Subscribe to Gizbot

ನಂಬಲಾಗದ ಬೆಲೆಗೆ ಐಫೋನ್ ಮಾರಲು ಮುಂದಾದ ಫ್ಲಿಪ್‌ಕಾರ್ಟ್‌..! ಕಾರಣ..?

Written By:

ಭಾರತೀಯ ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ತನ್ನ ಬಳಕೆದಾರರಿಗೆ ಬೊಂಬಾಟ್ ಆಫರ್ ನೀಡಲು ಮುಂದಾಗಿದೆ. ಅಮೆಜಾನ್‌ಗೆ ಸೆಡ್ಡು ಹೊಡೆದು ಆಪಲ್ ಮೇಳ ಆಯೋಜಿಸಿದ್ದು, ಇದೇ ಫೆ.27 ರಿಂದ ಮಾರ್ಚ್ 2ರ ವರೆಗೆ ಐಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ನೀಡಲಿದೆ. ಆಪಲ್ ಡೇ ಅಂಗವಾಗಿ ಆಪಲ್ ಉತ್ಪನ್ನಗಳ ಮೇಲೆ ಡಿಸ್ಕೌಂಟ್ ಘೋಷಣೆ ಮಾಡಿದೆ.

ನಂಬಲಾಗದ ಬೆಲೆಗೆ ಐಫೋನ್ ಮಾರಲು ಮುಂದಾದ ಫ್ಲಿಪ್‌ಕಾರ್ಟ್‌..! ಕಾರಣ..?

ಆಪಲ್ ಡೇ ಅಂಗವಾಗಿ ಫ್ಲಿಪ್‌ಕಾರ್ಟ್ ಐಪೋನ್, ಐಪ್ಯಾಡ್ ಮತ್ತು ಅಪಲ್ ವಾಚ್ ಗಳ ಮೇಲೆ ಆಫರ್ ಘೋಷಣೆ ಮಾಡಿದ್ದು, ಇದರೊಂದಿಗೆ SBI ಕಾರ್ಡುದಾರರಿಗೆ 5% ಹೆಚ್ಚಿನ ಕ್ಯಾಷ್ ಬ್ಯಾಕ್ ಆಫರ್ ಅನ್ನು ನೀಡಲು ಮುಂದಾಗಿದೆ. ಇಲ್ಲದೇ ನೋ ಕಾಸ್ಟ್ ಇಎಂಐ ಆಫರ್ ಅನ್ನು ಸಹ ನೀಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಫೋನ್ X:

ಐಫೋನ್ X:

ಆಪಲ್ 10ನೇ ವಾರ್ಷಿಕೋತ್ಸವದ ಅಂಗವಾಗಿ ಬಿಡುಗಡೆಯಾಗಿದ್ದ ಐಫೋನ್ X 64GB ಮತ್ತು 256GB ಅವೃತ್ತಿಗಳು ಕ್ರಮವಾಗಿ ಮಾರುಕಟ್ಟೆಯಲ್ಲಿ ರೂ 89,000 ಮತ್ತು ರೂ 1,02,000 ಕ್ಕೆ ಮಾರಾಟವಾಗುತ್ತಿವೆ. ಸದ್ಯ ಫ್ಲಿಪ್‌ಕಾರ್ಟ್ ಇ-ಕಾಮರ್ಸ್ ನಲ್ಲಿ ಆಫರ್ ಅಂಗವಾಗಿ ರೂ.82,999ಕ್ಕೆ 64 GB ಮತ್ತು 256 GB ರೂ 98,999 ಕ್ಕೆ ಲಭ್ಯವಿದೆ.

ಐಫೋನ್ 8 ಮತ್ತು ಐಫೋನ್ 8 ಪ್ಲಸ್: (64 GB)

ಐಫೋನ್ 8 ಮತ್ತು ಐಫೋನ್ 8 ಪ್ಲಸ್: (64 GB)

64 GBಯ ಐಫೋನ್ 8 ಮತ್ತು ಐಫೋನ್ 8 ಪ್ಲಸ್ ಬೆಸಿಕ್ ಮಾಡಲ್ ಮಾರುಕಟ್ಟೆಯಲ್ಲಿ ರೂ.64,000 ಮತ್ತು ರೂ.73,00೦ಕ್ಕೆ ಲಭ್ಯವಿದ್ದು, ಸದ್ಯ ಫ್ಲಿಪ್‌ಕಾರ್ಟ್ ಇ-ಕಾಮರ್ಸ್ ನಲ್ಲಿ ಆಫರ್ ಅಂಗವಾಗಿ ಐಫೋನ್ 8 ಮತ್ತು ಐಫೋನ್ 8 ಪ್ಲಸ್ ಕ್ರಮವಾಗಿ ರೂ 54,999 ಮತ್ತು 64,999ಕ್ಕೆ ಮಾರಾಟವಾಗುತ್ತಿವೆ.

ಐಫೋನ್ 8 ಮತ್ತು ಐಫೋನ್ 8 ಪ್ಲಸ್ : (256 GB)

ಐಫೋನ್ 8 ಮತ್ತು ಐಫೋನ್ 8 ಪ್ಲಸ್ : (256 GB)

ಐಫೋನ್ 8 ಮತ್ತು ಐಫೋನ್ 8 ಪ್ಲಸ್ 256 GB ಆವೃತ್ತಿಯೂ ರೂ. 77,000 ಮತ್ತು ರೂ. 86,000ಕ್ಕೆ ಮಾರಾಟವಾಗುತ್ತಿದೆ. ಆದರೆ ಪ್ಲಿಪ್‌ಕಾರ್ಟ್‌ನಲ್ಲಿ ಕ್ರಮವಾಗಿ ರೂ.69,999 ಮತ್ತು 79,999ಕ್ಕೆ ದೊರೆಯುತ್ತಿದೆ.

ಐಫೋನ್ 7 (32 GB)

ಐಫೋನ್ 7 (32 GB)

ಆಪಲ್ ಡೇ ಅಂಗವಾಗಿ ಫ್ಲಿಪ್‌ಕಾರ್ಟ್ 32 GBಯ ಐಫೋನ್ 7 ರೂ.41,999ಕ್ಕೆ ಮಾರಾಟವಾಗುತ್ತಿದ್ದು, ಆಂಡ್ರಾಯ್ಡ್ ಫೋನಿನೊಂದಿಗೆ ಎಕ್ಸ್ ಚೆಂಜ್ ಮಾಡಿಕೊಂಡರೆ ರೂ.4000 ಹೆಚ್ಚುವರಿ ಆಫ್ ಆಗಲಿದೆ.

How To Link Aadhaar With EPF Account Without Login (KANNADA)
ಐಫೋನ್ 7 ಪ್ಲಸ್ (32 GB):

ಐಫೋನ್ 7 ಪ್ಲಸ್ (32 GB):

ಆಪಲ್ ಡೇ ಅಂಗವಾಗಿ ಫ್ಲಿಪ್‌ಕಾರ್ಟ್ 32 GBಯ ಐಫೋನ್ 7 ಪ್ಲಸ್ ಬೇಸ್ ಮಾದರಿಯು ರೂ 56,999ಕ್ಕೆ ದೊರೆಯಲಿದ್ದು, ರೂ.2000 ಹೆಚ್ಚುವರಿ ಆಫ್ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Flipkart Apple Days: iPhone X at Rs 82,999. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot