ನೂತನ ನೋಕಿಯಾ ಫೋನ್ ಗಳ ಬಗ್ಗೆ ವದಂತಿ

By Gizbot Bureau
|

ಹೆಚ್ಎಂಡಿ ಗ್ಲೋಬಲ್ ನೋಕಿಯಾ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆಗೊಳಿಸುವುದಕ್ಕೆ ಲೈಸನ್ಸ್ ಹೊಂದಿರುವ ಸಂಸ್ಥೆ ಮತ್ತು ಇತರೆ ಡಿವೈಸ್ ಗಳನ್ನು ಸಮಯಕ್ಕೆ ಸರಿಯಾಗಿ ಬಿಡುಗಡೆಗೊಳಿಸುತ್ತದೆ.ಇತ್ತೀಚೆಗೆ ಕಂಪೆನಿಯು ಕೆಲವು ಡಿವೈಸ್ ಗಳನ್ನು ಬಿಡುಗಡೆಗೊಳಿಸಿದ್ದು MWC 2020 ಯಲ್ಲಿ ಪ್ರಕಟಿಸಿದೆ ಮತ್ತು ಸದ್ಯ ಕರೋನಾ ವೈರಸ್ ಕಾರಣದಿಂದಾಗಿ ಈ ಬಿಡುಗಡೆಯನ್ನು ಮುಂದೂಡಲಾಗಿದೆ.

ಸ್ಮಾರ್ಟ್ ಫೋನ್

ಕಂಪೆನಿಯು ನೋಕಿಯಾ 8.3 5ಜಿ, ಮೊದಲ ನೋಕಿಯಾ 5ಜಿ ಸ್ಮಾರ್ಟ್ ಫೋನ್, ನೋಕಿಯಾ 5.3, ನೋಕಿಯಾ 1.3 ಮತ್ತು ನೋಕಿಯಾ 5310 ಎಕ್ಸ್ ಪ್ರೆಸ್ ಮ್ಯೂಸಿಕ್ ನ್ನು ಈ ತಿಂಗಳ ಆರಂಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಕಟಿಸಲಾಗಿತ್ತು.

ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ ನೋಕಿಯಾ 9.1 ಪ್ಯೂರ್ ವ್ಯೂ ಬಗ್ಗೆ ಕೆಲಸ ಮಾಡುತ್ತಿದ್ದು ಪೆಂಟಾ ಲೆನ್ಸ್ ಕ್ಯಾಮರಾ ವ್ಯವಸ್ಥೆಯನ್ನು ಇದು ಹೊಂದಿರುತ್ತದೆ ಎಂದು ವದಂತಿಯಾಗಿತ್ತು. ಕೆಲವು ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ ಗಳ ಬಗ್ಗೆ ಕಂಪೆನಿಯು ಕೆಲಸ ಮಾಡುತ್ತಿರುವುದು ನಿಜವೇ ಆಗಿದೆ. ನೋಕಿಯಾ 400 ಬಗ್ಗೆ ಕೆಲಸ ಮಾಡುತ್ತಿದ್ದು ಆಂಡ್ರಾಯ್ಡ್ ಫೀಚರ್ ನ್ನು ಇದು ಹೊಂದಿದೆ. ಇದರ ಅಧಿಕೃತ ಕನ್ಫರ್ಮೇಷನ್ ಗಾಗಿ ಕಾಯಲಾಗುತ್ತಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷ ಬಿಡುಗಡೆಗೊಳ್ಳಲಿರುವ ಕೆಲವು ನೋಕಿಯಾ ಸ್ಮಾರ್ಟ್ ಫೋನ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗಾಗಿ ನೀಡುತ್ತಿದ್ದೇವೆ.

ನೋಕಿಯಾ 8.3 5ಜಿ

ನೋಕಿಯಾ 8.3 5ಜಿ

ನೋಕಿಯಾ 8.3 5ಜಿ ನೋಕಿಯಾ ಸಂಸ್ಥೆ ಬಿಡುಗಡೆಗೊಳಿಸಲಿರುವ ಮೊದಲ 5ಜಿ ಸ್ಮಾರ್ಟ್ ಫೋನ್ ಆಗಿರುತ್ತದೆ. ಇದು ಆಂಡ್ರಾಯ್ಡ್ 10 out-of-the-box ಮತ್ತು ಆಂಡ್ರಾಯ್ಡ್ 11 ಗೆ ಅಪ್ ಗ್ರೇಡ್ ಮಾಡಲು ಅವಕಾಶವಿರುತ್ತೆ. ಇದರಲ್ಲಿ ಸ್ನ್ಯಾಪ್ ಡ್ರ್ಯಾಗನ್ 765G ಸಾಕೆಟ್ ವ್ಯವಸ್ಥೆ ಇರುತ್ತದೆ. 8GB ವರೆಗೆ RAM, ಕ್ವಾಡ್ ಕ್ಯಾಮರಾ ಸೆಟ್ ಅಪ್ ಹಿಂಭಾಗದಲ್ಲಿರಲಿದ್ದು 64ಎಂಪಿ ಪ್ರೈಮರಿ ಸೆನ್ಸರ್ ಇರಲಿದೆ. 24MP ಸೆಲ್ಫೀ ಸೆನ್ಸರ್ ಹಿಂಭಾಗದಲ್ಲಿರಲಿದ್ದು ಗೂಗಲ್ ಅಸಿಸ್ಟೆಂಟ್ ಗೆ ನಿಗದಿತ ಬಟನ್ ಇರಲಿದೆ. ಫಿಂಗರ್ ಪ್ರಿಂಟ್ ಸೆನ್ಸರ್ ಬದಿಯಲ್ಲಿ ಮೌಂಟ್ ಮಾಡಲಾಗಿರುತ್ತದೆ ಮತ್ತು 4500mAh ಬ್ಯಾಟರಿ ವ್ಯವಸ್ಥೆ ಇರುತ್ತದೆ.

ನೋಕಿಯಾ 10

ನೋಕಿಯಾ 10

ನೋಕಿಯಾ 10 ಹಲವು ವಂದತಿ ಮತ್ತು ನಿರೀಕ್ಎಗಳಿಂದ ಕೂಡಿದೆ. ಇದು ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ ಆಗಿರಲಿದೆ ಎಂದು ಅಂದಾಜಿಸಲಾಗುತ್ತಿದೆ. 5ಜಿ ಬೆಂಬಲವನ್ನು ಇದು ಕೂಡ ಹೊಂದಿರುತ್ತದೆ ಎಂದು ಹೇಳಲಾಗುತ್ತಿದೆ. ಸ್ನ್ಯಾಪ್ ಡ್ರ್ಯಾಗನ್ 865 SoC5, ಅಂಡರ್ ಡಿಸ್ಪ್ಲೇ ಸೆಲ್ಫೀ ಕ್ಯಾಮರಾ ಸೆನ್ಸರ್ ಸೇರಿದಂತೆ ಹಲವು ವೈಶಿಷ್ಟ್ಯತೆಗಳು ಇದರಲ್ಲಿರಲಿದೆ.

ನೋಕಿಯಾ 9.2

ನೋಕಿಯಾ 9.2

ನೋಕಿಯಾ 9.2 ಮುಂದಿನ ಜನರೇಷನ್ನಿನ ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ ಆಗಿರಲಿದೆ.ಟೆಲಿಫೋಟೋ ಕ್ಯಾಮರಾ ಅರೇಂಜ್ಮೆಂಟ್,ಮ್ಯಾಕ್ರೋ,ಹೈ-ರೆಸಲ್ಯೂಷನ್ ಸೆನ್ಸರ್ ಗಳು, ಪವರ್ ಫುಲ್ ಪ್ರೊಸೆಸರ್ ಗಳು ಉದಾಹರಣೆಗೆ ಸ್ನ್ಯಾಪ್ ಡ್ರ್ಯಾಗನ್ 865 SoC ಜೊತೆಗೆ ಇನ್-ಬಿಲ್ಟ್ 5ಜಿ ಮಾಡೆಮ್, ಆರಾಮದಾಯಕ ಅನ್ನಿಸುವಂತಹ ಡಿಸೈನ್ ನ್ನು ಇದು ಹೊಂದಿರುತ್ತದೆ.

ನೋಕಿಯಾ 5.3

ನೋಕಿಯಾ 5.3

ನೋಕಿಯಾ 5.3,ಆಂಡ್ರಾಯ್ಡ್ 10 ನಲ್ಲಿ ರನ್ ಆಗುತ್ತದೆ. ಆಂಡ್ರಾಯ್ಡ್ 11 ಗೆ ಅಪ್ ಗ್ರೇಡ್ ಮಾಡಿಕೊಳ್ಳಲು ಅವಕಾಶವಿರುತ್ತದೆ. ಇದರಲ್ಲಿ 6.55-ಇಂಚಿನ HD+ ಡಿಸ್ಪ್ಲೇ, ಸ್ನ್ಯಾಪ್ ಡ್ರ್ಯಾಗನ್ 665 SoC, 6GB ವರೆಗಿನ RAM , ಕ್ವಾಡ್ ಕ್ಯಾಮರಾ ಅರೇಂಜ್ ಮೆಂಟ್, 13 ಎಂಪಿ ಪ್ರೈಮರಿ ಸೆನ್ಸರ್ ಹಿಂಭಾಗದಲ್ಲಿ ಅಳವಡಿಸಲಾಗಿರುತ್ತದೆ ಮತ್ತು 8MP ಸೆಲ್ಫೀ ಕ್ಯಾಮರಾ ವ್ಯವಸ್ಥೆ ಹೊಂದಿರುತ್ತದೆ. ನೋಕಿಯಾ 5.3 4000mAh ಬ್ಯಾಟರಿ ಜೊತೆಗೆ 10W ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯನ್ನು ಇದು ಹೊಂದಿರುತ್ತದೆ.

ನೋಕಿಯಾ 9.1 ಪ್ಯೂರ್ ವ್ಯೂ

ನೋಕಿಯಾ 9.1 ಪ್ಯೂರ್ ವ್ಯೂ

ನೋಕಿಯಾ 10ಮತ್ತು Nokia 9.2 ಹೊರತು ಪಡಿಸಿ, ನೋಕಿಯಾ 9.1 ಪ್ಯೂರ್ ವ್ಯೂ ಕೂಡ ನೋಕಿಯಾ 9 ಪ್ಯೂರ್ ವ್ಯೂ ನ ಮುಂದುವರಿದ ಅವತರಣಿಕೆ ಎಂದು ನಂಬಲಾಗುತ್ತಿದೆ. ಇದರಲ್ಲಿ ಕ್ವಾಡ್ ಕ್ಯಾಮರಾ ಸೆಟ್ ಅಪ್ ಮತ್ತು ಸ್ನ್ಯಾಪ್ ಡ್ರ್ಯಾಗನ್ 855 SoC ಜೊತೆಗೆ ಹಲವು ಬೆನಿಫಿಟ್ ಗಳನ್ನು ಹೊಂದಿರುತ್ತದೆ. ಪೆಂಟಾ ಲೆನ್ಸ್ ಕ್ಯಾಮರಾ ಸೆಟ್ ಅಪ್ ನ್ನು ರಿಪ್ಲೇಸ್ ಮಾಡಲಾಗಿದ್ದು ಶಕ್ತಿಯುತವಾಗಿರುವ ಕ್ವಾಡ್ ಕ್ಯಾಮರಾ ಸೆಟ್ ಅಪ್ ನ್ನು ಹಿಂಭಾಗದಲ್ಲಿ ಅಳಡಿಸಲಾಗಿರುತ್ತದೆ.

ನೋಕಿಯಾ 8.1 ಪ್ಲಸ್

ನೋಕಿಯಾ 8.1 ಪ್ಲಸ್

ನೋಕಿಯಾ 8.1 ಪ್ಲಸ್ ಹೆಚ್ಚು ವದಂತಿಗೆ ಕಾರಣವಾಗಿರು ನೋಕಿಯಾ ಸ್ಮಾರ್ಟ್ ಫೋನ್ ಗಳಲ್ಲಿ ಒಂದಾಗಿದೆ. ಡುಯಲ್ ಕ್ಯಾಮರಾ ಸೆಟ್ ಅಪ್ ನ್ನು ಹಿಂಭಾಗದಲ್ಲಿ ಹೊಂದಿದ್ದು 48MP ಪ್ರೈಮರಿ ಸೆನ್ಸರ್ 6.22- ಇಂಚಿನ ಡಿಸ್ಪ್ಲೇ ಮತ್ತು 64GB ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದೆ. 4GB RAM ಮತ್ತು ಆಂಡ್ರಾಯ್ಡ್ 10 ನಲ್ಲಿ ರನ್ ಆಗುತ್ತದೆ.

Best Mobiles in India

English summary
HMD Global, which holds the license to launch Nokia smartphones and other devices is on a spree of launching new devices from time to time. Recently, the company took the wraps off a slew of devices that were slated to be announced at the MWC 2020 and postponed due to the coronavirus outbreak.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X