ನೋಕಿಯಾ ಫೋನ್ ಖರೀದಿಗೆ 4000 ರುಪಾಯಿ ಗಿಫ್ಟ್ ವೋಚರ್ ಫ್ರೀ

By Gizbot Bureau
|

ನೋಕಿಯಾ ಸ್ಮಾರ್ಟ್ ಫೋನ್ ಗಳನ್ನು ಖರೀದಿಸಬೇಕು ಎಂದು ಕೊಂಡಿದ್ದೀರಾ? ಹಾಗಾದ್ರೆ ನಿಮಗೊಂದು ಸಿಹಿಸುದ್ದಿ ಇಲ್ಲಿದೆ ನೋಡಿ.ಹೆಚ್ಎಂಡಿ ಗ್ಲೋಬಲ್ ಮಾಲೀಕತ್ವದ ಮೊಬೈಲ್ ಬ್ರ್ಯಾಂಡ್ ನೋಕಿಯಾ ಇದೀಗ ತನ್ನ ವೆಬ್ ಸೈಟ್ ನಲ್ಲಿ ಸ್ಮಾರ್ಟ್ ಫೋನ್ ಸೇಲ್ ನ್ನು ಆಯೋಜಿಸಿದೆ.ಈ ಸೇಲಿನ ಹೆಸರು ನೋಕಿಯಾ ಮೊಬೈಲ್ ಫ್ಯಾನ್ ಫೆಸ್ಟಿವಲ್. ಜುಲೈ 17 ರಿಂದ ಆರಂಭವಾಗಿರುವ ಈ ಸೇಲ್ ಜುಲೈ 25 ರ ವರೆಗೂ ನಡೆಯಲಿದೆ. ಅತ್ಯುತ್ತಮ ಆಫರ್ ಗಳು, ರಿಯಾಯಿತಿಗಳು ನೋಕಿಯಾ ಫೋನ್ ಗಳಿಗೆ ಈ ಸೇಲ್ ನಲ್ಲಿ ಲಭ್ಯವಾಗುತ್ತದೆ.ನೋಕಿಯಾ 6.1 ಪ್ಲಸ್, ನೋಕಿಯಾ 7.1, ನೋಕಿಯಾ 8.1 ಫೋನ್ ಗಳು ಇದರಲ್ಲಿ ಭರ್ಜರಿ ಡಿಸ್ಕೌಂಟ್ ನಲ್ಲಿ ಸಿಗುತ್ತದೆ.

ನೋಕಿಯಾ ಫೋನ್ ಖರೀದಿಗೆ 4000 ರುಪಾಯಿ ಗಿಫ್ಟ್ ವೋಚರ್ ಫ್ರೀ

ನೋಕಿಯಾ ಉಚಿತ ಗಿಫ್ಟ್ ಕಾರ್ಡ್ ಗಳನ್ನು ಕೂಡ ನೀಡುತ್ತಿದ್ದು ಅದರ ಬೆಲೆ 4,000 ರುಪಾಯಿ ಆಗಿರುತ್ತದೆ.ಖರೀದಿಯ ಸಂದರ್ಬದಲ್ಲಿ 'FANFESTIVAL’ ಪ್ರೋಮೋ ಕೋಡ್ ಬಳಸಿ ನೀವು ಆಫರ್ ನ್ನು ಪಡೆದುಕೊಳ್ಳಬಹುದು.ಮುಂದಿನ ನೋಕಿಯಾ ವೆಬ್ ಸೈಟ್ ನಲ್ಲಿ ಖರೀದಿಸುವ ಸಮಯದಲ್ಲಿ ಈ ಮೊತ್ತವನ್ನು ರೀಡಿಮ್ ಮಾಡಿಕೊಳ್ಳಬಹುದು.

ಇದರ ಜೊತೆಗೆ ಹೆಚ್ಚುವರಿಯಾಗಿ ಒಮ್ಮೆ ಸ್ಕ್ರೀನ್ ರಿಪ್ಲೇಸ್ ಮೆಂಟ್ ಕೂಡ ಉಚಿತವಾಗಿರುತ್ತದೆ.ಇನ್ನು ಈ ಸೇಲ್ ನಲ್ಲಿ ಹಳೆಯ ನೋಕಿಯಾ ಫೋನ್ ಎಕ್ಸ್ ಚೇಂಜ್ ಮಾಡುವುದಾದರೆ ಹೆಚ್ಚುವರಿ 10% ರಿಯಾಯಿತಿ ಲಭ್ಯವಾಗುತ್ತದೆ.

ನೋಕಿಯಾ 6.1 ಪ್ಲಸ್ : ವೈಶಿಷ್ಟ್ಯತೆಗಳು

ನೋಕಿಯಾ 6.1 ಪ್ಲಸ್ : ವೈಶಿಷ್ಟ್ಯತೆಗಳು

ನೋಕಿಯ 6.1 ಪ್ಲಸ್ ಸ್ಮಾರ್ಟ್ ಫೋನ್ 5.8-ಇಂಚಿನ FHD+ ಡಿಸ್ಪ್ಲೇ ಮತ್ತು 4GB RAM ನ್ನು ಹೊಂದಿದೆ. ಈ ಡಿವೈಸ್ 64GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಹೊಂದಿದ್ದು 400ಜಿಬಿ ವರೆಗೆ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶವಿರುತ್ತದೆ. ಇದರ ಬೆಲೆ Rs 15,999 ಮತ್ತು 3060mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಡುಯಲ್ ಹಿಂಭಾಗದ ಕ್ಯಾಮರಾ ಸೆಟ್ ಅಪ್ ಇದ್ದು 16MP+5MP ಯದ್ದಾಗಿದೆ.

ನೋಕಿಯಾ 7.1: ವೈಶಿಷ್ಟ್ಯತೆಗಳು

ನೋಕಿಯಾ 7.1: ವೈಶಿಷ್ಟ್ಯತೆಗಳು

ನೋಕಿಯಾ 7.1 ನ ಬೆಲೆ Rs 15,999.ಇದು 5,84- ಇಂಚಿನ ಫುಲ್ HD+ ಡಿಸ್ಪ್ಲೇಯನ್ನು ಹೊಂದಿದೆ.ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 636 ಹೊಂದಿದೆ. ಆಂಡ್ರಾಯ್ಡ್ 9 ಪೈ ಓಎಸ್ ನಲ್ಲಿ ರನ್ ಆಗುತ್ತದೆ. 4GB RAM ಮತ್ತು 64GB ಸ್ಟೋರೇಜ್ ವ್ಯವಸ್ಥೆ ಇದೆ. 12MP+5MP ಹಿಂಭಾಗದ ಕ್ಯಾಮರಾ ಮತ್ತು 8MP ಮುಂಭಾಗದ ಕ್ಯಾಮರಾ ವ್ಯವಸ್ಥೆ ಸೆಲ್ಫೀಗಾಗಿ ಲಭ್ಯವಿರುತ್ತದೆ.

ನೋಕಿಯಾ 8.1: ವೈಶಿಷ್ಟ್ಯತೆಗಳು

ನೋಕಿಯಾ 8.1: ವೈಶಿಷ್ಟ್ಯತೆಗಳು

Rs 19,999 ಗೆ ಈ ಫೋನ್ ಸಿಗುತ್ತದೆ. ಇದು 4GB RAM ಮತ್ತು 64GB ROM ನ್ನು ಹೊಂದಿದೆ. ಇದರಲ್ಲಿ 6.18- ಇಂಚಿನ ಸ್ಕ್ರೀನ್ ಮತ್ತು ಸ್ನ್ಯಾಪ್ ಡ್ರ್ಯಾಗನ್ 710 ಸಾಕೆಟ್ ನ ಪ್ರೊಸೆಸರ್ ಇದೆ. ನೋಕಿಯಾ 8.1 ಆಂಡ್ರಾಯ್ಡ್ ಪೈ ಆಪರೇಟಿಂಗ್ ಸಿಸ್ಟಮ್ ನಲ್ಲಿ ರನ್ ಆಗುತ್ತದೆ. 20MP ಸೆಲ್ಫೀ ಕ್ಯಾಮರಾವನ್ನು ಇದು ಆಫರ್ ಮಾಡುತ್ತದೆ. ಈ ಡಿವೈಸ್ ನ ಬ್ಯಾಟರಿ ಸಾಮರ್ಥ್ಯ 3500mAh ಆಗಿದೆ.

Best Mobiles in India

Read more about:
English summary
How To Get Free Rs. 4000 Worth Gift Card From Nokia

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X