Subscribe to Gizbot

ಆನ್‌ಲೈನ್‌ಲ್ಲಿ ಎಲ್‌ಜಿ ವಕ್ರ ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ಬುಕ್‌ ಮಾಡಿ

Written By:

ಎಲ್‌ಜಿ ಕಂಪೆನಿಯ ವಕ್ರಸ್ಕ್ರೀನ್‌ ಫ್ಯಾಬ್ಲೆಟ್‌ ಜಿ ಫ್ಲೆಕ್ಸ್‌ ಭಾರತದ ಮಾರುಕಟ್ಟೆಯಲ್ಲಿ ಈಗ ಲಭ್ಯವಿದೆ. ಆನ್‌‌ಲೈನ್‌ ಶಾಪಿಂಗ್‌ ತಾಣದಲ್ಲಿ ಈ ಫ್ಯಾಬ್ಲೆಟ್‌ ಮಾರಾಟಕ್ಕೆ ಬಂದಿದ್ದು ಬೇರೆ ಬೇರೆ ಬೆಲೆಯಲ್ಲಿ ಲಭ್ಯವಿದೆ.

ಎಲ್‌ಜಿ ಈ ಸ್ಮಾರ್ಟ್‌ಫೋನನ್ನು ಕಳೆದ ಡಿಸೆಂಬರ್‌ನಲ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು.ಫೆಬ್ರವರಿಯಲ್ಲಿ ಆನ್‌ಲೈನ್‌ ಮತ್ತು ರಿಟೇಲ್‌ ಅಂಗಡಿಗಳಿಗೆ ಈ ಫ್ಯಾಬ್ಲೆಟ್‌‌ನ್ನು ವಿತರಣೆ ಮಾಡುವುದಾಗಿ ಎಲ್‌ಜಿ ಬಿಡುಗಡೆ ಸಂದರ್ಭದಲ್ಲಿ ಹೇಳಿತ್ತು.

ಸ್ಮಾರ್ಟ್‌ಫೋನ್‌ ಇತಿಹಾಸದಲ್ಲಿ ಎರಡನೇ ವಕ್ರ ಸ್ಕ್ರೀನ್ ಸ್ಮಾರ್ಟ್‌ಫೋನ್‌ ಇದಾಗಿದ್ದು ಈ ಹಿಂದೆ ಸ್ಯಾಮ್‌ಸಂಗ್‌ ವಿಶ್ವದ ಪ್ರಥಮ ವಕ್ರ ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ಬಿಡುಗಡೆಮಾಡಿತ್ತು. 160.5x81.6x8.7 ಮಿ.ಮೀ ಗಾತ್ರದ ಈ ಫ್ಯಾಬ್ಲೆಟ್‌ 177 ಗ್ರಾಂ ತೂಕವನ್ನು ಹೊಂದಿದೆ. ಎಲ್‌ಜಿ ಜಿ 2ನಂತೆ ಈ ಫ್ಯಾಬ್ಲೆಟ್‌ನಲ್ಲಿ ಹಿಂದುಗಡೆ ವಾಲ್ಯೂಬ್‌ ಮತ್ತು ಹೋಮ್‌ ಬಟನ್‌ ನೀಡಲಾಗಿದೆ. ಬಳಕೆದಾರರು ಸ್ಕ್ರೀನ್‌ ಮೇಲೆ ಮೆಲ್ಲನೇ ಎರಡು ಬಾರಿ ಬೆರಳಿನಿಂದ ಹೊಡೆಯುವ ಮೂಲಕ ಸ್ಮಾರ್ಟ್‌ಫೋನ್‌ ಆನ್‌ ಆಫ್‌ ಮಾಡಬಹುದಾಗಿದೆ.

ಸಿಂಗಲ್‌ಸಿಮ್‌(ಮೈಕ್ರೋ ಸಿಮ್‌) ಫ್ಯಾಬ್ಲೆಟ್‌ ಇದಾಗಿದ್ದು,ಎಕ್ಸಲರೋ ಮೀಟರ್‌, ಗೈರೋಸ್ಕೋಪ್‌,ಪ್ರಾಕ್ಸಿಮಿಟಿ,ಕಂಪಾಸ್‌ ಸೆನ್ಸರ್‌‌ಗಳನ್ನು ಹೊಂದಿದೆ.ಎಲ್‌ಜಿ ಕಂಪೆನಿ ಇಂದು ಫ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದ್ದರೂ ಇದರ ಬೆಲೆಯನ್ನು ಪ್ರಕಟಿಸಿಲ್ಲ.ಅಂದಾಜು 60-65 ಸಾವಿರದೊಳಗಡೆ ಬೆಲೆಯನ್ನು ನಿಗದಿಪಡಿಸಬಹುದು ಎಂದು ಅಂದಾಜಿಸಲಾಗಿದೆ.ಎಲ್‌ಜಿ ಜಿ ಫ್ಲೆಕ್ಸ್‌ ಫ್ಯಾಬ್ಲೆಟ್‌ ಇದೇ ಅಕ್ಟೋಬರ್‌ನಲ್ಲಿ ಕೋರಿಯಾದಲ್ಲಿ ಬಿಡುಗಡೆಯಾಗಿತ್ತು.


ವಿಶೇಷತೆ:
ಸಿಂಗಲ್‌ ಸಿಮ್‌
6 ಇಂಚಿನ ಪಿಒಎಲ್‌ಇಡಿ ಸ್ಕ್ರೀನ್‌(720 x 1280 ಪಿಕ್ಸೆಲ್,245 ಪಿಪಿಐ)
ಆಂಡ್ರಾಯ್ಡ್‌ 4.2.2 ಜೆಲ್ಲಿ ಬೀನ್‌ ಓಎಸ್‌
2.26 GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಕ್ವಾಡ್‌ ಕೋರ್‌ ಪ್ರೊಸೆಸರ್‍
Adreno 330 ಗ್ರಾಫಿಕ್‌ ಪ್ರೊಸೆಸರ್‌
32 GB ಆಂತರಿಕ ಮೆಮೊರಿ
2 GB RAM
13 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ 2.1 ಎಂಪಿ ಕ್ಯಾಮೆರಾ
ಮೆಮೊರಿ ವಿಸ್ತರಿಸಲು ಕಾರ್ಡ್ ಸ್ಲಾಟ್‌ ಇಲ್ಲ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್,ಎನ್‌ಎಫ್‌ಸಿ
3500 mAh ಬ್ಯಾಟರಿ

ಮುಂದಿನ ಪುಟದಲ್ಲಿ ಈ ಸ್ಮಾರ್ಟ್‌‌ಫೋನ್‌ಗೆ ಯಾವ ಆನ್‌ಲೈನ್‌ ಶಾಪಿಂಗ್‌ ತಾಣದಲ್ಲಿ ಎಷ್ಟು ರೂಪಾಯಿ ಬೆಲೆಯನ್ನು ನಿಗದಿ ಮಾಡಿದ್ದಾರೆ ಎನ್ನುವುದಕ್ಕೆ ಆ ಶಾಪಿಂಗ್‌ ತಾಣಗಳ ಬೆಲೆಗಳ ಮಾಹಿತಿಯನ್ನು ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಬೆಲೆಯನ್ನು ನೋಡಿಕೊಂಡು ಹೋಗಿ.

ಎಲ್‌ಜಿ ಜಿ ಫ್ಲೆಕ್ಸ್‌ ಸ್ಮಾರ್ಟ್‌ಫೋನಿನ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಲೆ: 69990

snapdeal.com

www.snapdeal.com

ಬೆಲೆ: 55,000

ebay.in


www.ebay.in

ಬೆಲೆ: 56,500

shopclues.com

www.shopclues.com

 ಪ್ರಿ ಆರ್ಡರ್‍ ಮಾಡಿ

infibeam.com

www.infibeam.com

ಪ್ರಿ ಆರ್ಡರ್‍ ಮಾಡಿ

univercell.in

www.univercell.in

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot