Subscribe to Gizbot

4,399 ರೂ.ದರದಲ್ಲಿ ಲಾವಾ ಐರಿಸ್‌ ಎನ್‌350 ಬರಲಿದೆ

Posted By: Vijeth

4,399 ರೂ.ದರದಲ್ಲಿ ಲಾವಾ ಐರಿಸ್‌ ಎನ್‌350 ಬರಲಿದೆ

ಗ್ಯಾಲರಿ...

ಇತ್ತೀಚಿನ ಬೆಳವಣಿಗೆ ಎಂಬಂತೆ ಲವಾ ಮೊಬೈಲ್ಸ್‌ ತನ್ನಯ ನೂತನ ಡ್ಯುಯೆಲ್‌ ಸಿಮ್‌ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಆದಂತಹ ಐರಿಸ್‌ ಎನ್‌350 ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ನೂತನ ಸ್ಮಾರ್ಟ್‌ಫೋನ್‌ ರೂ. 5,499 ದರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಹಾಗೂ ಇದೇ ಸ್ಮಾರ್ಟ್‌ಪೋನ್‌ ಆನ್‌ಲೈನ್‌ ಶಾಪಿಂಗ್‌ ಸೈಟ್‌ ಸ್ನಾಪ್‌ಡೀಲ್‌ನಲ್ಲಿ ರೂ. 4,399 ದರದಲ್ಲಿ ಲಭ್ಯವಿದೆ.

ಡ್ಯುಯೆಲ್‌ ಸಿಮ್‌ ಫಿಚರ್ಸ್ ಹೊಂದಿರುವ ನೂತನ ಸ್ಮಾರ್ಟ್‌ಫೋನ್‌ನಲ್ಲಿ 1GHz ಪ್ರೊಸೆಸರ್‌ ಹೊಂದಿದ್ದು, 3.5 ಇಂಚಿನ ದರ್ಶಕ ಹಾಗೂ 320 x 480 ಪಿಕ್ಸೆಲ್ ರೆಸೆಲ್ಯೂಷನ್‌ ಹೊಂದಿದೆ. ಅಂದಹಾಗೆ ಟಚ್‌ಸ್ಕ್ರೀನ್ ಫೀಚರ್ಸ್‌ಆಂಡ್ರಾಯ್ಡ್‌ ನ ಹಿಂದಿನ ಮಾದರಿಯಾದ 2.3.6 ಜಿಂಜರ್‌ ಬ್ರೆಡ್‌ ಆಪರೇಟಿಂಗ್‌ ಸಿಸ್ಟಂನಲ್ಲಿ ಲಭ್ಯವಿದೆ. ಆದರೆ ಹಳೆಯ ಮಾದರಿ ಆಪರೇಟಿಂಗ್‌ ಸಿಸ್ಟಂ ಈಗ ಔಟ್‌ ಡೇಟೆಡ್‌ ಆಗುತ್ತಿರುವುದರಿಂದ ಗ್ರಾಹಕರು ನೂತನ ಸ್ಮಾರ್ಟ್‌ಫೋನ್‌ನಲ್ಲಿ ಆಂಡ್ರಾಯ್ಡ್‌ ಐಸಿಎಸ್‌ ಆಪರೇಟಿಂಗ್‌ ಸಿಸ್ಟಂ ನೀಡುವ ನಿರೀಕ್ಷೆಯಲ್ಲಿದ್ದರು ಆದರೆ ಸಂಸ್ಥೆಯು ಹಳೆಯ ಜಿಂಜರ್‌ಬ್ರೆಡ್‌ ಓಎಸ್‌ ನೀಡಿದೆ. ಇದಲ್ಲದೆ 2 MP ಕ್ಯಾಮೆರಾ ಹಾಗೂ ವಿಡಿಯೋ ಚಾಟಿಂಗ್‌ಗಾಗಿ 0.3 MP ನ ಮುಂಬದಿಯ ಕ್ಯಾಮೆರಾ ಹೊಂದಿದೆ.

ನೂತನ ಐರಿಸ್‌ ಎನ್‌350 11.9mm ದಪ್ಪ ಹಾಗೂ115 ಗ್ರಾಂತೂಕ ಹೊಂದಿರುವುದರಿಂದ Hಗುರವೆನಿಸುತ್ತದೆ. ಅಂದಹಾಗೆ 2G EDGE/GPRS ನಂತಹ ಫೀಚರ್ಸ್‌ಗಳಿದ್ದು ಅಂತರ್ಜಾಲ ಬಳಕೆಯನ್ನು ಸುಲಭ್ವಾಗಿ ಮಾಡಬಹುದಾಗಿದೆ.

ಇದಲ್ಲದೆ ವೈ-ಫೈ ಹಾಗೂ ಬ್ಲೂಟೂತ್‌, FM ರೇಟಿಯೋ ಹಾಗೂ ರೆಕಾರ್ಟಿಂಗ್‌ ಸೇರಿದಂತೆ ಕೇವಲ 160 MB ಆಮತರಿಕ ಮೆಮೊರಿ ಹೊಂದಿರುವುದು ಕೊಂಚ ನಿರಾಶಾದಾಯಕವಾಗಿದೆ. ಆದರೆ ಬಳಕೆದಾರರು ಮೈಕ್ರೋ ಎಸ್‌ಡಿ ಕಾರ್ಡ್‌ ಸ್ಲಾಟ್‌ ಮೂಲಕ 32GB ವರೆಗೆ ಮೆಮೊರಿ ವಿಸ್ತರಿಸಿಕೊಳ್ಳ ಬಹುದಾಗಿದೆ. ಹಾಗೂ 1,300 mAh ಬ್ಯಾಟರಿ ಹೊಂದಿದ್ದು ಉತ್ತಮ ಬ್ಯಾಟರಿ ಬ್ಯಾಕಪ್‌ ನೀಡುತ್ತದೆ.

Read In English...

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot