ಆಂಡ್ರಾಯ್ಡ್ ಪಿ ಬೇಟಾ 2 ರಿಲೀಸ್...ಹೊಸ ಒಎಸ್ ನಲ್ಲಿ ಏನೆಲ್ಲಾ ಇದೆ?!

By Avinash
|

ಗೂಗಲ್ ತನ್ನ ಆಂಡ್ರಾಯ್ಡ್ ಒಎಸ್ ಸರಣಿಗಳನ್ನು ಮುಂದುವರೆಸಿದ್ದು, ಆಂಡ್ರಾಯ್ಡ್ ಒರಿಯೋದ ನಂತರ ಈಗ ಪಿ ವರ್ಷನ್ ನ ಬೇಟಾ ಆವೃತ್ತಿ ಬಿಡುಗಡೆ ಮಾಡಿದೆ. ಹೊಸ ಒಎಸ್ ಹಲವು ವಿಶೇಷಗಳಿಂದ ಕೂಡಿರಲಿದೆ ಎಂಬುದನ್ನು ಆಂಡ್ರಾಯ್ಡ್ ಪಿ ಬೇಟಾ 2 ಆವೃತ್ತಿ ಪುಷ್ಟೀಕರಿಸಿದೆ.

ಇತ್ತೀಚೆಗೆ ತಾನೆ ಆಪಲ್ ತನ್ನ WWDC 2018ರಲ್ಲಿ iOS 12 ಬಿಡುಗಡೆ ಮಾಡಿತ್ತು, ಇದಾದ ಬೆನ್ನಲ್ಲೇ ಗೂಗಲ್ ತನ್ನ ಮುಂದಿನ ಒಎಸ್ ಆವೃತ್ತಿಯನ್ನು ಬಿಡುಗಡೆಗೊಳಿಸಿದ್ದು, ಎರಡು ಒಎಸ್ ಗಳು ಸೆಪ್ಟೆಂಬರ್ ವೇಳೆಗೆ ಸ್ಮಾರ್ಟ್ ಪೋನ್ ಗಳಲ್ಲಿ ಬರುವ ಸಾಧ್ಯತೆಯಿದ್ದು, ಸಿಲಿಕಾನ್ ವ್ಯಾಲಿಯ ಸ್ಪರ್ಧಾತ್ಮಕ ಯುದ್ಧವನ್ನು ನೋಡಬಹುದಾಗಿದೆ.

ಆಂಡ್ರಾಯ್ಡ್ ಪಿ ಬೇಟಾ 2 ರಿಲೀಸ್...ಹೊಸ  ಒಎಸ್ ನಲ್ಲಿ ಏನೆಲ್ಲಾ ಇದೆ..!

ಹಾಗಾದ್ರೇ, ಗೂಗಲ್ ಬಿಡುಗಡೆ ಮಾಡಿರುವ ಹೊಸ ಒಎಸ್ ಆಂಡ್ರಾಯ್ಡ್ ಪಿ ಬೇಟಾ 2 ನಲ್ಲಿ ಏನೇಲ್ಲಾ ವಿಶೇಷಗಳಿವೆ ಎಂಬುದನ್ನು ಪಟ್ಟಿ ಮಾಡಿದ್ದೇವೆ. ತಿಳಿದುಕೊಳ್ಳಲು ಮುಂದೆ ಓದಿ..

10 ಸಾವಿರಕ್ಕಿವೆ ನಿಮಗೆ ಸರಿ ಹೊಂದುವ ಬೆಸ್ಟ್ ಸ್ಮಾರ್ಟ್ ಪೋನ್ಸ್..!10 ಸಾವಿರಕ್ಕಿವೆ ನಿಮಗೆ ಸರಿ ಹೊಂದುವ ಬೆಸ್ಟ್ ಸ್ಮಾರ್ಟ್ ಪೋನ್ಸ್..!

1.ನಿಮ್ಮನ್ನು ರಂಜಿಸಲು 157 ಹೊಸ ಎಮೋಜಿಗಳು..!

1.ನಿಮ್ಮನ್ನು ರಂಜಿಸಲು 157 ಹೊಸ ಎಮೋಜಿಗಳು..!

ಹೌದು, ಗೂಗಲ್ ತನ್ನ ಆಂಡ್ರಾಯ್ಡ್ ಒಎಸ್ ಪಿ ಬೇಟಾ 2 ನಲ್ಲಿ ಹೊಸ ಎಮೋಜಿಗಳನ್ನು ಪರಿಚಯಿಸುತ್ತಿದೆ. ಬರೋಬ್ಬರಿ 157 ಹೊಸ ಎಮೋಜಿಗಳು ಹೊಸತಾಗಿ ಬಂದು ಸೇರುತ್ತಿದ್ದು, ಗುಂಗುರು ಕೂದಲಿನ, ಬಿಳಿ ಕೂದಲಿನ, ಬೋಳು ತಲೆಗಳು, ಬರ್ತ್ ಡೇ ಪಾರ್ಟಿ ಹ್ಯಾಟ್ ಹೊಂದಿರುವ ಮುಖಗಳು, ಮಾವಿನ ಹಣ್ಣು, ನೂಲು ಚೆಂಡು, ಜ್ವಾಲೆ ಮುಂತಾದ ಹೊಸ ಎಮೋಜಿಗಳು ಸ್ಥಾನ ಪಡೆದಿರುವ ಸಾಧ್ಯತೆಯಿದೆ.

ಸ್ಕೇಟ್ಬೋರ್ಡ್, ಲಾಬ್ಸ್ಟರ್, ಕೆಂಪುತಲೆ ಹೊಂದಿರುವ ಎಮೋಜಿಗಳು, ಕುಟುಂಬ ಮತ್ತು ದಂಪತಿಗಳ ಎಮೋಜಿಗಳಲ್ಲಿ ಲಿಂಗ-ತಟಸ್ಥ ಆಯ್ಕೆ ನೀಡಲಾಗಿದೆ. ಎಮೋಜಿಗಳಲ್ಲಿದ್ದ ಎಗ್ ಸಲಾಡ್ ಎಮೋಜಿಯಲ್ಲಿನ ಮೊಟ್ಟೆಯನ್ನು ಬಿಟ್ಟು ಹೊಸ ಎಮೋಜಿಯನ್ನು ನೀಡಿರುವುದು ವಿಶೇಷವಾಗಿದೆ.

2.ಬದಲಾಗಿದೆ ನ್ಯಾವಿಗೇಷನ್ ಬಾರ್

2.ಬದಲಾಗಿದೆ ನ್ಯಾವಿಗೇಷನ್ ಬಾರ್

ಆಂಡ್ರಾಯ್ಡ್ ಪಿ ನಲ್ಲಿ ಪ್ರಮುಖವಾದ ಬದಲಾವಣೆಯೆಂದರೆ ನ್ಯಾವಿಗೇಷನ್ ಬಾರ್ ಬದಲಾಗಿದೆ. ಆಂಡ್ರಾಯ್ಡ್ ಪಿನಲ್ಲಿ ರಿಸೆಂಟ್ ಆಪ್ ಗಳನ್ನು ಬಳಸಲು ಹೋಮ್ ಬಟನ್ ಬಳಸಬಹುದಾಗಿದೆ. ಹೋಮ್ ಬಟನ್ ಸಣ್ಣ ಪಿಲ್ಲ್ ಆಕಾರದ ಚಿಹ್ನೆಯೊಂದಿಗೆ ಬದಲಾಗಿದೆ. ಒಪನ್ ಆಗಿರುವ ಎಲ್ಲ ಆಪ್ ಗಳನ್ನು ನೋಡಲು ಮತ್ತು ಅಪ್ಲಿಕೇಷನ್ಸ್ ಬಳಸಲು ಸ್ವೈಪ್ ಮಾಡಬಹುದಾಗಿದೆ.

3.ಡ್ಯಾಶ್ ಬೋರ್ಡ್

3.ಡ್ಯಾಶ್ ಬೋರ್ಡ್

ಆಂಡ್ರಾಯ್ಡ್ ಪಿ ಯ ಹೊಸ ವೈಶಿಷ್ಟ್ಯ ಏನೆಂದರೆ, ಡ್ಯಾಶ್ ಬೋರ್ಡ್ ಆಯ್ಕೆ ನೀಡಲಾಗಿದೆ. ಇದು ನೀವು ಎಷ್ಟು ಸಮಯ ನಿಮ್ಮ ಡಿವೈಸ್ ಬಳಸುತ್ತಿದ್ದಿರಿ, ಮೆಸೆಜ್ ಕಳಿಸಲು, ಕಂಟೆಂಟ್ ಸ್ಟ್ರೀಮ್ ಮಾಡಲು, ಇಂಟರ್ ನೆಟ್ ಸರ್ಫ್ ಮಾಡಲು, ಕರೆ ಮಾಡಲು ಎಷ್ಟೇಷ್ಟು ಸಮಯ ತೆಗೆದುಕೊಂಡಿದ್ದೀರಾ ಎಂಬುದನ್ನು ಡ್ಯಾಶ್ ಬೋರ್ಡ್ ಸೂಚಿಸುತ್ತೆ. ಯೂಟ್ಯುಬ್ ನಂತಹ ಆಪ್ ಬಳಸುತ್ತಿರುವಾಗ ರೆಕಮಂಡೆಷನ್ ನೋಟಿಫಿಕೇಷನ್ ಬಂದು ಸ್ಕ್ರೀನ್ ಬ್ರೇಕ್ ತೆಗೆದುಕೊಳ್ಳುತ್ತೆ. ಅದಕ್ಕಾಗಿ ಕೆಲವು ನಿಗದಿತ ಆಪ್ ಗಳಿಗೆ ಸ್ಕ್ರೀನ್ ಟೈಮ್ ಸೆಟ್ ಅಪ್ ಮಾಡುವ ಆಯ್ಕೆ ನೀಡಲಾಗಿದೆ.

4.ವಿಂಡ್ ಡೌನ್ ಮೋಡ್

4.ವಿಂಡ್ ಡೌನ್ ಮೋಡ್

ಆಂಡ್ರಾಯ್ಡ್ ಪಿ ವಿಂಡ್ ಡೌನ್ ಮೋಡ್ ಎಂಬ ಹೊಸ ಫೀಚರ್ ಬಿಡುಗಡೆ ಮಾಡಿದ್ದು, ಬಹಳ ವಿಶೇಷತೆಯಿಂದ ಕೂಡಿದೆ. ಈ ಮೂಲಕ ಡಿಜಿಟಲ್ ವೆಲ್ ಬಿಹಿಂಗ್ ಅನ್ನು ಉತ್ತಮ ಪಡಿಸಿದೆ. ವಿಂಡ್ ಡೌನ್ ಮೋಡ್ನಲ್ಲಿ Google Assistantಗೆ ನೀವು ಮಲಗುತ್ತೇನೆ ಎಂದು ಹೇಳಿದರೆ ಆಟೋಮೆಟಿಕಲಿ ಸ್ಮಾರ್ಟ್ ಪೋನ್ ಅನ್ನು Do Not Disturb ಮೋಡ್ ನಲ್ಲಿರಿಸುತ್ತದೆ ಮತ್ತು ನಿಮ್ಮ ಸ್ಕ್ರೀನ್ ಅನ್ನು ಗ್ರೇಸ್ಕೇಲ್ ಗೆ ಬದಲಾಯಿಸುತ್ತದೆ.

5.ಅಡಾಪ್ಟಿವ್ ಬ್ರೈಟ್ ನೆಸ್

5.ಅಡಾಪ್ಟಿವ್ ಬ್ರೈಟ್ ನೆಸ್

ಆಂಡ್ರಾಯ್ಡ್ ಪಿನಲ್ಲಿ ನೀವಿರುವ ವಾತಾವರಣ ಮತ್ತು ನೀವು ಮಾಡುವ ಕೆಲಸಗಳಿಗನುಗುಣವಾಗಿ ಪೋನ್ ಬ್ರೈಟ್ ನೆಸ್ ಆಟೋಮೆಟಿಕ್ ಆಗಿ ಬದಲಾಗುತ್ತದೆ.

6.ನೊಟಿಫಿಕೇಷನ್ಸ್

6.ನೊಟಿಫಿಕೇಷನ್ಸ್

ಆಂಡ್ರಾಯ್ಡ್ ಪಿನ ಮತ್ತೊಂದು ಬಹುದೊಡ್ಡ ಬದಲಾವಣೆಯಂದರೆ ನೊಟಿಫಿಕೇಷನ್ ಗಳನ್ನು ಉತ್ತಮವಾಗಿ ಬದಲಾಯಿಸಿರುವುದು. ಇಲ್ಲಿ ಗೂಗಲ್ ಸ್ಮಾರ್ಟ್ ಪ್ರತಿಕ್ರಿಯೆಗಳನ್ನು ಮಾಡಲು ಸಲಹೆ ನೀಡುತ್ತೆ. ಪೋಟೋಸ್, ಸ್ಟಿಕ್ಕರ್ಸ್ ಗಳನ್ನು ಅಟ್ಯಾಚ್ ಮಾಡಬಹುದು ಮತ್ತು ನಿಮ್ಮದೇ ಆದ ಪ್ರತಿಕ್ರಿಯೆ ನೀಡಬಹುದು.

7.ಸ್ಕ್ರೀನ್ ರೋಟೆಷನ್ ಗೆ ಹೊಸ ಆಯ್ಕೆ

7.ಸ್ಕ್ರೀನ್ ರೋಟೆಷನ್ ಗೆ ಹೊಸ ಆಯ್ಕೆ

ಆಂಡ್ರಾಯ್ಡ್ ಹೀಗಾಗಲೇ ಸ್ಕ್ರೀನ್ ರೋಟೆಷನ್ ಲಾಕ್ ಆಯ್ಕೆ ನೀಡಿದೆ. ಆದರೆ, ಬೇರೆ ಬೇರೆ ಆಪ್ ಗಳನ್ನು ಬಳಸಬೇಕಾದಾಗ ಪ್ರತಿ ಬಾರಿಯು ಸ್ಕ್ರೀನ್ ರೋಟೆಷನ್ ಆಯ್ಕೆ ನೋಡಬೇಕಾಗಿದ್ದರಿಂದ ಹೊಸ ಒಎಸ್ ನಲ್ಲಿ ಅಪ್ಲಿಕೇಷನ್ ಬಳಸುವಾಗಲೇ ನ್ಯಾವಿಗೇಷನ್ ಬಾರ್ ನಲ್ಲಿಯೇ ಸ್ಕ್ರೀನ್ ರೋಟೆಷನ್ ಆಯ್ಕೆ ನೀಡಿದ್ದು, ಯಾವಾಗ ಬೇಕಾದರೂ ಕಿರಿ ಕಿರಿಯಲ್ಲದೇ ಮೊಬೈಲ್ ಬಳಸಬಹುದು.

8.ಗೆಸ್ಚರ್ಸ್

8.ಗೆಸ್ಚರ್ಸ್

ಆಂಡ್ರಾಯ್ಡ್ ಪಿ ಹೊಸ ಗೆಸ್ಚರ್ ಗಳೊಂದಿಗೆ ಬಂದಿದ್ದು, ರಿಂಗ್ ಅವೈಡ್ ಮಾಡಲು ವಾಲ್ಯುಮ್ ಅಪ್ ಮತ್ತು ಪವರ್ ಬಟನ್ ಹಿಡಿದುಕೊಂಡರೆ ಸಾಕು. ರಿಸೆಂಟ್ ಆಪ್ ಗಳನ್ನು ನೋಡಲು ಹೋಮ್ ಬಟನ್ ಸ್ವೈಪ್ ಮಾಡಬೇಕಾದ ಆಯ್ಕೆ ಇದೆ. ಪೋನ್ ಸೈಲೆಂಟ್ ಮಾಡಬೇಕೆಂದರೆ ಪೋನ್ ಟರ್ನ್ ಮಾಡಿದರೆ ಸಾಕು ಸೈಲೆಂಟ್ ಆಗುವ ಆಯ್ಕೆ ಇದೆ.

9.ಒಳಗಡೆಯೂ ಬರಲಿದೆ ಗೂಗಲ್ ಮ್ಯಾಪ್

9.ಒಳಗಡೆಯೂ ಬರಲಿದೆ ಗೂಗಲ್ ಮ್ಯಾಪ್

ಅತಿ ಹೆಚ್ಚು ಇಷ್ಟಪಡುವ ಗೂಗಲ್ ಮ್ಯಾಪ್ ಇನ್ಮುಂದೆ ಕಟ್ಟಡದ ಒಳಗಡೆಯೂ ಕಾರ್ಯನಿರ್ವಹಿಸಲಿದೆ. ಮಾಲ್ ನಂತಹ ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಮಾತ್ರ ಗೂಗಲ್ ಮ್ಯಾಪ್ ಸೇವೆ ಇತ್ತು. ಆದರೆ, ಇದೀಗ Wi-Fi Round Trip Time ಮೂಲಕ ಯಾವುದೇ ಸ್ಥಳದಲ್ಲಿಯಿದ್ದರೂ ಗಮನಿಸಬಹುದಾದ ಆಯ್ಕೆಯಿದೆ.

10.ಬ್ಯಾಟರಿ ಬಾಳಿಕೆ ಉತ್ತಮ

10.ಬ್ಯಾಟರಿ ಬಾಳಿಕೆ ಉತ್ತಮ

ಹೊಸ ಆಂಡ್ರಾಯ್ಡ್ ಪಿ ನಲ್ಲಿ ಬ್ಯಾಟರಿ ಬಾಳಿಕೆ ಉತ್ತಮವಾಗಿದ್ದು, ಆಂಡ್ರಾಯ್ಡ್ ನ ಎಲ್ಲಾ ಆಪ್ ಗಳು ಬ್ಯಾಟರಿ ಸೇವರ್ ಗೆ ಸಹಕರಿಸುವಂತೆ ಹೊಸ ಒಎಸ್ ರೂಪಿಸಲಾಗಿದೆ. 70% ಮತ್ತು ಅದಕ್ಕಿಂತ ಕೆಳಗಡೆ ಬ್ಯಾಟರಿ ಸಾಮರ್ಥ್ಯ ಬಂದರೆ ನೀವು ಬ್ಯಾಟರಿ ಸೇವರ್ ಅನ್ನು ಬಳಸಬಹುದಾಗಿದೆ.

Check your Aahdaar update history - GIZBOT KANNADA
11.ಮತ್ತೇನು...

11.ಮತ್ತೇನು...

ಭದ್ರತೆ ಮತ್ತು ಗೌಪ್ಯತೆಲ್ಲಿ ಮತ್ತಷ್ಟು ಉತ್ತಮ ಅಪ್ ಡೇಟ್ಸ್, ಡ್ಯುಯಲ್ ಕ್ಯಾಮೆರಾ ಸೈಟ್ ಗೆ ಸಪೋರ್ಟ್ ಮತ್ತೀತರ ಅಂಶಗಳು ಹೊಸ ಆಂಡ್ರಾಯ್ಡ್ ಒಎಸ್ ಪಿ ಬೇಟಾ 2ವನ್ನು ಉತ್ತಮವಾಗಿಸಿವೆ.

Best Mobiles in India

English summary
Google releases Android P Beta 2 with inclusive emojis. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X