ಎಲ್ ಜಿ ಆಪ್ಟಿಮಸ್ ನೀಡುತಿದೆ ಲಕ್ಸುರಿ ಲಿಂಕ್ ಮೊಬೈಲ್

Posted By: Staff
ಎಲ್ ಜಿ ಆಪ್ಟಿಮಸ್ ನೀಡುತಿದೆ ಲಕ್ಸುರಿ ಲಿಂಕ್ ಮೊಬೈಲ್

ಎಲ್ ಜಿ ಕಂಪನಿಯ ಆಪ್ಟಿಮಸ್ ಸರಣಿಗೆ ಇದೀಗ ಎಲ್ ಜಿ ಆಪ್ಟಿಮಸ್ ಲಿಂಕ್ ಎಂಬ ಮೊಬೈಲ್ ಸೇರ್ಪಡೆಯಾಗಿದೆ. ಯುರೋಪಿಯನ್ ಮತ್ತು ರಷ್ಯಾದ ಮೊಬೈಲ್ ಮಾರುಕಟ್ಟೆಗಳಲ್ಲಿ ಈಗಾಗಲೇ ಬಿಡುಗಡೆಗೊಂಡಿರುವ ಈ ಮೊಬೈಲ್ ಭಾರತದಲ್ಲಿ ಇತ್ತೀಚೆಗಷ್ಟೆ ಬಿಡುಗಡೆಗೊಂಡಿದೆ.

ಬಾರ್ ಫೋನ್ ವಿನ್ಯಾಸದಲ್ಲಿ ಮೂಡಿಬಂದಿರುವ ಲಿಂಕ್ ಮೊಬೈಲ್ ತುಂಬಾ ಸಿಂಪಲ್ ಮತ್ತು ಆಕರ್ಷಕವೆನಿಸಿದೆ. ಆಂಡ್ರಾಯ್ಡ್ ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ಮತ್ತು ಕ್ವಾಲ್ಕಂ MSM 7227T 800MHz ARM11 ಪ್ರೊಸೆಸರ್ ಹೊಂದಿದೆ. ಗ್ರಾಫಿಕ್ಸ್ ಗೆಂದು ಅಡೆರ್ನೊ 200 ಜಿಪಿಯು ಕೂಡ ಇದರಲ್ಲಿದೆ.

ಎಲ್ ಜಿ ಆಪ್ಟಿಮಸ್ ಲಿಂಕ್ ವಿಶೇಷತೆ:

* ಡ್ಯೂಯಲ್ ಸಿಮ್

* 3.2 ಇಂಚಿನ TFT ಟಚ್ ಸ್ಕ್ರೀನ್ ಡಿಸ್ಪ್ಲೇ

* 320 x 480 ಪಿಕ್ಸಲ್ ರೆಸೊಲ್ಯೂಷನ್

* 113.5 ಎಂಎಂ x 59 ಎಂಎಂ x 11.7 ಎಂಎಂ ಸುತ್ತಳತೆ

* 122 ಗ್ರಾಂ ತೂಕ

* ಮಲ್ಟಿ ಟಚ್ ಇನ್ ಪುಟ್ ಬೆಂಬಲಿತ

* 3.15 ಮೆಗಾ ಪಿಕ್ಸಲ್ ಕ್ಯಾಮೆರಾ, ಆಟೊ ಫೋಕಸ್

* 150 ಎಂಬಿ ಆಂತರಿಕ ಮೆಮೊರಿ, 512 ಎಂಬಿ RAM

* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ

* ಬ್ಲೂಟೂಥ್, ವೈ-ಫೈ, A-GPS

ಅಷ್ಟೇ ಅಲ್ಲ, ಮೊಬೈಲಿನೊಂದಿಗೆ ಪ್ರಾಕ್ಸಿಮಿಟಿ ಸೆನ್ಸಾರ್, ಅಕ್ಸೆಲೆರೊಮೀಟರನ್ನು ನೀಡಲಾಗಿದೆ. ಮೊಬೈಲಿನಲ್ಲಿ ಅನೇಕ ಅಪ್ಲಿಕೇಶನ್ ಗಳನ್ನು ಅಳವಡಿಸಲಾಗಿದ್ದು, ಗೂಗಲ್ ಮ್ಯಾಪ್ ಮತ್ತು ಡಿಜಿಟಲ್ ಕಾಂಪಾಸ್ ಇದೆ. MP3, MP4 ಮತ್ತು WAV ಫೈಲ್ ಫಾರ್ಮೆಟ್ ಬೆಂಬಲಿತ ಮೀಡಿಯಾ ಪ್ಲೇಯರ್ ಮತ್ತು ಡಾಕ್ಯುಮೆಂಟ್ ವ್ಯೂವರ್ ಕೂಡ ಇದೆ. ಇದರಿಂದ ಎಂಎಸ್ ವರ್ಡ್ ಮತ್ತು ಪಿಡಿಎಫ್ ಫಾರ್ಮೆಟ್ ಗಳ ಮೂಲಕ ಡಾಕ್ಯುಮೆಂಟ್ ಗಳನ್ನು ವೀಕ್ಷಿಸಬಹುದಾಗಿದೆ.

ಈ ಆಪ್ಟಿಮಸ್ ಲಿಂಕ್ ಮೊಬೈಲಿನ Li-ion 1500mAh ಬ್ಯಾಟರಿ 100 ಗಂಟೆ ಸ್ಟ್ಯಾಂಡ್ ಬೈ ಟೈಂ ಮತ್ತು 4 ಗಂಟೆ ಟಾಕ್ ಟೈಂ ನೀಡುತ್ತದೆ. ಇದರ ಬೆಲೆ 10,000 ದಿಂದ 14,000 ರು ವರೆಗೆ ಇರಬಹುದೆಂದು ಅಂದಾಜಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಎಲ್ಲಾ ಮೊಬೈಲ್ ಸ್ಟೋರ್ ಗಳಲ್ಲಿ ಈ ಲಿಂಕ್ ಮೊಬೈಲ್ ಲಭ್ಯವಾಗಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot