ಮತ್ತು ಕೇಸ್ ಗಳ ಮೂಲಕ ಫ್ಯಾನ್ಸಿಯಾಗಿರುವ ಫೋನ್ ಎಂಬಂತೆ ಫೋನಿಗೆ ಅಲಂಕಾರ ಮಾಡುವವರು ಇದ್ದಾರೆ.

ಕಪ್ಪು ಬೋರಿಂಗ್ ಅನ್ನಿಸುತ್ತದೆ, ಆದರೂ ಹೆಚ್ಚು ಮಾರಾಟವಾಗುತ್ತದೆ.

ಕಪ್ಪು ಬೋರಿಂಗ್ ಅನ್ನಿಸುತ್ತದೆ, ಆದರೂ ಹೆಚ್ಚು ಮಾರಾಟವಾಗುತ್ತದೆ.

ಬಿಳಿ ಮತ್ತು ಇತರೆ ಕಲ್ಲರ್ ಫುಲ್ ಫೋನ್ ಗಳು ನೋಡುವುದಕ್ಕೆ ಆಕರ್ಷಕ ಅನ್ನಿಸುವುದೇನೋ ನಿಜ. ಬಿಳಿ, ಕಪ್ಪು, ಮತ್ತು ಬೂದು ಬಣ್ಣದ ಫೋನ್ ಗಳು ಯಾವಾಗಲೂ ಮಾರಾಟದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿರುತ್ತದೆ. ಹುವಾಯಿಗೆ ಈ ವಿಚಾರ ಸ್ಪಷ್ಟವಾಗಿ ತಿಳಿದಿದೆ. ಹುವಾಯಿ ಪಿ20 ಪ್ರೋ ನೀಲಿ, ಪಿಂಕ್ ಮತ್ತು ನೇರಳೆ ಬಣ್ಣದ ಫೋನ್ ಗಳಿಗಿಂತ ಕಪ್ಪು ವರ್ಣದ ಫೋನ್ ಗಳೇ ಹೆಚ್ಚು ಮಾರಾಟ ಕಂಡಿವೆ. ವಿಶೇಷ ಬಣ್ಣಗಳಿಗಿಂತ ನ್ಯೂಟ್ರಲ್ ಬಣ್ಣಗಳು ಹೆಚ್ಚು ಮಾರಾಟ ಕಾಣುತ್ತವೆ ಎಂಬುದು ಸಾಬೀತಾಗಿದೆ.

ತಂತ್ರಜ್ಞಾನವನ್ನು ನಿಧಾನಗೊಳಿಸುವ ಚಿಹ್ನೆ?

ತಂತ್ರಜ್ಞಾನವನ್ನು ನಿಧಾನಗೊಳಿಸುವ ಚಿಹ್ನೆ?

ಸ್ಮಾರ್ಟ್ ಫೋನ್ ಬ್ರ್ಯಾಂಡ್ ಗಳು ನ್ಯೂಟ್ರಲ್ ಟೋನ್ ಗಳಿಗಿಂತ ಕಲರ್ ಫುಲ್ ಕಡೆಗೆ ಆಕರ್ಷಿತವಾಗಿರುವುದಕ್ಕೆ ಮತ್ತೊಂದು ಕಾರಣವೂ ಇದೆ. ಗ್ರಾಹಕರು ಫೋನ್ ಗಳನ್ನು ಅತೀ ಹೆಚ್ಚು ಸಮಯದವರೆಗೆ ಹಿಡಿದುಕೊಂಡಿರುತ್ತಾರೆ. ತಯಾರಕರು ಬಯಸಿದಷ್ಟು ವೇಗದಲ್ಲಿ ಯಾವುದೇ ವ್ಯಕ್ತಿಯು ಫೋನ್ ನ್ನು ಬದಲಾಯಿಸುವುದಿಲ್ಲ. ಖರೀದಿದಾರರಿಗೆ ಅಪ್ ಗ್ರೇಡ್ ಮಾಡುವುದಕ್ಕೆ ಕಡಿಮೆ ಕಾರಣಗಳು ಸಿಗುತ್ತಿದೆ ಮತ್ತು ತಂತ್ರಜ್ಞಾನ ನಿಧಾನಗೊಳ್ಳುತ್ತಿದೆ.

ಪ್ರತಿಯೊಬ್ಬರು ಫ್ಯಾಷನ್ ಪ್ರಿಯರೇ. ಫೋನಿನ ಬದಲಾವಣೆಗೆ ಫೋನಿನ ಬಣ್ಣವೂ ಕಾರಣವಾಗುತ್ತದೆ. ಇಲ್ಲದೇ ಇದ್ದರೆ ಮಾರ್ಕೆಟಿಂಗ್ ಸ್ಟ್ರ್ಯಾಟಜಿಗೆ ಕಾರಣಗಳು ಕಡಿಮೆ ಸಿಗುತ್ತದೆ. ಗ್ರಾಹಕರನ್ನು ಸೆಳೆಯುವುದಕ್ಕೆ ಬಣ್ಣವೂ ಪ್ರಮುಖ ಪಾತ್ರವಾಗಿರುತ್ತದೆ.

ಸ್ಯಾಮ್ ಸಂಗ್ ನ ಗ್ಯಾಲಕ್ಸಿ ಎಕ್ಸ್/ ಗ್ಯಾಲಕ್ಸಿ ಎಫ್/ ಗ್ಯಾಲಕ್ಸಿ ಫೋಲ್ಡ್ ಫೋನ್ ಗಳು ಕೇವಲ ಕಪ್ಪು ವರ್ಣದಲ್ಲಿ ಮಾತ್ರವೇ ಲಭ್ಯವಾಗುತ್ತಿದೆ? ಅದೇನೇ ಇದ್ದರೂ ಈ ಫೋನ್ ಗಳು ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನು ಸೃಷ್ಟಿಸುತ್ತವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

Most Read Articles
Best Mobiles in India

Read more about:
English summary
Black phones are boring, but sell. Yet for brands, color still matters

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X