ಎಲ್‌ಜಿ ಜಿ ಪ್ರೊ 2 ಒಂದು ಸಂಪೂರ್ಣ ವಿಶ್ಲೇಷಣೆ

By Shwetha
|

ದೊಡ್ಡ ಸ್ಕ್ರೀನ್ ಮತ್ತು ಉತ್ತಮವಾದುದು ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಎಲ್‌ಜಿ ತನ್ನ ಹೊಸ ಎಲ್‌ಜಿ ಜಿ ಪ್ರೊ 2 ವನ್ನು ಬಿಡುಗಡೆ ಮಾಡಿದೆ. ಇದು 5.9 ಇಂಚಿನ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಈ ವರ್ಷದ ಅತ್ಯುತ್ತಮ ಹ್ಯಾಂಡ್‌ಸೆಟ್ ಎಂಬ ಕೀರ್ತಿಗೆ ಭಾಜನವಾಗಲಿರುವುದು ನಿಶ್ಚಯವಾಗಿದೆ.

ಈ ಹಿಂದೆ ಬಿಡುಗಡೆಯಾಗಿದ್ದ ಜಿ ಪ್ರೊ 5.5 ಇಂಚಿನ ಫ್ಯಾಕ್ಟರ್‌ಗೆ ತೀವ್ರ ಪೈಪೋಟಿಯನ್ನು ಒಡ್ಡುವಂತಿದೆ. ಎಲ್‌ಜಿ ಜಿ2 ಮತ್ತು ಎಲ್‌ಜಿ ಜಿ ಫ್ಲೆಕ್ಸ್‌ಗೆ ಮೂಲತಃ ಅಪ್‌ಗ್ರೇಡ್ ಆಗುವಂತೆ ಎಲ್‌ಜಿ ಜಿ ಪ್ರೊ 2ವನ್ನು ನಿರ್ಮಿಸಲಾಗಿದೆ, ಇದು ಕರ್ವ್ ಡಿಸ್‌ಪ್ಲೇಯನ್ನು ಹೊಂದಿದ್ದು ಉತ್ತಮ ಬ್ಯಾಟರಿ, ಆಕರ್ಷಕ ವೀಡಿಯೋ ಗುಣಮಟ್ಟ ಮೊದಲಾದ ಅಂಶಗಳಿಂದ ಸುಸಜ್ಜಿತವಾಗಿದೆ.

ಎಲ್‌ಜಿ ಜಿ ಪ್ರೊ 2 ಒಂದು ವೈಶಿಷ್ಟ್ಯಪೂರ್ಣ ಫೋನ್ ಹೇಗೆ

ಈ ವರ್ಷದ ಅತ್ಯಂತ ದೊಡ್ಡ ಸೆಟ್ ಎಂಬ ಹೆಗ್ಗಳಿಕೆಗೆ ಎಲ್‌ಜಿ ಜಿ ಪ್ರೊ 2 ಭಾಜನವಾಗಿದ್ದು, ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್‌ನ ಕೊಡುಗೆಗೆಳನ್ನು ಹಿಂಬಾಲಿಸಿದಂತೆ ಕಂಡುಬಂದಿದೆ. ಇದು ಕ್ವಾಡ್ ಎಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು ಜಿ ಪ್ರೊ ಕೂಡ ತನ್ನ ಡಿಸ್‌ಪ್ಲೇಯನ್ನು ಹೀಗೆಯೇ ನಿರ್ಮಿಸಿಕೊಂಡಿದೆ. ಫೋನ್‌ನ ಮುಂಭಾಗವು 5.9 ಇಂಚಿನ 1080x 1920

ಡಿಸ್‌ಪ್ಲೇಯೊಂದಿಗೆ ಬಂದಿದ್ದು ಇದು ಐಪಿಎಸ್ ತಂತ್ರಜ್ಞಾನದೊಂದಿಗೆ ಕಣ್ಮನಸೆಳೆಯುವಂತಿದೆ. ಇದರ ಸುತ್ತಿನ ಆಕೃತಿ 3.3 ಎಮ್‌ಎಮ್ ಬೆಜೆಲ್‌ನೊಂದಿಗೆ ಹಗುರವಾಗಿದೆ. ನಿಮಗೆ ಇದನ್ನು ಬಳಸುವಾಗ ಬರೀ ಇದರ ಡಿಸ್‌ಪ್ಲೇಯನ್ನು ಮಾತ್ರ ಬಳಸುತ್ತಿರುವಿರಿ ಎಂಬ ಅನುಭವ ಉಂಟಾಗುತ್ತದೆ.

ಇದು ನಿಮ್ಮ ಬೆರಳಚ್ಚು ಮತ್ತು ಧೂಳನ್ನು ಪ್ರತಿನಿಧಿಸುವ ಶಕ್ತಿಯನ್ನು ಹೊಂದಿದೆ. ತನ್ನ ಆಕರ್ಷಕ ಫಿನಿಶಿಂಗ್‌ನಿಂದ ಇದು ಹೆಚ್ಚು ಶ್ರೀಮಂತವಾಗಿದ್ದು ನಿಮ್ಮ ಕೈಯಲ್ಲಿ ಹಿಡಿದುಕೊಳ್ಳಲು ಉತ್ತಮವಾಗಿದೆ. ಇದು 77.2 ಶೇಕಡದ ಫ್ರೇಮ್ ರೇಶಿಯೋವನ್ನು ಹೊಂದಿದೆ. ಇದು ಅತ್ಯಾಧುನಿಕ ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್‌ನೊಂದಿಗೆ ಬಂದಿದ್ದು, ವಿಶಿಷ್ಟಪೂರ್ಣವಾಗಿದೆ. ಎಲ್‌ಜಿ ತನ್ನ ಹೆಸರಿಗೆ ತಕ್ಕಂತೆಯೇ ಎಲ್‌ಜಿ ಜಿ ಪ್ರೊ 2 ವನ್ನು ನಿರ್ಮಿಸಿದ್ದು ಅತ್ಯಾಕರ್ಷಕವಾಗಿದೆ.

ಎಲ್‌ಜಿ ಜಿ ಪ್ರೊ 2 2.26 GHZ ಕ್ವಾಡ್ - ಕೋರ್ ಕ್ವಾಲ್‌ಕಾಂ ಸ್ನ್ಯಾಪ್‌ಡ್ರಾಗನ್ 800 ಪ್ರೊಸೆಸರ್‌ನೊಂದಿಗೆ ಬಂದಿದ್ದು ಇದು 3 ಜಿಬಿ RAM ಅನ್ನು ಹೊಂದಿದೆ. ಇದರ ಆಂತರಿಕಸಂಗ್ರಹಣೆ 16 ಜಿಬಿಯಾಗಿದ್ದು ರಿಯರ್ ಕ್ಯಾಮೆರಾ ಸಾಮರ್ಥ್ಯ 13 ಎಂಪಿಯಾಗಿದ್ದು, OLS + LED ಫ್ಲ್ಯಾಶ್ ಇದರಲ್ಲಿದೆ. ಫ್ರಂಟ್ ಕ್ಯಾಮೆರಾ ಸಾಮರ್ಥ್ಯ 2.1 ಎಂ ಪಿಯಾಗಿದೆ ಇದು 4 ಕೆ ವೀಡಿಯೋವನ್ನು ದಾಖಲಿಸುವ ಶಕ್ತಿಯನ್ನು ಹೊಂದಿದೆ. ಇದರ ಬ್ಯಾಟರಿ ಸಾಮರ್ಥ್ಯ 3,200 MAH ಆಗಿದೆ.

ಇದರ ಸಂಪರ್ಕ ವೈಶಿಷ್ಟ್ಯ 4 ಜಿ ಎಲ್‌ಟಿ ಇ, 3ಜಿ, ವೈ-ಫೈ, ಬ್ಲೂಟೂತ್, ಜಿಪಿಎಸ್, A -GPS ನಿಂದ ಮಜಬೂತಾಗಿದೆ. ಎಲ್‌ಜಿ ಜಿ ಪ್ರೊ 2 ಟೈಟನ್ ಬ್ಲಾಕ್, ಬಿಳಿ ಹಾಗೂ ಸಿಲ್ವರ್ಬಣ್ಣದಲ್ಲಿ ಲಭ್ಯವಿದೆ. ಹೊಸ ನೋಕ್ ಕೋಡ್ ವೈಶಿಷ್ಟ್ಯವನ್ನು ಎಲ್‌ಜಿ ಮಹತ್ತಾಗಿ ಪ್ರಮೋಟ್ ಮಾಡಿದ್ದು ನಿಮಗಿದು ಸ್ಕ್ರೀನ್ ನಾಕ್‌ಗಳನ್ನು ಮತ್ತು ಅನನ್ಯ ಪಾಸ್‌ವರ್ಡ್ ಅನ್ನುಹೊಂದಿಸುವ ವಿಶಿಷ್ಟತೆಯನ್ನು ನೀಡಲಿದೆ. ಎಡ ಮತ್ತು ಬಲ ಬದಿಯ ನ್ಯಾವಿಗೇಶನ್ ಕೀಗಳು ಫೋನ್‌ನಲ್ಲಿದ್ದು, ಸ್ಪಿಲ್ಟ್ ಸ್ಕ್ರೀನ್ ಮೋಡ್ ಕೂಡ ಇದರಲ್ಲಿದೆ.

<center><iframe width="100%" height="450" src="//www.youtube.com/embed/vW73Mu1Sx7Y" frameborder="0" allowfullscreen></iframe></center>

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X