Subscribe to Gizbot

ಕ್ಸೋಲೋ Q900s ಮಾರಾಟ ಫ್ಲಿಪ್‌ಕಾರ್ಟ್ ಅಜಾಗರೂಕತೆ

Written By:

ಫ್ಲಿಪ್‌ಕಾರ್ಟ್‌ನಿಂದ ನಡೆದ ಅಚಾತುರ್ಯ ಸುದ್ದಿಯೊಂದು ಬಿತ್ತರವಾಗಿದೆ. ಹೆಚ್ಚಿನ ಪರಿಗಣಿತ ಸಂಖ್ಯೆ ಕ್ಸೋಲೋ ಅಭಿಮಾನಿಗಳು ವಿಂಡೋಸ್ ಫೋನ್ ಓಎಸ್ ಆಧಾರಿತ Q900S ಸ್ಮಾರ್ಟ್‌ಫೋನ್ ಅನ್ನು ಫ್ಲಿಪ್‌ಕಾರ್ಟ್ ರೀಟೈಲರ್ ಮೂಲಕ ಖರೀದಿಸಿದ್ದಾರೆ. ಆದರೆ ಗ್ರಾಹಕರು ಇದಕ್ಕೆ ಬದಲಾಗಿ ಆಂಡ್ರಾಯ್ಡ್ ಆವೃತ್ತಿಯುಳ್ಳ ಓಎಸ್ ಚಾಲನೆಯ ಸ್ಮಾರ್ಟ್‌ಫೋನ್ ಅನ್ನು ಪಡೆದುಕೊಂಡಿದ್ದಾರೆ

ನಿಜಕ್ಕೂ ಕ್ಸೋಲೋ ವಿಂಡೋಸ್ ಫೋನ್ ಓಎಸ್ ಅನ್ನೇ ತನ್ನ ಫೋನ್‌ಗಳಲ್ಲಿ ತೊಡಗಿಸಿದೆ ಆದರೆ ಫ್ಲಿಪ್‌ಕಾರ್ಟ್‌ನ ಅಜಾಗರೂಕತೆಯಿಂದ ಕೆಲವೊಂದು ಗ್ರಾಹಕರು ಈ ಫೋನ್‌ನ ಆಂಡ್ರಾಯ್ಡ್ ಆವೃತ್ತಿಯನ್ನು ಪಡೆದುಕೊಂಡಿದ್ದಾರೆ.

ಫ್ಲಿಪ್‌ಕಾರ್ಟ್ ಅಚಾತುರ್ಯ ಗ್ರಾಹಕರಲ್ಲಿ ನಿರಾಸೆ

ಈ ಎರಡೂ ಭಿನ್ನ ಓಎಸ್‌ಗಳು ಒಂದೇ ಹೆಸರಿನ ಫೋನ್ ಅನ್ನು ಚಾಲನೆ ಮಾಡುತ್ತಿರುವುದು ಈ ಪ್ರಕಾರದ ಗೊಂದಲವನ್ನು ಉಂಟುಮಾಡುವಲ್ಲಿ ಕಾರಣವಾಗಿದೆ. ನಿಮಗೆ ಈ ರೀತಿಯ ಅನುಭವವಾಗಿದ್ದರೆ ಇದನ್ನು ಕೂಡಲೇ ನಿವಾರಿಸಲಾಗುವುದು, ನೀವದನ್ನು ಉಚಿತವಾಗಿ ಫ್ಲಿಪ್‌ಕಾರ್ಟ್ ಗಮನಕ್ಕೆ ತಂದು ವಿಂಡೋಸ್ ಫೋನ್ ಆವೃತ್ತಿಗಾಗಿ ಕಾಯಬಹುದು. ಆಂಡ್ರಾಯ್ಡ್ ಆವೃತ್ತಿಯ ಫೋನ್ ಅನ್ನು ಈ ತಿಂಗಳ ಮುಂಚೆಯೇ ಬಿಡುಗಡೆ ಮಾಡಲಾಗಿತ್ತು.

