ಫೋನಿನ ಬ್ಯಾಟರಿಯನ್ನು ಕೊಲ್ಲುವುದು ಯಾವುದು?

By Gizbot Bureau
|

ಮೊಬೈಲ್ ಗಳು ನಿಮ್ಮ ಜೀವನದ ಅವಿಭಾಜ್ಯ ಅಂಗವೆನಿಸಿಬಿಟ್ಟಿವೆ. ಎಷ್ಟೇ ಉತ್ತಮವಾಗಿದೆ ಎಂದುಕೊಂಡರೂ ಅವುಗಳ ಬ್ಯಾಟರಿ ಹೆಚ್ಚು ಅವಧಿಗೆ ಬಾಳಿಕೆ ಬರುವುದಿಲ್ಲ. ಅಧಿಕ ಬಾಳಿಕೆ ಎಂಬ ಗ್ಯಾರೆಂಟಿಯನ್ನು ತಯಾರಿಕಾ ಸಂಸ್ಥೆ ಗಳು ನೀಡಿದರೂ ಕೂಡ ಅವೆಲ್ಲವೂ ಹುಸಿ ಭರವಸೆಗಳೇ ಸರಿ. ಪ್ರತಿ ಬ್ಯಾಟರಿಗೂ ಒಂದು ಜೀವಿತಾವಧಿ ಇದೆ. ಅದು ಚಾರ್ಜ್ ಸೈಕಲ್ ನ್ನು ಅವಲಂಬಿಸಿರುತ್ತದೆ. ಕೆಲವು ಸಮಯದ ಅವಧಿಗೆ ಬ್ಯಾಟರಿಯನ್ನು ಫುಲ್ ಚಾರ್ಜ್ ಮಾಡಬಹುದು ಮತ್ತು ಡಿಸ್ಚಾರ್ಜ್ ಮಾಡಬಹುದು.

ಬ್ಯಾಟರಿ

ಒಂದು ವೇಳೆ ನೀವು ಆಡುವ ಗೇಮ್ ಗಳು, ನೀವು ನೋಡುವ ಚಲನಚಿತ್ರಗಳು ಅಥವಾ ವೆಬ್ ಬ್ರೌಸಿಂಗ್ ಕಾರಣದಿಂದಾಗಿ ಬ್ಯಾಟರಿ ಲೈಫ್ ಹಾಳಾಗುತ್ತದೆ ಎಂದು ನೀವು ಭಾವಿಸಿದ್ದರೆ ಅದು ನಿಮ್ಮ ತಪ್ಪು ಗ್ರಹಿಕೆ. ಇವಿಷ್ಟಲ್ಲದೆ ಇನ್ನಷ್ಟು ಕಾರಣಗಳಿಂದಲೂ ಕೂಡ ನಿಮ್ಮ ಬ್ಯಾಟರಿ ಹಾಳಾಗುತ್ತದೆ. ಹಾಗಾದ್ರೆ ಆ ಕಾರಣಗಳು ಯಾವುವು ಎಂಬ ಬಗ್ಗೆ ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ.

. ಸ್ಕ್ರೀನ್ ನ್ನು ಯಾವಾಗಲೂ ತೆರೆದಿಡುವುದು.

. ಡಿಸ್ಪ್ಲೇ ಬ್ರೈಟ್ ನೆಸ್

.ಜಿಪಿಎಸ್

. ಅಂತರ್ಜಾಲದ ಜಾಹೀರಾತುಗಳು

. ಬ್ಯಾಕ್ ಗ್ರೌಂಡ್ ನಲ್ಲಿ ರನ್ ಆಗುವ ಆಪ್ ಗಳು

. ತಪ್ಪು ಮಾರ್ಗಗಳಲ್ಲಿ ಚಾರ್ಜ್ ಮಾಡುವುದು

ನಿಮ್ಮ ಬ್ಯಾಟರಿಯನ್ನು ಹಾಳು ಮಾಡುವ ಆಪ್ ಗಳ ಬಗ್ಗೆ ತಿಳಿದುಕೊಳ್ಳುವುದು ಹೇಗೆ?

ನಿಮ್ಮ ಬ್ಯಾಟರಿಯನ್ನು ಹಾಳು ಮಾಡುವ ಆಪ್ ಗಳ ಬಗ್ಗೆ ತಿಳಿದುಕೊಳ್ಳುವುದು ಹೇಗೆ?

ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ:

. ನಿಮ್ಮ ಫೋನ್ ನಲ್ಲಿರುವ ಸೆಟ್ಟಿಂಗ್ಸ್ ಆಪ್ ನ್ನು ತೆರೆಯಿರಿ.

‘About phone' ಆಯ್ಕೆಗೆ ಸ್ಕ್ರೋಲ್ ಡೌನ್ ಮಾಡಿ ಮತ್ತು ಅದರ ಮೇಲೆ ಟ್ಯಾಪ್ ಮಾಡಿ.

ಮುಂದಿನ ಮೆನುವಿನಲ್ಲಿ ಬ್ಯಾಟರಿ ಬಳಕೆ ಬಗ್ಗೆ ಪರೀಕ್ಷಿಸಿ.

ಬ್ಯಾಟರಿಯನ್ನು ಬಳಸುತ್ತಿರುವ ಆಪ್ ಗಳ ಬಗೆಗಿನ ಮಾಹಿತಿಯನ್ನು ಒಳಗೊಂಡ ಲಿಸ್ಟ್ ನಿಮಗೆ ಸಿಗುತ್ತದೆ.

ಬಳಕೆಯಲ್ಲಿ ಇಲ್ಲದೆ ಇದ್ದಾಗ ನಿಮ್ಮ ಬ್ಯಾಟರಿ ಯಾಕೆ ಡ್ರೈ ಆಗುತ್ತದೆ ಗೊತ್ತಾ?

ಬಳಕೆಯಲ್ಲಿ ಇಲ್ಲದೆ ಇದ್ದಾಗ ನಿಮ್ಮ ಬ್ಯಾಟರಿ ಯಾಕೆ ಡ್ರೈ ಆಗುತ್ತದೆ ಗೊತ್ತಾ?

ನಿಮ್ಮ ಸ್ಮಾರ್ಟ್ ಫೋ‌ನ್ ನ್ನು ಬಳಕೆ ಮಾಟದೇ ಇದ್ದಾಗಲೂ ಕೂಡ ಬ್ಯಾಟರಿ ಖಾಲಿಯಾಗುತ್ತದೆ ಯಾಕೆಂದರೆ ಬ್ಯಾಟರಿಯು ನಿದ್ರಾವಸ್ಥೆಯಲ್ಲಿದ್ದಾಗಲೂ ಕೂಡ ಬ್ಯಾಕ್ ಗ್ರೌಂಡ್ ನಲ್ಲಿ ಕೆಲವು ಆಪ್ ಗಳು ರನ್ ಆಗುತ್ತಲೆ ಇರುತ್ತದೆ.ನಿಮ್ಮ ಫೋನಿನ ಬ್ಯಾಟರಿ ವೀಕ್ ಆಗಿದ್ದರೆ ಬೇಗನೆ ಡ್ರೈ ಆಗುತ್ತದೆ. ಸ್ವಿಚ್ ಆಫ್ ಆಗಿದ್ದರೂ ಕೂಡ ಬ್ಯಾಟರಿ ಖಾಲಿಯಾಗುತ್ತದೆ.

ರಾತ್ರಿ ಪೂರ್ತಿ ಫೋನ್ ನ್ನು ಚಾರ್ಜಿಗೆ ಹಾಕುವುದು ಸರಿಯೇ?

ರಾತ್ರಿ ಪೂರ್ತಿ ಫೋನ್ ನ್ನು ಚಾರ್ಜಿಗೆ ಹಾಕುವುದು ಸರಿಯೇ?

ಒಂದು ಫೋನಿಗೆ ಸ್ಮಾರ್ಟ್ ಫೋನ್ ಅನ್ನುವ ಹೆಸರು ಸುಮ್ಮನೆ ಬಂದಿಲ್ಲ. ಬ್ಯಾಟರಿಯ ಫುಲ್ಲಿ ಚಾರ್ಜಿಂಗ್‌ಮೋಡ್ ನ್ನು ಇದು ಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ. ರಾತ್ರಿ ಪೂರ್ತಿ ಚಾರ್ಜ್ ಗೆ ಹಾಕಿದರೂ ಕೂಡ ಅದರ ಗರಿಷ್ಟ ಚಾರ್ಜಿಂಗ್ ಮಟ್ಟವನ್ನು ತಲುಪಿದಾಗ ಅಂದರೆ 100% ಚಾರ್ಜ್ ಆದ ನಂತರ ಸ್ಮಾರ್ಟ್ ಫೋನಿಗೆ ಆಗುವ ಕರೆಂಟ್ ಸಪ್ಲೈ ನಿಲ್ಲುತ್ತದೆ. ಹಾಗಾಗಿ ಅಂತಹ ದೊಡ್ಡ ಪ್ರಮಾಣದ ಡ್ಯಾಮೇಜ್ ಏನೂ ಆಗುವುದಿಲ್ಲ. ಆದರೆ ತಯಾರಕರು ನಿಗದಿಗೊಳಿಸಿರುವ ನಿರ್ಧಿಷ್ಟ ಮಟ್ಟಕ್ಕೆ ಬ್ಯಾಟರಿಯ ಶಕ್ತಿ ಡಿಚಾರ್ಜ್ ಹೊಂದಿದಾಗ ಪುನಃ ಚಾರ್ಜ್ ಆಗಲು ಪ್ರಾರಂಭವಾಗುತ್ತದೆ. ಆದರೆ ಯಾವಾಗಲೂ ನೀವು ನಿಮ್ಮ ಮೊಬೈಲಿನ ಒರಿಜಿ‌ನಲ್ ಕೇಬಲ್ ನ್ನೇ ಚಾರ್ಜಿಂಗ್ ಗೆ ಬಳಸಬೇಕು ಮತ್ತು ಒಂದು ವೇಳೆ ಅದು ಹಾಳಾದರೆ ಪುನ: ಕಂಪೆನಿಯಿಂದ ನೈಜವಾಗಿರುವ ಚಾರ್ಜರ್ ನ್ನೇ ಕೊಂಡುಕೊಳ್ಳಬೇಕು. ಫೇಕ್ ಚಾರ್ಜರ್ ಗಳಿಂದ ಅನಾಹುತಗಳಾಗುವುದು ಅಧಿಕ.

Best Mobiles in India

Read more about:
English summary
Is Your Phone's Battery Draining? This Could Be The Reason

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X