ಭಾರತದ ಬೆಸ್ಟ್‌ ಅಂದ್ರೆ ಬೆಸ್ಟ್‌ Foldable ಸ್ಮಾರ್ಟ್‌ಫೋನ್‌ಗಳು ಇವೇ..! ಕೈಗೆಟಕುವ ದರ, ಆಕರ್ಷಕ ವಿನ್ಯಾಸ

By Gizbot Bureau
|

ನೀವು ಸ್ಮಾರ್ಟ್‌ಫೋನ್‌ ತಂತ್ರಜ್ಞಾನ ಬಳಕೆಯಲ್ಲಿ ಹೆಚ್ಚು ಉತ್ಸುಕರಾಗಿದ್ದರೆ, ಫೋಲ್ಡಿಂಗ್ ಸ್ಮಾರ್ಟ್‌ಫೋನ್ ಸದ್ಯದ ಟ್ರೆಂಡ್‌ ಎಂಬುದು ನಿಮಗೆ ಈಗಾಗಲೇ ತಿಳಿದಿರುತ್ತದೆ. ಭಾರತೀಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಮತ್ತು ಮೊಟೊರೋಲಾದಂತಹ ಬ್ರಾಂಡ್‌ಗಳು ಅನೇಕ ಮಡಚುವ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿವೆ. ಆದ್ದರಿಂದ, ಭಾರತದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಪ್ರೀಮಿಯಂ ವಿನ್ಯಾಸ ಹೊಂದಿರುವ ಕೆಲವು ಅತ್ಯುತ್ತಮ ಮಡಚುವ ಸ್ಮಾರ್ಟ್‌ಫೋನ್‌ಗಳನ್ನು ನಿಮಗಾಗಿ ಇಲ್ಲಿ ನೀಡಿದ್ದೇವೆ.

ಸ್ಯಾಮ್‌ಸಂಗ್ ಗೆಲಾಕ್ಸಿ Z ಫೋಲ್ಡ್ 3

ಸ್ಯಾಮ್‌ಸಂಗ್ ಗೆಲಾಕ್ಸಿ Z ಫೋಲ್ಡ್ 3

ಬಹುಶಃ ವಿಶ್ವದ ಅತ್ಯಂತ ಅತ್ಯಾಧುನಿಕ ಮಡಚುವ ಸ್ಮಾರ್ಟ್‌ಫೋನ್‌ ಇದಾಗಿದೆ. ಈ ಸಾಧನ ಎರಡು ಡಿಸ್‌ಪ್ಲೇಗಳನ್ನು ಹೊಂದಿದ್ದು, ಡಿಸ್‌ಪ್ಲೇ ಕ್ಯಾಮೆರಾ ಕೆಳಗಡೆ ಮುಖ್ಯ ಫೋಲ್ಡಿಂಗ್ ಸ್ಕ್ರೀನ್ ಹಾಗೂ ಸೆಕೆಂಡರಿ ಡಿಸ್‌ಪ್ಲೇ ಇದೆ. ಸ್ಯಾಮ್‌ಸಂಗ್‌ ಗೆಲಾಕ್ಸಿ Z ಫೋಲ್ಡ್ 3 ಸ್ಮಾರ್ಟ್‌ಫೋನ್ ಪ್ರೀಮಿಯಂ ವಿನ್ಯಾಸ, ಉನ್ನತ ಶ್ರೇಣಿಯ ಹಾರ್ಡ್‌ವೇರ್ ಹೊಂದಿದೆ. ಹಾಗೂ IPx8 ರೇಟಿಂಗ್‌ನ ವಾಟರ್‌ ರೆಸಿಸ್ಟಂಟ್‌ ಹೊಂದಿದೆ.

ಸ್ಯಾಮ್‌ಸಂಗ್‌ ಗೆಲಾಕ್ಸಿ Z ಫ್ಲಿಪ್ 3

ಸ್ಯಾಮ್‌ಸಂಗ್‌ ಗೆಲಾಕ್ಸಿ Z ಫ್ಲಿಪ್ 3

ಸ್ಯಾಮ್‌ಸಂಗ್ ಗೆಲಾಕ್ಸಿ Z ಫ್ಲಿಪ್ 3 ಅತ್ಯಂತ ಕಾಂಪ್ಯಾಕ್ಟ್ ಮಡಚುವ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಈ ಸಾಧನ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 888 ಪ್ರೊಸೆಸರ್‌ ಹೊಂದಿದ್ದು, ಬಹು ಸಂಗ್ರಹಣೆ ಮತ್ತು RAM ಆಯ್ಕೆಗಳೊಂದಿಗೆ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಈ ಸ್ಮಾರ್ಟ್‌ಫೋನ್‌ ಪ್ರೀಮಿಯಂ ಮೆಟಲ್-ಗ್ಲಾಸ್ ಫಿನಿಶ್ ಹೊಂದಿದ್ದು, IPx8 ರೇಟಿಂಗ್‌ನ ವಾಟರ್‌ ರೆಸಿಸ್ಟಿಂಗ್‌ ಸಾಮರ್ಥ ಇದೆ.

ಸ್ಯಾಮ್‌ಸಂಗ್ ಗೆಲಾಕ್ಸಿ Z ಫೋಲ್ಡ್ 2

ಸ್ಯಾಮ್‌ಸಂಗ್ ಗೆಲಾಕ್ಸಿ Z ಫೋಲ್ಡ್ 2

ಸ್ಯಾಮ್‌ಸಂಗ್ ಗೆಲಾಕ್ಸಿ Z ಫೋಲ್ಡ್ 2 ಸ್ಮಾರ್ಟ್‌ಫೋನ್‌ ಸ್ಯಾಮ್‌ಸಂಗ್ ಗೆಲಾಕ್ಸಿ Z ಫೋಲ್ಡ್‌ 3ನಂತೆಯೇ ಕಾಣುತ್ತದೆ. ಆದರೆ, ಅದಕ್ಕೆ ಹೋಲಿಸಿದರೆ ಇದರ ಬೆಲೆ ಕಡಿಮೆಯಾಗಿದ್ದು, ಗ್ರಾಹಕರಿಗೆ ಸ್ವಲ್ಪ ಕೈಗೆಟಕುವ ದರದಲ್ಲಿ ದೊರೆಯುತ್ತದೆ. ಸ್ಯಾಮ್‌ಸಂಗ್ ಗೆಲಾಕ್ಸಿ Z ಫೋಲ್ಡ್ 3ಗೆ ಹೋಲಿಸಿದರೆ ನೀವು ಈಗ ಸ್ಯಾಮ್‌ಸಂಗ್ ಗೆಲಾಕ್ಸಿ Z ಫೋಲ್ಡ್ 2 ಅನ್ನು ಅಗ್ಗದ ಬೆಲೆಗೆ ಪಡೆಯಬಹುದು. ಈ ಮಡಚುವ ಸ್ಮಾರ್ಟ್‌ಫೋನ್‌ನ ಬೆಲೆ 1,49,999 ರೂ. ಆಗಿದೆ.

ಮೊಟೋರೊಲಾ ರೇಜರ್ 2019

ಮೊಟೋರೊಲಾ ರೇಜರ್ 2019

ಮೊಟೋರೊಲಾ ರೇಜರ್ 2019 ಭಾರತದ ಅತ್ಯಂತ ಉತ್ತಮ ಫೋಲ್ಡಿಂಗ್ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಈ ಸಾಧನವು ಮೊಟೋರೊಲಾದ ಹಳೆಯ ಕ್ಲಾಮ್‌ಶೆಲ್ ತರಹದ ಸ್ಮಾರ್ಟ್‌ಫೋನ್‌ಗಳನ್ನು ಹೋಲುತ್ತದೆ. ಹಾಗೂ ಕಾಂಪ್ಯಾಕ್ಟ್ ವಿನ್ಯಾಸವನ್ನು ನೀಡುತ್ತದೆ. ಹೀಗಿದ್ದರೂ, ಇದು ಸ್ಯಾಮ್‌ಸಂಗ್‌ನ ಮಡಚುವ ಸ್ಮಾರ್ಟ್‌ಫೋನ್‌ಗಳಷ್ಟು ಶಕ್ತಿಯುತವಾಗಿಲ್ಲ. ಇದರ ಬೆಲೆ 1,49,999 ರೂ. ಆಗಿದೆ.

ಸ್ಯಾಮ್‌ಸಂಗ್ ಗೆಲಾಕ್ಸಿ ಫೋಲ್ಡ್

ಸ್ಯಾಮ್‌ಸಂಗ್ ಗೆಲಾಕ್ಸಿ ಫೋಲ್ಡ್

ಸ್ಯಾಮ್‌ಸಂಗ್‌ ಗೆಲಾಕ್ಸಿ ಫೋಲ್ಡ್‌ ಭಾರತದಲ್ಲಿ ಬಿಡುಗಡೆಯಾದ ಮೂಲ ಮತ್ತು ಮೊದಲ ಮಡಚುವ ಸ್ಮಾರ್ಟ್‌ಫೋನ್ ಆಗಿದೆ. ಔಟ್‌ಡೇಟೆಡ್‌ ಹಾರ್ಡ್‌ವೇರ್ ಹೊರತಾಗಿಯೂ, ಇದು ಬಹಳಷ್ಟು ಆಕರ್ಷಣೆಯನ್ನು ಹೊಂದಿರುವ ಸಾಧನ ಇದಾಗಿದೆ. ಸೆಕೆಂಡರಿ ಡಿಸ್‌ಪ್ಲೇನೊಂದಿಗೆ ಮೂಲ ಮಡಚುವ ಸ್ಮಾರ್ಟ್‌ಫೋನ್ ಬೆಲೆ 1,73,999 ರೂ. ಆಗಿದೆ.

ಸ್ಯಾಮ್‌ಸಂಗ್‌ ಗೆಲಾಕ್ಸಿ Z ಫ್ಲಿಪ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ Z ಫ್ಲಿಪ್‌

ಸ್ಯಾಮ್‌ಸಂಗ್ ಗೆಲಾಕ್ಸಿ Z ಫ್ಲಿಪ್ ಸ್ಯಾಮ್‌ಸಂಗ್‌ನ ಮೊದಲ ಕಾಂಪ್ಯಾಕ್ಟ್ ಫೋಲ್ಡಿಂಗ್ ಸ್ಮಾರ್ಟ್‌ಫೋನ್ ಆಗಿದೆ. ಫೋನ್ ಕಾಂಪ್ಯಾಕ್ಟ್ ಫಾರ್ಮ್ ಫ್ಯಾಕ್ಟರ್ ಹೊಂದಿದ್ದು, ಸುಲಭವಾಗಿ ಹಿಡಿದುಕೊಳ್ಳಬಹುದಾಗಿದೆ. ಈ ಫೋನ್ ಈಗ ಅಮೆಜಾನ್‌ನಲ್ಲಿ ಸುಮಾರು 64,000 ರೂ.ಗೆ ಲಭ್ಯವಿದ್ದು, ಕೈಗೆಟುಕುವ ಫೋಲ್ಡಿಂಗ್ ಸ್ಮಾರ್ಟ್‌ಫೋನ್ ಆಗಿದೆ.

Most Read Articles
Best Mobiles in India

English summary
We have come up with a list of some of the best folding smartphones available in India that offer cutting-edge technology and premium design.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X