Subscribe to Gizbot

ಪೇಪರ್‌ನಂತೆ ಮಡಿಸಬಹುದಾದ ಸ್ಮಾರ್ಟ್‌ಪೋನ್ ಮಾರುಕಟ್ಟೆಗೆ

Written By:

ಇದು ವಿಚಿತ್ರವಾದರೂ ಸತ್ಯ!!! ಹೀಗೊಂದು ಪರಿಶೋಧನೆ ಸ್ಮಾರ್ಟ್‌ಫೋನ್‌ ಜಗತ್ತಿನಲ್ಲಿ ನಡೆದಿದ್ದು ನಿಜಕ್ಕೂ ಅಚ್ಚರಿಯನ್ನುಂಟು ಮಾಡುತ್ತದೆ. ಸ್ಮಾರ್ಟ್‌ಪೋನ್‌ನಂತಿರುವ ಈ ಡಿವೈಸ್ ಹೆಚ್ಚಿನ ಪರದೆಯನ್ನು ಹೊಂದಿದ್ದು ಎಲ್ಲಾ ಸ್ಕ್ರೀನ್‌ಗಳನ್ನು ಮಡಚಿದಾಗ ಟ್ಯಾಬ್ಲೆಟ್‌ನಂತೆ ತೋರುತ್ತದೆ.

ಕ್ವೀನ್ಸ್‌ ಯುನಿವರ್ಸಿಟಿಯ ಸದಸ್ಯರು ಮಡಚಬಹುದಾದ ಈ ಸ್ಮಾರ್ಟ್‌ಫೋನ್ ಅನ್ನು ರಚಿಸಿದ್ದು ಅವರು ಅದನ್ನು ಪೇಪರ್ ಫೋಲ್ಡ್ ಎಂದೇ ಕರೆದಿದ್ದಾರೆ. ಯೂಟ್ಯೂಬ್‌ನಲ್ಲಿ ಇದಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನೀಡಿದ್ದು ಅದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತೋರಿಸಲಾಗಿದೆ.

ಪೇಪರ್‌ನಂತೆ ಮಡಿಸಬಹುದಾದ ಸ್ಮಾರ್ಟ್‌ಪೋನ್ ಮಾರುಕಟ್ಟೆಗೆ

ಆಕಾರವನ್ನು ಬದಲಾಯಿಸಿಕೊಳ್ಳುವ ಈ ಸ್ಮಾರ್ಟ್‌ಫೋನ್ ಎಲೆಕ್ಟ್ರಾನಿಕ್ ಡಿಸ್‌ಪ್ಲೇಯನ್ನು ನೀಡಿದ್ದು ಹೆಚ್ಚುವರಿ ಸ್ಕ್ರೀನ್ ಅನ್ನು ಒದಗಿಸಿದೆ. ಇದರಿಂದ ಡಿಸ್‌ಪ್ಲೇಯ ಸ್ಥಳವನ್ನು ವಿಸ್ತರಿಸಬಹುದಾಗಿದೆ. ಈ ಟ್ಯಾಬ್ಲೇಟ್ ಗಮನ ಸೆಳೆಯುವಂತಹ ಕೆಲ ವಿಶಿಷ್ಟ ಕೆಲಸಗಳನ್ನು ಮಾಡುತ್ತಿದ್ದು ನಿಮಗೆ ಇದನ್ನು ನೋಡಿದಾಗ ಅದನ್ನು ಖರೀದಿಸುವ ಮೋಹ ಖಂಡಿತ ಮನದಲ್ಲಿ ಸುಳಿಯುತ್ತದೆ.

ಇಂಡಿವಿಶುವಲ್ ಚಿತ್ರಗಳನ್ನು ಪೂರ್ಣ ಪರದೆಯಲ್ಲಿ ತೋರಿಸಲಾಗಿದ್ದು ಎರಡನೆಯ ಹಾಗೂ ಉಳಿದ ಡಿಸ್‌ಪ್ಲೇಯನ್ನು ಸನ್ನೆಗಳ ಮೂಲಕ ನಿಯಂತ್ರಿಸಬಹುದಾಗಿದೆ. ಇದನ್ನು ಬಳಕೆದಾರ ತನಗೆ ಬೇಕಾದಷ್ಟು ರೀತಿಯಲ್ಲಿ ಮಡಚಬಹುದಾಗಿದ್ದು ಅದಕ್ಕೆ ತಕ್ಕಂತೆ ಅದು ತನ್ನ ಆಕಾರವನ್ನು ಬದಲಾಯಿಸುತ್ತದೆ.

ಇದು ಇನ್ನೂ ಮಾರುಕಟ್ಟೆಗೆ ಬರಬಹುದೇ ಇಲ್ಲವೇ ಎಂಬ ಮಾಹಿತಿ ಇದವರೆಗೂ ಲಭ್ಯವಾಗಿಲ್ಲ. ಮತ್ತು ಇದು ಎಲ್ಲಿ ದೊರಕುತ್ತದೆ ಎಂಬುದೂ ಕೂಡ ಇನ್ನೂ ಬಹಿರಂಗವಾಗಿಲ್ಲ.

<center><iframe width="100%" height="360" src="//www.youtube.com/embed/GJiy7sb6SKw?feature=player_embedded" frameborder="0" allowfullscreen></iframe></center>

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot