ಐಫೋನ್ ನಲ್ಲಿ ಫಾಸ್ಟ್ ಚಾರ್ಜಿಂಗ್ ಬಳಸುವುದು ಒಳ್ಳೆಯ ಯೋಜನೆಯೇ?

By Gizbot Bureau
|

ಐಫೋನ್ 8 ಮತ್ತು ಐಫೋನ್ ಎಕ್ಸ್ ಬಿಡುಗಡೆ ಮಾಡುವ ಮೂಲಕ ಆಪಲ್ ಹೊಸದಾಗಿ ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲವನ್ನು ನೀಡುವ ಐಫೋನ್ ನ್ನು ಬಿಡುಗಡೆಗೊಳಿಸಿದೆ. ಆದರೆ ಬಳಕೆದಾರರು ಈ ಡಿವೈಸ್ ಜೊತೆಗೆ ಫಾಸ್ಟ್ ಚಾರ್ಜಿಂಗ್ ಫೀಚರ್ ನ್ನು ಬಳಸುವುದಕ್ಕಾಗಿ ಸಪರೇಟ್ ಫಾಸ್ಟ್ ಚಾರ್ಜರ್ ನ್ನು ಖರೀದಿಸಬೇಕಾಗುತ್ತದೆ.ಯಾಕೆಂದರೆ ಡಿವೈಸ್ ಜೊತೆಗೆ ಕೇವಲ 5W ಚಾರ್ಜಿಂಗ್ ಅಡಾಪ್ಟರ್ ನ್ನು ನೀಡಲಾಗುತ್ತದೆ.

ಐಫೋನ್ 11 ಪ್ರೋ

ಐಫೋನ್ 11 ಪ್ರೋ ಮತ್ತು ಐಫೋನ್ 11 ಪ್ರೋ ಮ್ಯಾಕ್ಸ್ ಬಿಡುಗಡೆಯ ನಂತರ ಈ ಬದಲಾವಣೆ ಆಗಿದೆ. ಈ ಐಫೋನ್ ಗಳು ರೀಟೈಲ್ ಪ್ಯಾಕೇಜ್ ನಲ್ಲಿ 18 W ಫಾಸ್ಟ್ ಚಾರ್ಜರ್ ನೊಂದಿಗೆ ಬಂದ ಮೊದಲ ಫೋನ್ ಗಳಾಗಿತ್ತು. ಎರಡು ಘಂಟೆಯ ಒಳಗೆ ಈ ಫೋನ್ ಸೊನ್ನೆಯಿಂದ 100% ಚಾರ್ಜ್ ಆಗುವ ಸಾಮರ್ಥ್ಯವನ್ನು ಹೊಂದಿದೆ.

ಆದರೆ ಈ ಬದಲಾವಣೆಯು ನಿಮ್ಮ ಐಫೋನ್ ಗೆ ಫಾಸ್ಟ್ ಚಾರ್ಜಿಂಗ್ ತಂತ್ರಗಾರಿಕೆಯನ್ನು ಅಳವಡಿಸಿಕೊಳ್ಳುವುದಕ್ಕೆ ರುವ ಬೆಸ್ಟ್ ಐಡಿಯಾ ಎಂದು ಅನ್ನಿಸುತ್ತಿಲ್ಲ. ಈಗಾಗಲೇ ಹಲವು ಬಳಕೆದಾರರು ವಿಶ್ವದಾದ್ಯಂತ ತಮ್ಮ ಐಫೋನ್ 11 ಪ್ರೋ ಮತ್ತು ಐಫೋನ್ 11 ಪ್ರೋ ಮ್ಯಾಕ್ಸ್ ನ ಬ್ಯಾಟರಿ ಕೆಪಾಸಿಟಿಯ ಬಗ್ಗೆ ಹಂಚಿಕೊಳ್ಳುವುದಕ್ಕೆ ಆರಂಭಿಸಿದ್ದಾರೆ. ಕಳೆದ ಕೆಲವೇ ವಾರಗಳಲ್ಲಿ ಕನಿಷ್ಟ ಬ್ಯಾಟರಿ ಕೆಪಾಸಿಟಿಯು 99% ಕ್ಕೆ ಇಳಿಕೆಯಾಗಿದೆ.ಆದರೆ, ಐಫೋನ್ 11 ಕೇಸಿನಲ್ಲಿ ಹೀಗಾಗುತ್ತಿಲ್ಲ. ಇದು 5W ಚಾರ್ಜರ್ ನೊಂದಿಗೆ ಲಭ್ಯವಾಗುತ್ತಿದೆ.

ಐಫೋನ್ 11 ಪ್ರೋವನ್ನು ಬಿಡುಗಡೆಯ ದಿನಾಂಕದಿಂದ ಬಳಸಲಾಗುತ್ತಿದ್ದರೂ ಕೂಡ ಅದರ ಗರಿಷ್ಟ ಬ್ಯಾಟರಿ ಕೆಪಾಸಿಟಿ 100% ದಲ್ಲೇ ಇದೆ.

ಗರಿಷ್ಟ ಬ್ಯಾಟರಿ ಕೆಪಾಸಿಟಿ ಅಂದರೆ ಏನು?

ಗರಿಷ್ಟ ಬ್ಯಾಟರಿ ಕೆಪಾಸಿಟಿ ಅಂದರೆ ಏನು?

ಗರಿಷ್ಟ ಬ್ಯಾಟರಿ ಕೆಪಾಸಿಟಿ ಎಂದರೆ ಒಂದು ಬ್ಯಾಟರಿಯು ಡಿಸೈನ್ ಆಗಿರುವ ಬ್ಯಾಟರಿ ಕೆಪಾಸಿಟಿಯಲ್ಲಿ ಎಷ್ಟು ಶಕ್ತಿಯನ್ನು ತುಂಬಿಸಿಕೊಂಡು ಹಿಡಿದಿಟ್ಟುಕೊಳ್ಳಲು ಸಾಧ್ಯ ಎಂಬ ಮಾನದಂಡವಾಗಿದೆ. ಕೆಲವು ಸಮಯದ ನಂತರ ಬ್ಯಾಟರಿಯಲ್ಲಿರುವ ರಾಸಾಯನಿಕಗಳು ಕಳೆದುಹೋಗಿ ಅದರ ಬಲವು ಕುಂದುತ್ತಾ ಸಾಗುತ್ತದೆ ಮತ್ತು ದಿನದಿಂದ ದಿನ ಕಳೆದಂತೆ ಬ್ಯಾಟರಿ ಕೆಪಾಸಿಟಿ ತಗ್ಗುತ್ತದೆ. ಸಾಮಾನ್ಯವಾಗಿ ಎಲ್ಲಾ ಬ್ಯಾಟರಿಗಳಲ್ಲಿ ನಡೆಯುವ ಪ್ರಕ್ರಿಯೆ ಇದಾಗಿದೆ.

ತಮ್ಮ ಹಳೆಯ ಐಫೋನ್ ಗಳು ಇದ್ದಕ್ಕಿದ್ದಂತೆ ನಿಧಾನವಾಗುತ್ತಿದೆ ಎಂದು ಹಲವು ಬಳಕೆದಾರರು ವರದಿ ಮಾಡಿದ ನಂತರ ಆಪಲ್ ಹೊಸದಾಗಿ ಐಓಎಸ್ 12 ನಲ್ಲಿ ಹೊಸ ಫೀಚರ್ ನ್ನು ಸೇರಿಸಿದೆ. ಹಲವು ಬ್ಯಾಟರಿ ಗೇಟ್ ಘಟನೆಗಳ ನಂತರ ಆಪಲ್ ಈ ನಿರ್ಧಾರವನ್ನು ಕೈಗೊಂಡಿದೆ.ದುರ್ಬಲ ಬ್ಯಾಟರಿಗಳನ್ನು ಹೊಂದಿರುವ ಹಳೆಯ ಐಫೋನ್‌ಗಳಲ್ಲಿ ಆಪಲ್ ಸಿಪಿಯು ಅನ್ನು ಅಂಡರ್‌ಲಾಕ್ ಮಾಡಲು ಪ್ರಾರಂಭಿಸಿದ ಕಾರಣ ಇದು ಸಂಭವಿಸಿದೆ.

ಫೋನ್

ಮಾಲೀಕರ ಒಪ್ಪಿಗೆಯೊಂದಿಗೆ ಇದನ್ನು ಆಪಲ್ ಮಾಡಿದಿದ್ದರೆ ಹೆಚ್ಚು ಸಮಸ್ಯೆಯಾಗುತ್ತಿರಲಿಲ್ಲ. ಐಓಎಸ್ 12 ನಲ್ಲಿ ಇದೀಗ ಆಪಲ್ ಬ್ಯಾಟರಿ ಕೆಪಾಸಿಟಿ ಮತ್ತು ಅದರ ಆರೋಗ್ಯದ ಬಗ್ಗೆ ಹೆಚ್ಚು ಮಾಹಿತಿಗಳನ್ನು ಮತ್ತು ಒಳನೋಟವನ್ನು ನೀಡುವುದಕ್ಕೆ ಪ್ರಾರಂಭಿಸಿದೆ.

ಒಂದು ಫೋನ್ ನ್ನು ಯಾವಾಗ ಫಾಸ್ಟ್ ಚಾರ್ಜರ್ ಮೂಲಕ ಚಾರ್ಜ್ ಮಾಡುತ್ತೇವೆಯೋ ಆಗ ಅದರಲ್ಲಿರುವ ರಾಸಾಯನಿಕಗಳು ವೇಗವಾಗಿ ಬದಲಾವಣೆಯನ್ನು ಕಾಣುತ್ತದೆ ಮತ್ತು ವೇಗವಾಗಿ ಅವನತಿ ಕಾಣುವುದಕ್ಕೆ ಪ್ರಾರಂಭವಾಗುತ್ತದೆ. ನಿಧಾನವಾಗಿ ಚಾರ್ಜ್ ಆಗುವ ಚಾರ್ಜರ್ ನಲ್ಲಿ ಸಮಯ ಹೆಚ್ಚಾದರೂ ಕೂಡ ರಾಸಾಯನಿಕಗಳ ಬದಲಾವಣೆ ನಿಧಾನವಾಗಿರುತ್ತದೆ ಮತ್ತು ಅದರ ಪರಿಣಾಮವಾಗಿ ಬ್ಯಾಟರಿ ಅವನತಿಯತ್ತ ಸಾಗುವುದು ಕೂಡ ನಿಧಾನವಾಗಿರುತ್ತದೆ.

ನೀವೇನು ಮಾಡಬೇಕು?

ನೀವೇನು ಮಾಡಬೇಕು?

ಪ್ರತಿಯೊಂದು ಎಲೆಕ್ಟ್ರಾನಿಕ್ ವಸ್ತುವಿನ ಬ್ಯಾಟರಿಯೂ ಕೂಡ ದಿನ ಕಳೆದಂತೆ ವೀಕ್ ಆಗಿಯೇ ಆಗುತ್ತದೆ. ಆದರೆ, ಕೆಲವು ವರದಿಗಳು ಹೇಳುವ ಪ್ರಕಾರ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವಿರುವ ಬ್ಯಾಟರಿಗಳಲ್ಲಿ ಬ್ಯಾಟರಿ ಹಾಳಾಗುವಿಕೆಯ ವೇಗ ಕೂಡ ಅಧಿಕವೇ ಇರುತ್ತದೆ. ಹಾಗಾಗಿ ಇದೊಂದು ದೊಡ್ಡ ಸಮಸ್ಯೆ ಎಂದು ಅಂದುಕೊಳ್ಳುವವರಿಗಾಗಿ ನಾವು ಸಲಹೆ ನೀಡುವುದೇನೆಂದರೆ 5W ಚಾರ್ಜಿಂಗ್ ಅಡಾಪ್ಟರ್ ಇರುವ ಬ್ಯಾಟರಿ ಕೆಪಾಸಿಟಿಯ ಅವನತಿಯೂ ಕೂಡ ನಿಧಾನವಿರುವುದರಿಂದಾಗಿ ನೀವು ಇದನ್ನೇ ಬಳಕೆ ಮಾಡುವುದು ಸೂಕ್ತ. ಇದು ಕೇವಲ ಐಫೋನ್ ಗಳಿಗೆ ಮಾತ್ರವಲ್ಲ ಬದಲಾಗಿ ಆಂಡ್ರಾಯ್ಡ್ ಫೋನ್ ಗಳಿಗೂ ಕೂಡ ಅನ್ವಯಿಸುತ್ತದೆ.

Most Read Articles
Best Mobiles in India

Read more about:
English summary
Here is everything you need to know about the fast charging an iPhone and the effect it will have on the battery life on the long haul.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X