Subscribe to Gizbot

ಎಲ್‌ಜಿ ಡ್ಯುಯಲ್‌ ಸಿಮ್‌ ಫ್ಯಾಬ್ಲೆಟ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

Posted By:

ದೀಪಾವಳಿಗೆ ಎಲ್‌ಜಿ ಕಂಪೆನಿಯ ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಎಲ್‌‌ಜಿ ಗುಡ್ ನ್ಯೂಸ್‌ ನೀಡಿದೆ. ತನ್ನ ಹೊಸ ಡ್ಯುಯಲ್‌ ಸಿಮ್‌ ಫ್ಯಾಬ್ಲೆಟ್‌ನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಜಿ ಪ್ರೊ ಲೈಟ್‌ ಹೆಸರಿನ ಫ್ಯಾಬ್ಲೆಟ್‌ಗೆ 22,990. ಬೆಲೆಯನ್ನು ನಿಗದಿ ಮಾಡಿದೆ. ಆದರೆ ಆನ್‌ಲೈನ್‌ ಶಾಪಿಂಗ್‌ ತಾಣ ಸ್ನಾಪ್‌ ಡೀಲ್‌ನಲ್ಲಿ ಈ ಫ್ಯಾಬ್ಲೆಟ್‌ಗೆ 19,990 ಬೆಲೆ ನಿಗದಿ ಮಾಡಿದ್ದು,ಗ್ರಾಹಕರು ಖರೀದಿಸಬಹುದಾಗಿದೆ.

ಎಲ್‌ಜಿ ಜಿ ಪ್ರೊ ಲೈಟ್‌
ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5.5 ಇಂಚಿನ ಐಪಿಎಸ್‌ ಸ್ಕ್ರೀನ್‌(960 x 540 ಪಿಕ್ಸೆಲ್‌)
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಎಸ್‌
1GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
1GB ರ್‍ಯಾಮ್‌
8GB ಆಂತರಿಕ ಮೆಮೊರಿ
ಬಿಎಸ್‌ಐ ಸೆನ್ಸರ್‌ ಹೊಂದಿರುವ 8 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,ಯುಎಸ್‌ಬಿ,ಸೈಲಸ್‌ ಪೆನ್‌
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3140 mAh ಬ್ಯಾಟರಿ

ಇದನ್ನೂ ಓದಿ: ಶಕ್ತಿಶಾಲಿ ಪ್ರೊಸೆಸರ್‌ ಹೊಂದಿರುವ ವಿಶ್ವದ ಏಳು ವೇಗದ ಸ್ಮಾರ್ಟ್‌ಫೋನ್‌ಗಳು
ಎಲ್‌ಜಿ ಜಿ ಪ್ರೊ ಲೈಟ್‌ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ:ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಸ್ಕ್ರೀನ್‌

ಎಲ್‌ಜಿ ಡ್ಯುಯಲ್‌ ಸಿಮ್‌ ಫ್ಯಾಬ್ಲೆಟ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

5.5 ಇಂಚಿನ ಐಪಿಎಸ್‌ ಎಲ್‌ಸಿಡಿ ಸ್ಕ್ರೀನ್‌ ಹೊಂದಿದ್ದು 540 x 960 ಪಿಕ್ಸೆಲ್‌ ರೆಸೂಲೂಶನ್‌, 200 ಪಿಪಿಐ ಹೊಂದಿದೆ.

 ಗಾತ್ರ

ಎಲ್‌ಜಿ ಡ್ಯುಯಲ್‌ ಸಿಮ್‌ ಫ್ಯಾಬ್ಲೆಟ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

ಈ ಫ್ಯಾಬ್ಲೆಟ್‌ 50.2 ಮಿ.ಮೀಟರ್‌ ಅಗಲ ,76.9 ಮಿ.ಮೀಟರ್‌ ಉದ್ದ, 9.4 ಮಿ.ಮೀಟರ್‌ ದಪ್ಪ,161 ಗ್ರಾಂ ತೂಕವಿದೆ. ಜೊತೆಗೆ ಎರಡು ಸ್ಪೀಕರ್‌ ಹೊಂದಿದೆ.

 ಕ್ಯಾಮೆರಾ

ಎಲ್‌ಜಿ ಡ್ಯುಯಲ್‌ ಸಿಮ್‌ ಫ್ಯಾಬ್ಲೆಟ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

ಹಿಂದುಗಡೆ ಎಲ್‌ಇಡಿ ಫ್ಲ್ಯಾಶ್‌ ಹೊಂದಿರುವ 8 ಎಂಪಿ ಕ್ಯಾಮೆರಾ ಹೊಂದಿದ್ದು, 3264 x 2448 ಪಿಕ್ಸೆಲ್‌ನಲ್ಲಿ ಚಿತ್ರಗಳನ್ನು ತೆಗೆಯಬಹುದು, ಫುಲ್‌ ಎಚ್‌ಡಿ ವಿಡಿಯೋ ರೆಕಾರ್ಡಿಂಗ್‌ ಮಾಡಬಹುದು.ಮುಂದುಗಡೆ 1.3 ಎಂಪಿ ಕ್ಯಾಮೆರಾವನ್ನು ಈ ಸ್ಮಾರ್ಟ್‌ಫೋನ್‌ ಹೊಂದಿದೆ.

ಬ್ಯಾಟರಿ

ಎಲ್‌ಜಿ ಡ್ಯುಯಲ್‌ ಸಿಮ್‌ ಫ್ಯಾಬ್ಲೆಟ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

3140 mAh ಶಕ್ತಿಶಾಲಿಯಾದ ಬ್ಯಾಟರಿ ಹೊಂದಿದ್ದು 845 ಗಂಟೆ ಸ್ಟ್ಯಾಂಡ್‌ ಬೈ ಟೈಂ,14 ಗಂಟೆ 30 ನಿಮಿಷ ಟಾಕ್‌ ಟೈಂ ಹೊಂದಿದೆ.

ಮೆಮೊರಿ

ಎಲ್‌ಜಿ ಡ್ಯುಯಲ್‌ ಸಿಮ್‌ ಫ್ಯಾಬ್ಲೆಟ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

1GB ರ್‍ಯಾಮ್‌,8GB ಆಂತರಿಕ ಮೆಮೊರಿ, ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ ಹೆಚ್ಚುವರಿಯಾಗಿ 32 GBವರೆಗೆ ಮೆಮೋರಿಯನ್ನು ವಿಸ್ತರಿಸಬಹುದಾಗಿದೆ. ಜೊತೆಗೆ On Box ಅಪ್‌ನಲ್ಲಿ 50GBವರೆಗೆ ಮೆಮೊರಿಯನ್ನು ಶೇಖರಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot