ಎಲ್‌ಜಿ ವಕ್ರ ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ದೇಶೀಯ ಮಾರುಕಟ್ಟೆಗೆ ಬಿಡುಗಡೆ

By Ashwath
|

ಎಲ್‌ಜಿ ಕಂಪೆನಿ ವಕ್ರಸ್ಕ್ರೀನ್‌ ಫ್ಯಾಬ್ಲೆಟ್‌ ಜಿ ಫ್ಲೆಕ್ಸ್‌ಭಾರತದ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆಯಾಗಿದೆ. ಎಲ್‌ಜಿ ಇಂದು ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ್ದರೂ 2014ರ ಫೆಬ್ರವರಿಯಲ್ಲಿ ಆನ್‌ಲೈನ್‌ ಮತ್ತು ರಿಟೇಲ್‌ ಅಂಗಡಿಗಳಲ್ಲಿ ಲಭ್ಯವಾಗಲಿದೆ.

ಸ್ಮಾರ್ಟ್‌ಫೋನ್‌ ಇತಿಹಾಸದಲ್ಲಿ ಎರಡನೇ ವಕ್ರ ಸ್ಕ್ರೀನ್ ಸ್ಮಾರ್ಟ್‌ಫೋನ್‌ ಇದಾಗಿದ್ದು ಈ ಹಿಂದೆ ಸ್ಯಾಮ್‌ಸಂಗ್‌ ವಿಶ್ವದ ಪ್ರಥಮ ವಕ್ರ ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ಬಿಡುಗಡೆಮಾಡಿತ್ತು. 160.5x81.6x8.7 ಮಿ.ಮೀ ಗಾತ್ರದ ಈ ಫ್ಯಾಬ್ಲೆಟ್‌ 177 ಗ್ರಾಂ ತೂಕವನ್ನು ಹೊಂದಿದೆ. ಎಲ್‌ಜಿ ಜಿ 2ನಂತೆ ಈ ಫ್ಯಾಬ್ಲೆಟ್‌ನಲ್ಲಿ ಹಿಂದುಗಡೆ ವಾಲ್ಯೂಬ್‌ ಮತ್ತು ಹೋಮ್‌ ಬಟನ್‌ ನೀಡಲಾಗಿದೆ. ಬಳಕೆದಾರರು ಸ್ಕ್ರೀನ್‌ ಮೇಲೆ ಮೆಲ್ಲನೇ ಎರಡು ಬಾರಿ ಬೆರಳಿನಿಂದ ಹೊಡೆಯುವ ಮೂಲಕ ಸ್ಮಾರ್ಟ್‌ಫೋನ್‌ ಆನ್‌ ಆಫ್‌ ಮಾಡಬಹುದಾಗಿದೆ.

ಸಿಂಗಲ್‌ಸಿಮ್‌(ಮೈಕ್ರೋ ಸಿಮ್‌) ಫ್ಯಾಬ್ಲೆಟ್‌ ಇದಾಗಿದ್ದು, ಎಕ್ಸಲರೋ ಮೀಟರ್‌,ಗೈರೋಸ್ಕೋಪ್‌,ಪ್ರಾಕ್ಸಿಮಿಟಿ,ಕಂಪಾಸ್‌ ಸೆನ್ಸರ್‌‌ಗಳನ್ನು ಹೊಂದಿದೆ. ಎಲ್‌ಜಿ ಕಂಪೆನಿ ಇಂದು ಫ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದ್ದರೂ ಇದರ ಬೆಲೆಯನ್ನು ಪ್ರಕಟಿಸಿಲ್ಲ. ಅಂದಾಜು 60-65 ಸಾವಿರದೊಳಗಡೆ ಬೆಲೆಯನ್ನು ನಿಗದಿಪಡಿಸಬಹುದು ಎಂದು ಅಂದಾಜಿಸಲಾಗಿದೆ.ಎಲ್‌ಜಿ ಜಿ ಫ್ಲೆಕ್ಸ್‌ ಫ್ಯಾಬ್ಲೆಟ್‌ ಇದೇ ಅಕ್ಟೋಬರ್‌ನಲ್ಲಿ ಕೋರಿಯಾದಲ್ಲಿ ಬಿಡುಗಡೆಯಾಗಿತ್ತು.

