Subscribe to Gizbot

ಫ್ಲಿಪ್‌ಕಾರ್ಟ್‌ನಲ್ಲಿ ಮೇಳ: ಇಷ್ಟು ಕಡಿಮೆ ಬೆಲೆ ಸ್ಯಾಮ್‌ಸಂಗ್ ಫೋನ್‌ಗಳು..!

Written By:

ಫ್ಲಿಪ್‌ಕಾರ್ಟ್‌ನಲ್ಲಿ ಸ್ಯಾಮ್‌ಸಂಗ್ ಮೇಳ ನಡೆಯುತ್ತಿದ್ದು, ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಆಫರ್ ಅನ್ನು ಕಾಣಬಹುದಾಗಿದೆ. ಇದಲ್ಲದೇ ಸ್ಯಾಮ್‌ಸಂಗ್ ಟ್ಯಾಬ್ಲೆಟ್, ಹೆಡ್‌ಫೋನ್, ವೆರ್ಬಲ್ಸ್, ಮೊಬೈಲ್ ಆಕ್ಸಿಸಿರಿಸ್ ಮೇಲೆ ಫ್ಲಿಪ್‌ಕಾರ್ಡ್ ಆಫರ್ ಅನ್ನು ಘೋಷಣೆ ಮಾಡಿದ್ದು, ಸ್ಯಾಮ್‌ಸಂಗ್ ವಸ್ತುಗಳನ್ನು ಖರೀದಿ ಮಾಡಲು ಇದು ಉತ್ತಮ ಸಮಯವೆನ್ನಲಾಗಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಮೇಳ: ಇಷ್ಟು ಕಡಿಮೆ ಬೆಲೆ ಸ್ಯಾಮ್‌ಸಂಗ್ ಫೋನ್‌

ಫ್ಲಿಪ್‌ಕಾರ್ಟ್‌ನಲ್ಲಿ ಫೆಬ್ರವರಿ 7 ರಿಂದ 9ನೇ ತಾರೀಖಿನವರೆಗೂ ಈ ಸೇಲ್ ನಡೆಯಲಿದ್ದು, ಸ್ಯಾಮ್‌ಸಂಗ್ ಗೃಹ ಉಪಯೋಗಿ ವಸ್ತುಗಳ ಮೇಲೆಯೂ ಆಫರ್ ಅನ್ನು ಕಾಣಬಹುದಾಗಿದೆ. ಈ ಹಿನ್ನಲೆಯಲ್ಲಿ ಸ್ಯಾಮ್‌ಸಂಗ್ ವಸ್ತುಗಳ ಮೇಲೆ ಫ್ಲಿಪ್‌ಕಾರ್ಟ್ ನೀಡುತ್ತಿರುವ ಆಫರ್ ಗಳ ಬಗ್ಗೆ ಮಾಹಿತಿಯನ್ನು ನೀಡುವ ಪ್ರಯತ್ನ ಇದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಯಾಮ್‌ಸಂಗ್ ಮೊಬೈಲ್‌ಗಳು:

ಸ್ಯಾಮ್‌ಸಂಗ್ ಮೊಬೈಲ್‌ಗಳು:

ಸ್ಯಾಮ್‌ಸಂಗ್ ಗ್ಯಾಲಕ್ಸಿ S 7 ಸ್ಮಾರ್ಟ್‌ಫೋನ್ ಅತೀ ಕಡಿಮೆ ಬೆಲೆಗೆ ಎಂದರೆ ರೂ. 22,990ಕ್ಕೆ (MRP ರೂ 46,000) ದೊರೆಯುತ್ತಿದೆ ಮತ್ತು ಗ್ಯಾಲಕ್ಸಿ S 7 ಎಡ್ಜ್ ರೂ.35,900 (MRP: 41,900)ಕ್ಕೆ ಲಭ್ಯವಿದ್ದು, ಇಷ್ಟು ಕಡಿಮೆ ಬೆಲೆಗೆ ಇನ್ನೆಂದು ಈ ಸ್ಮಾರ್ಟ್‌ಫೋನ್‌ಗಳು ದೊರೆಯುವುದಿಲ್ಲ ಎನ್ನಲಾಗಿದೆ.

ಮಧ್ಯಮ ಸರಣಿ ಸ್ಮಾರ್ಟ್‌ಫೋನ್:

ಮಧ್ಯಮ ಸರಣಿ ಸ್ಮಾರ್ಟ್‌ಫೋನ್:

ಸ್ಯಾಮ್‌ಸಂಗ್ ಗ್ಯಾಲಕ್ಸಿ ಆನ್ ನೆಕ್ಸ್ 64 GB ರೂ. 11,900ಕ್ಕೆ (MRP: ರೂ. 17,900) ಹಾಗೂ ಗ್ಯಾಲಕ್ಸಿ ಆನ್ ನೆಕ್ಸ್ 32GB ರೂ. 9,999ಕ್ಕೆ (MRP ರೂ 10,999)ಕ್ಕೆ ಮಾರಾಟವಾಗುತ್ತಿದೆ. ಗ್ಯಾಲಕ್ಸಿ ಆನ್ ಮ್ಯಾಕ್ಸ್ 32 GB ರೂ. 13,900ಕ್ಕೆ (MRP: ರೂ. 16,900), ಗ್ಯಾಲಾಕ್ಸಿ J 3 ಪ್ರೊ ರೂ. 6,990ಕ್ಕೆ (MRP: ರೂ. 8,490) ದೊರೆಯುತ್ತಿದೆ.

ಹೆಡ್‌ಫೋನ್‌ಗಳ ಮೇಲೆ ಆಫರ್:

ಹೆಡ್‌ಫೋನ್‌ಗಳ ಮೇಲೆ ಆಫರ್:

ಇದಲ್ಲದೇ ಸ್ಯಾಮ್‌ಸಂಗ್ ಹೆಡ್ ಫೋನ್‌ಗಳ ಮತ್ತು ಸ್ಪೀಕರ್‌ಗಳ ಮೇಲೆ ಶೇ.25 ರಷ್ಟು ರಿಯಾಯಿತಿ ಪಡೆಯಬಹುದಾಗಿದೆ. ಅಲ್ಲದೇ ಸ್ಯಾಮ್‌ಸಂಗ್ ಮೆಮೊರಿ ಕಾರ್ಡ್‌, ಸ್ಯಾಮ್‌ಸಂಗ್ ಹಾರ್ಡ್ ಡ್ರೈವ್‌ಗಳು, ಮೊಬೈಲ್ ಚಾರ್ಜರ್‌ಗಳು ಮುಂತಾದ ಎಲೆಕ್ಟ್ರಾನಿಕ್ ಬಿಡಿಭಾಗಗಳು ಶೇ.80ರಷ್ಟು ರಿಯಾಯಿತಿಯಲ್ಲಿ ಲಭ್ಯವಿದೆ.

ಸ್ಯಾಮ್‌ಸಂಗ್ ಟಿವಿಗಳು:

ಸ್ಯಾಮ್‌ಸಂಗ್ ಟಿವಿಗಳು:

ಸ್ಯಾಮ್‌ಸಂಗ್ 49 ಇಂಚಿನ ಕರ್ವಡ್ ಸ್ಮಾರ್ಟ್ ಟಿವಿ ರೂ. 59,999ಕ್ಕೆ (MRP:ರೂ 91,900) ಮಾರಾಟವಾಗುತ್ತಿದ್ದು, ಇದೇ ಬೆಸ್ಟ್ ಆಫರ್ ಎನ್ನಲಾಗುತ್ತಿದೆ. ಇದಲ್ಲದೇ ಸ್ಯಾಮ್‌ಸಂಗ್ ಸ್ಮಾರ್ಟ್ ಟಿವಿಗಳ ಬೆಲೆ ರೂ. 23,999 ರಿಂದ ಆರಂಭವಾಗಲಿದೆ. ಸ್ಯಾಮ್‌ಸಂಗ್ HD ರೆಡಿ ಟಿವಿಗಳು ರೂ. 11,499 ರಿಂದ ದೊರೆಯಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Flipkart Samsung Carnival Sale Offers Discounts. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot