ಸ್ಮಾರ್ಟ್‌ಫೋನ್‌ಗೆ ಫ್ಲಿಪ್‌ಕಾರ್ಟ್‌ನಿಂದ ಇನ್ಸೂರೆನ್ಸ್‌..! ಬಜಾಜ್‌ ಜತೆ ಕೈಜೋಡಿಸಿದ ಫ್ಲಿಪ್‌ಕಾರ್ಟ್‌..!

|

ಇನ್ನು ಮುಂದೆ ಮೊಬೈಲ್ ಫೋನ್ ಗಳ ಸ್ಕ್ರೀನ್ ಒಡೆದು ಹೋಯ್ತು, ಯಾರೋ ಕದ್ದರು ಅಥವಾ ಮಳೆಯಲ್ಲಿ ಹಾಳಾಯ್ತು ಅಂದರೆ ಚಿಂತೆ ಮಾಡುವ ಅಗತ್ಯವಿಲ್ಲ. ನಿಮ್ಮ ಮೊಬೈಲ್ ಫೋನ್ ಗಳಿಗೆ ವಿಮಾ ಸೌಲಭ್ಯ ಸಿಗಲಿದೆ. ದುಬಾರಿ ಫೋನ್ ಗಳನ್ನು ಖರೀದಿಸಿದಾಗ ಅದು ಯಾವುದೇ ಸಮಸ್ಯೆಗೆ ಒಳಪಟ್ಟರೆ ಬೇಸರವಾಗುತ್ತದೆಯಲ್ಲವೇ? ಹಾಗಾಗಿ ಈ ವಿಮಾ ಸೌಲಭ್ಯವು ಗ್ರಾಹಕರಿಗೆ ಇಂತಹ ಸಂದರ್ಬದಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡಲು ಸಹಾಯ ಮಾಡಲಿದೆ.

ಸ್ಮಾರ್ಟ್‌ಫೋನ್‌ಗೆ ಇನ್ಸೂರೆನ್ಸ್‌..! ಬಜಾಜ್‌ ಜತೆ ಕೈಜೋಡಿಸಿದ ಫ್ಲಿಪ್‌ಕಾರ್ಟ್‌.!

ಕಾರು, ಬೈಕುಗಳಿಗೆ ಮಾತ್ರವಲ್ಲ ಬದಲಾಗಿ ಇನ್ನು ಮುಂದೆ ನಿಮ್ಮ ಮೊಬೈಲ್ ಫೋನ್ ಗಳಿಗೂ ಕೂಡ ವಿಮೆ ಮಾಡಿಸಿಕೊಳ್ಳಬಹುದು. ವಾಲ್ಮಾರ್ಟ್ ಬೆಂಬಲಿತ ಇ-ಕಾಮರ್ಸ್ ಮಾರುಕಟ್ಟೆಯಾಗಿರುವ ಫ್ಲಿಪ್ ಕಾರ್ಟ್ ತನ್ನಲ್ಲಿ ಮಾರಾಟ ಮಾಡಲಾಗುವ ಎಲ್ಲಾ ಬ್ರ್ಯಾಂಡ್ ನ ಮೊಬೈಲ್ ಗಳಿಗೆ ಸಂಪೂರ್ಣ ಮೊಬೈಲ್ ರಕ್ಷಣಾ ಕಾರ್ಯಕ್ರಮವನ್ನು ನೀಡುವ ಉದ್ದೇಶವನ್ನು ಹೊಂದಿದೆ. ಈ ಹೊಸ ಯೋಜನೆಗಾಗಿ ಫ್ಲಿಪ್ ಕಾರ್ಟ್ ಬಜಾಜ್ ಅಲಿಯಾನ್ಸ್ ಜೊತೆಗೆ ಕೈಜೋಡಿಸಿದೆ. ಈ ಸಹಭಾಗಿತ್ವದ ಕಾರಣದಿಂದಾಗಿ ಗ್ರಾಹಕರು ಯಾರು ಈ ಪ್ಲಾನ್ ನಲ್ಲಿ ಖರೀದಿಸುತ್ತಾರೋ ಅವರಿಗೆ ಕ್ಯಾಷ್ ಲೇಔಟ್ ಆಯ್ಕೆ ಅಥವಾ ಉಚಿತ ಪಿಕ್ ಅಪ್, ಸೇವೆ ಮತ್ತು ಡ್ರಾಪ್ ಅನುಕೂಲತೆಗಳನ್ನು ಮಾಡಿಕೊಡಲಾಗುತ್ತದೆ.

ಪ್ರಮುಖ ಉದ್ದೇಶ:

ಪ್ರಮುಖ ಉದ್ದೇಶ:

" ಇನ್ಸುರೆನ್ಸ್ ಗಳು ಗ್ರಾಹಕರಿಗೆ ಫೋನ್ ಮಾರಾಟ ಮಾಡಿದ ನಂತರ ನೀಡುವ ಆರೈಕೆಯ ಒಂದು ಭಾಗವು ಈ ವಿಮೆ ಯೋಜನೆಗಳಾಗಿವೆ. ಈಗಾಗಲೇ ನಾವು ಗ್ರಾಹಕರ ನಂಬಿಕೆಗೆ ಅರ್ಹರಾಗಿದ್ದೇವೆ ಮತ್ತು ಈ ಹೊಸ ಸಹಭಾಗಿತ್ವವು ಮುಂದಿನ ದಿನಗಳಲ್ಲಿ ನಮ್ಮ ಆನ್ ಲೈನ್ ಪೋರ್ಟಲ್ ಮತ್ತಷ್ಟು ಅಭಿವೃದ್ಧಿ ಹೊಂದಲು ನೆರವಾಗಲಿದೆ. ನಾವು ಈ ಆಯ್ಕೆಯನ್ನು ಗ್ರಾಹಕರ ಮುಂದಿಡಲು ಬಯಸುತ್ತೇವೆ ಮತ್ತು ಖರೀದಿಯ ನಂತರದ ಚಿಂತೆಯನ್ನು ಗ್ರಾಹಕರಿಂದ ದೂರ ಮಾಡಲು ಪ್ರಯತ್ನಿಸುತ್ತಿದ್ದೇವೆ." ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಫ್ಲಿಪ್ ಕಾರ್ಟ್ ನ ಸೀನಿಯರ್ ವಿಪಿ ಮತ್ತು ಫಿನ್ಟೆಕ್ ನ ಮುಖ್ಯಸ್ಥರಾಗಿರುವ ರವಿ ಗರ್ಕಿಪತಿ.

ಅಕ್ಟೋಬರ್ 10 ರಿಂದ ಆರಂಭ:

ಅಕ್ಟೋಬರ್ 10 ರಿಂದ ಆರಂಭ:

ಈ ವಿಮಾ ಸೌಲಭ್ಯವು ಅಕ್ಟೋಬರ್ 10 ರಿಂದ ಲಭ್ಯವಾಗಲಿದೆ. ಅಂದರೆ ಅದು ಬಿಗ್ ಬಿಲಿಯನ್ ಡೇ ಸೇಲ್ ನಿಂದ ಆರಂಭಗೊಳ್ಳುತ್ತದೆ. ಶೇಕಡಾ 36 ರಷ್ಟು ಭಾರತೀಯ ಮೊಬೈಲ್ ಫೋನ್ ಗ್ರಾಹಕರು ಸ್ಮಾರ್ಟ್ ಫೋನ್ ಗಳನ್ನು ಬಳಕೆ ಮಾಡುತ್ತಾರೆ. ಇದರಲ್ಲಿ ಹೆಚ್ಚಿನ ಗ್ರಾಹಕರಿಗೆ ತಮ್ಮ ಸ್ಕ್ರೀನ್ ಒಡೆದು ಹೋಗುವ ಮತ್ತು ಫೋನ್ ನ್ನು ಕಳ್ಳರು ಕದಿಯುವ ಭಯವನ್ನು ಹೊಂದಿರುತ್ತಾರೆ. ಈ ಸಮಸ್ಯೆಯ ಪರಿಹಾರಕ್ಕಾಗಿ ಮೊಬೈಲ್ ಫೋನ್ ಗಳಿಗೆ ವಿಮಾ ಸೌಲಭ್ಯವನ್ನು ಒದಗಿಸಲು ಫ್ಲಿಪ್ ಕಾರ್ಟ್ ಈ ಹೆಜ್ಜೆಯನ್ನು ಇಟ್ಟಿದ್ದು ಬಜಾಜ್ ಜೊತೆ ಕೈಜೋಡಿಸಿದೆ.

ಎಷ್ಟು ಅವಧಿಯ ಇನ್ಸುರೆನ್ಸ್:

ಎಷ್ಟು ಅವಧಿಯ ಇನ್ಸುರೆನ್ಸ್:

ಫ್ಲಿಪ್ ಕಾರ್ಟ್ ತಿಳಿಸುವಂತೆ ಈ ಇನ್ಸುರೆನ್ಸ್ ಒಂದು ವರ್ಷದ ವ್ಯಾಲಿಡಿಟಿಯನ್ನು ಹೊಂದುರುತ್ತದೆ. ಇದರಲ್ಲಿ ಅಪಘಾತ ವಿಮೆ, ಸ್ಕ್ರೀನ್ ಡ್ಯಾಮೇಜ್, ಲಿಕ್ವಿಡ್ ಡ್ಯಾಮೇಜ್ ಮತ್ತು ಕಳ್ಳತನವಾದಲ್ಲಿ ವಿಮೆ ಸೌಲಭ್ಯವು ಇರುತ್ತದೆ.

ಯಾವಾಗ ಇನ್ಸುರೆನ್ಸ್ ಖರೀದಿಸಬೇಕು?:

ಯಾವಾಗ ಇನ್ಸುರೆನ್ಸ್ ಖರೀದಿಸಬೇಕು?:

99 ರುಪಾಯಿ ಮೇಲ್ಪಟ್ಟು ಗ್ರಾಹಕರು ಯಾವುದೇ ಫೋನ್ ಖರೀದಿಸಿದ ಕ್ಷಣವೇ ಈ ಸಿಎಂಐ ಪ್ಲಾನ್ ನ್ನು ಕೂಡ ಅದೇ ಸಮಯಕ್ಕೆ ಖರೀದಿಸಬಹುದಾದ ಆಯ್ಕೆಯನ್ನು ಫ್ಲಿಪ್ ಕಾರ್ಟ್ ನೀಡುತ್ತದೆ. ಒಮ್ಮೆ ಗ್ರಾಹಕರು ಚೆಕ್ ಔಟ್ ಗಾಗಿ ತಮ್ಮ ಮಾಹಿತಿಗಳನ್ನು ಹಂಚಿಕೊಂಡ ನಂತರ, ವಸ್ತುವು ಗ್ರಾಹಕರಿಗೆ ತಲುಪಿದ ದಿನದಿಂದ ಈ ವಿಮಾ ಪಾಲಿಸಿಯು ಅನ್ವಯವಾಗುತ್ತದೆ.

ವಿಮಾ ಸೌಲಭ್ಯ ಪಡೆಯುವುದು ಹೇಗೆ?

ವಿಮಾ ಸೌಲಭ್ಯ ಪಡೆಯುವುದು ಹೇಗೆ?

ಈ ವಿಮಾ ಸೌಲಭ್ಯವನ್ನು ಪಡೆಯಲು ಗ್ರಾಹಕರು ಆಪ್ ಮೂಲಕ, ಇಮೇಲ್ ಅಥವಾ ಫೋನ್ ಕರೆಗಳ ಮೂಲಕ ಫ್ಲಿಪ್ ಕಾರ್ಟ್ ನ್ನು ತಲುಪಬಹುದು. ನಂತರ ಫೋನ್ ನ್ನು ಸಮಸ್ಯೆಯ ಪರಿಹಾರಕ್ಕಾಗಿ ನೀಡಬಹುದು ಅಥವಾ ಕ್ಯಾಷ್ ಪೇಔಟ್ ಗಾಗಿ ಕೂಡ ಬೇಡಿಕೆ ಸಲ್ಲಿಸಬಹುದು. ಫ್ಲಿಪ್ ಕಾರ್ಟ್ ನಲ್ಲಿ ರಿಜಿಸ್ಟರ್ ಆಗಿರುವ ಬ್ಯಾಂಕ್ ಖಾತೆಗೆ ಇಲ್ಲವೇ ಗ್ರಾಹಕರ ಮಾಲೀಕತ್ವದ ಇತರೆ ಖಾತೆಗಳಿಗೆ ವಿಮಾ ಮೊತ್ತವನ್ನು ಪಾವತಿ ಮಾಡಲಾಗುತ್ತದೆ.

Best Mobiles in India

English summary
Flipkart ties up with Bajaj Allianz, launches insurance cover for smartphones. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X