ಮುಂದಿನ ಪುಟದಲ್ಲಿ ಫ್ಯಾಬ್ಲೆಟ್‌ ವಿಶೇಷತೆ ಮತ್ತು ಫ್ಯಾಬ್ಲೆಟ್‌ನ ಸ್ಕ್ರೀನ್‌ ಎಷ್ಟು ಶಕ್ತಿಶಾಲಿಯಾಗಿದೆ ಎಂದು ತೋರಿಸುವ ವಿಡಿಯೋವಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ

ಎಲ್‌ಜಿ ಜಿ ಫ್ಲೆಕ್ಸ್‌ ಸ್ಮಾರ್ಟ್‌ಫೋನಿನ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

 ಎಲ್‌ಜಿ ವಕ್ರ ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ದೇಶೀಯ ಮಾರುಕಟ್ಟೆಗೆ ಬಿಡುಗಡೆ

ಎಲ್‌ಜಿ ವಕ್ರ ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ದೇಶೀಯ ಮಾರುಕಟ್ಟೆಗೆ ಬಿಡುಗಡೆ

6 ಇಂಚಿನ ಪಿ ಒಎಲ್‌ಇಡಿ ಸ್ಕ್ರೀನ್‌(720 x 1280 ಪಿಕ್ಸೆಲ್,245 ಪಿಪಿಐ) ಫ್ಯಾಬ್ಲೆಟ್‌ ಹೊಂದಿದೆ.ಈ ಫ್ಯಾಬ್ಲೆಟ್‌ನ ಮೇಲೆ 32 ಕೆಜಿ ಭಾರವಿರುವ ವಸ್ತುವನ್ನುಇರಿಸಿದರೂ ಫ್ಯಾಬ್ಲೆಟ್‌ ಭಾರವನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ.

 ಎಲ್‌ಜಿ ವಕ್ರ ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ದೇಶೀಯ ಮಾರುಕಟ್ಟೆಗೆ ಬಿಡುಗಡೆ

ಎಲ್‌ಜಿ ವಕ್ರ ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ದೇಶೀಯ ಮಾರುಕಟ್ಟೆಗೆ ಬಿಡುಗಡೆ

32 GB ಆಂತರಿಕ ಮೆಮೊರಿಯನ್ನು ಹೊಂದಿರುವ ಫ್ಯಾಬ್ಲೆಟ್‌ 2 GB ರ್‍ಯಾಮ್‌ನೊಂದಿಗೆ ಬಿಡುಗಡೆಯಾಗಿದೆ.ಮೆಮೊರಿ ವಿಸ್ತರಿಸಲು ಕಾರ್ಡ್ ಸ್ಲಾಟ್‌ ಇಲ್ಲ.

 ಎಲ್‌ಜಿ ವಕ್ರ ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ದೇಶೀಯ ಮಾರುಕಟ್ಟೆಗೆ ಬಿಡುಗಡೆ

ಎಲ್‌ಜಿ ವಕ್ರ ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ದೇಶೀಯ ಮಾರುಕಟ್ಟೆಗೆ ಬಿಡುಗಡೆ

ಎಲ್‌ಇಡಿ ಫ್ಲ್ಯಾಶ್‌ ಹೊಂದಿರುವ 13 ಎಂಪಿ ಹಿಂದುಗಡೆ ಕ್ಯಾಮೆರಾ,ಮುಂದುಗಡೆ 2.1 ಎಂಪಿ ಕ್ಯಾಮೆರಾವನ್ನು ಫ್ಯಾಬ್ಲೆಟ್‌ ಹೊಂದಿದೆ.

 ಎಲ್‌ಜಿ ವಕ್ರ ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ದೇಶೀಯ ಮಾರುಕಟ್ಟೆಗೆ ಬಿಡುಗಡೆ

ಎಲ್‌ಜಿ ವಕ್ರ ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ದೇಶೀಯ ಮಾರುಕಟ್ಟೆಗೆ ಬಿಡುಗಡೆ

ಫ್ಯಾಬ್ಲೆಟ್‌ ಆಂಡ್ರಾಯ್ಡ್‌ 4.2.2 ಜೆಲ್ಲಿ ಬೀನ್‌ ಓಎಸ್‌, 3500 mAh ಬ್ಯಾಟರಿಯನ್ನು ಹೊಂದಿದೆ.

ಎಲ್‌ಜಿ ವಕ್ರ ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ದೇಶೀಯ ಮಾರುಕಟ್ಟೆಗೆ ಬಿಡುಗಡೆ

ವಿಡಿಯೋ ವೀಕ್ಷಿಸಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X