ಹಾನರ್ ಫೋನ್ ಗಳಿಗೆ ಭರ್ಜರಿ ರಿಯಾಯಿತಿ ನೀಡುತ್ತಿರುವ ಅಮೇಜಾನ್ ಮತ್ತು ಫ್ಲಿಪ್ ಕಾರ್ಟ್

|

ಹುವಾಯಿ ಸಬ್ –ಬ್ರ್ಯಾಂಡ್ ಆಗಿರುವ ಹಾನರ್ ಮುಂಬರುವ ಗಣರಾಜ್ಯೋತ್ಸವದ ಸಂಭ್ರಮಕ್ಕಾಗಿ ತನ್ನ ಸ್ಮಾರ್ಟ್ ಫೋನ್ ಗಳಿಗೆ ಉತ್ತಮ ರಿಯಾಯಿತಿ ಬೆಲೆಯನ್ನು ನೀಡುತ್ತಿದೆ. ಅಮೇಜಾನ್ ಮತ್ತು ಫ್ಲಿಪ್ ಕಾರ್ಟ್ ಗಳೆರಡರಲ್ಲೂ ಕೂಡ ಹಾನರ್ ಸ್ಮಾರ್ಟ್ ಫೋನ್ ಗಳಿಗೆ ಭರ್ಜರಿ ರಿಯಾಯಿತಿ ಲಭಿಸುತ್ತದೆ. ಖರೀದಿದಾರರು ಕನಿಷ್ಟ 3,100 ರುಪಾಯಿಯಿಂದ ಗರಿಷ್ಟ 9800 ರುಪಾಯಿವರೆಗೆ ರಿಯಾಯಿತಿಯನ್ನು ಪಡೆದುಕೊಳ್ಳುವ ಸದವಕಾಶವಿದೆ. ಇದರಲ್ಲಿ ಎಕ್ಸ್ ಚೇಂಜ್ ಆಫರ್ ಮತ್ತು ಇನ್ಸೆಂಟ್ ರಿಯಾಯಿತಿ ಎರಡೂ ಕೂಡ ಲಭ್ಯವಿದ್ದು ಎಸ್ ಬಿಐ ಮತ್ತು ಹೆಚ್ ಡಿಎಫ್ ಸಿ ಬ್ಯಾಂಕಿನ ಕ್ರೆಡಿಟ್ /ಡೆಬಿಟ್ ಕಾರ್ಡ್ ಹೊಂದಿರುವವರು ಈ ರಿಯಾಯಿತಿ ಬೆಲೆಯನ್ನು ಪಡೆದುಕೊಳ್ಳಲು ಅವಕಾಶವಿರುತ್ತದೆ.

ಹಾನರ್ ಫೋನ್ ಗಳಿಗೆ ಭರ್ಜರಿ ರಿಯಾಯಿತಿ

ಅಮೇಜಾನ್ ಸೇಲ್ ಜನವರಿ 20 ರಿಂದ ಆರಂಭವಾಗಿ ಜನವರಿ 23ರ ವರೆಗೆ ನಡೆಯಲಿದೆ. ಪ್ರೈಮ್ ಸದಸ್ಯರಿಗೆ ಜನವರಿ 19 ರ ಮಧ್ಯಾಹ್ನ 12pm ನಿಂದ ಆಕ್ಸಿಸ್ ಇರುತ್ತದೆ. ಫ್ಲಿಪ್ ಕಾರ್ಟ್ ನ ರಿಪಬ್ಲಿಕ್ ಡೇ ಸೇಲ್ ಜನವರಿ 20 ರಿಂದ ಜನವರಿ 22 ರ ವರೆಗೆ ನಡೆಯಲಿದೆ. ಪ್ಲಿಪ್ ಕಾರ್ಟ್ ಪ್ಲಸ್ ಸದಸ್ಯರಿಗೆ ಜನವರಿ 19 ರ ರಾತ್ರಿ 8 ಘಂಟೆಯಿಂದ ಆಕ್ಸಿಸ್ ಸಿಗುತ್ತದೆ.

ಫ್ಲಿಪ್ ಕಾರ್ಟ್ ನ ರಿಪಬ್ಲಿಕ್ ಡೇ ಆಫರ್ ಗಳು

ಫ್ಲಿಪ್ ಕಾರ್ಟ್ ನ ರಿಪಬ್ಲಿಕ್ ಡೇ ಆಫರ್ ಗಳು

ಈ ಸೇಲ್ ನ ಭಾಗವಾಗಿ ಹಾನರ್ 9ಎನ್ ನ್ನು 6,349 ರುಪಾಯಿಯ ರಿಯಾಯಿತಿ ಬೆಲೆಯಲ್ಲಿ ಖರೀದಿಸುವ ಅವಕಾಶವಿದೆ. 3ಜಿಬಿ ಮೆಮೊರಿ ವೇರಿಯಂಟ್ ನ ಫೋನ್ ನ್ನು ರುಪಾಯಿ 13,999 ಬೆಲೆಗೆ ಖರೀದಿಸಬಹುದು ಮತ್ತು 4ಜಿಬಿ ಮೆಮೊರಿ ವೇರಿಯಂಟ್ ನ್ನು15,999 ಬೆಲೆಗೆ ಖರೀದಿಸುವ ಅವಕಾಶವಿದೆ. ಹಾನರ್ 7ಎ ನ್ನು 10,999 ರುಪಾಯಿಯ ರಿಯಾಯಿತಿ ಬೆಲೆಯಲ್ಲಿ ಖರೀದಿಸುವ ಅವಕಾಶವಿದೆ. ಈ ಸ್ಮಾರ್ಟ್ ಪೋನಿನ 3ಜಿಬಿ ಮೆಮೊರಿ ಮತ್ತು 32ಜಿಬಿ ಮೆಮೊರಿ ವೇರಿಯಂಟ್ ನ ಫೋನ್ 4,249 ರುಪಾಯಿ ರಿಯಾಯಿತಿ ಬೆಲೆಯಲ್ಲಿ ಲಭ್ಯವಿದೆ..

ಹಾನರ್ 9 ಲೈಟ್ ಎರಡು ವಿಭಿನ್ನ ಮೆಮೊರಿ ವೇರಿಯಂಟ್ ನಲ್ಲಿ ಲಭ್ಯವಾಗುತ್ತದೆ. - 3GB ಮತ್ತು 4GB. ಎರಡೂ ವೇರಿಯಂಟ್ ನ್ನು ರಿಯಾಯಿತಿ ಬೆಲೆಯಲ್ಲಿ ಖರೀದಿಸಬಹುದಾದ ಅವಕಾಶವಿದೆ. ಎರಡೂ ವೇರಿಯಂಟ್ ನ ಫೋನ್ ನ್ನು ಕ್ರಮವಾಗಿ 13,999 ಮತ್ತು 16,999 ರುಪಾಯಿ ಬೆಲೆಯಲ್ಲಿ ಖರೀದಿಸಬಹುದು. ಅಂದರೆ ಈ ಮಾಡೆಲ್ ಗೆ 6,349 ಮತ್ತು 7,099 ರುಪಾಯಿ ರಿಯಾಯಿತಿಯು ಕ್ರಮವಾಗಿ ಲಭ್ಯವಾಗುತ್ತದೆ.ಅದೇ ರೀತಿ ಹಾನರ್ 7ಎಸ್ ಈ ಸೇಲ್ ನಲ್ಲಿ 8,999 ರುಪಾಯಿ ರಿಯಾಯಿತಿ ಲಭ್ಯವಿದೆ.

ಅಮೇಜಾನ್ ನಲ್ಲಿ ರಿಪಬ್ಲಿಕ್ ಡೇ ಆಫರ್ ಗಳು

ಅಮೇಜಾನ್ ನಲ್ಲಿ ರಿಪಬ್ಲಿಕ್ ಡೇ ಆಫರ್ ಗಳು

ಮೂರು ದಿನಗಳ ಕಾಲ ನಡೆಯುವ ಅಮೇಜಾನ್ ಸೇಲ್ ನಲ್ಲಿ ಹಾನರ್ 8ಎಕ್ಸ್ ಗರಿಷ್ಟ ರಿಯಾಯಿತಿ ಬೆಲೆ ರುಪಾಯಿ 6,700 ಕ್ಕೆ ಮಾರಾಟ ಮಾಡಲಾಗುತ್ತದೆ. ಅಂದರೆ 4ಜಿಬಿ ಮೆಮೊರಿ ವೇರಿಯಂಟ್ ನ್ನು 17,999 ರುಪಾಯಿ ಬೆಲೆಗೆ ಖರೀದಿಸಬಹುದು. 6GB ಮೆಮೊರಿ ವರ್ಷನ್ ನ ಬೆಲೆ 19,999 ರುಪಾಯಿ ಆಗುತ್ತದೆ. ಹಾನರ್ 8ಸಿ 4ಜಿಬಿ ಮೆಮೊರಿ ಮತ್ತು 32ಜಿಬಿ ಇಂಟರ್ನಲ್ ಮೆಮೊರಿ ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿರುತ್ತದೆ. ಈ ಸೇಲ್ ನಲ್ಲಿ ಈ ಸ್ಮಾರ್ಟ್ ಫೋನ್ ನ್ನು 3,100 ರಿಯಾಯಿತಿಯಲ್ಲಿ ಖರೀದಿಸಬಹುದು ಅಂದರೆ 12,999 ರುಪಾಯಿ ಬೆಲೆಗೆ ಈ ಫೋನ್ ಲಭ್ಯವಾಗುತ್ತದೆ. ಅದೇ ರೀತಿ ಹಾನರ್ 7ಸಿ 12,999 ರುಪಾಯಿ ಬೆಲೆಗೆ ಸಿಗುತ್ತದೆ.

ಹಾನರ್ ಪ್ಲೇ

ಹಾನರ್ ಪ್ಲೇ

ಕೊನೆಯದಾಗಿ ಈ ಸೇಲ್ ನಲ್ಲಿ ಹಾನರ್ ಪ್ಲೇಯನ್ನು 21,999 ಮತ್ತು 25,999 ರುಪಾಯಿ ಬೆಲೆಗೆ 4ಜಿಬಿ ಮತ್ತು 6ಜಿಬಿ ಮೆಮೊರಿ ವೇರಿಯಂಟ್ ನ್ನು ಕ್ರಮವಾಗಿ ಮಾರಾಟ ಮಾಡಲಾಗುತ್ತದೆ.

Most Read Articles
Best Mobiles in India

Read more about:
English summary
Honor Amazon and Flipkart sale: Get up to Rs 9,800 discounts on Honor 9N, Honor 9 Lite, Honor 8X, Honor Play and Honor 7C smartphones

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X