ಐಫೋನ್ ಗಳ ಬೆಲೆ 12,000ದ ವರೆಗೆ ಏರಿಕೆಯಾಗುವ ಸಾಧ್ಯತೆ

By Gizbot Bureau
|

ಯುಸ್-ಚೀನಾ ನಡುವಿನ ಟ್ರೇಡ್ ಯುದ್ಧದಿಂದಾಗಿ ಹಲವಾರು ವಸ್ತುಗಳ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಆಟದ ಸಾಮಗ್ರಿಗಳು, ಬಟ್ಟೆಗಳು, ಎಲೆಕ್ಟ್ರಾನಿಕ್ ವಸ್ತುಗಳು ಇತ್ಯಾದಿ ಚೀನಾದಿಂದ ಯುಸ್ ಗೆ ರಫ್ತಾಗುವ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಲಿದೆ. ಇದೀಗ ಡೊನಾಲ್ಡ್ ಟ್ರಂಪ್ ಕೂಡ ಚೀನಾದಿಂದ ಆಮದು ಮಾಡಿಕೊಂಡ ವಸ್ತುಗಳಿಗೆ ಸುಂಕವನ್ನು ಹೆಚ್ಚಿಸುವುದಕ್ಕೆ ನಿರ್ಧರಿಸಿದೆ. ಈ ಬಗ್ಗೆ ಹೆಚ್ ಎಸ್ ಬಿಸಿ ಕಳವಳ ವ್ಯಕ್ತಪಡಿಸಿದ್ದು ಚೀನಾದಿಂದ ಹೊಸ ಆಮದು ಸುಂಕವನ್ನು ಜಾರಿಗೊಳಿಸಿದ್ದೇ ಆದಲ್ಲಿ ಅಮೇರಿಕಾದಲ್ಲಿ ಐಫೋನ್ ಗಳ ಬೆಲೆಯನ್ನು ಆಪಲ್ ಮತ್ತಷ್ಟು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ.

ಗ್ರಾಹಕರಿಗೆ ಸುಂಕದ ಬರೆ:

ಗ್ರಾಹಕರಿಗೆ ಸುಂಕದ ಬರೆ:

ಆಪಲ್ ಗೆ ಆಯ್ಕೆ ಇದ್ದು ಈ ಸುಂಕವನ್ನು ನೇರವಾಗಿ ಗ್ರಾಹಕರ ಮೇಲೆ ಹೇರುವ ಪ್ರಯತ್ನವನ್ನು ಮಾಡಬಹುದು ಅಥವಾ 2020 ರ ಗಳಿಕೆಯ ಮುನ್ಸೂಚನೆಯಲ್ಲಿ ಸ್ವಲ್ಪ ಮಟ್ಟಿನ ಹಿಡಿತ ಸಾಧಿಸಿಕೊಳ್ಳುವುದಕ್ಕೂ ಕೂಡ ಪ್ರಯತ್ನ ಮಾಡಬಹುದು.

12,000 ರುಪಾಯಿ ಏರಿಕೆಯಾಗುವ ಸಾಧ್ಯತೆ:

12,000 ರುಪಾಯಿ ಏರಿಕೆಯಾಗುವ ಸಾಧ್ಯತೆ:

ಸ್ಟ್ರೀಟ್ ವರದಿಯ ಪ್ರಕಾರ, ಮೋರ್ಗನ್ ಸ್ಟಾನ್ಲಿಯ ವಿಶ್ಲೇಷಕರಾಗಿರುವ ಕೇಟಿ ಹುಬರ್ಟಿಯು 160 ಡಾಲರ್ ಬೆಲೆ ಅಂತಗೆ ಅಂದಾಜು 12,000 ರುಪಾಯಿಯಷ್ಟು ಐಫೋನ್ ಗಳ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.ಯುಸ್ ನಲ್ಲಿ ಬೆಲೆ ಏರಿಕೆಯು ಭಾರತದಲ್ಲೂ ಕೂಡ ಐಫೋನ್ ಗಳು ದುಬಾರಿಗೊಳಿಸುತ್ತದೆ.

ಚೀನಾ-ಯುಸ್ ಆಮದು ರಫ್ತುಗಳ ಮೇಲೆ ಪರಿಣಾಮ:

ಚೀನಾ-ಯುಸ್ ಆಮದು ರಫ್ತುಗಳ ಮೇಲೆ ಪರಿಣಾಮ:

ಚೀನಾದಿಂದ ರಫ್ತು ಮಾಡುವವರಿಗೆ ಆಪಲ್ ಮಹತ್ವದ್ದಾಗಿದೆ. ಹಲವಾರು ಗ್ರಾಹಕ ಸಾಧನಗಳ ಅಸ್ಸೆಂಬ್ಲಿಗಳು ಚೀನಾದಲ್ಲೇ ಇದೆ ಎಂದು ಹೆಚ್ ಎಸ್ ಬಿಸಿಯ ಕೇಟಿ ಹುಬರ್ಟಿ ವರದಿಯಲ್ಲಿ ಹೇಳಿದ್ದಾರೆ.

ಹುವಾಯಿಗೆ ಎದಿರೇಟು:

ಹುವಾಯಿಗೆ ಎದಿರೇಟು:

ಇದರ ಜೊತೆಗೆ ಹುವಾಯಿಯನ್ನು ಕೂಡ ಡೊನಾಲ್ಡ್ ಟ್ರಂಪ್ ಆಡಳಿತವು ಬ್ಲಾಕ್ ಲಿಸ್ಟ್ ಗೆ ಸೇರಿಸುತ್ತದೆ ಮತ್ತು ಹುವಾಯಿ ಸಂಸ್ಥೆಗೆ ಯುಎಸ್ ನಲ್ಲಿ ಬ್ಯುಸಿನೆಸ್ ಮಾಡುವುದಕ್ಕೆ ಕೆಲವು ನಿರ್ಬಂಧಗಳನ್ನು ಹೇರಲಿದೆ ಎಂದು ತಿಳಿದುಬಂದಿದೆ.

ಗೂಗಲ್ ಅಪ್ ಡೇಟ್ ಅಲಭ್ಯ:

ಗೂಗಲ್ ಅಪ್ ಡೇಟ್ ಅಲಭ್ಯ:

ಹುವಾಯಿ ಜೊತೆಗಿನ ಬ್ಯುಸಿನೆಸ್ ನ್ನು ಇದೀಗ ಗೂಗಲ್ ಕೂಡ ಅಮಾನತುಗೊಳಿಸಿದೆ ಇದರ ಅರ್ಥ ಗೂಗಲ್ ನ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಮತ್ತು ಗೂಗಲ್ ಆಪ್ ಗಳಾಗಿರುವ ಗೂಗಲ್ ಪ್ಲೇ, ಜಿಮೇಲ್ ಮತ್ತು ಯೂಟ್ಯೂಬ್ ಗಳ ಅಪ್ ಡೇಟ್ ಗಳ ಆಕ್ಸಿಸ್ ನ್ನು ಇನ್ನು ಮುಂದೆ ಕಂಪೆನಿಯು ಸ್ವೀಕರಿಸುವುದಿಲ್ಲ.

ಎಫೆಕ್ಟ್:

ಎಫೆಕ್ಟ್:

ಹುವಾಯಿಯ ಬ್ಯಾನ್ ಆಪಲ್ ಗೆ ಯುಸ್ ನಲ್ಲಿ ಗುಡ್ ನ್ಯೂಸ್ ಆಗಿರಬಹುದು. ಆದರೆ ನಿಜ ಸಂಗತಿ ಸ್ವಲ್ಪ ಭಿನ್ನವಾಗಿದೆ. ಯುಸ್, ಯುರೋಪ್ ಮತ್ತು ಇತರೆ ವಿಶ್ವದ ಕೆಲವು ಭಾಗಗಳಲ್ಲಿ ಹುವಾಯಿ ಫೋನ್ ಗಳ ಬ್ಯಾನಿನ ಎಫೆಕ್ಟ್ ತಟ್ಟುತ್ತದೆ. ಇದೇ ಸಮಯಕ್ಕೆ ಆಪಲ್ ನ ಅತೀ ದೊಡ್ಡ ಮಾರುಕಟ್ಟೆಯಾಗಿರುವ ಚೀನಾದಲ್ಲಿ ಆಪಲ್ ಫೋನ್ ಗಳ ಮಾರಾಟದ ಮೇಲೆ ಪರಿಣಾಮವಾಗಿರುತ್ತದೆ. ವರದಿಗಳ ಪ್ರಕಾರ ಆಂಟಿ-ಆಪಲ್ ಮತ್ತು ಆಂಟಿ ಯುಸ್ ಮೆಸೇಜ್ ಗಳು ವಯ್ಬೋದಲ್ಲಿ ಪೋಸ್ಟ್ ಆಗುತ್ತಿದೆ. ಅಂದರೆ ಇದು ಚೀನಾದ ಟ್ವೀಟರ್ ವರ್ಷನ್ ಆಗಿದ್ದು ಇದರಲ್ಲಿ ಯುಸ್ ಚೀನಾದ ಉದ್ವಿಗ್ನತೆಯನ್ನು ಅನುಸರಿಸಿರುವ ಕೆಲವು ಪೋಸ್ಟ್ ಗಳು ಇದೀಗ ಹರಿದಾಡುತ್ತಿವೆ.

Best Mobiles in India

Read more about:
English summary
How iPhone prices may go up by Rs 12,000

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X