Subscribe to Gizbot

ಸ್ಮಾರ್ಟ್‌ಫೋನಲ್ಲೇ ಎಲ್‌‌ಜಿ ಬಲ್ಬ್‌ನ್ನು ಆನ್‌ ಆಫ್‌ ಮಾಡಿ

Posted By:

ದಕ್ಷಿಣ ಕೊರಿಯಾದ ಎಲೆಕ್ಟ್ರಾನಿಕ್ಸ್‌ ದಿಗ್ಗಜ ಎಲ್‌‌ಜಿ ಕಂಪೆನಿ ಸ್ಮಾರ್ಟ್‌‌‌ಫೋನ್‌ನಿಂದಲೇ ನಿಯಂತ್ರಣ ಮಾಡಬಲ್ಲ ಸ್ಮಾರ್ಟ್‌‌‌ಬಲ್ಬ್‌‌ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಹೊಸ ಸ್ಮಾರ್ಟ್‌‌ಬಲ್ಬ್‌‌ಗೆ 35 ಸಾವಿರ ದಕ್ಷಿಣ ಕೊರಿಯಾ ವೋನ್(ಅಂದಾಜು 2 ಸಾವಿರ ರೂ.) ಎಲ್‌‌ಜಿ ನಿಗದಿ ಪಡಿಸಿದೆ. ಕೊರಿಯಾದ ಮಾರುಕಟ್ಟೆಗೆ ಮಾತ್ರ ಬಿಡುಗಡೆ ಮಾಡಿದ್ದು ವಿಶ್ವದ ಮಾರುಕಟ್ಟೆಗೆ ಸ್ಮಾರ್ಟ್‌‌ ಬಲ್ಬ್‌ ಬಿಡುಗಡೆ ಮಾಡುವ ಬಗ್ಗೆ ಯಾವುದೇ ಮಾಹಿತಿ ಪ್ರಕಟಿಸಿಲ್ಲ. ಮುಂದಿನ ಪುಟದಲ್ಲಿ ಈ ಸ್ಮಾರ್ಟ್‌ಬಲ್ಬ್‌ ಹೇಗಿದೆ ಎನ್ನುವುದಕ್ಕೆ ಚಿತ್ರ ಮತ್ತು ವಿಡಿಯೋವನ್ನು ನೀಡಲಾಗಿದೆ.

ಇದನ್ನೂ ಓದಿ: ಎಲ್‌ಇಡಿ ಬಲ್ಬ್‌ ಮೂಲಕ ವೈಫೈ ಸಿಗ್ನಲ್‌-ಚೀನಾ ಸಂಶೋಧನೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಆಂಡ್ರಾಯ್ಡ್‌,ಐಓಎಸ್‌ನಲ್ಲಿ ಕಾರ್ಯ‌ನಿರ್ವ‌ಹಣೆ:

ಸ್ಮಾರ್ಟ್‌ಫೋನಲ್ಲೇ ಎಲ್‌‌ಜಿ ಬಲ್ಬ್‌ನ್ನು ಆನ್‌ ಆಫ್‌ ಮಾಡಿ

ಈ ಸ್ಮಾರ್ಟ್‌ಬಲ್ಬ್‌‌ ಆಂಡ್ರಾಯ್ಡ್‌‌ 4.3 ಜೆಲ್ಲಿ ಬೀನ್‌‌ ನಂತರದ ಆವೃತ್ತಿ ಮತ್ತು ಐಓಎಸ್‌ 6 ನಂತರದ ಆವೃತ್ತಿಯಲ್ಲಿ ಮಾತ್ರ ಕಾರ್ಯ‌ ನಿರ್ವ‌ಹಿಸಬಲ್ಲುದು ಎಂದು ಎಲ್‌ಜಿ ತಿಳಿಸಿದೆ.

 10 ವ್ಯಾಟ್ ಎಲ್‌ಇಡಿ ಸ್ಮಾರ್ಟ್‌‌ಬಲ್ಬ್

ಸ್ಮಾರ್ಟ್‌ಫೋನಲ್ಲೇ ಎಲ್‌‌ಜಿ ಬಲ್ಬ್‌ನ್ನು ಆನ್‌ ಆಫ್‌ ಮಾಡಿ


ಎಲ್‌‌ಜಿ ಹೊಸ 10 ವ್ಯಾಟ್ ಎಲ್‌ಇಡಿ ಸ್ಮಾರ್ಟ್‌‌ಬಲ್ಬ್ ಪ್ರತಿದಿನ ಐದು ಗಂಟೆ ಬಳಸಿದ್ದರೆ, 10 ವರ್ಷ‌ದವರೆಗೆ ಬಳಸಬಹುದಾಗಿದ್ದು, ವೈಫೈ ಅಥವಾ ಬ್ಲೂಟೂತ್‌ ಮೂಲಕ ನಿಯಂತ್ರಣ ಮಾಡಬಹುದಾಗಿದೆ.

ಎರಡು ಮೋಡ್‌!

ಸ್ಮಾರ್ಟ್‌ಫೋನಲ್ಲೇ ಎಲ್‌‌ಜಿ ಬಲ್ಬ್‌ನ್ನು ಆನ್‌ ಆಫ್‌ ಮಾಡಿ

ಈ ಸ್ಮಾರ್ಟ್‌‌ ಬಲ್ಬ್‌‌ಗೆ ಎಲ್‌‌ಜಿ ಎರಡು ಮೋಡ್‌ಗಳನ್ನು ನೀಡಿದ್ದು, ಬಳಕೆದಾರ ಮನೆಯಲ್ಲಿಲ್ಲದಿದ್ದರೆ 'ಸೆಕ್ಯೂರಿಟಿ ಮೋಡ್‌'‌ ಹಾಕಿದ್ರೆ ಬಲ್ಬ್‌ ಆನ್‌ ಆಗುವಂತೆ ಮಾಡಬಹುದು. ಇನ್ನೂ ಪಾರ್ಟಿ‌‌‌,ಮ್ಯೂಸಿಕ್‌ಗಾಗಿ 'ಪಾರ್ಟಿ‌ ಮೋಡ್‌' ವಿಶೇಷತೆ ಹೊಂದಿದ್ದು ಈ ಬಲ್ಬ್‌‌‌ನಲ್ಲೇ ವಿವಿಧ ಬಣ್ಣಗಳನ್ನು ಫ್ಲ್ಯಾಶ್‌ ಮಾಡುವಂತೆ ಮಾಡಬಹುದು.

ಸ್ಮಾರ್ಟ್‌ಫೋನಲ್ಲೇ ಎಲ್‌‌ಜಿ ಬಲ್ಬ್‌ನ್ನು ಆನ್‌ ಆಫ್‌ ಮಾಡಿ

ಸ್ಮಾರ್ಟ್‌ಫೋನಲ್ಲಿ ಹೇಗೆ ವಾಲ್ಯೂಮ್‌‌ ಜಾಸ್ತಿ,ಕಡಿಮೆ ಮಾಡುತ್ತಿರೋ ಅದೇ ರೀತಿಯಾಗಿ ಬಲ್ಬ್‌ನ ಪ್ರಕಾಶವನ್ನೂ ಸ್ಮಾರ್ಟ್‌‌‌ಫೋನ್‌‌ ಆಪ್‌ ಮೂಲಕ ಜಾಸ್ತಿ ಕಡಿಮೆ ಮಾಡಬಹುದು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot