Subscribe to Gizbot

ಬ್ರೇಕಿಂಗ್ ನ್ಯೂಸ್: 'ಕೇವಲ ರೂ.1999ಕ್ಕೆ ಮೈಕ್ರೋಮಾಕ್ಸ್ ಭಾರತ್ 1 4G VoLTE ಫೋನ್'

Written By:

ಜಿಯೋ ದೇಶದಲ್ಲಿ 4G ಸಪೋರ್ಟ್ ಮಾಡುವ ಫೀರ್ಚರ್ ಫೋನೊಂದನ್ನೂ 1000 ರೂಗೆ ನೀಡುವುದಾಗಿ ಘೋಷಣೆ ಮಾಡಿತ್ತು ಆದರೆ ಈ ಫೋನ್ ಇನ್ನು ಮಾರುಕಟ್ಟೆಗೆ ಬರುವುದರಲ್ಲೇ ಇದೆ. ಆದರೆ ಇದೇ ಸಮಯದಲ್ಲಿ ದೇಶಿಯ ಮೊಬೈಲ್ ತಯಾರಕ ಕಂಪನಿ ಮೈಕ್ರೋಮ್ಯಾಕ್ಸ್ ಕೇವಲ 1999 ರೂ.ಗೆ ಫೀಚರ್ ಫೋನ್‌ ನೀಡಲು ಮುಂದಾಗಿದ್ದು, ಅದುವೇ ಇನ್ನೊಂದು ತಿಂಗಳಲ್ಲಿ ಮಾರುಕಟ್ಟೆಗೆ ಬರಲಿದೆಯಂತೆ.

ಬ್ರೇಕಿಂಗ್ ನ್ಯೂಸ್:'ಕೇವಲ ರೂ.1999ಕ್ಕೆ ಮೈಕ್ರೋಮಾಕ್ಸ್ ಭಾರತ್ 1 4G VoLTE ಫೋನ್'

ಈ ಕುರಿತು ಮಾಹಿತಿ ನೀಡಿರುವ ಮೈಕ್ರೋ ಮಾಕ್ಸ್ ಮಾರ್ಕೆಟಿಂಗ್ ಮುಖ್ಯಸ್ಥ ಸುಬ್ಜಿಜ್ ಸಿಂಗ್, 'ಭಾರತ್ 1 ಹೆಸರಿನ 4G VoLTE ಸಪೋರ್ಟ್ ಮಾಡುವ ಫೀಚರ್ ಫೋನನ್ನು ರೂ.1999ಕ್ಕೆ ನೀಡಲು ಕಂಪನಿಯೂ ಮುಂದಾಗಿದ್ದು, ಮುಂದಿನ ನಾಲ್ಕು ವಾರಗಳಲ್ಲಿ ಈ ಫೋನ್ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ ಎನ್ನವ ವಾಗ್ದಾನವನ್ನು ಮಾಡಿದ್ದಾರೆ. ಒಟ್ಟಿನಲ್ಲಿ 4G ಫೋನ್ ಬೇಕು ಎನ್ನುತ್ತಿದ್ದವರಿಗೆ ಇದು ಶುಭಸುದ್ದಿಯಾಗಿದೆ.

ಓದಿರಿ: ಜಿಯೋ ದಿಂದ ಮತ್ತಷ್ಟು ಆಕರ್ಷಕ ಆಫರ್‌ಗಳು..!?!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಾವಾ ಆಪರೇಟಿಂಗ್ ಸಿಸ್ಟಮ್:

ಜಾವಾ ಆಪರೇಟಿಂಗ್ ಸಿಸ್ಟಮ್:

ಭಾರತ್ 1 ಫೀಚರ್ ಫೋನಿನಲ್ಲಿ ಜಾವಾ ಆಪರೇಟಿಂಗ್ ಸಿಸ್ಟಮ್ ಇರಲಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಅಲ್ಲದೇ 4G VoLTE ಸಪೋರ್ಟ್ ಮಾಡಲಿದ್ದು, ನೀವು ಈ ಫೋನಿನಲ್ಲಿ ಜಿಯೋ ಸಿಮ್ ಬಳಕೆ ಮಾಡಬಹುದಾಗಿದೆ. ಶೀಘ್ರವೇ ನಿಮ್ಮ ಕೈಸೆರಲಿರುವ ಫೋನಿನ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಈಗಾಗಲೇ ಭಾರತ್ 2 ಲಭ್ಯವಿದೆ:

ಈಗಾಗಲೇ ಭಾರತ್ 2 ಲಭ್ಯವಿದೆ:

ಮೈಕ್ರೋಮಾಕ್ಸ್ ಈ ಹಿಂದೆಯೇ ಭಾರತ್ ಸರಣಿಯ ಫೋನುಗಳನ್ನು ಕಡಿಮೆ ಬೆಲೆಗೆ ಬಿಡುಗಡೆ ಮಾಡುವುದಾಗಿ ಘೋಷನೆ ಮಾಡಿತ್ತು. ಈ ಹಿನ್ನಲೆಯಲ್ಲಿ ಭಾರತ್ 2 ಸ್ಮಾರ್ಟ್‌ಫೋನನ್ನು ಈಗಾಗಲೇ ಬಿಡುಗಡೆ ಮಾಡಿದ್ದು, ಇದು ಆಂಡ್ರಾಯ್ಟ್ ನಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದೆ. ಇದು ಎರಡು ಮಾದರಿಯಲ್ಲಿ ದೊರೆಯತ್ತಿದ್ದು, 2,999 ರೂ. ಮತ್ತು 3,499 ರೂಗಳಿಗೆ.

ಜಿಯೋ ಸಹ 999 ರೂ. ಮತ್ತು ರೂ. 1499ಕ್ಕೆ ಫೀಚರ್ ಫೋನ್ ನೀಡಲಿದೆ:

ಜಿಯೋ ಸಹ 999 ರೂ. ಮತ್ತು ರೂ. 1499ಕ್ಕೆ ಫೀಚರ್ ಫೋನ್ ನೀಡಲಿದೆ:

ಮೈಕ್ರೋ ಮಾಕ್ಸ್ ಮಾದರಿಯಲ್ಲಿ ಜಿಯೋ ಸಹ 999ರೂ.ಗೆ ಫೀಚರ್ ಫೋನನ್ನು ಬಿಡುಗಡೆ ಮಾಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆಯಾದರು, ಎಂದು ಮಾರುಕಟ್ಟೆಗೆ ಬರಲಿದೆ ಎಂಬುದು ತಿಳಿದಿಲ್ಲ. ಜಿಯೋ ಫೋನುಗಳು 4G VoLTE ಸಪೋರ್ಟ್ ಮಾಡಲಿವೆ.

ಲಾವಾ ದಿಂದ 4G ಫೀಚರ್ ಫೋನ್:

ಲಾವಾ ದಿಂದ 4G ಫೀಚರ್ ಫೋನ್:

ಲಾವಾ ಸಹ 4G ಫೀಚರ್ ಫೋನ್ ಬಿಡುಗಡೆ ಮಾಡಿದೆ. ಕನೆಕ್ಡ್ ಎಂ1 ಎನ್ನುವ ಫೀಚರ್ ಫೋನ್ ಲಾವಾ ಕಡೆಯಿಂದ ಮಾರುಕಟ್ಟೆಗೆ ಬಂದಿದ್ದು, ಬೆಲೆ ರೂ. 3,333ಗಳಾಗಿದೆ. ಬೆಲೆ ಕೊಂಚ ಜಾಸ್ತಿಯಾದರು ಫೋನ್ ಉತ್ತಮವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
The major highlight of the feature phone is the 4G VoLTE support, making it the company’s cheapest VoLTE-enabled feature phone. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot