ಭಾರತದ ಚೀಪೆಸ್ಟ್ 4G ಸ್ಮಾರ್ಟ್‌ಫೋನ್ ಮೈಕ್ರೊಮ್ಯಾಕ್ಸ್ "ಭಾರತ್ 2"!! ಬೆಲೆ ಎಷ್ಟು?

Written By:

ಅತ್ಯಂತ ಕಡಿಮೆ ಬೆಲೆಗೆ ಉತ್ತಮ ಸ್ಮಾರ್ಟ್‌ಫೊನ್‌ಗಳನ್ನು ಬಿಡುಗಡೆಮಾಡುವ ಮೈಕ್ರೊಮ್ಯಾಕ್ಸ್ ಕಂಪೆನಿ ಇತ್ತೀಚಿಗೆ ಹೆಚ್ಚು ಸುದ್ದಿ ಮಾಡಿರಲಿಲ್ಲ.!! ಆದರೆ, ಇದೀಗ ಒಮ್ಮೆಲೆ ಅತ್ಯಂತ ಕಡಿಮೆ ಬೆಲೆಗೆ ಎರಡು 4G ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ಮೈಕ್ರೊಮ್ಯಾಕ್ಸ್ ಸಜ್ಜಾಗಿದ್ದು ಮೊಬೈಲ್ ಮಾರುಕಟ್ಟೆಯಲ್ಲಿ ಮತ್ತೆ ಸದ್ದು ಮಾಡುತ್ತಿದೆ.!!

1999 ರೂ.ಮತ್ತು 2999 ರೂಪಾಯಿಗಳಿಗೆ ಭಾರತ್ 1 ಮತ್ತು ಭಾರತ್ 2 ಎಂಬ ಎರಡು 4G ಸ್ಮಾರ್ಟ್‌ಫೋನ್‌ಗಳನ್ನು ಮೈಕ್ರೊಮ್ಯಾಕ್ಸ್ ಕಂಪೆನಿ ಬಿಡುಗಡೆ ಮಾಡುತ್ತಿದ್ದು, ಬದಲಾದ ಮೊಬೈಲ್‌ ಮಾರುಕಟ್ಟೆಯಲ್ಲಿ ಮತ್ತೊಂದು ದೊಡ್ಡ ಹೆಜ್ಜೆಯನ್ನಿಡಲು ಮೈಕ್ರೊಮ್ಯಾಕ್ಸ್ ಚಿಂತಿಸಿದೆ.!!

ಭಾರತದ ಚೀಪೆಸ್ಟ್ 4G ಸ್ಮಾರ್ಟ್‌ಫೋನ್ ಮೈಕ್ರೊಮ್ಯಾಕ್ಸ್

ಜಿಯೋ ಪ್ರೈಮ್ ಎಫೆಕ್ಟ್‌...ಏಪ್ರಿಲ್‌ 1 ರಿಂದ ಏರ್‌ಟೆಲ್ ಪ್ರೈಮ್ ಆಫರ್!!?

ಈ ಬಗ್ಗೆ ಮೈಕ್ರೊಮ್ಯಾಕ್ಸ್ ಕಂಪೆನಿಯ ಮುಖ್ಯ ಮಾರುಕಟ್ಟೆ ಅಧಿಕಾರಿ ಶುಬಜೀತ್ ಸೇನ್ ಮಾಹಿತಿ ನೀಡಿದ್ದು, ಭಾರತ್ 2 ಸ್ಮಾರ್ಟ್‌ಫೋನ್ ಗೂಗಲ್‌ನಿಂದ ಸರ್ಟಿಫೈ ಆಗಿದೆ. ಮಾರುಕಟ್ಟೆಗೆ ಬಿಡುಗಡೆಯಾದ ನಂತರ, ಭಾರತದಲ್ಲಿಯೇ ಅತ್ಯಂತ ಕಡಿಮೆ ಬೆಲೆಯ 4G ಸ್ಮಾರ್ಟ್‌ಫೊನ್ ಇದಾಗಲಿದೆ ಎಂದು ಹೇಳಿದ್ದಾರೆ.!! ಆದರೆ, ಮೊಬೈಲ್‌ ಫೀಚರ್‌ ಬಗ್ಗೆ ಯಾವುದೇ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ.!!

ಭಾರತದ ಚೀಪೆಸ್ಟ್ 4G ಸ್ಮಾರ್ಟ್‌ಫೋನ್ ಮೈಕ್ರೊಮ್ಯಾಕ್ಸ್

4G ಮೂಲಕ ಭಾರತದ ಮಾರುಕಟ್ಟೆಗೆ ಜಿಯೋ ಬಂದ ನಂತರ ಟೆಲಿಕಾಂನಲ್ಲಿ ದೊಡ್ಡ ದರಸಮರವೇ ನಡೆಯುತ್ತಿದ್ದು, ಕಡಿಮೆಬೆಲೆ 4G ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿರುವ ಮೈಕ್ರೊಮ್ಯಾಕ್ಸ್ ಕಂಪೆನಿ ಇದನ್ನು ಎನ್‌ಕ್ಯಾಶ್ ಮಾಡಿಕೊಳ್ಳಲು ಮುಂದಾಗಿದೆ. ಹಾಗಾಗಿ, ಇನ್ನು ಅತ್ಯಂತ ಕಡಿಮೆ ದರದ 4G ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ.

English summary
Micromax will launch two new and very affordable 4G phones soon in India. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot