ಪ್ರೇಮಿಗಳ ದಿನಾಚರಣೆ ಸ್ಪೇಷಲ್: ಜಿಯೋ ಫೋನ್ ಬಳಕೆದಾರರಿಗೆ ಬಂಪರ್ ಕೊಟ್ಟ ಅಂಬಾನಿ..!

|

ಪ್ರೇಮಿಗಳ ದಿನಾಚರಣೆಗೆ ಜಿಯೋ ಫೋನ್ ಬಳಕೆದಾರರಿಗೆ ಸಿಹಿ ಸುದ್ದಿಯೊಂದು ಲಭ್ಯವಾಗಿದ್ದು, ಇದು ಬಜೆಟ್ ಸ್ಮಾರ್ಟ್‌ಫೋನ್ ಮಾರಾಟಗಾರರಿಗೆ ನುಂಗಲಾದ ಬಿಸಿ ತುಪ್ಪವು ಆಗಲಿದೆ. ಕಾರಣ ಇಷ್ಟು ದಿನ ಜಿಯೋ ಫೋನಲ್ಲಿ ಕೊರತೆ ಎನ್ನುವ ಆಯ್ಕೆಯೊಂದನ್ನು ಬಳಕೆದಾರರಿಗೆ ನೀಡಲು ಜಿಯೋ ಮುಂದಾಗಿದ್ದು, ಇದು ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿ ಹಾಕುವುದಲ್ಲದೇ, ಜಿಯೋ ಫೋನ್ ಬೇಡಿಕೆಯನ್ನು ಹೆಚ್ಚು ಮಾಡಲಿದೆ.

ಪ್ರೇಮಿಗಳ ದಿನಾಚರಣೆ ಸ್ಪೇಷಲ್: ಜಿಯೋ ಫೋನ್ ಬಳಕೆದಾರರಿಗೆ ಬಂಪರ್ ಕೊಟ್ಟ ಅಂಬಾನಿ..!

ನಾಳೆಯಿಂದ ಭಾರತದ ಸ್ಮಾರ್ಟ್ ಫೀಚರ್ ಫೋನ್ ಎಂದೇ ಖ್ಯಾತಿಯನ್ನು ಪಡೆದಿರುವ ಜಿಯೋ ಫೋನಿನಲ್ಲಿ ಖ್ಯಾತ ಸೋಶಿಯಲ್ ಮೀಡಿಯಾ ಫೇಸ್‌ಬುಕ್ ಆಪ್ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಿಂದಾಗಿ ಜಿಯೋ ಫೋನ್ ಬಳಕೆದಾರರು ಫೇಸ್‌ ಬುಕ್ ಬಳಕೆಯನ್ನು ಆಪ್ ನಲ್ಲಿಯೇ ಮಾಡಿಕೊಳ್ಳಬಹುದಾಗಿದ್ದು, ಶೀಘ್ರವೇ ವಾಟ್ಸ್‌ಆಪ್ ಆಪ್ ಬಳಕೆಗೆ ದೊರೆತರು ಆಶ್ಚರ್ಯ ಪಡುವಂತಿಲ್ಲ ಎನ್ನಲಾಗಿದೆ.

ಫೇಸ್‌ಬುಕ್ ಆಪ್:

ಫೇಸ್‌ಬುಕ್ ಆಪ್:

ಈ ಹೊಸ ಆಪ್ ನಿಂದಾಗಿ ಸಾಮಾನ್ಯರು ಮೊಬೈಲ್‌ನಲ್ಲಿ ಫೇಸ್‌ ಬುಕ್ ಬಳಕೆ ಮಾಡಿಕೊಳ್ಳುವಂತೆ ಜಿಯೋ ಫೋನ್ ಬಳಕೆದಾರರು ಸಹ ಫೇಸ್‌ಬುಕ್ ಆಪ್ ಬಳಸಬಹುದಾಗಿದೆ. ಇದರಿಂದಾಗಿ ಜಿಯೋ ಫೋನ್ ನಲ್ಲಿಯೂ ನೋಟಿಫಿಕೇಷನ್ ಪಡೆಯಬಹುದಾಗಿದೆ.

ಹೆಚ್ಚಾಗಲಿದೆ ಫೇಸ್‌ಬುಕ್ ಬಳಕೆದಾರರ ಸಂಖ್ಯೆ:

ಹೆಚ್ಚಾಗಲಿದೆ ಫೇಸ್‌ಬುಕ್ ಬಳಕೆದಾರರ ಸಂಖ್ಯೆ:

ಜಿಯೋ ಫೋನ್ ಬಳಕೆದಾರರು ಸಹ ಫೇಸ್‌ಬುಕ್ ಆಪ್ ಬಳಸುವ ಆಯ್ಕೆಯನ್ನು ನಾಳೆಯಿಂದ ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಹಿನ್ನಲೆಯಲ್ಲಿ ಫೇಸ್‌ಬುಕ್ ಬಳಕೆದಾರರ ಸಂಖ್ಯೆಯೂ ಅತ್ಯಂತ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಗೂಗಲ್ ಅಸಿಸ್ಟೆಂಟ್ ಸಹ:

ಗೂಗಲ್ ಅಸಿಸ್ಟೆಂಟ್ ಸಹ:

ಈ ಮೂಲಕ ಕೃತಕ ಬುದ್ದಿ ಮತ್ತೆಯ ಸಹಾಯದಿಂದ ಕಾರ್ಯನಿರ್ವಹಿಸುವ ಗೂಗಲ್ ವಾಯ್ಸ್ ಅಸಿಸ್ಟೆಂಟ್ ಹೊಂದಿರುವ ಮೊದಲ ಫೀಚರ್ ಫೋನ್ ಎಂಬ ಖ್ಯಾತಿಗೆ ಜಿಯೋ ಫೋನ್ ಪಾತ್ರವಾಗಿದೆ. ಈಗಾಗಲೇ ಜಿಯೋ ಫೋನಿನಲ್ಲಿ ವಾಯ್ಡ್ ಅಸಿಸ್ಟೆಂಟ್ ಅನ್ನು ಕಾಣಬಹುದಾಗಿದ್ದು, ಆ ಸ್ಥಾನಕ್ಕೆ ಗೂಗಲ್ ಅಸಿಸ್ಟೆಂಟ್ ಬರಲಿದೆ.

ಮೊಬಿಕ್ವೀಕ್ ನಲ್ಲಿ ಲಭ್ಯ:

ಮೊಬಿಕ್ವೀಕ್ ನಲ್ಲಿ ಲಭ್ಯ:

ಇನ್ನು ಮುಂದೆ ಮೊಬಿಕ್ವೀಕ್ ಸಹ ಜಿಯೋ ಫೋನ್ ಮಾರಾಟ ಮಾಡಲಿದೆ. ಈ ಕುರಿತು ಜಿಯೋ ದೊಂದಿಗೆ ಮೊಬಿಕ್ಬೀಕ್ ಒಪ್ಪಂದವನ್ನು ಮಾಡಿಕೊಂಡಿದೆ ಎನ್ನಲಾಗಿದೆ. ಜಿಯೋ ಬಿಟ್ಟರೆ ಅಧಿಕೃತವಾಗಿ ಜಿಯೋ ಫೋನ್ ಮೊಬಿಕ್ವೀಕ್ ನಲ್ಲಿ ಮಾತ್ರವೇ ದೊರೆಯಲಿದೆ ಎನ್ನಲಾಗಿದೆ.

60 ಮಿಲಿಯನ್ ಫೋನ್

60 ಮಿಲಿಯನ್ ಫೋನ್

ಜಿಯೋ ಫೋನ್ ದೇಶದ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟು ಹಾಕಿರುವುದಲ್ಲದೇ ಕಳೆದ ವರ್ಷ ದೇಶದಲ್ಲಿ ಅತೀ ಹೆಚ್ಚು ಮಾರಾಟವಾದ ಫೋನ್ ಎನ್ನುವ ಖ್ಯಾತಿಗೂ ಪಾತ್ರವಾಗಿತ್ತು. ಸುಮಾರು 60 ಮಿಲಿಯನ್ ಗೂ ಹೆಚ್ಚು ಫೋನ್‌ಗಳು ಮಾರಾಟವಾಗಿತ್ತು ಎನ್ನಲಾಗಿದೆ.

ಜಿಯೋ ಫೋನಿನ ವಿಶೇಷತೆ

ಜಿಯೋ ಫೋನಿನ ವಿಶೇಷತೆ

ಜಿಯೋ ಫೋನಿನಲ್ಲಿ 2.4 ಇಂಚಿನ QVGA ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದರಲ್ಲಿ 512MB RAM ಜೊತೆಗೆ 4GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಅಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 128GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ. ಫೋನ್ ಹಿಂಭಾಗದಲ್ಲಿ 2MP ಕ್ಯಾಮೆರಾ ಮುಂಭಾಗದಲ್ಲಿ VGA ಕ್ಯಾಮೆರಾವನ್ನು ಸಹ ಅಳವಡಿಸಲಾಗಿದೆ.

ಜಿಯೋ ಫೋನ್ ಪ್ಲಾನ್

ಜಿಯೋ ಫೋನ್ ಪ್ಲಾನ್

ಜಿಯೋ ಫೋನ್‌ಗಾಗಿಯೇ ನೀಡಿರುವ ರೂ.49ರ ಪ್ಲಾನ್‌ನಲ್ಲಿ ಬಳಕೆದಾರರಿಗೆ 1GB 4G ಡೇಟಾವನ್ನು 28 ದಿನಗಳ ವ್ಯಾಲಿಡಿಟಿಯನ್ನು ನೀಡಲಿದೆ ಎನ್ನಲಾಗಿದೆ. ಇದರಲ್ಲಿ ಬಳಕೆದಾರರು ಅನ್‌ಲಿಮೆಟೆಡ್ ಕರೆ ಮಾಡುವ ಅವಕಾಶವನ್ನು ನೀಡಲಿದೆ ಎನ್ನಲಾಗಿದೆ. ಇದು ಜಿಯೋ ಫೋನ್‌ ಬಳಕೆದಾರರ ಸಂಖ್ಯೆಯನ್ನು ಹೆಚ್ಚು ಮಾಡಲಿದೆ.

ಹೆಚ್ಚು ಮಾರಾಟದ ಫೋನ್:

ಹೆಚ್ಚು ಮಾರಾಟದ ಫೋನ್:

ರೂ.1500ರ ಹಿಂತಿರುಗಿಸುವ ಠೇವಣಿಯನ್ನು ಪಡೆದು ಉಚಿತವಾಗಿ ನೀಡುತ್ತರುವ ಜಿಯೋ ಫೋನ್ ಮಾರುಕಟ್ಟೆಯಲ್ಲಿ ಬಳಕೆದಾರರಿಗೆ ಹೆಚ್ಚಿನ ಸನಿಹಕ್ಕೆ ಬಂದಿದೆ. ಮಾರುಕಟ್ಟೆಯಲ್ಲಿ ಶೇ.27% ಮಂದಿ ಜಿಯೋ ಫೋನ್ ಕೊಂಡು ಕೊಂಡಿದ್ದಾರೆ ಎನ್ನಲಾಗಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಜಿಯೋ ಫೋನ್ ನಂಬರ್ 1 ಸ್ಥಾನ ಅಲಂಕರಿಸಿದೆ.

Best Mobiles in India

English summary
JioPhone to Support Facebook App. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X