IMEI ನಂಬರ್ ಕುರಿತು ನೀವು ತಿಳಿದಿರಬೇಕಾದ ಮಾಹಿತಿಗಳಿವು!

By Tejaswini P G
|

ನೀವು ಸ್ಮಾರ್ಟ್ಫೋನ್ ಹೊಂದಿದ್ದರೆ ನೀವು IMEI ನಂಬರ್ ಕುರಿತು ಕೇಳಿಯೇ ಇರುತ್ತೀರಿ. ಒಂದು ವೇಳೆ ನಿಮ್ಮ ಫೋನ್ ಕಳೆದು ಹೋದಲ್ಲಿ ಅದನ್ನು ಶಾಶ್ವತವಾಗಿ ಲಾಕ್ ಮಾಡಲು IMEI ನಂಬರ್ ಬೇಕೇ ಬೇಕು. ನಿಮ್ಮ ಫೋನ್ ಎಲ್ಲಿದೆಯೆಂದು ಟ್ರ್ಯಾಕ್ ಮಾಡಲು IMEI ನಂಬರ್ ಬೇಕೇ ಬೇಕು. ಹಾಗಾದರೆ ಏನಿದು IMEI ನಂಬರ್?

IMEI ನಂಬರ್ ಎಂದರೇನು?

IMEI ನಂಬರ್ ಎಂದರೇನು?

ಮೊಬೈಲ್ ತಯಾರಕರು ಪ್ರತಿಯೊಂದು ಮೊಬೈಲ್ ಫೋನ್ ನಲ್ಲಿಯೂ ಅನನ್ಯ 15-ಅಂಕಿಯ IMEI ನಂಬರ್ ಅನ್ನು ಮುದ್ರಿಸುತ್ತಾರೆ. ನಿಮ್ಮ ಮೊಬೈಲ್ ಫೋನ್ ನಿಂದ ನಿಮ್ಮ ಸೆಲ್ಯುಲಾರ್ ಕ್ಯಾರಿಯರ್ ಮೂಲಕ ಕರೆ ಮಾಡುವಾಗ ಆಥವಾ ಇಂಟರ್ನೆಟ್ ಬಳಸುವಾಗ ನಿರ್ದಿಷ್ಟ ಮೊಬೈಲ್ ಅನ್ನು ಗುರುತಿಸಲು ಇಂಟರ್ನ್ಯಾಶನಲ್ ಮೊಬೈಲ್ ಸ್ಟೇಶನ್ ಎಕ್ವಿಪ್ಮೆಂಟ್ ಐಡೆಂಟಿಟಿ ನಂಬರ್ ಅಥವಾ IMEI ನಂಬರ್ ಅನ್ನು ಬಳಸಲಾಗುತ್ತದೆ.ಈಗಿನ ದಿನಗಳಲ್ಲಿ ಮೊಬೈಲ್ ಫೋನ್ ಎರಡು ಸಿಮ್ ಸ್ಲಾಟ್ ಗಳ ಜೊತೆಗೆ ಬರುವ ಕಾರಣ ಪ್ರತಿಯೊಂದು ಮೊಬೈಲ್ ಪ್ರತಿ ಸ್ಲಾಟ್ ಗೆ ಒಂದರಂತೆ ಎರಡು IMEI ನಂಬರ್ ಹೊಂದಿರುತ್ತದೆ.

 ನಿಮ್ಮ ಮೊಬೈಲ್ ನ IMEI ನಂಬರ್ ತಿಳಿಯುವುದು ಹೇಗೆ?

ನಿಮ್ಮ ಮೊಬೈಲ್ ನ IMEI ನಂಬರ್ ತಿಳಿಯುವುದು ಹೇಗೆ?

ನೀವು ನಿಮ್ಮ ಮೊಬೈಲ್ ನ IMEI ನಂಬರ್ ಅನ್ನು ಎರಡು ವಿಧಗಳಲ್ಲಿ ತಿಳಿಯಬಹುದು. ಮೊದಲಿಗೆ, ನಿಮ್ಮ ಮೊಬೈಲ್ನಲ್ಲಿ *#06# ಎಂದು ಡಯಲ್ ಮಾಡುವ ಮೂಲಕ ನಿಮ್ಮ ಮೊಬೈಲ್ ನ IMEI ನಂಬರ್ ತಿಳಿಯಬಹುದು. ಈ ಸಂಖ್ಯೆಯನ್ನು ಡಯಲ್ ಮಾಡಿದರೆ ನಿಮ್ಮ ಮೊಬೈಲ್ ನ ಪರದೆಯ ಮೇಲೆ IMEI ನಂಬರ್ ಮೂಡುತ್ತದೆ. ಒಂದು ವೇಳೆ ನಿಮ್ ಮೊಬೈಲ್ ಫೋನ್ ಕಳೆದು ಹೋಗಿದ್ದಲ್ಲಿ, ನಿಮ್ಮ ಮೊಬೈಲ್ ನ ಪ್ಯಾಕೇಜಿಂಗ್ ಬಾಕ್ಸ್ ನ ಹಿಂಬದಿಯಲ್ಲಿ ಅದರ IMEI ಕೋಡ್ ಮುದ್ರಿತವಾಗಿರುತ್ತದೆ.

ಅಪಾಯ ತಿಳಿದಿದ್ದರೂ ತಪ್ಪು ಮಾಡುತ್ತಿದ್ದಾರೆ ಎಲ್ಲಾ ಸ್ಮಾರ್ಟ್‌ಫೋನ್ ಬಳಕೆದಾರರು!!ಅಪಾಯ ತಿಳಿದಿದ್ದರೂ ತಪ್ಪು ಮಾಡುತ್ತಿದ್ದಾರೆ ಎಲ್ಲಾ ಸ್ಮಾರ್ಟ್‌ಫೋನ್ ಬಳಕೆದಾರರು!!

IMEI ನಂಬರ್ ನ ಉಪಯೋಗಗಳೇನು?

IMEI ನಂಬರ್ ನ ಉಪಯೋಗಗಳೇನು?

ಪ್ರತಿಯೊಂದು ಮೊಬೈಲ್ ಸಾಧನವನ್ನು ಗುರುತಿಸಲು IMEI ನಂಬರ್ ಅನ್ನು ಬಳಸಲಾಗುತ್ತದೆ. ಮೊಬೈಲ್ ಕಳೆದುಹೋದಾಗ ಅದನ್ನು ಪತ್ತೆಹಚ್ಚಲು IMEI ನಂಬರ್ ಅನ್ನು ಬಳಸಲಾಗುತ್ತದೆ. ಮೊಬೈಲ್ ನಲ್ಲಿ IMEI ನಂಬರ್ ಅನ್ನು ಅದರ ಹಾರ್ಡ್ವೇರ್ ನಲ್ಲಿ ಹಾರ್ಡ್ಜೋಡ್ ಮಾಡಿರುವ ಕಾರಣ ಸಾಧನಕ್ಕೆ ಹಾನಿಯುಂಟು ಮಾಡದೆ IMEI ನಂಬರ್ ಅನ್ನು ಬದಲಿಸುವುದು ಅಸಾಧ್ಯವೇ ಸರಿ.

 ನಿಮ್ಮ IMEI ನಂಬರ್ ಸರಿಯಾಗಿದೆಯೇ ಎಂದು ತಿಳಿಯುವುದು ಹೇಗೆ?

ನಿಮ್ಮ IMEI ನಂಬರ್ ಸರಿಯಾಗಿದೆಯೇ ಎಂದು ತಿಳಿಯುವುದು ಹೇಗೆ?

ಹಾದಿಬದಿಯ ಅಂಗಡಿಗಳಿಂದ ಅಗ್ಗದ ಮೊಬೈಲ್ ಖರೀದಿಸಿದರೆ, ಆ ಮೊಬೈಲ್ಗಳು ಮಾನ್ಯವಲ್ಲದೆ IMEI ನಂಬರ್ ಹೊಂದಿರುವ ಸಾಧ್ಯತೆಗಳೇ ಹೆಚ್ಚು.ನಿಮ್ಮ ಮೊಬೈಲ್ ನ IMEI ನಂಬರ್ ಸರಿಯಿದೆಯೇ ಎಂದು ತಿಳಿಯಲು IMEI.info ಎಂಬ ಆನ್ಲೈನ್ ಸೈಟ್ ನಲ್ಲಿ ಪರೀಕ್ಷಿಸಿ.

IMEI ನಂಬರ್ ಬಳಸಿ ಮೊಬೈಲ್ ಬ್ಲಾಕ್ ಮಾಡುವುದು ಹೇಗೆ?

IMEI ನಂಬರ್ ಬಳಸಿ ಮೊಬೈಲ್ ಬ್ಲಾಕ್ ಮಾಡುವುದು ಹೇಗೆ?

ನಿಮ್ಮ ಮೊಬೈಲ್ ಫೋನ್ ಕಳುವಾದ ಕೆಲ ನಿಮಿಷಗಳೊಳಗಾಗಿ ಅದನ್ನು IMEI ನಂಬರ್ ಬಳಸಿ ಬ್ಲಾಕ್ ಮಾಡಬಯಸಿದರೆ ಈ ಕೆಳಗಿನ ಸೂಚನೆಗಳನ್ನು ಅನುಸರಿಸಿ.

ಹಂತ 1: ನಿಮ್ಮ ಫೋನಿನ IMEI ನಂಬರ್ ತಿಳಿಯಿರಿ

ಹಂತ 2: ನಿಮ್ಮ ನೆಟ್ವರ್ಕ್ ಕ್ಯಾರಿಯರ್ ಅನ್ನು ಸಂಪರ್ಕಿಸಿ

ಹಂತ 3: ನಿಮ್ಮ ಗುರುತನ್ನು ಖಚಿತಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ನಿಮ್ಮ IMEI ನಂಬರ್ ಅನ್ನು ಅವರಿಗೆ ನೀಡಿ ಕಳವಿನ ಹಿನ್ನಲೆಯಲ್ಲಿ ಮೊಬೈಲ್ ಬ್ಲಾಕ್ ಮಾಡುವಂತೆ ಅವರನ್ನು ವಿನಂತಿಸಿ

ಹಂತ 4: ಹೀಗೆ ಮಾಡಿದ ಕೆಲ ಕ್ಷಣಗಳೊಳಗೆ ನಿಮ್ಮ ಮೊಬೈಲ್ ಫೋನ್ ಬ್ಲಾಕ್ ಆಗುತ್ತದೆ.

Best Mobiles in India

Read more about:
English summary
If you have a smartphone, we are sure that you must have come across terms called IMEI number. So what exactly is this IMEI number?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X