ಸ್ಮಾರ್ಟ್‌ಫೋನ್ ಸಾರ್ವಭೌಮನಾಗಿ ಎಲ್‌ಜಿ ಜಿ3

By Shwetha
|

ಭಾರತೀಯ ಮಾರುಕಟ್ಟೆಯನ್ನು ತನ್ನ ವಿಶೇಷ ಅಂಶಗಳುಳ್ಳ ಪೋನ್‌ಗಳಿಂದ ಆಳುತ್ತಿದ್ದ ದಕ್ಷಿಣ ಕೊರಿಯಾದ ಸ್ಮಾರ್ಟ್‌ಫೋನ್ ದಿಗ್ಗಜ ಸ್ಯಾಮ್‌ಸಂಗ್‌ ತನ್ನ ಗ್ಯಾಲಕ್ಸಿ ಶ್ರೇಣಿಗಳ ಫೋನ್ ಅಥವಾ ನೋಟ್ ಶ್ರೇಣಿಗಳ ಫ್ಯಾಬ್ಲೆಟ್ ಮೂಲಕ ಗ್ರಾಹಕರ ಮನಸ್ಸನ್ನು ಗೆದ್ದಿತು. ಆದರೀಗ ಸ್ಯಾಮ್‌ಸಂಗ್‌ಗೆ ಪ್ರಬಲ ಪೈಪೋಟಿಯನ್ನು ನೀಡಲಿರುವ ಎಲ್‌ಜಿ ತನ್ನ ಜಿ3 ಸ್ಮಾರ್ಟ್‌ಫೋನ್ ಮೂಲಕ ಮಾರುಕಟ್ಟೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿದೆ.

ಹೊಸ ಜಿ3 ಹ್ಯಾಂಡ್‌ಸೆಟ್ ಈ ದಿನಗಳಲ್ಲಿ ಹೆಚ್ಚಿನ ಆಕರ್ಷಣೆಯನ್ನು ಬಳಕೆದಾರರಲ್ಲಿ ಹುಟ್ಟು ಹಾಕುತ್ತಿದ್ದು ಪ್ರಥಮ ಸ್ಥಾನದತ್ತ ಮುಂದುವರಿಯುವ ಧಾವಂತದಲ್ಲಿದೆ. ಇತರ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪೆನಿಗಳಿಗೆ ಸ್ಯಾಮ್‌ಸಂಗ್ ಮಾತ್ರವೇ ಇದುವರೆಗೆ ದೊಡ್ಡ ಪ್ರತಿಸ್ಪರ್ಧಿಯಾಗಿತ್ತು. ಆದರೀಗ ಎಲ್‌ಜಿ ತನ್ನ ಜಿ3 ಫೋನ್ ಅನ್ನು ಲಾಂಚ್ ಮಾಡುವ ಮೂಲಕ ಒಂದು ರೀತಿಯ ಭಯವನ್ನು ಹುಟ್ಟುಹಾಕಿದೆ.

ಇಂದಿನ ವೀಡಿಯೋ ಲೇಖನದಲ್ಲಿ ಎಲ್‌ಜಿ3 ಯ ಆಕರ್ಷಕ ವೈಶಿಷ್ಟ್ಯಗಳನ್ನು ಅರಿತುಕೊಳ್ಳುವ ಮೂಲಕ ಈ ಹ್ಯಾಂಡ್‌ಸೆಟ್ ಮಾರುಕಟ್ಟೆಯ ರಾಜನಾಗಿ ಹೇಗೆ ಮೆರೆಯುತ್ತಿದೆ ಎಂಬುದನ್ನು ಅರಿತುಕೊಳ್ಳೋಣ.

