ಸೊಳ್ಳೆ ಓಡಿಸುವ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ LG
ದಿನೇ ದಿನೇ ಸೊಳ್ಳೆಗಳ ಮೂಲಕ ಹರಡುವ ಸಾಂಕ್ರಾಮಿಕ ರೋಗಗಳ ಸಂಖ್ಯೆಯೂ ಅಧಿಕವಾಗುತ್ತಿದ್ದು, ಈ ಹಿನ್ನಲೆಯಲ್ಲಿ ಅವುಗಳಿಂದ ಜನ ಸಾಮಾನ್ಯರನ್ನು ರಕ್ಷಿಸುವ ಸಲುವಾಗಿ LG ಈ ಪ್ರಯತ್ನಕ್ಕೆ ಕೈ ಹಾಕಿದೆ.
ಹೊಸದಾಗಿ ಯೋಜನೆ ಮಾಡುವ ಸ್ಮಾರ್ಟ್ ಫೋನ್ ಕಂಪನಿಗಳ ಸಾಲಿಗೆ ಸೇರುವ LG ಈ ಬಾರಿ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದ್ದು, ಸೊಳ್ಳೆ ಓಡಿಸುವ ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗಿದೆ.

ದಿನೇ ದಿನೇ ಸೊಳ್ಳೆಗಳ ಮೂಲಕ ಹರಡುವ ಸಾಂಕ್ರಾಮಿಕ ರೋಗಗಳ ಸಂಖ್ಯೆಯೂ ಅಧಿಕವಾಗುತ್ತಿದ್ದು, ಈ ಹಿನ್ನಲೆಯಲ್ಲಿ ಅವುಗಳಿಂದ ಜನ ಸಾಮಾನ್ಯರನ್ನು ರಕ್ಷಿಸುವ ಸಲುವಾಗಿ LG ಈ ಪ್ರಯತ್ನಕ್ಕೆ ಕೈ ಹಾಕಿದೆ.

LG K7i ಸ್ಮಾರ್ಟ್‌ಫೋನ್:
ಆಂಡ್ರಾಯ್ಡ್ ಮಾರ್ಷ್ ಮಲ್ಲೋ ದಲ್ಲಿ ವರ್ಕ್ ಆಗುವ ಈ ಸ್ಮಾರ್ಟ್ ಫೋನಿನಲ್ಲಿ 5.0 ಇಂಚಿನ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, ಇದು ರೂ.7,990ಕ್ಕೆ ದೊರೆಯುತ್ತಿದೆ ಎನ್ನಲಾಗಿದೆ.

ಸೊಳ್ಳೆ ಓಡಿಸಲಿದೆ:
ಈ ಸ್ಮಾರ್ಟ್‌ಫೋನಿನೊಂದಿಗೆ LG ಒಂದು ಹೊಸ ಪ್ಯಾನಲ್ ನೀಡಿದ್ದು, ಇದು ಸೊಳ್ಳೆ ಓಡಿಸುವ ತಂತ್ರಜ್ಞಾನವನ್ನು ಹೊಂದಿದೆ. ಇದು ಆಲ್ಟ್ರಾಸೋನಿಕ್ ಸೌಂಡ್ ಹೊರಡಿಸಲಿದ್ದು, ಇದರಿಂದ ಸೊಳ್ಳೆಗಳು ಹತ್ತಿರಕ್ಕೆ ಬರುವುದಿಲ್ಲ.

ವಿಶೇಷತೆಗಳೇನು?
ಈ ಫೋನಿನಲ್ಲಿ 1.1GHz ವೇಗದ ಕ್ವಾಡ್ ಕೋರ್ ಮಿಡಿಯಾ ಟೆಕ್ ಪ್ರೋಸೆಸರ್ ಕಾಣಬಹುದಾಗಿದ್ದು, 2GB RAM ಮತ್ತು 16GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಹಿಂಭಾಗದಲ್ಲಿ 8MP ಕ್ಯಾಮೆರಾ, ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. 4G ಸಪೋರ್ಟ್ ಮಾಡಲಿದ್ದು, 2500mAh ಬ್ಯಾಟರಿಯೂ ಇದರಲ್ಲಿದೆ.


Click it and Unblock the Notifications








