ಮೈಕ್ರೋಮ್ಯಾಕ್ಸ್‌ A87 ನಿಂಜಾ 4 vs ಗ್ಯಾಲಾಕ್ಸಿ ವೈ ಡ್ಯುಯೊಸ್‌

By Super
|
 ಮೈಕ್ರೋಮ್ಯಾಕ್ಸ್‌ A87 ನಿಂಜಾ 4 vs ಗ್ಯಾಲಾಕ್ಸಿ ವೈ ಡ್ಯುಯೊಸ್‌

ಭಾರತೀಯ ಮಾರುಕಟ್ಟೆಯಲ್ಲಿ ಇಂದು ಮೊಬೈಲ್‌ ತಯಾರಕರುಗಳು ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಅದರಲ್ಲಿಯೂ 2012 ರಲ್ಲಿ ಒಂದರ ಹಿಂದೆ ಒಂದರಂತೆ ಸಾಲು ಸಾಲಾಗಿ ಅಗ್ಗದ ಬೆಲೆಯ ಸ್ಮಾರ್ಟ್‌ಫೊನ್‌ಗಳು ಮಾರುಕಟ್ಟೆಗೆ ಬರುತ್ತಲೇ ಇವೆ.

ಅಂದಹಾಗೆ ಈ ಸಾಲಿಗೆ ಇತ್ತೀಚೆಗಷ್ಟೇ ಮೈಕ್ರೋಮ್ಯಾಕ್ಸ್‌ನ A87 ಸೂಪರ್‌ಫೋನ್‌ ನಿಂಜಾ 4 ಹಾಗೂ ಸ್ಯಾಮ್ಸಂಗ್‌ನ ಗ್ಯಾಲಾಕ್ಸಿ ವೈ ಡ್ಯುಯೊಸ್‌ ಲೈಟ್‌ ಫೋನ್‌ಗಳು ಸೇರ್ಪಡೆಯಾಗಿವೆ. ಆಂದಹಾಗೆ ಈ ಎರಡು ಫೊನ್‌ಗಳಲ್ಲಿ ಯಾವುದು ಉತ್ತಮ ಎಂದು ತಿಳಿದುಕೊಳ್ಳಬೇಕೆ ಹಾಗಿದ್ದಲ್ಲಿ ಇವೆರಡರ ನಡುವಿನ ಹೋಲಿಕೆಯನ್ನು ಓದಿ ನೋಡಿ.

ದರ್ಶಕ ಹಗೂ ಸುತ್ತಳತೆ : A87 ನಿಂಜಾ 4 ಸೂಪರ್‌ಫೊನ್‌ 124.8 x 64 x 11.7 mm ಸುತ್ತಳತೆ ಹೊಂದಿದ್ದರೆ, ಗ್ಯಾಲಾಕ್ಸಿ ವೈ ಡ್ಯಯೊಸ್‌ ಲೈಟ್‌ 103.5 x 58 x 12 mm ಸುತ್ತಳತೆ ಹೊಂದಿದೆ.

ಅಂದಹಾಗೆ A87 ನಿಂಜಾ 4 ನಲ್ಲಿ 4 ಇಂಚಿನ ಟಚ್‌ಸ್ಕ್ರೀನ್‌ ದರ್ಶಕ ಹಾಗೂ 480 x 800 ಪಿಕ್ಸೆಲ್ಸ ಹೊಂದಿದೆ. ಹಾಗೂ ಗ್ಯಾಲಾಕ್ಸಿ ವೈ ಡ್ಯುಯೊಸ್‌ ಲೈಟ್‌ನಲ್ಲಿ 2.8 ಇಂಚಿನ ಟಚ್‌ ಸ್ಕ್ರೀನ್‌ ದರ್ಶಕದೊಂದಿಗೆ 240 x 320 ಪಿಕ್ಸೆಲ್ಸ್‌ ಒಳಗೊಂಡಿದೆ.

ಪ್ರೊಸೆಸರ್‌: ಈ ವಿಭಾಗದಲ್ಲಿ A87 ನಿಂಜಾ 4 ನಲ್ಲಿ 1 GHz ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌ ಹೊಂದಿದ್ದರೆ, ಗ್ಯಾಲಾಕ್ಸಿ ವೈ ಡ್ಯುಯೊಸ್‌ ಲೈಟ್‌ನಲ್ಲಿ 832MHz ಪ್ರೊಸೆಸರ್‌ ಇದೆ.

ಆಪರೇಟಿಂಗ್‌ ಸಿಸ್ಟಂ: ಎರಡೂ ಬಜೆಟ್‌ ಫೋನ್‌ ಗಳಾದ್ದರಿಂದ ಆಂಟ್ರಾಯ್ಡ್‌ 2.3.5 ಜಿಂಜರ್‌ ಬ್ರಡ್‌ OS ಹೊಂದಿವೆ.

ಕ್ಯಾಮೆರಾ: ಎರಡೂ ಫೊನ್‌ಗಳಲ್ಲಿ 2MP ನ ಹಿಂಬದಿಯ ಕ್ಯಾಮೆರಾ ಹೊಂದಿವೆ. ಹಾಗೂ ಎರೆಡೂ ಫೋನ್‌ ಗಳಲ್ಲಿ ಮುಂಬದಿಯ ವಿಜಿಎ ಕ್ಯಾಮೆರಾಗಳಿಲ್ಲ.

ಸ್ಟೋರೇಜ್‌: ಗ್ಯಾಲಾಕ್ಸಿ ವೈ ಡ್ಯುಯೊಸ್‌ ಲೈಟ್‌ ನಲ್ಲಿ 2GB ಸಾಮರ್ತ್ಯದ ಆಂತರಿಕ ಮೆಮೊರಿ ಇದ್ದರೆ, A87 ನಿಂಜಾ 4 ಈ ಸೌಲಭ್ಯವಿಲ್ಲ. ಆದರೆ ಎರೆಡೂ ಫೋನ್‌ಗಳ ಮೆಮೊರಿಯನ್ನು 32GB ವರೆಗೆ ವಿಸ್ತರಿಸ ಬಹುದಾಗಿದೆ.

ಕನೆಕ್ಟಿವಿಟಿ: A87 ನಿಂಜಾ 4 ಹಾಗೂ ಗ್ಯಾಲಾಕ್ಸಿ ವೈ ಡ್ಯುಯೊಸ್‌ ಲೈಟ್‌ ಎರಡೂ ಫೋನಗಳಲ್ಲಿ ಮೈಕ್ರೋ USB 2.0, Wi-Fi ಫೀಚರ್ಸ್‌, 3G ಹಾಗೂ ಬ್ಲೂಟೂತ್‌ ಹೊಂದಿವೆ.

ಬ್ಯಾಟರಿ: ಈ ವಿಭಾಗದಲ್ಲಿ A87 ನಿಂಜಾ 4 ಉತ್ತಮ ಸಾಮರ್ತ್ಯ ಹೊಂದಿರುವ 1,400 mAh Li-ion ಬ್ಯಾಟರಿ ಹೊಂದಿದ್ದರೆ, ಗ್ಯಾಲಾಕ್ಸಿ ವೈ ಡ್ಯುಯೊಸ್‌ ಲೈಟ್‌ 1,200 mAh Li-ion ಬ್ಯಾಟರಿ ಹೊಂದಿದೆ.

ಬೆಲೆ: ಕೊಳ್ಳುವ ವಿಚಾರದಲ್ಲಿ A87 ನಿಂಜಾ 4 ರೂ.5,999 ಗಳಿಗೆ ಲಭ್ಯವಿದ್ದು, ಗ್ಯಾಲಾಕ್ಸಿ ವೈ ಡ್ಯುಯೊಸ್‌ ಲೈಟ್‌ ರೂ. 6,990 ಬೆಲೆಗೆ ದೊರೆಯುತ್ತದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X