#1

#1

ಜಿ2 ನಂತರದ ಅವತರಣಿಕೆಯಾಗಿ, ಎಲ್‌ಜಿ ಜಿ3 ಅನ್ನು ನಾವು ಕಾಣಬಹುದು. ನಿಮ್ಮ ಫೋನ್ ಹೆಚ್ಚು ಸ್ಟೈಲಿಶ್ ಆಗಿರಬೇಕೆಂದು ನೀವು ಬಯಸುವವರಾಗಿದ್ದಲ್ಲಿ ನಿಮಗೆ ಎಲ್‌ಜಿ ಜಿ3 ಪರಿಪೂರ್ಣ ಫೋನ್ ಆಗಿದೆ. ಇದು 5.5 ಇಂಚಿನ True HD-IPS + LCD capacitive ಟಚ್‌ಸ್ಕ್ರೀನ್‌ನೊಂದಿಗೆ ಬಂದಿದ್ದು, 1440 x 2560 ಪಿಕ್ಸೆಲ್ ರೆಸಲ್ಯೂಶನ್ ಇದರಲ್ಲಿದೆ. 146.3 x 74.6 x 8.9 mm ಇದರ ಅಳತೆಯಾಗಿದ್ದು ತೂಕ 149g ಆಗಿದೆ. ಇದು ಆಕರ್ಷಕ ಹೊಳೆಯುವ ಮೆಟಲ್ ದೇಹವನ್ನು ಹೊಂದಿದ್ದು ಇದು ಪ್ಲಾಸ್ಟಿಕ್‌ನಂತೆ ಗೋಚರಿಸುತ್ತದೆ. ಆದರೆ ಇದು ಪ್ಲಾಸ್ಟಿಕ್ ಅಲ್ಲ ಮೆಟಲ್ ಎಂಬುದು ನಂತರವೇ ತಿಳಿಯುವಂತಹ ಆಕರ್ಷಕ ಫಿನಿಶಿಂಗ್ ಟಚ್ ಇದರಲ್ಲಿದೆ.

#2

#2

ಜಿ3 ಹ್ಯಾಂಡ್‌ಸೆಟ್‌ನಲ್ಲಿ ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಚಾಲನೆಯಾಗುತ್ತಿದೆ ಎಂಬುದೇ ವಿಶೇಷ ಅಂಶವಾಗಿದ್ದು, ತನ್ನದೇ ಸಾಫ್ಟ್‌ವೇರ್ ಅನ್ನು ಕಂಪೆನಿ ಈ ಫೋನ್‌ನಲ್ಲಿ ಕಸ್ಟಮೈಸ್ ಮಾಡಿದೆ. ಇದರಲ್ಲಿ ಆಕರ್ಷಕವಾಗಿರುವ ಇನ್ನೊಂದು ಅಂಶವೆಂದರೆ ಸ್ಮಾರ್ಟ್‌ ಕೀಬೋರ್ಡ್, ಸ್ಮಾರ್ಟ್ ಅಧಿಸೂಚನೆ ಮತ್ತು ಜನಪ್ರಿಯ ನಾಕ್ ಕೋಡ್ ಆಗಿದೆ.

#3

#3

ಎಲ್‌ಜಿಯು ಜಿ3 ಹ್ಯಾಂಡ್‌ಸೆಟ್‌ನಲ್ಲಿ ಸ್ನ್ಯಾಪ್‌ಡ್ರಾಗನ್ 801 ಕ್ವಾಡ್-ಕೋರ್ ಪ್ರೊಸೆಸರ್ ಅನ್ನು ಅಳವಡಿಸಿದ್ದು ಫೋನ್‌ನ ಆಂತರಿಕ ಸಂಗ್ರಹಣಾ ಸಾಮರ್ಥ್ಯ 32 ಜಿಬಿಯಾಗಿದೆ. ಫೋನ್ 3 ಜಿಬಿ RAM ಅನ್ನು ಹೊಂದಿದ್ದು ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 CPU Adreno 330 GPU ಹೊಂದಾಣಿಕೆಯನ್ನು ಇದುರೆಗೂ ಮುಖ್ಯ ಹ್ಯಾಂಡ್‌ಸೆಟ್‌ಗಳಾದ ಸೋನಿ ಮತ್ತು ಎಚ್‌ಟಿಸಿಯಲ್ಲಿ ಮಾತ್ರ ನಾವು ನೋಡಿದ್ದೆವು. ಆದರೀಗ ಎಲ್‌ಜಿ ಜಿ3 ನಲ್ಲೂ ಇದೇ ಫೀಚರ್ ಕಂಡುಬಂದಿದೆ.

