Subscribe to Gizbot

ರಾಯಲ್ ಲುಕ್ ನೀಡುತ್ತೆ ಈ ಇಂಟೆಕ್ಸ್ ರಾಯೇಲ್

Posted By: Super
ರಾಯಲ್ ಲುಕ್ ನೀಡುತ್ತೆ ಈ ಇಂಟೆಕ್ಸ್ ರಾಯೇಲ್

ಇದೀಗ ಚಿತ್ತಾಕರ್ಷಕ ಮೊಬೈಲೊಂದು ನಿಮ್ಮ ಕೈ ಸೇರಲು ಸಿದ್ಧಗೊಂಡಿದೆ. ಡ್ಯೂಯಲ್ ಸಿಮ್ ನೊಂದಿಗೆ ಡ್ಯೂಯಲ್ ಜಿಎಸ್ ಎಂ ಹೊಂದಿರುವ ಈ ನೂತನ ಇಂಟೆಕ್ಸ್ ರಾಯೇಲ್ ಮೊಬೈಲ್ ಕೈಲಿದ್ದರೆ ನಿಮಗೂ ರಾಯಲ್ ಲುಕ್ ನೀಡುತ್ತೆ.

ಸುಂದರ ವಿನ್ಯಾಸ, ಬಣ್ಣದ ಮಿಶ್ರಣ ಹೊಂದಿರುವ ಈ ಮೊಬೈಲ್ ನಲ್ಲಿ ಇನ್ನಷ್ಟನ್ನು ನೀವು ನಿರೀಕ್ಷಿಸಬಹುದು.

ಇಂಟೆಕ್ಸ್ ರಾಯೇಲ್ ಮೊಬೈಲ್ ವಿಶೇಷತೆ:

* 2.6 ಇಂಚಿನ ಡಿಸ್ಪ್ಲೇ

* QVGA ತಂತ್ರಜ್ಞಾನದ ಡಿಸ್ಪ್ಲೇ

* 105 ತೂಕ, 115 x 52 x 15.8 ಎಂಎಂ ಸುತ್ತಳತೆ

* 2 ಮೆಗಾ ಪಿಕ್ಸಲ್ ಕ್ಯಾಮೆರಾ

* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ

* GPRS, A2DP ಬ್ಲೂಟೂಥ್

* ಎರಡು ರೀತಿಯ GSM ಸಂಪರ್ಕಕ್ಕೆ ಎರಡು ಸ್ಲಾಟ್

ಉತ್ತಮವಾದ 2200 mAh ಬ್ಯಾಟರಿ ಹೊಂದಿರುವ ಈ ಮೊಬೈಲ್ 8 ಗಂಟೆ ಟಾಕ್ ಟೈಂ ಮತ್ತು 395 ಗಂಟೆ ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ. ಈ ಇಂಟೆಕ್ಸ್ ಮೊಬೈಲ್ ನಿಖರ ಬೆಲೆ ತಿಳಿದುಬಂದಿಲ್ಲ. ಆದರೆ ಕೇವಲ 2,000-3,000 ರು ಗೆ ದೊರೆಯಲಿರುವುದೆಂದು ಅಂದಾಜಿಸಲಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot