ಗೂಗಲ್‌ನ ಭವಿಷ್ಯದ ಯೋಜನೆಗಳು

By Ashwath
|

ಟೆಕ್‌ ಕ್ಷೇತ್ರದ ದೊಡ್ಡ ಕಂಪೆನಿಯಾಗಿರುವ ಗೂಗಲ್‌ ಇಂಟರ್‌ನೆಟ್‌ ಕ್ಷೇತ್ರವಲ್ಲದೇ ಇನ್ನಿತರ ಹಲವಾರು ಸಮಾಜಮುಖಿ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಬಳಕೆದಾರರಿಗೆ ವಿವಿಧ ರೀತಿಯ ಸೇವಗಳನ್ನು ನೀಡುತ್ತಿರುವ ಗೂಗಲ್‌‌ ಮುಂದಿನ ಕೆಲ ವರ್ಷಗಳನ್ನು ಬಳಕೆದಾರರಿಗೆ ಮತ್ತಷ್ಟು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಮುಂದಾಗುತ್ತಿದ್ದು, ಸಂಶೋಧನೆ ನಡೆಸುತ್ತಿದೆ. ಹೀಗಾಗಿ ಇಲ್ಲಿ ಗೂಗಲ್‌ನ ಭವಿಷ್ಯದ ಉತ್ಪನ್ನಗಳ ಕಿರು ಪರಿಚಯವನ್ನು ಮುಂದಿನ ಪುಟದಲ್ಲಿ ನೀಡಲಾಗಿದೆ. ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ: ಗೂಗಲ್‌ ನ್ಯೂಸ್‌ನಲ್ಲಿ ಕನ್ನಡ ಬೇಕು ಎಂದು ಗೂಗಲ್‌ನ್ನು ಕೇಳಿ

1

1


ಗೂಗಲ್‌ನ ಆಂಡ್ರಾಯ್ಡ್ ಓಎಸ್‌ ಆಧಾರಿತ ಸ್ಮಾರ್ಟ್‌ ಬಲ್ಬ್‌ನ್ನು ಎಲ್‌ಜಿ ತಯಾರಿಸಿದರೆ, ಸ್ಯಾಂ‌ಮ್‌ಸಂಗ್‌ ರೆಫ್ರಿಜರೇಟರ್‌ಗಳು ತಯಾರಿಸಿದ್ದು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಗೂಗಲ್‌ ಈಗ ಸಂಪೂರ್ಣ‌ ಮನೆಯನ್ನೇ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಮೂಲಕ ನಿಯಂತ್ರಿಸುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುತ್ತಿದೆ.

ವೈಫೈ ಮೂಲಕ ನಿಯಂತ್ರಣ ಮಾಡಬಹುದಾದ ಥರ್ಮೋಸ್ಟಾಟ್‌ ಮತ್ತು ಹೊಗೆ ಗುರುತಿಸುವ ಉತ್ಪನ್ನಗಳನ್ನು ಅಭಿವೃದ್ಧಿ ಪಡಿಸುವ ನೆಸ್ಟ್‌ ಲ್ಯಾಬ್‌‌ನ್ನು ಗೂಗಲ್ ಖರೀದಿಸಿದ್ದು ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ನಡೆಸುತ್ತಿದೆ.

2

2


ಗೂಗಲ್‌ ಆನ್‌ಲೈನ್‌ ರಿಟೇಲ್‌ ಕ್ಷೇತ್ರದ ವ್ಯಾಪಾರಕ್ಕೆ ಮುಂದಾಗುತ್ತಿದ್ದು, ಈ ಸಂಬಂಧ ವಸ್ತುಗಳನ್ನು ಪ್ಯಾಕ್‌ ಮಾಡಲು ರೊಬೊಟ್‌ಗಳನ್ನು ಬಳಸುವ ಯೋಜನೆ ಹಾಕಿಕೊಂಡಿದೆ ಎನ್ನಲಾಗಿದೆ.ಗೂಗಲ್‌ ಈಗಾಗಲೇ ಎಂಟು ರೊಬಾಟ್‌ ತಯಾರಿಕಾ ಕಂಪೆನಿಯನ್ನು ಖರೀದಿಸಿದ್ದು,ಕಣ್ಣು,ಕಿವಿ, ಮೂಗು, ಬಾಯಿ,ಕೈ-ಕಾಲು ಇರುವ ಹ್ಯುಮನಾಯ್ಡ್ ರೊಬೊಟ್‌‌ಗಳನ್ನು ತನ್ನ ಉದ್ಯಮಕ್ಕೆ ಬಳಸಲು ಮುಂದಾಗುತ್ತಿದೆ.

3

3


ಬಾಹ್ಯಾಕಾಶ ಉಪಗ್ರಹಗಳ ಉಡಾವಣೆ ಮಾಡುವ ವೆಚ್ಚ ಕಡಿಮೆ ಮಾಡಲು ವಿಶ್ವದ ವಿವಿಧ ಕಂಪೆನಿಗಳು ಬಾಹ್ಯಾಕಾಶಕ್ಕೆ ಏಣಿ ನಿರ್ಮಿಸುವ ಯೋಜನೆಯನ್ನು ಹಾಕಿಕೊಂಡಿದ್ದು,ಈ ಯೋಜನೆಗೆ ಗೂಗಲ್‌ ಸಹಕಾರ ನೀಡುತ್ತಿದೆ. ಬಾಹ್ಯಾಕಾಶಕ್ಕೆ ಸಂಶೋಧನಾ ಸಾಮಗ್ರಿ, ಉಪಗ್ರಹ ಬಿಡಿಭಾಗಗಳ ಸಾಗಣೆಗೆ ಇಂಗಾಲದ ಸೂಕ್ಷ್ಮ ಕೊಳವೆ (ಕಾರ್ಬನ್ ನ್ಯಾನೊ ಟ್ಯೂಬ್), ನಾರುಗಳ (ಫೈಬರ್) ಮಿಶ್ರಣ , ನ್ಯಾನೊ ರಾಳ ಕಣಗಳು, ಲೇಸರ್ ಚಾಲಿತ ಪ್ರಕಾಶ ಕಿರಣಗಳನ್ನು ಇದಕ್ಕಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.

4

4


ಮುಪ್ಪು ತಡೆಯಲು ಗೂಗಲ್‌ ಮತ್ತು ಆಪಲ್‌ ಸೇರಿ‌ ಕ್ಯಾಲಿಕೋ(Calico) ಹೆಸರಿನ ಹೊಸ ಕಂಪೆನಿಯನ್ನು ಆರಂಭಿಸಿದ್ದು ಮನುಷ್ಯನ ಮುಪ್ಪಿನ ಸಂದರ್ಭ‌ದಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳನ್ನು ತಡೆಯಲು ಈ ಕಂಪೆನಿ ಸಂಶೋಧನೆ ನಡೆಸುತ್ತಿವೆ. ಮುಪ್ಪಿನ ಜೊತೆಗೆ ಕ್ಯಾನ್ಸರ್‌ ನಿರ್ಮೂ‌ಲನೆ ಮಾಡಲು ಕ್ಯಾಲಿಕೋದ ಸಂಶೋಧಕರು ಸಂಶೋಧನೆ ನಡೆಸುತ್ತಿದ್ದಾರೆ.

5

5

ಭವಿಷ್ಯದ ಆನ್‌ಲೈನ್‌ ಕ್ಷೇತ್ರದ ಬೆಳವಣಿಗೆ ಊಹಿಸಲು,ಈ ಕ್ಷೇತ್ರದ ಸಂಶೋಧನೆಗಾಗಿ ಗೂಗಲ್‌‌ರೆಕಾರ್ಡ್‌‌‌‌ಡೆಡ್‌‌ ಫ್ಯೂಚರ್‌ ಹೆಸರಿನ ಕಂಪೆನಿಯನ್ನು ಸ್ಥಾಪಿಸಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X