ಗೂಗಲ್-ಮೈಕ್ರೋಮಾಕ್ಸ್ ಫೋನ್ ಬಿಡುಗಡೆಗೆ ಕ್ಷಣಗಣನೆ: ಬೆಲೆ ಕೇಳಿದ್ರೆ ಬುಕ್ಕಿಂಗ್ ಖಂಡಿತ..!

ಬಾರ್ಸಿಲೋನದಲ್ಲಿ ನಡೆಯುತ್ತಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸಮಾವೇಶದಲ್ಲಿ ಮೈಕ್ರೋಮಾಕ್ಸ್ ಭಾರತ್ ಗೊ (ಆಂಡ್ರಾಯ್ಡ್ ಒರಿಯೊ) ಸ್ಮಾರ್ಟ್‌ಫೋನ್ ಅನಾವರಣಗೊಂಡಿದ್ದು, ಶೀಘ್ರವೇ ಮಾರುಕಟ್ಟೆಯಲ್ಲಿ ತನ್ನ ಹವಾ ಎಬ್ಬಿಸಲಿದೆ ಎನ್ನುವ ಮಾಹಿತಿಯು ಲಭ್ಯ

|

ಭಾರತೀಯ ಮಾರುಕಟ್ಟೆಯನ್ನು ಗುರಿಯಾಗಿಟ್ಟುಕೊಂಡು ಗೂಗಲ್ ನಿರ್ಮಿಸಿರುವ ಆಂಡ್ರಾಯ್ಡ್ ಗೊ ಆವೃತ್ತಿಯ ಮೈಕ್ರೋಮಾಕ್ಸ್ ಭಾರತ್ ಗೊ (ಆಂಡ್ರಾಯ್ಡ್ ಒರಿಯೊ) ಸ್ಮಾರ್ಟ್‌ಫೋನ್ ಈಗಾಗಲೇ ಲಾಂಚ್ ಆಗಿದ್ದು. ಮುಂದಿನ ತಿಂಗಳು ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎನ್ನಲಾಗಿದೆ.

ಬಾರ್ಸಿಲೋನದಲ್ಲಿ ನಡೆಯುತ್ತಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸಮಾವೇಶದಲ್ಲಿ ಮೈಕ್ರೋಮಾಕ್ಸ್ ಭಾರತ್ ಗೊ (ಆಂಡ್ರಾಯ್ಡ್ ಒರಿಯೊ) ಸ್ಮಾರ್ಟ್‌ಫೋನ್ ಅನಾವರಣಗೊಂಡಿದ್ದು, ಶೀಘ್ರವೇ ಮಾರುಕಟ್ಟೆಯಲ್ಲಿ ತನ್ನ ಹವಾ ಎಬ್ಬಿಸಲಿದೆ ಎನ್ನುವ ಮಾಹಿತಿಯು ಲಭ್ಯವಾಗಿದೆ.

ವಿಶೇಷತೆ:

ವಿಶೇಷತೆ:

ಮೈಕ್ರೋಮಾಕ್ಸ್ ಭಾರತ್ ಗೊ (ಆಂಡ್ರಾಯ್ಡ್ ಒರಿಯೊ) ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ದೊರೆಯುವ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಆಗಿದ್ದು, ಬೆಸಿಕ್ ಆಯ್ಕೆಗಳನ್ನು ಒಳಗೊಂಡಿದೆ ಇದರಲ್ಲಿ 4.5 ಇಂಚಿನ FWVGA ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ.

1GB RAM-8GB ಇಂಟರ್ನಲ್ ಮೆಮೊರಿ:

1GB RAM-8GB ಇಂಟರ್ನಲ್ ಮೆಮೊರಿ:

ಮೈಕ್ರೋಮಾಕ್ಸ್ ಭಾರತ್ ಗೊ (ಆಂಡ್ರಾಯ್ಡ್ ಒರಿಯೊ ಗೊ) ಸ್ಮಾರ್ಟ್‌ಫೋನ್ ವೇಗವಾಗಿ ಕಾರ್ಯನಿರ್ವಹಿಸಲಿದ್ದು, ಗೊ ಆಪ್ ಬಳಕೆ ಮಾಡಿಕೊಳ್ಳಲು ಹೆಚ್ಚಿನ ಸ್ಥಳಾವಕಾಶದ ಅವಶ್ಯ ಕತೆ ಇಲ್ಲ ಇದಕ್ಕಾಗಿ 1GB RAM ಮತ್ತು 8GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ.

5MP ಕ್ಯಾಮೆರಾ:

5MP ಕ್ಯಾಮೆರಾ:

ಮೈಕ್ರೋಮಾಕ್ಸ್ ಭಾರತ್ ಗೊ (ಆಂಡ್ರಾಯ್ಡ್ ಒರಿಯೊ ಗೊ) ಸ್ಮಾರ್ಟ್‌ಫೋನ್ ನಲ್ಲಿ ನೀವು ಉತ್ತಮವಾಗಿ ಚಿತ್ರಗಳನ್ನು ಸೆರೆ ಹಿಡಿಯಬಹುದಾಗಿದ್ದು, ಹಿಂಭಾಗ ಮತ್ತು ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು LED ಫ್ಲಾಷ್ ಲೈಟ್ ನೊಂದಿಗೆ ಕಾಣಿಸಿಕೊಂಡಿದೆ.

ಆಂಡ್ರಾಯ್ಡ್ ಗೊ:

ಆಂಡ್ರಾಯ್ಡ್ ಗೊ:

ಗೂಗಲ್ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗಾಗಿಯೇ ನಿರ್ಮಿಸಿರುವ ಆಂಡ್ರಾಯ್ಡ್ ಗೊ ಆವೃತ್ತಿಯಲ್ಲಿ ಕಾರ್ಯನಿರ್ವಹಿಸಲಿದೆ. ಅಲ್ಲದೇ ಗೂಗಲ್ ಲೈಟ್ ಆಪ್ ಗಳನ್ನು ಈ ಸ್ಮಾರ್ಟ್‌ಫೋನಿನಲ್ಲಿ ನೀವು ಕಾಣಬಹುದಾಗಿದೆ.

ಬಳಸಲು ಉತ್ತಮವಾಗಿದೆ.

ಬಳಸಲು ಉತ್ತಮವಾಗಿದೆ.

ಇದಲ್ಲದೇ ನೋಡಲು ಉತ್ತಮವಾಗಿ ಕಾಣುವ ಮೈಕ್ರೋಮಾಕ್ಸ್ ಭಾರತ್ ಗೊ (ಆಂಡ್ರಾಯ್ಡ್ ಒರಿಯೊ) ಸ್ಮಾರ್ಟ್‌ಫೋನ್ ಬಳಕೆ ಮಾಡಿಕೊಳ್ಳಲು ಉತ್ತಮವಾಗಿದೆ ಎನ್ನಬಹುದಾಗಿದೆ. ಕೈನಲ್ಲಿ ಹಿಡಿದರೆ ಬಜೆಟ್ ಫೋನ್ ಎಂಬ ಭಾವ ಬರುವುದಿಲ್ಲ.

How To Link Aadhaar With EPF Account Without Login (KANNADA)
ಬೆಲೆ:

ಬೆಲೆ:

ಈಗಾಗಲೇ ಮೈಕ್ರೋಮಾಕ್ಸ್ ಭಾರತ್ ಗೊ (ಆಂಡ್ರಾಯ್ಡ್ ಒರಿಯೊ) ಸ್ಮಾರ್ಟ್‌ಫೋನ್ ರೂ.2000ಕ್ಕೆ ದೊರೆಯಲಿದೆ ಎನ್ನಲಾಗಿದ್ದು, ಕಂಪನಿ ಈ ಕುರಿತು ಯಾವುದೇ ಮಾಹಿತಿಯನ್ನು ಲೀಕ್ ಮಾಡಿಲ್ಲ. ಆದರೆ ಮೂಲಗಳು ರೂ.2000ಕ್ಕೆ ಈ ಸ್ಮಾರ್ಟ್‌ಫೋನ್ ಮಾರಾಟಾಗಲಿದೆ ಎಂದು ತಿಳಿಸಿವೆ.

Best Mobiles in India

English summary
Micromax Bharat Go Android Oreo Go phone showcased at MWC 2018. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X