#4

#4

ಎಲ್‌ಜಿ ಜಿ3 13MP OIS+ ಲೇಸರ್ ಕ್ಯಾಮೆರಾದೊಂದಿಗೆ ಬಂದಿದ್ದು ಇದೇ ವೈಶಿಷ್ಟ್ಯವನ್ನು G2 ನಲ್ಲೂ ನಮಗೆ ಕಾಣಬಹುದಾಗಿದೆ. ಎಲ್‌ಜಿ ಹೇಳುವಂತೆ ಸುಧಾರಿತ ಲೈಟ್ ಸೆನ್ಸಿಟಿವಿಟಿ ವೈಶಿಷ್ಟ್ಯಗಳನ್ನು ಈ ಫೋನ್ ಹೊಂದಿದೆ ಎಂದಾಗಿದೆ.

#5

#5

3000mAh ಬ್ಯಾಟರಿಯನ್ನು ಎಲ್‌ಜಿ ಜಿ3 ಹೊಂದಿದ್ದು ಡಿವೈಸ್‌ನೊಂದಿಗೆ ನೀವು ಸಂಪೂರ್ಣ ಸಮಯವನ್ನು ಕಳೆದರೂ ಸಹ ಇದರ ಬ್ಯಾಟರಿ ಪೂರ್ಣ ಸಮಯ ನಿಮಗೆ ದೊರೆಯಲಿದೆ. ಅಂದರೆ ಅತ್ಯುತ್ತಮ ಬ್ಯಾಟರಿ ಜೀವನವನ್ನು ನಿಮ್ಮ ಫೋನ್‌ಗೆ ಎಲ್‌ಜಿ ನೀಡಲಿದೆ.

#6

#6

ಹೆಚ್ಚು ಕಡಿಮೆ ಸ್ಮಾರ್ಟ್‌ಫೋನ್ ದಿಗ್ಗಜ ಎಂಬ ತಲೆಬರಹವನ್ನು ಹೊಂದಿರುವ ಹೆಚ್ಚಿನ ಇತರ ಫೋನ್‌ಗಳನ್ನು ಮಣಿಸುವ ತಾಕತ್ತು ಎಲ್‌ಜಿ ಜಿ3 ಗಿದ್ದು ಇದರಲ್ಲಿರುವ ವೈಶಿಷ್ಟ್ಯವೇ ನಮಗೆ ಈ ಅಂಶಗಳನ್ನು ದೃಢಪಡಿಸಲು ಸಹಾಯಕವಾಗಿವೆ. ಅತ್ಯುತ್ತಮ ಡಿಸ್‌ಪ್ಲೇ ವೈಖರಿ, ಕ್ಯಾಮೆರಾ, ಬ್ಯಾಟರಿ ಬಾಳಿಕೆ, ಮನಸೆಳೆಯುವ ಸಾಫ್ಟ್‌ವೇರ್ ಮತ್ತು ಸುಂದರವಾದ ದೇಹವನ್ನು ಹೊಂದಿರುವ ಎಲ್‌ಜಿ ಜಿ3 ನಿಜಕ್ಕೂ ಸ್ಟೈಲಿಶ್ ಫೋನ್ ಎಂಬುದರಲ್ಲಿ ಎರಡು ಮಾತಿಲ್ಲ.

<center><iframe width="100%" height="510" src="//www.youtube.com/embed/D3z0u479-Us" frameborder="0" allowfullscreen></iframe></center>

Best Mobiles in India

English summary
This article tells about LG G3 Review An Intuitive and Aesthetic Flagship With Evolved Specs.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X