'ಮೊಟೊ ಜಿ5ಎಸ್ ಪ್ಲಸ್' VS 'ಹಾನರ್ 7‍ಎಕ್ಸ್'!!..ಎರಡು ಫೋನ್‌ಗಳಲ್ಲಿ ಅತ್ಯುತ್ತಮ ಆಯ್ಕೆ?

ಭಾರತದ ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟು ಹೆಚ್ಚು ಹೆಸರು ಮಾಡುತ್ತಿರುವ ಇತ್ತೀಚಿನ ಎರಡು ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು ಎಂದರೆ ಅದು 'ಹಾನರ್ 7‍X' ಮತ್ತು 'ಮೊಟೊ ಜಿ5ಎಸ್ ಪ್ಲಸ್' ಫೋನ್‌ಗಳು ಮಾತ್ರ.!

By Bhaskar
|

ಭಾರತದ ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟು ಹೆಚ್ಚು ಹೆಸರು ಮಾಡುತ್ತಿರುವ ಇತ್ತೀಚಿನ ಎರಡು ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು ಎಂದರೆ ಅದು 'ಹಾನರ್ 7‍X' ಮತ್ತು 'ಮೊಟೊ ಜಿ5ಎಸ್ ಪ್ಲಸ್' ಫೋನ್‌ಗಳು ಮಾತ್ರ.! ಏಕೆಂದರೆ, ಮಧ್ಯಮ ಬಜೆಟ್ ಬೆಲೆಯಲ್ಲಿ ಹೈ ಎಂಡ್ ಫಿಚರ್‌ಗಳನ್ನು ಒಳಗೊಂಡಿರುವ ಈ ಫೋನ್‌ಗಳು ಇಂದು ಮೊಬೈಲ್ ಖರೀದಿದಾರರ ಫೇವರೇಟ್!!

'ಮೊಟೊ ಜಿ5ಎಸ್ ಪ್ಲಸ್' VS 'ಹಾನರ್ 7‍ಎಕ್ಸ್'!!.. ಅತ್ಯುತ್ತಮ ಆಯ್ಕೆ?

ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಿರುವ ಮೊಟೊ ಜಿ5ಎಸ್ ನಂತರ ಇದೀಗ 'ಹಾನರ್ 7‍X' ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮೇಲುಗೈ ಸಾಧಿಸುತ್ತಿದ್ದು, ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು ಸ್ಟಾಕ್ ಆಂಡ್ರಾಯ್ಡ್ ಫೀಚರ್ಸ್‌ಗಳಲ್ಲಿ ಹಾನರ್ 7‍X ಉತ್ತಮ ಎನ್ನಬಹುದು.! ಹಾಗಾಗಿದ್ದರೂ ಸಹ ಈ ಎರಡೂ ಸ್ಮಾರ್ಟ್‌ಫೋನ್‌ಗಳ ಫೀಚರ್ಸ್ ಏನು? ಮತ್ತು ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ ಯಾವ ಫೋನ್ ಬೆಸ್ಟ್? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ವಿನ್ಯಾಸ ಮತ್ತು ಪ್ರದರ್ಶನ

ವಿನ್ಯಾಸ ಮತ್ತು ಪ್ರದರ್ಶನ

ಹಾನರ್ 7X ಮತ್ತು ಮೋಟೋ G5S ಪ್ಲಸ್ ಎರಡೂ ಸ್ಮಾರ್ಟ್‌ಫೋನ್‌ಗಳು ಮೆಟಲ್ ಯುನಿಬಾಡಿ ಮೂಲಕ ಪ್ರೀಮಿಯಂ ವಿನ್ಯಾಸವನ್ನು ಹೊಂದಿವೆ.! ಹಾನರ್ 7x 18:9 ಅನುಪಾತದ ಡಿಸ್‌ಪ್ಲೇ ಹೊಂದಿದ್ದರೆ ಮೋಟೋ G5S ಪ್ಲಸ್ 16:9 ಅನುಪಾತದಲ್ಲಿ ಡಿಸ್‌ಪ್ಲೇ ಹೊಂದಿದೆ. ಇನ್ನು ಹಾನರ್ 7x ಲುಕ್ ಮೋಟೋ G5S ಪ್ಲಸ್‌ಗಿಂತಲೂ ಹೆಚ್ಚು ಚೆನ್ನಾಗಿದೆ ಎನ್ನಬಹುದು.!!

ಕಾರ್ಯನಿರ್ವಹಣೆಯಲ್ಲಿಯೂ ಹಾನರ್ 7X ಬೆಸ್ಟ್!!

ಕಾರ್ಯನಿರ್ವಹಣೆಯಲ್ಲಿಯೂ ಹಾನರ್ 7X ಬೆಸ್ಟ್!!

ಹಾನರ್ 7X ಮತ್ತು ಮೋಟೋ G5S ಪ್ಲಸ್ ಎರಡೂ ಸ್ಮಾರ್ಟ್‌ಫೋನ್‌ಗಳು ಕೂಡ ಕಾರ್ಯನಿರ್ವಹಣೆಯಲ್ಲಿ ಉತ್ತಮ ಸ್ಮಾರ್ಟ್‌ಫೋನ್‌ಗಳು ಎಂದು ಹೇಳಬಹುದು. ಆದರೆ, ಎರಡೂ ಫೋನ್‌ಗಳಿಗೆ ಹೋಲಿಸಿದರೆ ಹಾನರ್ 7X ಫೋನ್ G5S ಪ್ಲಸ್‌ಗಿಂತಲೂ ಉತ್ತಮ ಕಾರ್ಯನಿರ್ವಹಣೆ ನೀಡುತ್ತದೆ ಎನ್ನಬಹುದಾಗಿದ್ದು, 18: 9 ಆಕಾರ ಅನುಪಾತದ ಡಿಸ್‌ಪ್ಲೇಯಲ್ಲಿ ಸ್ಟಾಕ್ ಆಂಡ್ರಾಯ್ಡ್ ಮೊಬೈಲ್ ಬಳಕೆಯ ಉತ್ತಮ ಅನುಭವ ನೀಡಲಿದೆ.!!

ಬ್ಯಾಟರಿ ಮತ್ತು ಮೆಮೊರಿ!!

ಬ್ಯಾಟರಿ ಮತ್ತು ಮೆಮೊರಿ!!

ಬ್ಯಾಟರಿ ಮತ್ತು ಮೆಮೊರಿ ವಿಭಾಗದಲ್ಲಿಯೂ ಹಾನರ್ 7X ಫೋನ್ ಮೋಟೋ G5S ಪ್ಲಸ್ ಫೋನ್ ಅನ್ನು ಹಿಂದಿಕ್ಕಲಿದೆ.! ಮೋಟೋ ಜಿ 5 ಎಸ್ ಪ್ಲಸ್ ಫೋನ್ 3,000 ಎಮ್ಎಎಚ್ ಬ್ಯಾಟರಿ ಹೊಂದಿದ್ದರೆ , ಹಾನರ್ 7X 3,340 ಎಮ್ಎಎಚ್ ಬ್ಯಾಟರಿ ಹೊಂದಿದೆ.! ಇನ್ನು ಎರಡೂ ಫೋನ್‌ಗಳು 64GB ಆಂತರಿಕ ಮೆಮೊರಿ ಹೊಂದಿದ್ದರೆ, 7Xನ ಆಂತರಿಕ ಮೆಮೊರಿಯನ್ನು 256GB ವರೆಗೆ ವಿಸ್ತರಿಸಬಹುದು. ಆದರೆ, ಮೋಟೋ ಜಿ5 ಎಸ್ ಪ್ಲಸ್ ಸಾಮರ್ಥ್ಯ 128GB ಗೆ ಕೊನೆಗೊಳ್ಳಲಿದೆ.!!

ಮೋಟೋ ಜಿ5 ಎಸ್ ಪ್ಲಸ್ VS ಹಾನರ್ 7X ಕ್ಯಾಮೆರಾ!!

ಮೋಟೋ ಜಿ5 ಎಸ್ ಪ್ಲಸ್ VS ಹಾನರ್ 7X ಕ್ಯಾಮೆರಾ!!

ಹಾನರ್‌ನಲ್ಲಿ 16MP + 2MP ಹಿಂಬದಿಯ ಕ್ಯಾಮರಾವಿದ್ದರೆ, ಮೋಟೋ ಜಿ5 ಎಸ್ ಪ್ಲಸ್ 13MP + 13MP ಡ್ಯುಯಲ್ ಲೆನ್ಸ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.! ಮೋಟೋ ಜಿ 5ಎಸ್ ಪ್ಲಸ್ ಎರಡು ಲೆನ್ಸ್ ಕ್ಯಾಮೆರಾದೊಂದಿಗೆ ಮೊದಲ ಸ್ಮಾರ್ಟ್‌ಫೋನ್ ಆಗಿದ್ದರೂ ಕೂಡ ಹಾನರ್ 7x 5ನೇ ತಲೆಮಾರಿನ ಡ್ಯುಯಲ್ ಲೆನ್ಸ್ ಕ್ಯಾಮೆರಾವನ್ನು ಹೊಂದಿದೆ.! ಆದರೂ, ಎರಡೂ ಸ್ಮಾರ್ಟ್‌ಫೋನ್‌ಗಳು ಉತ್ತಮ ಫೋಟೊ ಚಿತ್ರಿಸುವಲ್ಲಿ ಒಂದಕ್ಕೊಂದು ಸಾಟಿಯಾಗಿವೆ.!!

ಬೆಲೆಯಲ್ಲಿ ಹಾನರ್ 7X ಬೆಸ್ಟ್!!

ಬೆಲೆಯಲ್ಲಿ ಹಾನರ್ 7X ಬೆಸ್ಟ್!!

ಹಾನರ್ 7X ಮತ್ತು ಮೋಟೋ G5S ಪ್ಲಸ್ ಎರಡೂ ಸ್ಮಾರ್ಟ್‌ಫೋನ್‌ಗಳು ಕೂಡ ಉತ್ತಮ ಬಜೆಟ್‌ ಸ್ಮಾರ್ಟ್‌ಫೋನ್‌ಗಳಾಗಿದ್ದು, 32 ಜಿಬಿ ವೆರಿಯಂಟ್ ಹಾನರ್ 7X ಫೋನ್ ಬೆಲೆ ಭಾರತದಲ್ಲಿ 12,999 ರೂಪಾಯಿಗಳಾಗಿವೆ. ಆದರೆ, ಇಷ್ಟೇ ಫೀಚರ್ಸ್ ಹೊಂದಿರುವ ಮತ್ತೊಂದು ಉತ್ತಮ ಫೋನ್ ಮೋಟೋ ಜಿ5 ಎಸ್ ಪ್ಲಸ್ ರೂ. 15,999 ರೂಪಾಯಿಗಳಾಗಿವೆ.!!

ಖರೀದಿಸಲು ಯಾವುವು ಬೆಸ್ಟ್?

ಖರೀದಿಸಲು ಯಾವುವು ಬೆಸ್ಟ್?

ಮೊದಲೇ ಹೇಳೀದಂತೆ ಮಧ್ಯಮ ಬೆಲೆಗೆ ಎರಡೂ ಸ್ಮಾರ್ಟ್‌ಫೋನ್‌ಗಳೂ ಕೂಡ ಹೈ ಎಂಡ್ ಫೀಚರ್ಸ್ ಹೊಂದಿದೆ. ಆದರೆ, ಹಾನರ್ 7X ಕಡಿಮೆ ಬೆಲೆಗೆ ಹಲವು ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಹಾನರ್ 7X ಸ್ಮಾರ್ಟ್‌ಫೋನ್ ಖರೀದಿಸಲು ಯೋಗ್ಯವಾದ ಸ್ಮಾರ್ಟ್‌ಫೋನ್ ಎನ್ನಬಹುದು.!!

ಥಿಯೇಟರ್‌ನಲ್ಲಿ ಗೇಮ್ ಆಡುವ ಫೀಲ್ ನೀಡಲಿವೆ 'ಎಲ್‌ಜಿ' ಅಲ್ಟ್ರಾವೈಡ್ ಮಾನಿಟರ್ಸ್!!ಥಿಯೇಟರ್‌ನಲ್ಲಿ ಗೇಮ್ ಆಡುವ ಫೀಲ್ ನೀಡಲಿವೆ 'ಎಲ್‌ಜಿ' ಅಲ್ಟ್ರಾವೈಡ್ ಮಾನಿಟರ್ಸ್!!

Best Mobiles in India

English summary
Both the smartphones come equipped with ample amount of RAM to run multiple applications simultaneously.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X