ನೋಕಿಯಾ ಮತ್ತು ಎಲ್ ಜಿ ಸ್ಮಾರ್ಟ್ ಫೋನ್ ಪೈಪೋಟಿಗೆ ಸಿದ್ಧ

By Super
|
ನೋಕಿಯಾ ಮತ್ತು ಎಲ್ ಜಿ ಸ್ಮಾರ್ಟ್ ಫೋನ್ ಪೈಪೋಟಿಗೆ ಸಿದ್ಧ

ಮೊಬೈಲ್ ತಯಾರಿಕೆಯಲ್ಲಿ ಹೆಸರು ಗಳಿಸಿರುವ ಎಲ್ ಜಿ ಮತ್ತು ನೋಕಿಯಾ ಎರಡೂ ಕಂಪನಿಗಳೂ ತಮ್ಮ ಹೊಸ ಸ್ಮಾರ್ಟ್ ಫೋನ್ ಗಳೊಂದಿಗೆ ಸ್ಪರ್ಧೆಗಿಳಿದಿದೆ. ಎಲ್ ಜಿ ಆಪ್ಟಿಮಸ್ ಪ್ರೊ ಮತ್ತು ನೋಕಿಯಾ 500 ಎರಡೂ ಮೊಬೈಲ್ ಗಳು ಗ್ರಾಹಕರಿಗೆ ಅಚ್ಚುಮೆಚ್ಚಾಗಲಿದ್ದು, ಮಾರುಕಟ್ಟೆಯಲ್ಲಿ ಭಾರೀ ಮಾರಾಟವಾಗುವ ನಿರೀಕ್ಷೆಯಿದೆ.

ವಿನ್ಯಾಸದಲ್ಲಿ ನೋಕಿಯಾ ಮತ್ತು ಎಲ್ ಜಿ ಆಪ್ಟಿಮಸ್ ಎರಡೂ ಕೂಡ ಆಕರ್ಷಿತವಾಗಿದೆ. ಎರಡೂ ಮೊಬೈಲ್ ಗಳು ತಮ್ಮದೇ ಆದ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಅದೇನೆಂದು ಮುಂದೆ ತಿಳಿಯಿರಿ. ನೋಕಿಯಾ 500 ಮೊಬೈಲ್ ಸಿಂಬಿಯಾನ್ ಬೆಲ್ಲೆ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿದ್ದರೆ, ಎಲ್ ಜಿ ಆಪ್ಟಿಮಸ್ ಪ್ರೊ ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ಪಡೆದುಕೊಂಡಿದೆ. ನೋಕಿಯಾ 500 1GHz ಪ್ರೊಸೆಸರ್ ಮತ್ತು ಎಲ್ ಜಿ ಆಪ್ಟಿಮಸ್ ಪ್ರೊ 800 MHz ಪ್ರೊಸೆಸರ್ ನಿಂದ ಕಾರ್ಯ ನಿರ್ವಹಿಸಲಿದೆ.

ನೋಕಿಯಾ 500 ಮೊಬೈಲ್ ವಿಶೇಷತೆ:

* 111.3 x 53.8 x 14.1 ಎಂಎಂ ಸುತ್ತಳತೆ

* 93 ಗ್ರಾಂ ತೂಕ

* 3.2 ಇಂಚಿನ ಡಿಸ್ಪ್ಲೇ, 360 x 640 ಪಿಕ್ಸಲ್ ರೆಸೊಲ್ಯೂಷನ್

* TFT ಟಚ್ ಸ್ಕ್ರೀನ್ ಡಿಸ್ಪ್ಲೇ

* 5 ಮೆಗಾ ಪಿಕ್ಸಲ್ ಕ್ಯಾಮೆರಾ, 2592 x 1944 ಪಿಕ್ಸಲ್ ರೆಸೊಲ್ಯೂಷನ್

* 802.11 b/g/ n ವೈ-ಫೈ, ಬ್ಲೂಟೂಥ್, USB

* HDMI ಔಟ್ ಪುಟ್ ಪೋರ್ಟ್

* 3.5 ಎಂಎಂ ಆಡಿಯೋ ಜ್ಯಾಕ್

ಎಲ್ ಜಿ ಆಪ್ಟಿಮಸ್ ಪ್ರೊ ಮೊಬೈಲ್ ವಿಶೇಷತೆ:

* 119.5 x 59.7 x12.9 ಎಂಎಂ ಸುತ್ತಳತೆ

* 128 ಗ್ರಾಂ ತೂಕ

* 2.8 ಇಂಚಿನ ಡಿಸ್ಪ್ಲೇ, 240 x 320 ಪಿಕ್ಸಲ್ ರೆಸೊಲ್ಯೂಷನ್

* TFT ಟಚ್ ಸ್ಕ್ರೀನ್ ಡಿಸ್ಪ್ಲೇ

* 3 ಮೆಗಾ ಪಿಕ್ಸಲ್ ಕ್ಯಾಮೆರಾ, 2048 x 1536 ಪಿಕ್ಸಲ್ ರೆಸೊಲ್ಯೂಷನ್

* 802.11 b/g/ n ವೈ-ಫೈ, ಬ್ಲೂಟೂಥ್, USB

* HDMI ಔಟ್ ಪುಟ್ ಪೋರ್ಟ್

* 3.5 ಎಂಎಂ ಆಡಿಯೋ ಜ್ಯಾಕ್

ನೋಕಿಯಾ 500 ಮೊಬೈಲ್ ನ 1110 mAh ಬ್ಯಾಟರಿ 5 ಗಂಟೆ ಟಾಕ್ ಟೈಂ ಮತ್ತು 455 ಗಂಟೆ ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ. ಎಲ್ ಜಿ ಆಪ್ಟಿಮಸ್ ಪ್ರೊ ಮೊಬೈಲ್ ನ 1500 mAh ಲೀಥಿಯಂ ಬ್ಯಾಟರಿ 13.5 ಗಂಟೆ ಟಾಕ್ ಟೈಂ ಮತ್ತು 852 ಗಂಟೆ ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ. ಎರಡೂ ಸ್ಮಾರ್ಟ್ ಫೋನ್ ಗಳಲ್ಲಿ MP3.MPEG4 ಮತ್ತು AAC+ ಫೈಲ್ ಫಾರ್ಮೆಟ್ ಬೆಂಬಲಿಸುವ ಹೈ ಡೆಫನಿಶನ್ ವಿಡಿಯೋ ಮತ್ತು ಆಡಿಯೋ ಪ್ಲೇಯರ್ ನೀಡಲಾಗಿದೆ.

ನೋಕಿಯಾ 500 ಮೊಬೈಲ್ ಮತ್ತು ಎಲ್ ಜಿ ಆಪ್ಟಿಮಸ್ ಪ್ರೊ ಬೆಲೆ ಸುಮಾರು 10,000ರು ಎನ್ನಲಾಗಿದೆ. ಎಲ್ ಜಿ ಆಪ್ಟಿಮಸ್ ಮೊಬೈಲ್ ಬೆಲೆ ನೋಕಿಯಾ 500ಗಿಂತ ಸ್ವಲ್ಪ ಹೆಚ್ಚಿರಬಹುದೆಂದು ಅಂದಾಜಿಸಲಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X