HTC ಡಿಸೈರ್ VC ದ್ವಿಸಿಮ್ ಸ್ಮಾರ್ಟ್ ಫೋನ್ ಬಂದಿದೆ

By Varun
|
HTC ಡಿಸೈರ್ VC ದ್ವಿಸಿಮ್ ಸ್ಮಾರ್ಟ್ ಫೋನ್ ಬಂದಿದೆ

ಸ್ಮಾರ್ಟ್ ಫೋನುಗಳ ಸರದಾರ ತೈವಾನ್ ಮೂಲದ HTC ಡಿಸೈರ್ ಸರಣಿಯ ಹಲವಾರು ಮಾಡಲ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈಗ HTC ಡಿಸೈರ್ V ಫೀಚಾರುಗಳುಳ್ಳ GSM ಹಾಗು CDMA ತಂತ್ರಾಜ್ಞಾನದ ಸಿಮ್ ಇರುವ ಸ್ಮಾರ್ಟ್ ಫೋನ್ ಆದ HTC ಡಿಸೈರ್ VC ಅನ್ನು ಬಿಡುಗಡೆ ಮಾಡಿದೆ.

ಇದರ ಫೀಚರುಗಳು ಈ ರೀತಿ ಇವೆ:

 • 4 ಇಂಚ್ ನ ಟಚ್ ಸ್ಕ್ರೀನ್, WVGA ರೆಸಲ್ಯೂಶನ್ ನೊಂದಿಗೆ

 • ಆಂಡ್ರಾಯ್ಡ್ 4.0 ತಂತ್ರಾಂಶ

 • HTC ಸೆನ್ಸ್ 4.0 ಇಂಟರ್ಫೇಸ್

 • ಪ್ರಾಕ್ಸಿಮಿಟಿ ಸೆನ್ಸರ್

 • 1 GHz ಕಾರ್ಟೆಕ್ಸ್ A5 ಪ್ರೋಸೆಸರ್ Qualcomm MSM7227A ಚಿಪ್ ಸೆಟ್

 • Adreno 200 ಗ್ರಾಫಿಕ್ಸ್

 • 512 MB ರಾಮ್

 • 5 MP ಕ್ಯಾಮರಾ , ಆಟೋ ಫೋಕಸ್ ಹಾಗು ಫ್ಲಾಶ್ ನೊಂದಿಗೆ

 • VGA ಮುಂಬದಿಯ ಕ್ಯಾಮರಾ

 • 32 GB ವಿಸ್ತರಿಸಬಹುದಾದ ಮೆಮೊರಿ

 • ಬೀಟ್ಸ್ ಆಡಿಯೋ

 • ಸಾಮಾಜಿಕ ಜಾಲತಾಣಗಳ ಆಪ್ಸ್

 • 2G ಮತ್ತು 3G ಸಂಪರ್ಕ

 • ವೈಫೈ,ಬ್ಲೂಟೂತ್, USB

 • 1650 mAh ಬ್ಯಾಟರಿ

21,999 ರೂಪಾಯಿಗೆ ಸಿಗುವ HTC ಡಿಸೈರ್ VC ಸ್ಮಾರ್ಟ್ ಫೋನ್ ಕೊಂಡರೆ 25 GB ಡೇಟಾವನ್ನು ಡ್ರಾಪ್ ಬಾಕ್ಸ್ ಮೂಲಕ ಸ್ಟೋರ್ ಮಾಡಬಹುದಾಗಿದೆ.

ಟಾಟಾ ಡೋಕೊಮೋ ಆಫರ್ ಮೂಲಕ ನೀವು ಪೋಸ್ಟ್ ಪೇಡ್ ಸಂಪರ್ಕ ತೆಗೆದುಕೊಂಡರೆ (diet 199 ಪ್ಲಾನ್) ಮೊದಲ 3 ತಿಂಗಳಿಗೆ ಡಬಲ್ ಟಾಕ್ ಟೈಮ್ ಹಾಗು ಒಂದು ವರ್ಷ ಉಚಿತ 2GB ಇಂಟರ್ನೆಟ್(ಪ್ರತಿ ತಿಂಗಳು) ಸಿಗಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X