ಆಂಡ್ರಾಯ್ಡ್ ಫೋನ್ ಗಳಲ್ಲಿ ಗೂಗಲ್ ಅಸಿಸ್ಟೆಂಟ್ ಗೆ ನಿರ್ಧಿಷ್ಟ ಬಟನ್ – 2019 ರ ಹೊಸ ಟ್ರೆಂಡ್

By Gizbot Bureau
|

ಒಂದು ವಿಚಾರವನ್ನು ನಾವು ನಿಮಗೆ ಸ್ಪಷ್ಟವಾಗಿ ಹೇಳುವುದಾದರೆ ಪಿಕ್ಸಲ್ ಡಿವೈಸ್ ಗಳಿಂದ, ಗೂಗಲ್ ಯಾವತ್ತೂ ಕೂಡ ಆಪಲ್ ನ ವಾಯ್ಸ್ ಅಸಿಸ್ಟೆಂಟ್ ಸಿರಿ ಜೊತೆಗೆ ಸ್ಪರ್ಧೆಗೆ ಇಳಿಯುವುದಕ್ಕೆ ಸಾಧ್ಯವಾಗುವುದೇ ಇಲ್ಲ. ಹಾಗಾದ್ರೆ ಗೂಗಲ್ ಅಸಿಸ್ಟೆಂಟ್ ಹೇಗೆ ತನ್ನ ವಾಯ್ಸ್ ಅಸಿಸ್ಟೆಂಟ್ ನಿಂದ ಪ್ರಸಿದ್ಧಿಯಾಯಿತು? ಇದಕ್ಕೆ ಉತ್ತರ ಬಹಳ ಸರಳವಾಗಿದೆ.

ಸ್ಮಾರ್ಟ್ ಫೋನ್ ತಯಾರಕರ ಮೇಲೆ ಸವಾರಿ:

ಸ್ಮಾರ್ಟ್ ಫೋನ್ ತಯಾರಕರ ಮೇಲೆ ಸವಾರಿ:

ಇತರೆ ಸ್ಮಾರ್ಟ್ ಫೋನ್ ತಯಾರಕರ ಜೊತೆಗೆ ಸವಾರಿ ಮಾಡುವಿಕೆಯೇ ಇದಕ್ಕೆ ಪ್ರಮುಖ ಕಾರಣ. ಒಂದು ವೇಳೆ ನೀವು 2019 ರಲ್ಲಿ ಇದುವರೆಗೆ ಬಿಡುಗಡೆಗೊಂಡಿರುವ ಸ್ಮಾರ್ಟ್ ಫೋನ್ ಗಳನ್ನೇ ಗಮನಿಸಿ, ಎಲ್ಲಾ ಶ್ಮಾರ್ಟ್ ಫೋನ್ ಗಳಲ್ಲೂ ಒಂದು ವಿಚಾರ ಸಾಮಾನ್ಯವಾಗಿ ಕಂಡುಬರುತ್ತದೆ ದುವೇ ಗೂಗಲ್ ಅಸಿಸ್ಟೆಂಟ್ ಗೆ ನಿರ್ಧಿಷ್ಟ ಬಟನ್ ಇರುವುದು.

ಎಲ್ ಜಿ ಫೋನ್ ಗಳಲ್ಲಿ ಗೂಗಲ್ ಅಸಿಸ್ಟೆಂಟ್:

ಎಲ್ ಜಿ ಫೋನ್ ಗಳಲ್ಲಿ ಗೂಗಲ್ ಅಸಿಸ್ಟೆಂಟ್:

ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2019 ರಲ್ಲಿ ನೋಕಿಯಾದ ಎರಡು ಸ್ಮಾರ್ಟ್ ಫೋನ್ ಗಳು - ನೋಕಿಯಾ 3.2 ಮತ್ತು ನೋಕಿಯಾ 4.2 ಎರಡರಲ್ಲೂ ಕೂಡ ನಿರ್ಧಿಷ್ಟ ಗೂಗಲ್ ಅಸಿಸ್ಟೆಂಟ್ ಬಟನ್ ಇದೆ. ಇನ್ನು ಎರಡು ಎಲ್ ಜಿ ಸ್ಮಾರ್ಟ್ ಫೋನ್ ಗಳಲ್ಲೂ ಕೂಡ ಇದನ್ನು ನೀವು ಗಮನಿಸಬಹುದು. ಆದರೆ ಎಲ್ ಜಿ ಯ ನಿರ್ಧಿಷ್ಟ ಗೂಗಲ್ ಅಸಿಸ್ಟೆಂಟ್ ಬಟನ್ ಕಳೆದ ವರ್ಷ ಬಿಡುಗಡೆಗೊಂಡ ಜಿ7 ಮತ್ತು ವಿ40 ಸ್ಮಾರ್ಟ್ ಫೋನ್ ಗಳಲ್ಲೂ ಕೂಡ ಇತ್ತು. ಇನ್ನು ಈ ವರ್ಷದ ಎಲ್ ಜಿ ಡಿವೈಸ್ ಗಳಾದ ಜಿ8 ThinQ ನಲ್ಲೂ ಕೂಡ ಇದೇ ಬಟನ್ ಇದೆ.

ನೋಕಿಯಾ ಫೋನ್ ಗಳಲ್ಲಿ ಗೂಗಲ್ ಅಸಿಸ್ಟೆಂಟ್:

ನೋಕಿಯಾ ಫೋನ್ ಗಳಲ್ಲಿ ಗೂಗಲ್ ಅಸಿಸ್ಟೆಂಟ್:

ಇದಿಷ್ಟಕ್ಕೆ ಮುಗಿಯಲಿಲ್ಲ.9ಟು5 ಗೂಗಲ್ ನ ವರದಿಯ ಪ್ರಕಾರ ಶಿಯೋಮಿ ಎಂಐ ಮಿಕ್ಸ್3 5ಜಿ ಮತ್ತು ಎಂಐ 9 ನಲ್ಲೂ ಕೂಡ ಗೂಗಲ್ ಅಸಿಸ್ಟೆಂಟ್ ಗಾಗಿ ಸಪರೇಟ್ ಬಟನ್ ಬರುವ ಸಾಧ್ಯತೆ ಇದೆ. ಒಂದು ವರದಿಯ ಪ್ರಕಾರ ಸುಮಾರು 100 ಮಿಲಿಯನ್ ಡಿವೈಸ್ ಗಳನ್ನು ನಿರ್ಧಿಷ್ಟ ಗೂಗಲ್ ಅಸಿಸ್ಟೆಂಟ್ ಬಟನ್ ಮೂಲಕ ತಲುಪುವ ಗುರಿಯನ್ನು ಗೂಗಲ್ ಹೊಂದಿದೆ ಎನ್ನಲಾಗಿದೆ. ವಿವೋ ವಿ15 ಪ್ರೋ ನಲ್ಲೂ ಕೂಡ ನಾವು ಈ ಬಟನ್ ನ್ನು ನಿರೀಕ್ಷಿಸಬಹುದು.

ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಕೂಡ ಬಹಳ ಬ್ಯುಸಿಯಾಗಿದೆ. ಹುವಾಯಿ ವಿಶ್ವದ ಮೊದಲ 5ಜಿ ಫೋಲ್ಡೇಬಲ್ ಫೋನ್ ನ್ನು ತೋರಿಸಿದರೆ, ನೋಕಿಯಾ ಹೊಸದಾಗಿ 5 ಡಿವೈಸ್ ಗಳನ್ನು ಬಿಡುಗಡೆ ಮಾಡುವ ತಯಾರಿಯಲ್ಲಿದೆ. ಈ ಐದು ಡಿವೈಸ್ ಗಳು ನೋಕಿಯಾ 9ಪ್ಯೂರ್ ವ್ಯೂ(ವಿಶ್ವದ ಮೊದಲ 5 ಹಿಂಭಾಗದ ಕ್ಯಾಮರಾವಿರುವ ಫೋನ್), ನೋಕಿಯಾ 1 ಪ್ಲಸ್, ನೋಕಿಯಾ 4.2 ಮತ್ತು ನೋಕಿಯಾ 3.2 . ನಾವು ಈಗಾಗಲೇ ತಿಳಿಸಿರುವಂತೆ ನೋಕಿಯಾ ಬ್ರಾಂಡ್ ನ ಬಜೆಟ್ ಸ್ಮಾರ್ಟ್ ಫೋನ್ ಗಳಾಗಿರುವ ನೋಕಿಯಾ 3.2 ಮತ್ತು 4.2 ಕೂಡ ಗೂಗಲ್ ಅಸಿಸ್ಟೆಂಟ್ ನ ಬಟನ್ ನ್ನು ಹೊಂದಿದೆ.

2019 ರ ಟ್ರೆಂಡ್:

2019 ರ ಟ್ರೆಂಡ್:

ಅಂದರೆ 2019 ರ ಹೊಸ ಟ್ರೆಂಡ್ ಏನೆಂದರೆ ಪ್ರತಿ ಸ್ಮಾರ್ಟ್ ಫೋನ್ ಗಳಲ್ಲೂ ಸಪರೇಟ್ ಆಗಿರುವ ನಿರ್ಧಿಷ್ಟ ಗೂಗಲ್ ಅಸಿಸ್ಟೆಂಟ್ ಬಟನ್ ಇರುತ್ತದೆ. ಗೂಗಲ್ ಅಂದುಕೊಂಡಿರುವ 100 ಮಿಲಿಯನ್ ಟಾರ್ಗೆಟ್ ಗೆ ಇನ್ನಿತರೆ ಯಾವೆಲ್ಲ ಸ್ಮಾರ್ಟ್ ಫೋನ್ ತಯಾರಕರು ಸಾಥ್ ನೀಡುತ್ತಾರೆ ಎಂಬುದನ್ನು ಕಾದುನೋಡೋಣ.

Best Mobiles in India

English summary
Here's how Google is 'assisting' in making this trend popular in Android phones

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X