ತನ್ನ ಅಂಗಣದಲ್ಲಿ ಅಸಂಖ್ಯ ಸಂಖ್ಯೆಯ ಸ್ಮಾರ್ಟ್‌ಫೋನ್ ಅನ್ನು ಹೊಂದಿರುವ ಕ್ಸೋಲೋ, ವಿಂಡೋಸ್ ಫೋನ್ ಚಾಲನೆಯುಳ್ಳ Q900s ಸ್ಮಾರ್ಟ್‌ಫೋನ್ ಪ್ರಾರಂಭಿಕ ರೀಟೈಲ್ ಪಾಲುದಾರಿಕೆಯನ್ನು ಸ್ನ್ಯಾಪ್‌ಡೀಲ್‌ನೊಂದಿಗೆ ತನ್ನ ಮಾಡಿಕೊಂಡಿತ್ತು ಆದರೆ ಫ್ಲಿಪ್‌ಕಾರ್ಟ್ ಈ ಫೋನ್‌ಗಳ ಮಾರಾಟವನ್ನು ಹೇಗೆ ಪಡೆದುಕೊಂಡಿತು ಎಂಬುದು ತಿಳಿದುಬಂದಿಲ್ಲ ಆದರೆ ಇದನ್ನು ಖರೀದಿಸಿದ ಗ್ರಾಹಕರಿಗೆ ಮಾತ್ರ ನಿರಾಶೆಯನ್ನು ಫ್ಲಿಪ್‌ಕಾರ್ಟ್ ಉಂಟುಮಾಡಿದೆ.

ಕ್ಸೋಲೋ Q900s ಪ್ರಮುಖ ವಿಶೇಷತೆಗಳು
ವಿಂಡೋಸ್ ಮತ್ತು ಆಂಡ್ರಾಯ್ಡ್ ಓಎಸ್ ಆಧಾರಿತ ಕ್ಸೋಲೋ Q900s ಒಂದೇ ರೀತಿಯ ಫೋನ್ ಫೀಚರ್‌ಗಳನ್ನು ಹೊಂದಿದೆ. ಇದು 4.7 ಇಂಚಿನ ಸ್ಕ್ರೀನ್, 720 x 1280 ರೆಸಲ್ಯೂಶನ್ ಅನ್ನು ಒದಗಿಸುತ್ತಿದೆ. ಕ್ವಾಡ್ ಕೋರ್ 1.2GHz ಸ್ನ್ಯಾಪ್‌ಡ್ರಾಗನ್ 200 ಪ್ರೊಸೆಸರ್ ಇದರಲ್ಲಿದ್ದು, Adreno 302 GPU ಇದರಲ್ಲಿದೆ. ಮುಂದಿನ ಮತ್ತು ಹಿಂದಿನ ಕ್ಯಾಮೆರಾಗಳು 8 ಮೆಗಾಪಿಕ್ಸೆಲ್ ಹಾಗೂ 2 ಮೆಗಾಪಿಕ್ಸೆಲ್ ಸಾಮರ್ಥ್ಯವನ್ನು ಹೊಂದಿವೆ. ಈ ಡ್ಯುಯಲ್ ಸಿಮ್ ಫೋನ್ 1 ಜಿಬಿ RAM ಹಾಗೂ 8 ಜಿಬಿ ಆಂತರಿಕ ಸಂಗ್ರಹಣೆಯನ್ನು ಹೊಂದಿದೆ. 32 ಜಿಬಿ ಮೈಕ್ರೋಎಸ್‌ಡಿ ಕಾರ್ಡ್ ಸ್ಲಾಟ್ ಅನ್ನು ಕೂಡ ಫೋನ್ ಹೊಂದಿದೆ. ಬ್ಯಾಟರಿ ಶಕ್ತಿ 1800mAh ಆಗಿದೆ.

ಇನ್ನಷ್ಟು ಪ್ರಮುಖ ಸುದ್ದಿಗಳಿಗಾಗಿ ಗಿಜ್‌ಬಾಟ್‌ಗೆ ಭೇಟಿ ನೀಡುತ್ತಿರಿ.

English summary
This article tells about Flipkart Ships Android-Powered Xolo Q900s Instead Of Windows Phone Model to its customers.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot