ಡ್ಯುಯೆಲ್‌ ಬ್ಯಾಟರಿಯ ಐಬಾಲ್‌ ಆಂಡಿ 4.3j ಬಿಡುಗಡೆ

Posted By: Staff
ಡ್ಯುಯೆಲ್‌ ಬ್ಯಾಟರಿಯ ಐಬಾಲ್‌ ಆಂಡಿ 4.3j ಬಿಡುಗಡೆ

ತಂತ್ರಜ್ಞಾನ ಸಂಬಂಧಿತ ಸರಕುಗಳ ತಯಾರಿಕಾ ಸಂಸ್ಥೆಯಾದಂತಹ ಐಬಾಲ್‌ ತನ್ನಯ ಆಂಡಿ ಸರಣಿಯಲ್ಲಿ ಭಾರತದ ಮೊಟ್ಟ ಮೊದಲ ಡ್ಯುಯೆಲ್‌ ಬ್ಯಾಟರಿ ಹೊಂದಿರುವ ಆಂಡಿ 4.3j ಸ್ಮಾರ್ಟ್‌ಫೋನ್‌ ಅನ್ನು ಭಾರತೀಯ ಮಾರುಕಟ್ಟೆಗೆ 9,499 ರೂ.ಗಳ ಕೈಗೆಟಕುವ ದರದಲ್ಲಿ ಬಿಡುಗಡೆ ಮಾಡಿದೆ.

ನೂತನ ಐಬಾಲ್‌ ಆಂಡಿ 4.3j ಬಿಡುಗಡೆಯ ಸಮಾರಂಭದಲ್ಲಿ ಮಾತನಾಡಿದ ಸಂಸ್ಥೆಯ ನಿರ್ದೇಶಕ ಸಂದೀಪ್‌ ಪರಸ್ರಾಂಪುರಿಯಾ ಮಾತನಾಡಿ " ಭಾರತದ ಮೊಟ್ಟಮೊದಲ ಡ್ಯುಯೆಲ್‌ ಬ್ಯಾಟರಿ ಹೊಂದಿರುವ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ, ಈ ಮೂಲಕ ಉತ್ತಮ ಬ್ಯಾಟರೀ ಬ್ಯಾಕ್‌ಅಪ್‌ ಬಯಸುವ ಗ್ರಾಹಕರಿಗೆ ಅನುಕೂಲವಾಗಲಿದೆ, ಹೆಚ್ಚು ಕಾಲ ಬ್ರೌಸಿಂಗ್‌ ಹಾಗೂ ದೀರ್ಘಕಾಲ ಚಾಟಿಂಗ್‌ ಮಾಡಲು ನೆರವಾಗಲಿದೆ" ಎಂದು ತಿಳಿಸಿದರು.

ಅಂದಹಾಗೆ ಈ ನೂತನ ಡ್ಯಯೆಲ್‌ ಬ್ಯಾಟರಿ ಸ್ಮಾರ್ಟ್‌ಫೋನ್‌ನಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎಂದು ತಿಳಿದುಕೊಳ್ಳೋಣ.

ವಿಶೇಷತೆ

ದರ್ಶಕ: ಆಂಡಿ 4.3j ನಲ್ಲಿ 4.3-ಇಂಚಿನ ದರ್ಶಕ ಹೊಂದಿದೆ.

ಪ್ರೊಸೆಸರ್‌: 1GHz ARM ಕಾರ್ಟೆಕ್ಸ್‌ A9 ಪ್ರೊಸೆಸರ್‌ ಹೊಂದಿದೆ..

ಆಪರೇಟಿಂಗ್‌ ಸಿಸ್ಟಂ: ಉಳಿದ ಎಲ್ಲಾ ಬಜೆಟ್‌ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಂತೆಯೆ ಆಂಡಿ 4.3j ನಲ್ಲಿಯೂ ಕೂಡ ಆಂಡ್ರಾಯ್ಡ್‌ 2.3 ಜಿಂಜರ್‌ಬ್ರೆಡ್‌ ಆಪರೇಟಿಂಗ್‌ ಸಿಸ್ಟಂ ಹೊಂದಿದೆ.

ಕನೆಕ್ಟಿವಿಟಿ: Wi-Fi, GPRS, ಬ್ಲೂಟೂತ್‌ ಹಾಗೂ 3G ಸೌಲಭ್ಯಗಳನ್ನು ಒಳಗೊಂಡಿದೆ.

ಬ್ಯಾಟರಿ: ಡ್ಯುಯೆಲ್‌ ಬ್ಯಾಟರಿ ಹೊಂದಿರುವ ಭಾರತದ ಮೊಟ್ಟ ಮೊದಲ ಸ್ಮಾರ್ಟ್‌ಫೋನ್‌ ಎಂದೆನಿಸಿ ಕೊಂಡಿರುವ ಐಬಾಲ್‌ ಆಂಡಿ 4.3j ನಲ್ಲಿ 1,630 mAh ಹಾಗೂ 900 mAh ಬ್ಯಾಟರಿಗಳೊಂದಿಗೆ ಒಟ್ಟು 2,530 mAh ಸಾಮರ್ತ್ಯದ ಬ್ಯಾಟರಿ ಹೊಂದಿದ್ದು ದೀರ್ಘಕಾಲದ ಬ್ಯಾಟರಿ ಬ್ಯಾಕಪ್‌ ನೀಡಬಲ್ಲದ್ದಾಗಿದೆ.

ಬೆಲೆ: ಖರೀದಿಸುವುದಾದರೆ ಐಬಾಲ್‌ ಆಂಡಿ 4.3j ಭಾರತದಲ್ಲಿ 9,499 ರೂ. ದರದಲ್ಲಿ ಲಭ್ಯವಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot